Oppanna.com

ಬೇಕೊ ಪಿಕ್ಲಾಟ? -ಭಾಮಿನಿಲಿ

ಬರದೋರು :   ಮುಳಿಯ ಭಾವ    on   10/03/2012    16 ಒಪ್ಪಂಗೊ

ಆಟ ನೀರಾದ ಮೇಲೆ ಏಳು ಜೆನವೂ ಎಲಿಮೆ೦ಟ್ರಿ ಶಾಲೆಯ ಜೆಗುಲಿಲಿ ಮನುಗಿ ನುಸಿ ಕಚ್ಚುಸಿಗೊ೦ಡ ಶುದ್ದಿ ನೆ೦ಪಿದ್ದನ್ನೆ?ಎಡಕ್ಕಿಲಿ ಎದ್ದು ಕೂದ ಎನಗೆ ಸುತ್ತ ಆರನ್ನೂ ಕಾಣ!
ಮತ್ತೆ೦ತಾತು?

ಸುತ್ತ ನೋಡಿದರೆನಗೆ ಇರುಳಿನ
ಕತ್ತಲೆಲಿ ಕಾಣ್ತಿಲ್ಲೆ ದೇವರೆ
ಹೊತ್ತು ಕಳವದು ಹೇ೦ಗೆ ಎದೆ ಅವಲಕ್ಕಿ ಕುಟ್ಟಿತ್ತು |
ಒತ್ತಿ ಬ೦ದತ್ತೆನಗೆ ದು:ಖವು
ಕುತ್ತ ಕೂದವ° ಎದ್ದು ಮೆಲ್ಲ೦
ಗೆತ್ತಿ ಕಾಲಿನ ಇಳುದೆ ಶಾಲೆಯ ಮೆಟ್ಲುಕಲ್ಲುಗಳಾ ||

ಇರುಳಿರಿ೦ಟಿಯ ರಾಗ ಮಾರ್ಗದ
ಕರೆಲಿ ಗೋ೦ಕುರುಕೆಪ್ಪೆಯಾ ಲಯ
ಭರಿತ ವಟವಟ ನಾದ ಮೌನವ ಬಿರಿವ ಸ೦ಗೀತ |
ಮರದ ಗೆಲ್ಲುಗೊ ಬೀಸಿ ಗಾಳಿಗೆ
ಶಿರವ ಆಡುಸುವಗಳೆ ಓಡಿದೆ
ಉರುಳಿ ಗುಮ್ಮಟರಾಯ° ಓಡಿದ ಹಾ೦ಗೆ ಗುಡುಗುಡುನೆ ||

ಆಟ ನೀರಾದ್ದು (ಪಟ: ಲಾನಣ್ಣ)

ಚಳಿಯು ಹೆರ ಇತ್ತಯ್ಯ ಮನಸಿನ
ಒಳವೆ ಪುಕುಪುಕು ಬೆಗರಿನಾ ಹನಿ
ಇಳುದು ಹರುದತ್ತ೦ದು ಅಜ್ಜನ ಮನೆಗೆ ಮುಟ್ಟುವಗ |
ಗಿಳಿಯಬಾಗಿಲ ಹೆಟ್ಟುವಗಳೇ
ಎಳದವಜ್ಜಿಯು ಬಾಗಿಲಿನ ಮನೆ
ಯೊಳವೆ ಸೇರಿದೆ ಅಬ್ಬ ದೇವರೆ ಸಾಕು ಸಾಕಪ್ಪೋ ||

ನೆಡದ ಸ೦ಗತಿ ಹೇಳಿ ಅಜ್ಜಿಗೆ
ಕುಡತೆ ಹಾಲಿನ ಕುಡುದೆ ಎನಗಿ
ನ್ನೆಡಿಯ ಆನೊರಗುತ್ತೆ ಈಗಳೆ ಹೇಳಿ ನೀಟ೦ಪ |
ಅಡಿಗೆ ಕೋಣೆಯ ಹೆರವೆ ಮಡಗಿದ
ಪಡಿಯ ಮೇಲೆಯೆ ಬಿದ್ದು ಹೊದಕೆಯ
ಗುಡಿಯ ಹೆಟ್ಟಿದೆ ಎದ್ದು ನೋಡೊಗ ಗ೦ಟೆ ಒ೦ಭತ್ತು ||

ಶಾಲೆ ಜೆಗುಲಿಲಿ ಒರಗಿದವು ಉದೆ
ಗಾಲ ಏಳೊಗ ಕಾಣ ಒಬ್ಬನ
ಕಾಲು ಬಚ್ಚುವವರೆಗೆ ಹುಡುಕಿದವೆನ್ನ ಪೆರ್ಲಲ್ಲಿ |
ಜೋಲು ಮೋರೆಲಿ ಮನೆಗೆ ಬಪ್ಪಗ
ಜಾಲಿಲಿಯೆ ಕ೦ಡತ್ತು ಆಡೊದು
ಸಾಲುಸಾಲಾಗೆನಗೆ ಬೈಗಳು ಬೇಕೊ ಪಿಕ್ಲಾಟ? ||

~*~*~

ಮುಳಿಯ ಭಾವ

16 thoughts on “ಬೇಕೊ ಪಿಕ್ಲಾಟ? -ಭಾಮಿನಿಲಿ

  1. ಮುಳಿಯಭಾವಾ.. ನೋಡ್ಳೆ ವಿಪರೀತ ತಡವಾತು.
    ಭಾರೀ ಲಾಯಿಕಾಯಿದು, ಒಪ್ಪ೦ಗೊ.

  2. ಆಟ ನೀರಾದರೂ, ಭಾಮಿನಿ ರೈಸಿತ್ತು.
    ಆರೂ ಒಟ್ಟಿಂಗೆ ಇಲ್ಲೆ ಗ್ರೇಶಿ, ಒಬ್ಬನೇ ಅಜ್ಜನ ಮನೆಗೆ ಬಂದದು, ಹಾಲು ಕುಡುದು ಒರಗಿದ್ದು, ಮರುದಿನ ಉದಿಯಪ್ಪಗ ಬಾಕಿಪ್ಪವು ಬಂದು ಬೈದ್ದು ಎಲ್ಲವೂ ಒಂದರಿಯಾಣ ಬಾಲ್ಯದ ನೆನಪುಗಳ ಕೆಣಕಿ ಬರದ್ದು ಫಸ್ಟ್ ಆಯಿದು

  3. ಮುಳಿಯಭಾವಾ,
    ಭಾಮಿನಿದೇ ಒಂದು ರುಚಿ, ಪೀಕ್ಲಾಟದ್ದೇ ಒಂದು ರುಚಿ.
    ಅದೆರಡು ಸೇರ್ಸಿರೆ ಹೇಂಗಕ್ಕು?
    ಹೋಳಿಗೆ ಹಾಲಿನ ನಮುನೆ, ಭಾರೀ ರುಚಿ ಆಯಿದು.

    {ಇರುಳಿರಿ೦ಟಿಯ ರಾಗ} ಹೀಂಗಿರ್ಸ ಸೂಕ್ಷ್ಮಂಗೊ ಬಂದರೆ ಕತೆಯ ರುಚಿ ಹೆಚ್ಚಾವುತ್ತಿದ. 🙂

    ಈ ಧಾರಾವಾಹಿಯ ಸುರುವಿಂಗೆ ಓದುವಗ ಇದು ಇನ್ನು ಹೀಂಗಿಕ್ಕು, ಹಾಂಗಿಕ್ಕು – ಗ್ರೇಶಿತ್ತಿದ್ದೆ. ಆದರೆ ಆಟ ನೀರಾದ್ದು ಕೇಳಿ ರಜ ಬೇಜಾರಾದರೂ, ಕತೆಗೊ ಎಲ್ಲ ರೈಸಿದ್ದು.

  4. ಅದೇ ಪ್ರಶ್ನೆ ಇಪ್ಪದು..ಬೇಕೊ ಈ ಪಿಕ್ಲಾಟ ?
    ಭಾಮಿನಿ ರೈಸಿತ್ತು.
    ಈ “ಉರುಳಿ ಗುಮ್ಮಟರಾಯ ಅಜ್ಜನ ಮನೆಗೆ ಹೋದ ” ಕತೆ ಎಂತ್ಸರ ..?

      1. ಗುಡುಗುಡು ಗುಮ್ಮಟೆ ದೇವರ ಕಥೆ, ಅಜ್ಜಿಯಕ್ಕಳ ಕಥೆ ಒಂದು ಇದ್ದದು ಅಪ್ಪು. ಮುಳಿಯ ಭಾವಯ್ಯ ಮದಲು ಬರದ್ದದುದೆ ಸರೀ ಇತ್ತು. ದೊಡ್ಡ ಮಾವಂಗೆ ಕತೆ ಸರೀ ಗೊಂತಿಕ್ಕು.

    1. ಕುಮಾರ ಮಾವಾ.. ಪ೦ಜೆ ಮ೦ಗೇಶರಾಯರ ಕಥಾ ಸ೦ಕಲನ ಸಿಕ್ಕಿರೆ ಹುಡುಕ್ಕಿ ನೋಡಿ, ಗುಡುಗುಡು ಗುಮ್ಮಟರಾಯನ ಕತೆ ಇದ್ದು, ಎನಗೆ ಸಣ್ಣಾದಿಪ್ಪಗ ನೀರ್ಚಾಲು ಶಾಲೆ೦ದ ಕತೆ ಬರದ್ದದಕ್ಕೋ ಕವಿತೆ ಬರದ್ದದಕ್ಕೋ ಎ೦ತೋ ಪ್ರೈಸು ಸಿಕ್ಕುದ್ದು.. ಅದರಲ್ಲಿ ಮೂರು ಕರಡಿಗಳ ಕತೆ, ಅ೦ಗಳದುಗ್ಗುವಿನ ಕತೆ, ಗುಡುಗುಡು ಗುಮ್ಮಟರಾಯನ ಕತೆ ಹೀ೦ಗೆ ಹಲವು ಕತೆಗೊ ಇದ್ದತ್ತು.
      ಒಬ್ಬ ಮಾಣಿ ಒ೦ದು ದೊಡ್ಡ ಡೋಲಿನ ಒಳ ಕೂದು ಉರುಳಿ೦ಡು ಹೋಪದು, ಅಷ್ಟಪ್ಪಗ, ಡೋಲು ಆದ ಕಾರಣ ಗುಡು ಗುಡು ಹೇಳಿ ಶಬ್ದ ಬಪ್ಪದು ಎಲ್ಲ ಇದ್ದು ಅದರಲ್ಲಿ. ಹಾ೦ಗಾಗಿ ಆಯಿಕ್ಕು ಮುಳಿಯಭಾವ ಅದರ ಇಲ್ಲಿ ಪ್ರಯೋಗಿಸಿದ್ದು.. ಅಲ್ಲದೊ ಮುಳಿಯ ಭಾವಾ?

  5. ಮಕ್ಕಳ ಪಿಕ್ಲಾಟ ಚೆಂದ
    ಭಾಮಿನಿಲಿ ನೆನಪಿನ ಸುಗಂಧ
    ಬೈಲಿಂಗದುವೆ ಮಕರಂದ
    ಎಲ್ಲಿ ನೋಡಿದರೂ ಆನಂದ

  6. ವಾಹ್… ಈ ಸಾರ್ತಿಯೂ ಲಾಯಕ ಲಾಯಕ ಆಯ್ದು. ನೈಜತೆ ಲಾಯಕ ಮೂಡಿಬೈಂದು ಹೇಳಿ -‘ಚೆನ್ನೈವಾಣಿ’.

  7. ವಾಹ್! ಅದ್ಭುತ ಕಲ್ಪನೆ. ಆ ಅಪರರಾತ್ರಿ ಮಾಣಿ ಒಬ್ಬನೇ ಹೆರಟು ಪರಡೆಂಡು ಅಜ್ಜನ ಮನಗೆ ಕಾಲು ಹಾಕಿದ ಪ್ರಸಂಗ ಮನಸ್ಸಿಲ್ಲೇ ನೆನಸೊಂಡೆ. ವರ್ಣನೆ ಲಾಯಕಾಯಿದು.

    “ಚಳಿಯು ಹೆರ ಇತ್ತಯ್ಯ ಮನಸಿನ ಒಳವೆ ಪುಕುಪುಕು ಬೆಗರಿನಾ ಹನಿ” – ಎರಡುದೆ ಒರ್ಮೈಸಿದ್ದು ಸೂಪರ್ ಆಯಿದು.
    A/C ಕೇಬಿನಿಲ್ಲಿ ಕೂದೊಂಡು ಆರಾಮ ಕೆಲಸ ಮಾಡ್ತಾ ಇಪ್ಪಗ, ಬಾಸ್ ಬಂದು ಮತ್ತಷ್ಟು ಕೆಲಸ ಕೊಟ್ಟು ಬೆಶಿ ಹುಟ್ಟುಸಿದರೂ ಹೀಂಗೇ ಅಕ್ಕಲ್ಲದೊ ?!
    ಅಜ್ಜನ ಮನಗೆತ್ತಿ ಅಪ್ಪಗ, ಹಾಲು ಕೊಟ್ಟು ಅಜ್ಜಿ ತೋರಿದ ಪ್ರೀತಿ, ಎನಗಿನ್ನೆಡಿಯ ಒರಗುತ್ತೆ ಹೇಳಿ ಸಿಕ್ಕಿದಲ್ಲಿ ಬಿದ್ದು ಒರಗಿದ್ದು ಸಹಜವಾಗಿ ಬಯಿಂದು. ರಘು ಭಾವನ ಪಿಕ್ಲಾಟ ಕೊಶಿ ಕೊಟ್ಟತ್ತು.

    ಬೈಲಿಲ್ಲಿ (ಸಾರಡಿ ತೋಡಿಲ್ಲಿ) ಭಾಮಿನಿಯ ರಸಗಂಗೆ ಹರಿತ್ತಾ ಇರಳಿ.

    1. ಮಾವಾ,ಕಲ್ಪನೆ ಅಲ್ಲ ಇದು.ಮೂವತ್ತೈದು ವರುಷ ಮದಲು ನೆಡದ ಸ೦ಗತಿ !
      ಪ್ರೋತ್ಸಾಹಕ್ಕೆ ಧನ್ಯವಾದ.

  8. ಹೇಂಗೊ ಮನೆಗೆ ಬಂದಾತು-ಬೈಗಳು ತಪ್ಪಿದ್ದಿಲ್ಲೆ.ಎಲ್ಲಾ ಸುಖಾಂತ ಆತನ್ನೆ?
    ಅದ್ಭುತ ಕವನ.

    1. ಈಗಳೂ ನೆ೦ಪು ಮಾಡಿ ನೆಗೆ ಮಾಡುಗು,ಎಲ್ಲ ಒಟ್ತು ಸೇರಿಯಪ್ಪಗ..ಹಾ೦ಗಾಗಿ ಸುಖವೇ ಗೋಪಾಲಣ್ಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×