Oppanna.com

ಅಬ್ಬೆ

ಬರದೋರು :   ವಿಜಯತ್ತೆ    on   01/10/2012    15 ಒಪ್ಪಂಗೊ

ಅಬ್ಬೆ ಹೇಳುವ ಶಬ್ದಕ್ಕೆ ಕೆಮಿ ಅರಳಿದ ಮೊಗ್ಗು
ಅಬ್ಬಬ್ಬಾ ಹೇಳುವ ತಬ್ಬಿಬ್ಬು ಅಲ್ಲೇ ಅಡಗ್ಗು॥

ಅಮ್ಮ, ಮಮ್ಮಿ, ಪಮ್ಮಿ ಯೇವದು ಒಪ್ಪೆ
ನಮ್ಮ ಅಬ್ಬೆಯ ಎದುರಿಂಗೆ ಅವೆಲ್ಲ ಚಪ್ಪೆ॥

ದೊಡ್ಡಬ್ಬೆಕಿರಿಯಬ್ಬೆ,ಹೆರಿಯಬ್ಬೆ,ಸಣ್ಣಬ್ಬೆ|

ಈ ಸಂಕೋಲಗೊ ನಮ್ಮ ಮುತ್ತಜ್ಜಿಯಬ್ಬೆ||

ಅಪ್ಪನ ಅಬ್ಬೆ ನಮ್ಮ ಮನಗೆ ಅಪ್ಯಾಯಮಾನ
ಅಬ್ಬೆಯ ಅಬ್ಬೆ ಅಜ್ಜನ ಮನಗೆ ಶೋಭಾಯಮಾನ॥

ಅಪರೂಪದ ಮುದಿಅಜ್ಜಿಗೆ ಪುಳ್ಳಿಯ ಮಕ್ಕೊ
ಪುತ್ಥಳಿ ಹೊನ್ನಿಂದ ಹೆಚ್ಚಾತು ತಿಳ್ಕೊ॥

ತರತರದ ತಿಂಡಿ ತೀರ್ಥಂಗಳ ರಸಪಾಕ
ಅಬ್ಬೆಯ ಕೈ ತಾಗಿದ್ದೇ ಅದು ಅಡಿಗೆಯ ಲೋಕ॥

ಹೊತ್ತೋಪ  ಹೊತ್ತಿಂಗೆ ಅಜ್ಜಿಯ ನೀತಿಕತೆ|
ಅಂಬಗ ದೆನಿಗೇಳಿದರೆ ಮಕ್ಕೊಗೆ ಮುಗಿಯದ್ದ ವ್ಯಥೆ॥

ಅಮ್ಮ ಹೇಳಿ ಆರನ್ನೂ ಹೇಳ್ಲಕ್ಕು
ಅಬ್ಬೆ ಹೇಳಿರೆ ಒಂದೆ ಹೆತ್ತಬ್ಬೆ ಇರಲಕ್ಕು॥

ಕೊಟ್ಟು ಕೊಂಡು ಬೆಳಗಿದಾ ಮನೆ ಬಂಧ|

ಇವೆಲ್ಲಾ  ನಮ್ಮ ಹವ್ಯಕರ ಹೆರಿ ಸಂಬಂಧ||

ಹೆರವರ ಅನುಕರಣೆ ಬೇಡ ನವಗೆ ಕಾಣಾ
ನಮ್ಮದು ಒಳುಶೆಂಡು ಬಪ್ಪವನೇ ಜಾಣ ।।

——-೦—–

ಲೇಖಿಕೆ–ವಿಜಯಾಸುಬ್ರಹ್ಮಣ್ಯ,ಕುಂಬಳೆ

~*~*~

 

15 thoughts on “ಅಬ್ಬೆ

  1. ಅಪ್ಪು; ನಮ್ಮ ಅಬ್ಬೆ ಒಟ್ಟಿಂಗೆ ದೊಡ್ದಬ್ಬೆ ಕಿರಿಯಬ್ಬೆಕ್ಕಳನ್ನು ಮರವಲಾಗ ಅವರಬಗ್ಗೆ ಯೂ ಬರವೊ೦

  2. ಅಬ್ಬೆ.ದೊಡ್ಡಬ್ಬೆ,ಕಿರಿಯಬ್ಬೆ…………

  3. ಅಬ್ಬೆ ಹೇಳಿರೆ ಹೆತ್ತಬ್ಬೆ ಮಾಂತ್ರ. ನಿಜವಾಗ್ಲೂ ಅಪ್ಪು. ಅಬ್ಬೆ ಕವನದ ಒಳಾಣ ಭಾವನೆ ತುಂಬಾ ಲಾಯಕಿದ್ದು.

  4. ನೂರಕ್ಕೆ ನೂರು ಸರಿ. ಈಗ ಅಬ್ಬೆ ಹೇಳುವವು ತುಂಬ ಕಮ್ಮಿ. ವಿಜಯತ್ತೆ ಪದ್ಯ ತುಂಬ ಲಾಯಿಕ ಆಯಿದು

  5. ಅಬ್ಬೆ- ಹಳೆಗನ್ನಡದ ಒಂದು ಶಬ್ದ ನಮ್ಮ ಭಾಷೆಲಿ ಸಜೀವ ಆಗಿ ಇಪ್ಪದು ತುಂಬಾ ಸಂತೋಷದ ವಿಷಯ.

  6. ಆನು ಸಣ್ಣ ಇಪ್ಪಗ ಸುರುವಿಂಗೆ ಅಮ್ಮ ಹೇಳಿ ದಿನಿಗೇಳಿದ ನೆಂಪಿದ್ದು.
    ಅಮೇಲೆ ದೊಡ್ಡ ಅಪ್ಪಚ್ಚಿ ಈ ಪದ್ಯಲ್ಲಿ ಬಂದ ಒಂದು ವಾಕ್ಯ ಹೇಳಿ ಎನ್ನ ತಿದ್ದಿ ತಿದ್ದಿ ಅಬ್ಬೆ ಹೇಳುಲೆ ಸುರು ಮಾಡಿದ ನೆಂಪು ಬತ್ತು.
    ತಂಗೆ, ತಮ್ಮಂದೆ ಮತ್ತೆ ಎನ್ನನ್ನೇ ಅನುಕರ್ಸಿದವು.
    ಅಮ್ಮ ಹೇಳಿ ಆರನ್ನೂ ಹೇಳುಲಕ್ಕು, ಅಬ್ಬೆ ಹೇಳುದು ಹೆತ್ತ ಅಬ್ಬೆಯ ಮಾತ್ರ ಹೇಳಿ ಎಂಗೊಗೆ ಹಿರಿಯರು ಹೇಳಿ ಕೊಟ್ಟವು.

  7. ಇದಕ್ಕೆ ಒಪ್ಪ ಕೊಟ್ಟ ಎಲ್ಲರಿಂಗೂ ಧನ್ಯವಾದಂಗೊ ಶಂಕರ ಪಿ ಎಸ್ ಅವರ ವಿಮರ್ಶೆಯಂತೂ ಕುಶಿ ಆತು

  8. ತುಂಬ ಲಾಯ್ಕಾಯಿದು ವಿಜಯತ್ತೆ..
    “ಅಮ್ಮ ಹೇಳಿ ಆರನ್ನೂ ಹೇಳ್ಲಕ್ಕು
    ಅಬ್ಬೆ ಹೇಳಿರೆ ಒಂದೆ ಹೆತ್ತಬ್ಬೆ ಇರಲಕ್ಕು॥”
    ಈ “ಅಬ್ಬೆ” ಹೇಳುವ ಶಬ್ದವ ನಮ್ಮಲ್ಲಿ ಕಮ್ಮಿ ಮಾಡಿದ್ದದೇ ಇಂದ್ರಾಣ ಎನ್ನ ಅಕ್ಕಂದಿರು,ಸುಮಾರು 70ರ ದಶಕದ ನಂತರ “ಅಬ್ಬೆ” ಕಾಣೆಯಾಗಿ “ಅಮ್ಮ” ಪ್ರತ್ಯಕ್ಷ ಆತಿದ,ನಂತರ ಅದು “ಮಮ್ಮಿ” ಆಗಿ ಮುಂದೆ ಯಾವ ಹೆಸರಿಲ್ಲಿ ಕರೆಸಿಯೋಂಗು ಹೇಳಿ ಎನಗೆ ಅಂದಾಜಿಂಗೆ ಸಿಕ್ಕುತ್ತಿಲ್ಲೆ,ಒಪ್ಪಣ್ಣನ ಬಯಲಿಲ್ಲ್ಯಾದರೂ “ಅಬ್ಬೆ” “ಸಜೀವ”ವಾಗಿರಲಿ ಹೇಳಿ ಹಾರೈಸುತ್ತೆ,ಇದಕ್ಕೆ ಇಂದ್ರಾಣ ತಂಗೆಕ್ಕೋ ಆಸಕ್ತಿ ತೆಕ್ಕೊಳಕಷ್ಟೆ..

  9. ಶುರುವಾಣ ವಾಕ್ಯವೇ ತುಂಬ ಆಕರ್ಷಕವಾಗಿದ್ದು.
    {ಅಪ್ಪನ ಅಬ್ಬೆ ನಮ್ಮ ಮನಗೆ ಅಪ್ಯಾಯಮಾನ
    ಅಬ್ಬೆಯ ಅಬ್ಬೆ ಅಜ್ಜನ ಮನಗೆ ಶೋಭಾಯಮಾನ॥}….ಇವೆರಡು ಇಡೀ ಕವನಕ್ಕೆ ಕಿರೀಟ ಮಡಗಿದ ಹಾಂಗಿದ್ದು.

  10. ವಾಹ್.. ಚೊಲೋ ಆಯ್ದು ವಿಜಯತ್ತೆ .
    ಜಾಣರು ಹೆಚ್ಚಾಗಲಿ ಎ೦ಬ ಆಶಯ 🙂

  11. ವಿಜಯತ್ತಿಗೆ,
    ಪ್ರತಿಯೊಂದು ಸಾಲಿಲ್ಲಿಯೂ “ಅಬ್ಬೆ” ಯ ಹಿರಿಮೆಯ ಹೇಳಿದ್ದು ಲಾಯಿಕ ಆಯಿದು.

  12. ತುಂಬಾ ಲಾಯಕಿದ್ದು. ಮನೆಗೆ ಪುಳ್ಳ್ಯಕ್ಕ (ಮಗಳ ಮಕ್ಕ) ಬಂದಿಪ್ಪಗ, ಎಂಗಳ ಮನೆಲಿ ಒಟ್ಟಪ್ಪ ಅಬ್ಬೆಯ, ಅಬ್ಬೆಯ ಅಬ್ಬೆಯ, ಮುದಿ ಅಜ್ಜಿಯ ಎಲ್ಲಾ ಪಾತ್ರಂಗಳ ಗೌಜಿ ಗಮ್ಮತ್ತು ನೆಂಪಾತು. ವಿಜಯತ್ತೆಗೆ ಅಭಿನಂದನೆಗೊ.

  13. ಪ್ರತಿಯೊಂದು ಸಾಲೂ ತೂಕದ್ದು. ಲಾಯ್ಕ ಆಯ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×