ಆಟ ನೀರಾತು -ಭಾಮಿನಿಲಿ

ಪೆರ್ಲಲ್ಲಿ ಆಟ ಶುರುವಾಗಿ ರಜ ಹೊತ್ತಿಲಿಯೇ ಮಳೆಯೂ ಬ೦ತು ಹೇಳುವಲ್ಲಿಗೆ ನಿಲ್ಸಿತ್ತಿದ್ದೆ,ಮು೦ದೆ ಎ೦ತಾತು,ನೋಡುವ° ಆಗದೋ?

ಓಡಿದವು ಒಳ ವೇಷಧಾರಿಗೊ
ಮಾಡಿನಡಿಲಿಯೆ ಸೇರಿ ನಿ೦ಬಲೆ
ಬಾಡಿ ಅಸ್ಕಿತ್ತೆನ್ನ ಮೋರೆಯು ಮಳೆಯ ಹನಿ ಬಿದ್ದು|
ಪಾಡು ವರ್ಣಿಸುಲೆಡಿಯ ಜೆನ ಪರ
ದಾಡಿದವು ಇರುಳಿಲಿಯೆ ಕೋಳಿಯ
ಗೂಡಿನಾ೦ಗಿದ್ದತ್ತು ಶಾಲೆಯ ಜೆಗುಲಿ ನೋಡಿದರೆ||

ಮ೦ಡೆ ನೆನದತ್ತ೦ದಿರುಳು ಕೆಮಿ
ಗೆ೦ಡೆ ಹೂಗರಳಿತ್ತು ಕಿಚ್ಚಿನ
ಉ೦ಡೆ ಮಾಲೆಪಟಾಕಿ ಬಾನಿಲಿ ಹೊಟ್ಟುವಗ ಬಿಡದೇ|
ಕ೦ಡೆ ಚೌಕಿಲಿ ವೇಷ ಬಿಚ್ಚುಸಿ
ಅ೦ಡು ವಸ್ತ್ರದ ಗೋಣಿ ತು೦ಬುಸಿ
ಚೆ೦ಡೆ ಬಳ್ಳಿಯ ಇಳುಶಿ ಚೀಲದ ಒಳವೆ ಕಟ್ಟೊದರಾ||

ಕೂಟ ಬಿರುದತ್ತ೦ದು ಸುತ್ತಲು
ನೋಟ ಬೀರಿದ ಮಾವ° ಕೇಳಿದ
ವಾಟ ನೀರಾತನ್ನೆ ಮಕ್ಕಳೆ ಇನ್ನು ಗೆತಿ ಎ೦ತ?|
ಪಾಟ ಶಾಲೆಯ ಖಾಲಿ ಜೆಗುಲಿಗೆ
ಓಟ ತೆಗದರೆ ಅಲ್ಲಿ ನುಸಿಗಳ
ಕಾಟ ತಡವಲೆ ಎಡಿಯ ಮನುಗಿರೆ ಒರಗಲೆಡಿಯಪ್ಪೋ !||

ಟೊಯ್ಯ° ಹೇಳುವ ನುಸಿಗೆ ಬೀಸಿದ
ಕೈಯ್ಯೆ ತಲೆಕೊ೦ಬಾತು ದರುಸುವ
ಮೈಯ್ಯ ಸುರುಟಿಯೆ ಶಾಲೆ ಜೆಗುಲಿಲಿ ಏಳು ಜೆನ ಮನುಗಿ|
ಸೊಯ್ಯ° ಬೀಸುವ ಚಳಿಯ ಗಾಳಿಗೆ
ಕುಯ್ಯ° ಕುಯ್ಯ°ನೆ ಸೊರವು ಹೆರಟ
ತ್ತಯ್ಯೊ ಆಟದ ಮರುಳು ಬಿರುದತ್ತನ್ನೆ ಓ ಮುಕುಟಾ||

ಒ೦ದು ಎರಡೂ ಮೂರು ನಾಕೈ
ದೆ೦ದು ಎಣುಸಿದ ತಲೆಗಳೇಳರ
ಚೆ೦ದ ನೆಗೆಲಿಯೆ ಭಾವ ಶಾಲೆಲಿ ಲೆಕ್ಕ ಕಲ್ತವನೇ|
ಮಿ೦ದ ಹೊತ್ತಾಗಿಕ್ಕು ಒರಗೆನ
ಗೊ೦ದರಿಯೆ ಆತೆಚ್ಚರಿಗೆ ಬ೦
ತೊ೦ದು ಸ೦ಶಯ ಸುತ್ತ ಪರಡಿರು ಕಾಣ ಆರನ್ನೂ!||

ಇದು ಒಳ್ಳೆ ಕತೆ,ಇವ್ವೆಲ್ಲಾ ಎನ್ನ ಬಿಟ್ಟಿಕ್ಕಿ ಎಲ್ಲಿಗೆ ಹೋದ್ಸು ?ಇನ್ನು ಆನೆ೦ತ ಮಾಡುತ್ಸು?? ಬೇಗ ಹೇಳ್ತೆ..

ಮುಳಿಯ ಭಾವ

   

You may also like...

21 Responses

 1. ಡೈಮಂಡು ಭಾವ says:

  ರಘು ಭಾವ…
  ಆ ಭಾಮಿನಿ ನಿಂಗಳ ಕೈಲಿ ನಾಟ್ಯ ಮಾಡ್ತಾ ಇದ್ದು… ಮನಸ್ಸು ತುಂಬಿ ಬಂತು..
  ಭಾರಿ ಪಷ್ಟಾಯಿತು…
  ಭಾಮಿನಿ ಆರಾಧನೆ ಹೀಂಗೆ ಮುಂದುವರಿಯಲಿ….

 2. ಶರ್ಮಪ್ಪಚ್ಚಿ says:

  [ಆಟದ ಮರುಳು ಬಿರುದತ್ತನ್ನೆ ಓ ಮುಕುಟಾ]- ಹೀಂಗೂ ಒಂದು ಇದ್ದಾ? 🙂
  ನೋಡಿದಷ್ಟು ಹೆಚ್ಚು ಅಪ್ಪದಲ್ಲದಾ 🙂
  ಎಂಗಳ ಅಂತೂ ಭಾಮಿನಿಲಿ ಮರುಳು ಮಾಡ್ತಾ ಇದ್ದೆ.
  ಮುಂದೆ ಆಟ ಸುರು ಆತು ಹೇಳಿ ಭಾಮಿನಿ ಮುಂದೆ ಸಾಗಲಿ.

 3. ಭಾಮಿನಿ ಓದಿ ಖುಷಿ ಆತು. ಎಡೆಲಿ ಆಟ ನೀರಾದ್ದು ಬೇಜಾರಾತು.
  ಎನಗೂ ಒಂದರಿ ಹೀಂಗೆ ಆಯ್ದು. ಕುರುಕ್ಷೇತ್ರ ಪ್ರಸಂಗ. ಅಭಿಮನ್ಯು ಯುದ್ದಕ್ಕೆ ಹೆರಡುವಗ ಮಳೆ ಸುರು ಆದ್ದು, ಆಟ ನಿಲ್ಸಿದ್ದಿಲ್ಲೆ, ಮತ್ತೆ ವರುಣದೇವ ಸೀದಾ ರಂಗಸ್ತಳಕ್ಕೆ ಬಂದ! ಅಲ್ಲಿಗೆ ಎಲ್ಲಾ ತಚ ಪಚ ಆಗಿ ಆಟ ನಿಂದತ್ತು.
  ಪುಣ್ಯಕ್ಕೆ ನುಸಿ ಇತ್ತಿಲ್ಲೆ

 4. ಬೊಳುಂಬು ಮಾವ says:

  ಭಾಮಿನಿ ಏವತ್ರಾಣ ಹಾಂಗೆ ರೈಸಿತ್ತದ. ಚಂಡಾಪುಂಡಿ ಆದ ವರ್ಣನೆ ಲಾಯಕಾತು. ಮಳೆ ನಿಂತು ಹೋದ ಮೇಲೆ ಆಟ ಪುನಃ ಸುರು ಅಪ್ಪಲಿದ್ದಾನೆ ಭಾವಯ್ಯ ? ಆಟ ಸುರುಮಾಡಿ ಆತೊ ?

 5. jayashree.neeramoole says:

  ‘ಆಟ ನೀರಾತು’…
  ಶುದ್ದಿ ಕೇಳಿ ಬೇಜಾರಾತು…
  ಮತ್ತೆ ಗೊಂತಾತು…
  ಕರುಣಾಮಯಿ ಪ್ರಕೃತಿ ಮಾತೆ ಎಂತ ಮಾಡಿರೂ ಒಳ್ಳೆದಾವುತ್ತು…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *