ಬೈವದೆಂತಕೆ

ಅನ್ನಪೂರ್ಣ ಚಂದ್ರಶೇಖರ

ಅನ್ನಪೂರ್ಣ ಚಂದ್ರಶೇಖರ

ಬೈವದೆಂತಕೆ
ಬೈವದೆಂತಕೆ ನಾವು ಬೈವದೆಂತಕೆ
ಕುಞಿ ಮಕ್ಕಗೆ ನಾವು ಬಡಿವದೆಂತಕೆ
ತಪ್ಪು ಬಪ್ಪದು ಸಹಜ ಅಲ್ಲದೋ
ತಿದ್ದಿಕೊಟ್ಟು ಸರಿಮಾಡೆಕ್ಕಲ್ಲದೋ |ಬೈವದೆಂತಕೆ|
ಪೆಟ್ಟುಕೊಟ್ಟರೆ ತರ್ಕ ಅಲ್ಲಿ ಹೆಚ್ಚಾಗದೋ
ಮುದ್ದುಮಾಡಿರೆ ಮಾತು ಕೇಳುಗಲ್ಲದೋ |ಬೈವದೆಂತಕೆ|
ನಮ್ಮ ನೋಡಿಯೇ ಅವು ಕಲಿವದಲ್ಲದೋ
ನಾವೇ ಮೊದಲು ಸರಿ ಆಯೆಕ್ಕಲ್ಲದೋ |ಬೈವದೆಂತಕೆ|
 ಮೊಬೈಲ್ ಅವರ ದೋಸ್ತಿ ಅಪ್ಪಲಾಗಲ್ಲದೋ
ಮಕ್ಕೊಗಾಗಿ ರಜ ಸಮಯ ಕೊಡೆಕ್ಕಲ್ಲದೋ |ಬೈವದೆಂತಕೆ|
ಒಪ್ಪಗುಣ ಅವರಲ್ಲಿ ಬೆಳಶೆಕ್ಕಲ್ಲದೋ
ಅದಕ್ಕೆ ಸಂಸ್ಕಾರವ ತಿಳಿ ಹೇಳೆಕ್ಕಲ್ಲದೋ |ಬೈವದೆಂತಕೆ|
~~~***~~~
ಅನ್ನಪೂರ್ಣಾ, ಬೆಜಪ್ಪೆ

ಶರ್ಮಪ್ಪಚ್ಚಿ

   

You may also like...

2 Responses

  1. Madhurakanana ganapathi bhat says:

    ಲಾಯಕಾಯಿದು ,,

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *