ಅತ್ತಿಗೆಯ ಮದುವೆ

August 22, 2012 ರ 10:00 amಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನ ಎಲ್ಲರಿಂಗೂ ನಮಸ್ಕಾರ.

ಆನು ನಿನ್ನೆ ಹೀಂಗೆ ಮನೆಲಿ ಕಪಾಟು ಒತ್ತರೆ ಮಾಡುವಾಗ ಹಳೇ ಪುಸ್ತಕಲ್ಲಿ ಒಂದು ಪದ್ಯ ಕಂಡತ್ತು. ಅದರ ಇಲ್ಲಿ ಕೆಳ ಕೊಟ್ಟಿದೆ. ಓದಿ ಒಂದೊಪ್ಪ ಕೊಡಿ.

 

ಮಾವಾನ ಮಗಳಿಂಗೆ ಈ ದಿನ ಮದುವೆ |

ಎಂಗೊಗೆ ಸಂಭ್ರಮದ ದಿನವೆ |

ಅತ್ತೆಗೂ ಮಾವಂಗೂ ಸಂತೋಷ ಅದುವೆ |

ಅತ್ತಿಗ್ಗೂ ಮನಸೀಲೆ ಆನಂದವೆ || ಮಾವಾನ ||

 

ಕೂಡಿದವು ಮನೆ ತುಂಬ ಹೆಮ್ಮಕ್ಕೊ ಬಂದು |

ಅತ್ತಿಗೆಯ ಶೃಂಗಾರ ಮಾಡಿದವು ಇಂದು |

ತಲೆ ತುಂಬಾ ಹೂಮುಡಿಸಿ ಜಲ್ಲಿಯ ಬಿಟ್ಟು |

ಬೈತಾಲೆ ಮೇಲೊಂದು ಮುಂದಾಲೆ ಬೊಟ್ಟು.. ಮುಂದಾಲೆ ಬೊಟ್ಟು ||ಮಾವಾನ ||

 

ಮದುಮಗನ ದಿಬ್ಬಾಣ ಗೌಜೀಲಿ ಬಂತು |

ಕಾಲಿಂಗೆ ನೀರೆಲ್ಲ ಕೊಟ್ಟಾಗಿ ಆತು |

ದಿಬ್ಬಣ ಎದುರುಗೊಂಡು ಒಳಬಂದು ಕೂದಾಗ |

ಉಪಚಾರ ಗೈದೇವು ಮನೆಮಂದಿ ಬೇಗ.. ಮನೆಮಂದಿ ಬೇಗ || ಮಾವಾನ ||

 

ಸಕ್ಕರೆ ಬೆಲ್ಲವು ಸೀಯಾಳ ನೀರು |

ಸೆಂಟಿನ ಪರಿಮಳ ಬಂತೆಲ್ಲ ಜೋರು |

ಹಣೆಗೆಲ್ಲ ಕುಂಕುಮ ಹೂವಿನ ಹಂಚು |

ಲಘುಬಗೆಲಿ ಮಾಡಿದವು ಪನ್ನೀರ ಸೋಚಾನ.. ಪನ್ನೀರ ಸೋಚಾನ || ಮಾವಾನ ||

 

ಮಾವಯ್ಯ ಮದುಮಗನ ಕೈಯನ್ನು ಹಿಡಿದು |

ಮನೆಯೊಳಗೆ ಕೂರಿಸಿದ ಕರಕೊಂಡು ಬಂದು |

ಬೇಗನೆ ಮದುಮಗನ ನೋಡುವ ಬಯಕೆ |

ಬಟ್ಲಿಲಿ ಮಡುಗಿದವು ಸೀರೆ ರವಿಕೆ.. ಸೀರೆ ರವಿಕೆ || ಮಾವಾನ ||

 

ಮಂಟಪದ ಒಳದಿಕ್ಕೆ ಮದುಮಗನು ಬಂದು |

ಸೆರೆಸೀರೆ ಈಚೆಗೆ ಮದುಮಗಳು ನಿಂದು |

ಮಂತ್ರವ ಪಠಿಸುತ್ತ ಸೆರೆಸೀರೆ ಜಾರಿತ್ತು |

ಕೊರಳಿಂಗೆ ಅತ್ತಿತ್ತ ಹೂಮಾಲೆ ಹಾಕ್ಯಾತು.. ಹೂಮಾಲೆ ಹಾಕ್ಯಾತು || ಮಾವಾನ ||

 

ಅಣ್ಣನ ಅತ್ತಿಗೆಯ ಧಾರೆಯು ಕಳುದತ್ತು |

ಹೋಳಿಗೆ ಹೊಡೆಕೀಗ ಐದಾರು ಹತ್ತು |

ಸಾರು ಸಾಂಬಾರು ಹಪ್ಪಳ ಮೇಲಾರ |

ಎರಡೆರಡು ಪಾಯಸ ಭಾರೀ ಗಮ್ಮತ್ತು.. ಭಾರೀ ಗಮ್ಮತ್ತು  || ಮಾವಾನ ||

 

(ವಿಸೂ: ನಿಂಗಳಲ್ಲಿ ಆರಿಂಗಾದದರೂ ಈ ಪದ್ಯ ರಚಿಸಿದವರ ಬಗ್ಗೆ ಮಾಹಿತಿ ಇದ್ದರೆ ದಯಮಾಡಿ ತಿಳಿಸಿ.)

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

 1. ಸುವರ್ಣಿನೀ ಕೊಣಲೆ

  ಈ ಪದ್ಯವ ಆರದ್ದೋ ಮದುವೆ ಹಾಡಿದ್ದರ ಕೇಳಿದ್ದೆ. ಎಲ್ಲಿ ಹೇಳಿ ನೆಂಪಿಲ್ಲೆ.
  ಲಾಯ್ಕಿದ್ದು ಪದ್ಯ :) ಹೀಂಗಿದ್ದ ಹಲವು ಪದ್ಯಂಗೊ ಬೇರೆ ಬೇರೆ ಸಂದರ್ಭಂಗಳಲ್ಲಿ ಹಾಡುವ ಪದ್ಧತಿ ಮೊದಲಿಂಗೆ ಇದ್ದತ್ತು. ಈಗ ಕಮ್ಮಿ ಆಯ್ದು ಅಥವಾ ಕಾಣೆ ಆಯ್ದು. ಆದರೆ ಶಿರಸಿ, ಸಾಗರ ಇತ್ಯಾದೊ ಊರುಗಳಲ್ಲಿ ಈಗಲೂ ಕೂಡ ಈ ಪದ್ಯ ಹೇಳುವ ಸಂಪ್ರದಾಯ ಇದ್ದು. ಅದು ಯಾವುದೇ ಕಾರ್ಯಕ್ರಮದ ಮುಖ್ಯ ವಿಷಯ !

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡೈಮಂಡು ಭಾವಪುಣಚ ಡಾಕ್ಟ್ರುಪೆಂಗಣ್ಣ°ಕೇಜಿಮಾವ°ಮಾಲಕ್ಕ°ಶೇಡಿಗುಮ್ಮೆ ಪುಳ್ಳಿಉಡುಪುಮೂಲೆ ಅಪ್ಪಚ್ಚಿಸುಭಗಚೆನ್ನಬೆಟ್ಟಣ್ಣರಾಜಣ್ಣಬಂಡಾಡಿ ಅಜ್ಜಿಕಜೆವಸಂತ°ಗಣೇಶ ಮಾವ°ಮಾಷ್ಟ್ರುಮಾವ°ಬೋಸ ಬಾವಅನುಶ್ರೀ ಬಂಡಾಡಿಅನಿತಾ ನರೇಶ್, ಮಂಚಿಪುಟ್ಟಬಾವ°ಅಡ್ಕತ್ತಿಮಾರುಮಾವ°ಚೂರಿಬೈಲು ದೀಪಕ್ಕಗೋಪಾಲಣ್ಣಪ್ರಕಾಶಪ್ಪಚ್ಚಿಬೊಳುಂಬು ಮಾವ°ಸರ್ಪಮಲೆ ಮಾವ°ಚೆನ್ನೈ ಬಾವ°ತೆಕ್ಕುಂಜ ಕುಮಾರ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ