Oppanna.com

ಅತ್ತಿಗೆಯ ಮದುವೆ

ಬರದೋರು :   ಮುಣ್ಚಿಕಾನ ಭಾವ    on   22/08/2012    20 ಒಪ್ಪಂಗೊ

ಬೈಲಿನ ಎಲ್ಲರಿಂಗೂ ನಮಸ್ಕಾರ.

ಆನು ನಿನ್ನೆ ಹೀಂಗೆ ಮನೆಲಿ ಕಪಾಟು ಒತ್ತರೆ ಮಾಡುವಾಗ ಹಳೇ ಪುಸ್ತಕಲ್ಲಿ ಒಂದು ಪದ್ಯ ಕಂಡತ್ತು. ಅದರ ಇಲ್ಲಿ ಕೆಳ ಕೊಟ್ಟಿದೆ. ಓದಿ ಒಂದೊಪ್ಪ ಕೊಡಿ.

 

ಮಾವಾನ ಮಗಳಿಂಗೆ ಈ ದಿನ ಮದುವೆ |

ಎಂಗೊಗೆ ಸಂಭ್ರಮದ ದಿನವೆ |

ಅತ್ತೆಗೂ ಮಾವಂಗೂ ಸಂತೋಷ ಅದುವೆ |

ಅತ್ತಿಗ್ಗೂ ಮನಸೀಲೆ ಆನಂದವೆ || ಮಾವಾನ ||

 

ಕೂಡಿದವು ಮನೆ ತುಂಬ ಹೆಮ್ಮಕ್ಕೊ ಬಂದು |

ಅತ್ತಿಗೆಯ ಶೃಂಗಾರ ಮಾಡಿದವು ಇಂದು |

ತಲೆ ತುಂಬಾ ಹೂಮುಡಿಸಿ ಜಲ್ಲಿಯ ಬಿಟ್ಟು |

ಬೈತಾಲೆ ಮೇಲೊಂದು ಮುಂದಾಲೆ ಬೊಟ್ಟು.. ಮುಂದಾಲೆ ಬೊಟ್ಟು ||ಮಾವಾನ ||

 

ಮದುಮಗನ ದಿಬ್ಬಾಣ ಗೌಜೀಲಿ ಬಂತು |

ಕಾಲಿಂಗೆ ನೀರೆಲ್ಲ ಕೊಟ್ಟಾಗಿ ಆತು |

ದಿಬ್ಬಣ ಎದುರುಗೊಂಡು ಒಳಬಂದು ಕೂದಾಗ |

ಉಪಚಾರ ಗೈದೇವು ಮನೆಮಂದಿ ಬೇಗ.. ಮನೆಮಂದಿ ಬೇಗ || ಮಾವಾನ ||

 

ಸಕ್ಕರೆ ಬೆಲ್ಲವು ಸೀಯಾಳ ನೀರು |

ಸೆಂಟಿನ ಪರಿಮಳ ಬಂತೆಲ್ಲ ಜೋರು |

ಹಣೆಗೆಲ್ಲ ಕುಂಕುಮ ಹೂವಿನ ಹಂಚು |

ಲಘುಬಗೆಲಿ ಮಾಡಿದವು ಪನ್ನೀರ ಸೋಚಾನ.. ಪನ್ನೀರ ಸೋಚಾನ || ಮಾವಾನ ||

 

ಮಾವಯ್ಯ ಮದುಮಗನ ಕೈಯನ್ನು ಹಿಡಿದು |

ಮನೆಯೊಳಗೆ ಕೂರಿಸಿದ ಕರಕೊಂಡು ಬಂದು |

ಬೇಗನೆ ಮದುಮಗನ ನೋಡುವ ಬಯಕೆ |

ಬಟ್ಲಿಲಿ ಮಡುಗಿದವು ಸೀರೆ ರವಿಕೆ.. ಸೀರೆ ರವಿಕೆ || ಮಾವಾನ ||

 

ಮಂಟಪದ ಒಳದಿಕ್ಕೆ ಮದುಮಗನು ಬಂದು |

ಸೆರೆಸೀರೆ ಈಚೆಗೆ ಮದುಮಗಳು ನಿಂದು |

ಮಂತ್ರವ ಪಠಿಸುತ್ತ ಸೆರೆಸೀರೆ ಜಾರಿತ್ತು |

ಕೊರಳಿಂಗೆ ಅತ್ತಿತ್ತ ಹೂಮಾಲೆ ಹಾಕ್ಯಾತು.. ಹೂಮಾಲೆ ಹಾಕ್ಯಾತು || ಮಾವಾನ ||

 

ಅಣ್ಣನ ಅತ್ತಿಗೆಯ ಧಾರೆಯು ಕಳುದತ್ತು |

ಹೋಳಿಗೆ ಹೊಡೆಕೀಗ ಐದಾರು ಹತ್ತು |

ಸಾರು ಸಾಂಬಾರು ಹಪ್ಪಳ ಮೇಲಾರ |

ಎರಡೆರಡು ಪಾಯಸ ಭಾರೀ ಗಮ್ಮತ್ತು.. ಭಾರೀ ಗಮ್ಮತ್ತು  || ಮಾವಾನ ||

 

(ವಿಸೂ: ನಿಂಗಳಲ್ಲಿ ಆರಿಂಗಾದದರೂ ಈ ಪದ್ಯ ರಚಿಸಿದವರ ಬಗ್ಗೆ ಮಾಹಿತಿ ಇದ್ದರೆ ದಯಮಾಡಿ ತಿಳಿಸಿ.)

20 thoughts on “ಅತ್ತಿಗೆಯ ಮದುವೆ

  1. ಈ ಪದ್ಯವ ಆರದ್ದೋ ಮದುವೆ ಹಾಡಿದ್ದರ ಕೇಳಿದ್ದೆ. ಎಲ್ಲಿ ಹೇಳಿ ನೆಂಪಿಲ್ಲೆ.
    ಲಾಯ್ಕಿದ್ದು ಪದ್ಯ 🙂 ಹೀಂಗಿದ್ದ ಹಲವು ಪದ್ಯಂಗೊ ಬೇರೆ ಬೇರೆ ಸಂದರ್ಭಂಗಳಲ್ಲಿ ಹಾಡುವ ಪದ್ಧತಿ ಮೊದಲಿಂಗೆ ಇದ್ದತ್ತು. ಈಗ ಕಮ್ಮಿ ಆಯ್ದು ಅಥವಾ ಕಾಣೆ ಆಯ್ದು. ಆದರೆ ಶಿರಸಿ, ಸಾಗರ ಇತ್ಯಾದೊ ಊರುಗಳಲ್ಲಿ ಈಗಲೂ ಕೂಡ ಈ ಪದ್ಯ ಹೇಳುವ ಸಂಪ್ರದಾಯ ಇದ್ದು. ಅದು ಯಾವುದೇ ಕಾರ್ಯಕ್ರಮದ ಮುಖ್ಯ ವಿಷಯ !

  2. ಇದು ಶುಭಮಂಗಳ ಸಿನಿಮಾದ “ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು…” ಪದ್ಯದ ಧಾಟಿಯ ಪದ್ಯ. ಎನ್ನ ಹೆಂಡತಿ ಇದರ ೮೦ರ ದಶಕಲ್ಲಿ ಅದರ ಚಿಕ್ಕಮ್ಮನ ಮದುವೆಲಿ ಹಾಡಿತ್ತಡ! 🙂

    1. ಪವನಜ ಮಾವ ( ಅತ್ತೆ) ಹೇಳಿದ ಧಾಟಿ ಸರಿಯಾಗಿ ಹೊ೦ದುತ್ತು.ಹಾ೦ಗಾರೆ,ಇದು ಶುಭಮ೦ಗಳ ಬಿಡುಗಡೆ ಆದ ಮೇಗಾಣ ರಚನೆ.ಈಗ ಇನ್ನೂ ಸ್ವಾದಿಷ್ಟ ಆತು,ರಾಗ ಸೇರಿ.
      ೮೦ ರ ದಶಕಲ್ಲಿ ಪವನಜ ಮಾವ ಮದುವೆಗೆ ಮಾಡಿಗೊ೦ಡಿದ್ದ ಕೇಸೆಟ್ಟು ಉಡಿಗೆರೆಯ ನೆ೦ಪಾತು ! ಜೀವನದ ಹಲವು ಹ೦ತ೦ಗಳ ತೋರುಸುವ ಸನ್ನಿವೇಶದ ಪದ್ಯ೦ಗಳ ಒಟ್ಟು ಮಾಡಿ ಒ೦ದು ಅದ್ಭುತ ರಸಪಾಕ ಮಾಡಿಗೊ೦ಡಿತ್ತಿದ್ದವು.ಈಗಳೂ ಇದ್ದೊ ಮಾವ,ಆ ಹವ್ಯಾಸ?

      1. ಆ ಕ್ಯಾಸೆಟ್ ಈಗಲೂ ಇದ್ದು ಆದರೆ ಪ್ಲೇಯರ‍್ ಇಲ್ಲೆ. ಅದರ ಒಂದರಿ ಕೂತುಕೊಂಡು ಎಲ್ಲ ಪದ್ಯಂಗಳ ಎಂಪಿ೩ ಮಾಡಿ ನಂತರ ಸಿ.ಡಿ. ಮಾಡೆಕ್ಕೂಳಿ ಹತ್ತು ವರ್ಷಂದ ಆಲೋಚನೆ ಮಾಡಿಕೊಂಡೇ ಇದ್ದೆ.

  3. ಪದ್ಯ ಲಾಯಕ್ಕಾಯ್ದು ಮುಣ್ಚಿಕಾನ ಭಾವ.. ಹ೦ಚಿಕೊ೦ಡದ್ದಕ್ಕೆ ಧನ್ಯವಾದ೦ಗೋ.. ಬರೆದವಕ್ಕೆ ಅಭಿನ೦ದನೆಗೊ.
    ಕೊನೇಯ ಪ್ಯಾರಾದಲ್ಲಿ ಹವೀಕರ ಉ೦ಬುವ ಸಾಮರ್ಥ್ಯದ ಬಗ್ಗೆ ಬರದ್ದೋ ಹೆ೦ಗೆ?? 😉

  4. ಪದ್ಯ ಲಾಯಿಕ ಇದ್ದು.
    ಹವ್ಯಕ ಸಾಂಪ್ರದಾಯಿಕ ಮದುವೆಯ ಭವ್ಯತೆಯ ಎತ್ತಿ ತೋರುಸುತ್ತು.
    ಸಂಪಾದಿಸಿ ಬೈಲಿಂಗೆ ಒದಗಿಸಿದ ಮುಣ್ಚಿಕಾನ ಭಾವಂಗೆ ಧನ್ಯವಾದಂಗೊ

  5. ಹವ್ಯಕ ಮದುವೆ ಪದ್ಯ ಲಾಯಕಾಯಿದು. ಶ್ರೀಶಣ್ಣನ ರಾಗವುದೆ ಸೇರಿರೆ ಇನ್ನುದೆ ರಂಗೇರುಗು.
    ಆ ಹಳೆ ಪುಸ್ತಕಲ್ಲಿ ಬೇರೆಂತಾರೂ ಸಿಕ್ಕಿರೆ ಅದುದೆ ಬೈಲಿಂಗೆ ಬರಳಿ ಭಾವಯ್ಯ.

    1. ಮಾವ
      ಶ್ರೀಶಣ್ಣ ಬೊಂಬಾಯಿಗೆ ಹೋಯಿದವಡ..
      ಬಂದ ಮೇಗೆ ರಾಗ ಹಾಕುತ್ತೆ ಹೇಳಿದ್ದವು ಎನ್ನತ್ರೆ ಗುಟ್ಟಿಲಿ..

  6. ಅವರ- ಅವರ – ಭಾವಕ್ಕೆ/೦ಗೆ

    ಭ್ರಮರ-ಸ೦ಭ್ರ್ಹಮ.

  7. ಪದ್ಯ ಲಾಯಿಕಾಯಿದು.
    ಹಳೆ ಪುಸ್ತಕಲ್ಲಿ ಪ್ರಿಂಟ್ ಆಗಿ ಇದ್ದದಾ? ಹಾಂಗಾರೆ ಆರು ಬರದ್ದು ಹೇಳಿ ಗೊಂತಿಲ್ಲೆ.
    ಕಾಗದ ಪೇಪರಿಲ್ಲಿ ಇದ್ದರೆ ನಿಂಗಳೇ ಬರದ್ದೋ ಅಣ್ಣಾ?
    ಆರು ಬರದರೂ ನಮ್ಮ ಹವ್ಯಕ ಮದುವೆಯ ಹವ್ಯಕ ಪದ್ಯ ಲಾಯಿಕಿದ್ದು…

    1. ಇದು ಅಮ್ಮ ಸಣ್ಣಾದಿಪ್ಪಗ ಬರೆದ (ಕೈಬರಹ) ಒಂದು ಪುಸ್ತಕಲ್ಲಿ ಇತ್ತು. ಎಲ್ಲಿಂದ ಸಿಕ್ಕಿತ್ತು ಗೊಂತಿಲ್ಲೆ.
      ಒಪ್ಪಕ್ಕೆ ಧನ್ಯವಾದಂಗೊ 🙂

  8. ಪದ್ಯ ಲಾಯಿಕ್ಕಾಯಿದು.
    ಬರದವು ಆರು ಹೇಳಿ ಗೊಂತಾಯಿದಿಲ್ಲೆ.

  9. ಹತ್ತು ಹೋಳಿಗೆ ಹೊಡದ ಕಾಲದ ಪದ್ಯ, ಗಮ್ಮತ್ತಾಯಿದು. ಕವಿ ಆರು ಹೇಳಿ ಹೇ೦ಗೆ ಗೊ೦ತಪ್ಪದು?
    ಯೇವ ಪುಸ್ತಕಲ್ಲಿ ಸಿಕ್ಕಿತ್ತು ಭಾವ?

    1. ಕವಿ ಆರು ಹೇಳಿ ಎನಗೆ ಗೊಂತಿಲ್ಲೆ ಮುಳಿಯ ಭಾವ. ಈ ಪದ್ಯ ಎನ್ನ ಅಮ್ಮ ಸಣ್ಣಾದಿಪ್ಪಗ ಬರೆದ (ಕೈಬರಹ) ಒಂದು ಪುಸ್ತಕಲ್ಲಿ ಕಂಡತ್ತು. ಹಾಂಗೆ ಬೈಲಿಲಿ ಹಾಕಿದೆ.
      ಒಪ್ಪಕ್ಕೆ ಧನ್ಯವಾದಂಗೊ 🙂

  10. ಈ ಪದ್ಯ ಈ ವರೇಂಗೆ ಕಂಡಿದಿಲ್ಲೆ. ಭಾರೀ ಲಾಯಕ ಆಯ್ದು. ಬರದವಕ್ಕೆ ಅಭಿನಂದನೆ, ಮುಣ್ಚಿಕ್ಕಾನ ಭಾವಂಗೆ ಮಾವನ ಮಗಳ ಮದುವೆ ಕಂಡಪ್ಪಗ ಕೊಶಿಯಾದ್ದು ಲಾಯಕ ಆಯ್ದು. ಬೈಲಿಲಿ ಹಂಚಿಗೊಂಡದ್ದಕ್ಕೆ ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×