Oppanna.com

ಆಟ ಶುರುವಾತು..-ಭಾಮಿನಿಲಿ

ಬರದೋರು :   ಮುಳಿಯ ಭಾವ    on   04/01/2012    14 ಒಪ್ಪಂಗೊ

ಪೆರ್ಲದ ಆಟಕ್ಕೆ ಹೋಗಿ ಪಿಕ್ಲಾಟ ಮಾಡಿದ ಕತೆ ಹೇಳುಲೆ ಶುರು ಮಾಡಿ ತಿ೦ಗಳು ಕಳಾತು.
ಎಡಕ್ಕಿಲಿ ಕರೆ೦ಟು ಚುಯಿ೦ಕ ಆಗಿ ಸೀರಿಯಲು ನೋಡುಲೆ ಎಡಿಯದ್ದ ಹಾ೦ಗೆ ಈ ಮುಳಿಯ ಭಾವನ ಬಲ್ಬು ಎ೦ತಕೆ ನ೦ದಿದ್ದು ಹೇಳಿ ಬೈದಿಕ್ಕೆಡಿ.
ಇದುವರೆಗಾಣ ಕತೆ ಮರದು ಹೋಗಿದ್ದರೆ ಇದಾ ಸ೦ಕೊಲೆ ಇಲ್ಲಿದ್ದು.

ಇರ್ಲು ಶಾಲಗೆ ಬ೦ದು ನೋಡೊಗ
ಪೆರ್ಲ ಪೇಟೆಯ ತು೦ಬ ಸ೦ತೆಯೆ
ಕುರ್ಲರಿಯ ಮಾರುವವು ಗೋಣಿಯ ಹಾಸಿ ಕೂಯಿದವು |
ಪೊರ್ಲು ತೂಲಯ ಹೇಳಿ ಕಿಸಿಯುತ
ತರ್ಲೆ ಮಾಡುವ ಜವ್ವನಿಗರೂ
ಮರ್ಲು ಕೊ೦ಗಿಯ ಕಟ್ಟಿ ಮಾರ್ಗದ ಕರೆಲಿ ನಿ೦ದಿದವು ||

ಜಾಲು ತು೦ಬಿತ್ತ೦ದು ಶಾಲೆಲಿ
ಕಾಲು ಹಾಕುಲೆ ಎಡಿಯ ತೆರಕಿಲಿ
ಶಾಲು ತಲೆ ಮು೦ಡಾಸು ಕೈಯಲಿ ಹಸೆಯ ಹಿಡುದ ಜೆನ |
ಸಾಲುಕಟ್ಟಿಯೆ ಬಪ್ಪ ಚೆ೦ದಕೆ
ವಾಲಗವ ಊದಿದವು ನಾಯಿಗೊ
ಬೀಲ ಮಡುಸುತಲ೦ದು ಕೋಲಿನ ಪೆಟ್ಟ ಹೆದರಿಕೆಲಿ ||

ವೇಷ ಹಾಕುದು ಹೀಂಗೆ ಕಂಡದು!!

ಸಣ್ಣ ಕನ್ನಟಿ ಎದುರು ಮಡುಗಿಯೆ
ಹಣ್ಣು ಅಡಕೆಯ ಹೋಳು ಸೇರುಸಿ
ಸುಣ್ಣ ಉದ್ದಿದ ಎಲೆಯ ಅಗಿವಾ ವೇಷಧಾರಿಗಳೂ|
ಬಣ್ಣಬಣ್ಣವ ಕಲಸಿ ತೆ೦ಗಿನ
ಎಣ್ಣೆ ಸೇರುಸಿ ಮೋರೆಗುದ್ದೊಗ
ಕಣ್ಣು ತು೦ಬಾ ನೋಡುವಾಸೆಲಿ ನೆಡದೆ ಚೌಕಿಯೊಳ ||

ಚಾಣೆ ಮ೦ಡೆಯ ಅಜ್ಜ° ಹರ್ಕಟೆ
ಗೋಣಿಗಳ ಕಟ್ಟಿದವು ಸೊ೦ಟಕೆ
ಕಾಣ ಜಟ್ಟಿಯ ಬಿಗುದು ಹೊಳವಾ ನೆರಿಯ ಕಟ್ಟಿದರೆ|
ಬಾಣ ಬಿಲ್ಲಿನ ಎತ್ತಿ ನೋಡೊಗ
ಮಾಣಿ ಹೋಗಿಲ್ಲಿ೦ದ ಬೇಗನೆ
ಜಾಣ ರ೦ಗಸ್ಥಳದ ಎದುರಿಲಿ ಕೂರು ಹೇಳಿದವು ||

ಪ೦ಚಪಾ೦ಡವರ ಪ್ರವೇಶಕೆ
ಸ೦ಚಿ ಎಲೆ ಚೀಲ೦ದ ತೆಗೆಯುತ
ಕ೦ಚಿನಾ ಕಂಠಲ್ಲಿ ಭಾಗವತಜ್ಜ °ಪದ ಹೇಳಿ |
ಬೆ೦ಚಿ ಕುರುಶಿಗೊ ತು೦ಬುವಗ ಒಳ
ಸ೦ಚು ಬೇರೆಯೆ ಇತ್ತು ಬಾನಿಲಿ
ಮಿ೦ಚು ಸೆಡಿಲಿನ ಆರ್ಭಟವು ಶುರುವಾತು ಒ೦ದರಿಯೆ ||

~*~*~

ಆಟ ನೀರಾತೋ ಹೇ೦ಗೇ? ಮು೦ದೆ ಬೇಗ ನೋಡುವ°,ಆಗದೋ?

ಮುಳಿಯ ಭಾವ

14 thoughts on “ಆಟ ಶುರುವಾತು..-ಭಾಮಿನಿಲಿ

  1. ಒಳ್ಳೇದಾಯಿದು, ಇನ್ನಾಣದ್ದರೆ ನಿರೀಕ್ಷೆಲಿ ಇದ್ದೆಯೊ°.

  2. ಸಮಕ್ಕೆ ಹೇಳಿದ್ದವು ಚೆನ್ನೈಭಾವ!
    ಓದಿದಷ್ಟೂ ಹೆಚ್ಚೆಚ್ಚು ರಸಾನುಭವ ಕೊಡ್ತ ಭಾಮಿನಿಯ ನಾವು ನಾಲ್ಕೈದು ಸರ್ತಿ ಓದಿತ್ತಯ್ಯಾ.. ಆಟದ ‘ಒಳ-ಹೆರ’ ಎರಡನ್ನೂ ಚೆಂದಕೆ ವರ್ಣನೆಮಾಡಿ ಬರದ್ದಿ ಮುಳಿಯಭಾವಾ. ಅಭಿನಂದನೆಗೊ.

    ‘ಅಶ್ವಮೇಧ ಮಾಡಿ ದಿಗ್ವಿಜಯ ಸಾಧುಸಿದ್ದೆ’ ಹೇಳಿ ರಂಗಸ್ಠಳಲ್ಲಿ ಕೊಚ್ಚಿಯೊಂಬ ರಾಜವೇಷದವ ಚೌಕಿಲಿ ಹರ್ಕಟೆ ಹಸೆಲಿ ಕೂದು ಬೀಡಿ ಬಲುಗಿಂಡು ತಣ್ಕಟೆ ಚಾಯ ಕುಡ್ಕಂಡು ಇರ್ತ..! ಈ ವೈರುಧ್ಯ ಸರಿಯಾಗಿ ಚಿತ್ರಣ ಮಾಡಿದ್ದಿ ನಿಂಗೊ.

    ಭಾವಾ, ಅಕೇರಿಗೆ ಬಾನಲ್ಲಿ ಮಿಂಚು ಗುಡುಗು ಆರ್ಭಟ ಸುರುವಾತು ಹೇಳ್ತಲ್ಲಿಯಂಗೆ ತಂದು ಸಸ್ಪೆನ್ಸ್ ಲ್ಲಿ ನಿಲ್ಲುಸಿದ್ದಿ, ಮತ್ತಾಣ ಸಂಗತಿ ಎಂತಾತು ಹೇಳಿ ಅರಡಿವಲೆ ಎಂಗೊ ಕಾಯ್ತಾ ಇದ್ದೆಯೊ. ಇನ್ನಾಣದ್ದು ಬೇಗ ಬರಲಿ..

  3. ಪಂಚ ಪಾಂಡವರೋತ್ತಿಂಗೆ ಕೃಷ್ಣ ಇಪ್ಪ ಕಾರಣ ಆಟ ನೀರಪ್ಪಲೆ ಸಾಧ್ಯವೇ ಇಲ್ಲೆ…

  4. ಪೊರ್ಲು ತೂಲಯ ಹೇಳಿ ಮರ್ಲು ಕಟ್ಟುವ ಜವ್ವನಿಗರ ವಿಷಯ, ವಾಲಗ ಊದುವ ನಾಯಿಗೊ ಪೆಟ್ಟಿಂಗೆ ಹೆದರಿ ಬೀಲ ಮಡುಸಿದ್ದದು, ಚೌಕಿಲಿ ಚಾಣೆ ಮಂಡೆಯವ ವೇಷ ಹಾಕಿ ರೈಸಿದ್ದದು, ಎಲೆ ಅಡಕೆ ತಿಂದೊಂಡು ಚುಟ್ಟಿ ಬರದ್ದದು, ಹರುದ ಗೋಣಿ ಕಟ್ಟಿದ್ದದು ಎಲ್ಲವುದೆ ನೈಜವಾಗಿ ಬಯಿಂದು ಮುಳಿಯ ಭಾವ. ಮಳೆ ಬಂದು ಆಟ ಚೆಂಡಿ ಆಗದ್ದೆ ಇರಳಿ ಹೇಳಿ ಪ್ರಾರ್ಥನೆ. ಮುಂದಾಣ ಚೆಂಡೆ ಪೆಟ್ಟಿಂಗೆ ಕಾಯ್ತಾ ಇದ್ದೆ.

  5. ಪೆರ್ಲ ಶಾಲೆಗೆ ಆಟಕ್ಕೆ ನಾವೇ ಹೋವ್ತ ಹಾಂಗಿಪ್ಪ ಅನುಭವ ಆತು.
    ಭಾಮಿನಿ ರೈಸಿತ್ತು. ಆಟ ರೈಸಿದ ಸುದ್ದಿಗೆ ಕಾಯ್ತಾ ಇದ್ದೆ

  6. {ಪ೦ಚಪಾ೦ಡವರ ಪ್ರವೇಶಕೆ}…
    ಛೆ.. ಆರಾದಿಕ್ಕು ಇವು.
    ಯೇನೇ ಅಗಲಿ ಆಟ ರೈಸುತ್ತಾ ಇದ್ದು.

  7. ಮಾತೇ ಇಲ್ಲೆ. ರೈಸಿದ್ದಯ್ಯಾ ರೈಸಿದ್ದು ಇದು.

    [ತರ್ಲೆ ಮಾಡುವ ಜವ್ವನಿಗರೂ] – ಬ್ಯಾರಿ ಚಕ್ಕಂಗಳೂ ಸೇರಿದ್ದನ್ನೆ ಇದರ್ಲಿ!
    [ಬೀಲ ಮಡುಸುತಲ೦ದು ಕೋಲಿನ ಪೆಟ್ಟ ಹೆದರಿಕೆಲಿ ] – ಚೆ! ಅದ್ಭುತ !!
    [ಕಣ್ಣು ತು೦ಬಾ ನೋಡುವಾಸೆಲಿ ನೆಡದೆ ಚೌಕಿಯೊಳ ] – ವಾಸ್ತವಿಕತೆ ಮತ್ತು ನೈಜತೆ ಚೊಕ್ಕಕ್ಕೆ ಮೂಡಿಬೈಂದು ಭಾವಯ್ಯ.
    [ಬಾಣ ಬಿಲ್ಲಿನ ಎತ್ತಿ ನೋಡೊಗ ಮಾಣಿ ಹೋಗಿಲ್ಲಿ೦ದ ಬೇಗನೆ ] – ಎಳೆ ಎಳೆಯಾಗಿ ಚಿತ್ರಣ ಆಯ್ದಪ್ಪ ಇದು.
    [ಮಿ೦ಚು ಸೆಡಿಲಿನ ಆರ್ಭಟವು ಶುರುವಾತು ಒ೦ದರಿಯೆ] – ಭಾವಯ್ಯ ನೀರು ಮಾಡಿಕ್ಕೇಡಿ. ಹೇಂಗಾರು ಸುಧಾರ್ಸಿ ಉದಿವರೇಗೆ.

    ಸುಭಗಣ್ಣ ಇದರ ನಾಲ್ಕೈದು ಸರ್ತಿಯಾರು ಓದದ್ದೆ ಬಿಡವು ಹೇಳಿ – ‘ಚೆನ್ನೈವಾಣಿ’

  8. ಮಳೆಬಂದರೆ ಚರುಂಬುರಿ ಏಪಾರ ಹಾಳಕ್ಕನ್ನೇ….. ? ಎಂತಾತೂಳಿ ಬೇಗ ಹೇಳಿಕ್ಕಿ ಆತೋ…… ಪರಿಹಾರಕ್ಕೆ ಅರ್ಜಿ ಹಾಕೆಕ್ಕನ್ನೇ..
    ಭಾಮಿನಿ ಲಾಯಿಕಾಯಿದು ಹೇಳಿ ಒಂದೊಪ್ಪ.

  9. ಮಳೆ ಬಂತೊ?
    ಅಲ್ಲಿ ವರೆಗೆ ನೋಡಿದ ಆಟದ ಬಗ್ಗೆ ಬರೆಯಿ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×