ಅರ್ಪಣೆ

ಅರ್ಪಣೆ

ರಚನೆ: ಬಾಲ ಮಧುರಕಾನನ (ರವೀಂದ್ರನಾಥ ಠಾಗೋರರು ಬರದ  “ಗೀತಾಂಜಲಿ” ಕವನ ಸಂಗ್ರಹದ ಭಾವಾನುವಾದ, “ಮಧುರ ಗೀತಾಂಜಲಿ” ಪುಸ್ತಕಂದ )

ಸ್ವರ: ಶ್ರೀಶಣ್ಣ

ಅವನ ಕರಗಳಲೆನ್ನ ಕೊನೆಗೆ ಅರ್ಪಿಸಿಕೊಳುವೆ
ಅವನೊಲುಮೆಗೆಂದೆ ನಾ ಕಾದು ನಿಂತಿಹೆನು
ಸಮಯ ಮೀರಿತು ಬಹಳವದರಿಂದಲೇ ನೀನು
ತೊರೆದುದರ ಕಾರಣವೆ ಪಾಪಿಯಾಗಿಹೆನೊ?

 ತತ್ವ ಶಾಸ್ತ್ರಗಳಿಂದ ಕಟ್ಟುಪಾಡುಗಳಿಂದ
ಬಂದೆನ್ನ ಬಿಗಿಯಾಗಿ ಕಟ್ಟ ಬಯಸಿದರು
ಪ್ರತಿ ಸಾರಿಯೂ ನಾನು ಅವರ ಹಿಡಿತಗಳಿಂದ
ತಪ್ಪಿಸುತ ’ಅವ’ಗಾಗಿ ಕಾಯುತಿರುವೆ
ಅವನ ಕರಗಳಲೆನ್ನ ಕೊನೆಗೆ ಅರ್ಪಿಸಿಕೊಳುವೆ
ಅವನೊಲುಮೆಗೆಂದೆ ನಾ ಕಾಯುತಿರುವೆ

 ಈ ದಿನದ ಸಂತೆಯಿದು ಮುಗಿದು ಹೋಯಿತು ಒಡನೆ
ಕೆಲಸಗಳ ಮುಗಿಸಿದೆನು ಅವಸರದಲಿ
ಕರೆಯ ಬಂದವರೆನ್ನ ಹಿಂದೆ ತೆರಳಿದರಲ್ತೆ
ವ್ಯರ್ಥವೆನ್ನುತ ಮತ್ತೆ ಮುನಿಸಿನಿಂದ
ಅವನ ಕರಗಳಲೆನ್ನ ಕೊನೆಗೆ ಅರ್ಪಿಸಿಕೊಳುವೆ
ಅವನೊಲುಮೆಗೆಂದೆ ನಾ ಕಾದು ನಿಲುವೆ

~~***~~

 

ಬಾಲಣ್ಣ (ಬಾಲಮಧುರಕಾನನ)

   

You may also like...

7 Responses

 1. ಉತ್ತಮ ಭಾವಪೂರ್ಣವಾಗಿದ್ದು. ಬಾಲಣ್ಣಂಗೆ ಮೆಚ್ಚುಗೆಯ ಒಪ್ಪ. ಶ್ರೀಶಣ್ಣನ ಧ್ವನಿಯೂ ಇಂಪಾಗಿದ್ದು.

  ಇಬ್ರಿಂಗೂ ಅಭಿನಂದನೆ ಮತ್ತೆ ಬೈಲಿಂಗೆ ಇಳಿಶಿದ್ದಕ್ಕೆ ಧನ್ಯವಾದಂಗೊ.

 2. ಹರೇರಾಮ ಬಾಲಣ್ಣ,
  ‘ಅರ್ಪಣೆ’ ಹೇಳುವ ರೀತಿಲಿ ಬಂದ ಪದ್ಯ, ಕಾಲದ ಕಟ್ಟುಪಾಡುಗಳಿಂದ, ಬಾಕಿ ಒತ್ತಡಂಗಳಿಂದ ತನ್ನ ತಾನು ಬಿಡಿಸಿಗೊಂಡು ತನ್ನೆಲ್ಲವನ್ನೂ ಸಮರ್ಪಣೆ ಮಾಡುವ ಹಾಂಗೆ ಇಪ್ಪ ಭಾವಾನುವಾದ ತುಂಬಾ ಲಾಯಕ ಬಯಿಂದು. ನಿಂಗಳ ಅನುವಾದಂಗಳಲ್ಲಿ ಮೂಲಹಾಡಿನ ಭಾವ ಎಲ್ಲಿಯೂ ಬದಲುತ್ತಿಲ್ಲೆ. ಅದು ತುಂಬಾ ಕೊಶಿ ಆವುತ್ತು.
  ಶ್ರೀಶಣ್ಣನ ಸೊರಲ್ಲಿ ಬಂದಪ್ಪಗ ಮತ್ತುದೇ ಕೊಶೀ ಆವುತ್ತು ಕೇಳಲೆ.. ಒಳುದ ಪದ್ಯಂಗಳೂ ಬತ್ತಾ ಇರಲಿ..
  ಧನ್ಯವಾದ ಬಾಲಣ್ಣ.

 3. ಬಾಲಣ್ಣ (ಬಾಲಮಧುರಕಾನನ) says:

  ಚೆನ್ನೈಭಾವ,ಶ್ರೀ ಅಕ್ಕ ಧನ್ಯವಾದಂಗೊ. ಮೂಲ ಪದ್ಯವ ಓದಿ ತುಲನೆ ಮಾಡಿ ಅಭಿಪ್ರಾಯ ಕೊಟ್ಟದು ತುಂಬಾ ಸಂತೋಷ ಆತು. ಆದಷ್ತು ಮೂಲಭಾವಕ್ಕೆ ಚ್ಯುತಿ ಬಾರದ್ದ ರೀತಿಲಿ ಬರದ್ದೆ ಹೇಳಿ ಎನ್ನ ಭಾವನೆ ,ಮುನ್ನುಡಿ ಬರದ ಕಯ್ಯಾರರೂ ಇಡೀ ಓದಿ ನೋಡಿ,ಉತ್ತಮ ಅನುವಾದ ಹೇಳಿ ಹೇಳಿದವು .
  ಮತ್ತೆ ನಿಂಗಳ ಹಾಂಗೆ ಓದಿದೋರು ಹೇಳೆಕ್ಕು , ಸೊರ ಕೊಟ್ಟ ಶ್ರೀಶಣ್ಣಂಗೆ ಧನ್ಯವಾದಂಗೊ .

 4. ಮಾನೀರ್ ಮಾಣಿ says:

  ಭಾವಾನುವಾದ ಚ೦ದ ಆಯ್ದು. ಮನಸಿಗೆ ತಟ್ಟುವಾ೦ಗೆ ಮೂಡಿಬೈ೦ದು.
  ಬಾಲಣ್ಣ ಹಾಗೂ ಶ್ರೀಶಣ್ಣರಿಗೆ ಧನ್ಯವಾದ೦ಗೋ

  • ಉಡುಪುಮೂಲೆ ಅಪ್ಪಚ್ಚಿ says:

   ಹರೇ ರಾಮ; ಭಾವಪೂರ್ಣಾನುವಾದ. ಜೈ! ಬಾಲಣ್ಣ. ಅಕೇರಿಯಾಣ ಪದ್ಯದ ಎರಡನೇ ಸಾಲಿನ ಮದಲಾಣ ಶಬ್ದ ” ಕೆಲ” ಇದರ ಕೆಲಸ ಹೇದು ಓದಿಗೊಳೆಕಲ್ಲದೋ?

   • ಶರ್ಮಪ್ಪಚ್ಚಿ says:

    ಅಪ್ಪು, ಅಲ್ಲಿ ಟೈಪ್ ಮಾಡುವಾಗ ಬಿಟ್ಟು ಹೋದ್ದು.
    ತಿಳಿಶಿದ್ದಕ್ಕೆ ಧನ್ಯವಾದಂಗೊ
    ಸರಿ ಮಾಡುತ್ತೆ

 5. ಬಾಲಣ್ಣ (ಬಾಲಮಧುರಕಾನನ) says:

  ಅಪ್ಪಚ್ಚಿ,ನಿಂಗೊ ಹೇಳಿದ್ದು ಸರಿ .ನಿಂಗಳ ಒಪ್ಪಕ್ಕೆ ಧನ್ಯವಾದಂಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *