ಹುಂಡು ಹುಂಡು ಭಾಮಿನಿಗೊ

May 21, 2012 ರ 9:30 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಜಾಣನ “ಭಾಮಿನಿ” ಬರವ ಪ್ರಯತ್ನ ಇಲ್ಲಿದ್ದು.
ನಾವೆಲ್ಲರೂ ಬೆನ್ನುತಟ್ಟಿ ಮುಂದುವರ್ಸಲೆ ಹೇಳುವೊ, ಅಲ್ಲದೋ?

ಹುಂಡು ಹುಂಡು ಭಾಮಿನಿಗೊ:
ಇದು ಆನು ಬರದ ಸುರೂವಾಣ ಪ್ರಯತ್ನಂಗೊ. ಸಲಹೆಗೊ ಇದ್ದರೆ ಸಂತೋಷಲ್ಲಿ ಸ್ವೀಕರಿಸುತ್ತೆ.

ಬೂಂದಿ ಚೀಲ (bean bag)

ಬೂಂದಿ ಚೀಲದ ಮೇಗೆ ಕೂದರೆ
ಹಂದಲೆಡಿಯದ ಹಾಂಗೆ ಅಪ್ಪದು
ಹೊಂದಿಗೊಂಬದು ಭಾಳ ಸುಲಭವು ನೀಟ ಬಿದ್ದೊಂಡ್ರೆ |
ಪೆದ್ದು ಗುಂಡನ ಹಾಂಗೆ ಕಂಡರು
ಬಿದ್ದುಗೊಂಡಿರ ಒಂದು ಮೂಲೆಲಿ
ಎದ್ದು ಹೋಪಲೆ ಮನಸು ಬಾರದೊ ಎನಗೆ ಇದರಿಂದ ||

~

ಎಲಿ ಓಡುಸುದು:

ಎಲಿಯ ಓಡ್ಸಿಂಡಿಪ್ಪ ಬೋಚನು
ಒಲೆಯ ಕಟ್ಟೆಲಿ ಲಾಗ ಹಾಕಿದ
ಬೆಳಿಯ ತೋಳೆಯ ಕಂಡು ಒಂದರಿ ನೆಗೆಯು ಬಂತಲ್ಲೋ |
ಹಲಸು ಬೇಳೆಯ ಹಾಂಗೆ ಕಂಡರು
ತಲೆಯು ಕೈ ಕಾಲಾಡುಸುತ್ತದು
ಬಲೆಯ ಹಾಕಿರು ಕೈಗೆ ಸಿಕ್ಕದೊ ಬೋಚ ಬಾವನ್ಗೆ ||

~

ಸಜ್ಜಿಗೆ:

ಅಜ್ಜನಾ ಮನೆಲಿದ್ದ ಒಂದಿನ
ಅಜ್ಜಿ ತಂದವು ದೊಡ್ಡ ತಟ್ಟೆಲಿ
ಹೆಜ್ಜೆ ನಮುನೆಲಿ ಬೆಂದು ಬೊದುಳಿದ ದೊಡ್ಡ ಸಜ್ಜಿಗೆಯ |
ಗುಜ್ಜೆ ಕೊಯಿವಲೆ ಮರವ ಹತ್ತಿದ
ಅಜ್ಜ ಬಂದವು ರಜ್ಜ ಹೊತ್ತಿಲೆ
ಮಜ್ಜಿಗೆಯ ಕಲಸಿಂಡು ತಿಂದೆಯೊ ಹೊಟ್ಟೆ ಹಶುವಿಂಗೆ ||

~

~*~*~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಡೈಮಂಡು ಭಾವ
  ಡೈಮಂಡು ಭಾವ

  ಲಾಯ್ಕ ಆಯಿದು ಜಾಣ

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಜಾಲಸೂರಿನ ಜಾಣ ಅ೦ತ
  ರ್ಜಾಲ ಬೈಲಿ೦ಗಿಳುದು ಲೀಲಾ
  ಜಾಲವಾಗಿಯೆ ಬರದ ಭಾಮಿನಿ ಓದಿಯಪ್ಪಗಳೇ|
  ಮೂಲ ಛ೦ದಸ್ಸಿಲಿಯೆ ಮಲ್ಲಿಗೆ
  ಮಾಲೆ ಕಟ್ಟಿದ ಹಾ೦ಗೆಯಕ್ಷರ
  ಸಾಲುಗಳ ಜೋಡುಸಿದ ಚೆ೦ದಕೆ ಮನಸು ಮರುಳಾತೂ||

  ಚಾಣೆ ಮ೦ಡೆಯ ಒಳವೆ ಕತ್ತರಿ
  ಸಾಣೆ ಮಾಡಿರೆ ಒಪ್ಪ ಬ೦ತಿದ
  ಗಾಣಕಲ್ಲಿ೦ದಿಳಿವಯೆಣ್ಣೆಯ ಹಾ೦ಗೆ ಘಮಘಮನೇ|
  ಮಾಣಿ ಗಟ್ಟಿಗನಾಗಿ ಬೆಳೆಯಲಿ
  ಜಾಣನಾಗಿಯೆ ಕೀರ್ತಿ ಪಡೆಯಲಿ
  ವಾಣಿದೇವಿಯ ಸೇವೆ ಮು೦ದರುಶುತ್ತ ಭಕ್ತಿಲಿಯೇ||

  [Reply]

  VA:F [1.9.22_1171]
  Rating: +5 (from 5 votes)
 3. n subraya bhat

  NINNA BHAAMINI ODIYAPPAGA
  ENNA BHAAVANE TUMBI BAPPAGA
  CHINNADOPPAVA KODEKU JAANUSI HERATE AANEEGA
  PENNU HIDUDARU ENTAMAADUVA
  DINNU HELI ARADIYADDE
  CHINNA NEENE JAANA KHANDITA ARTE BALU BEGA

  [Reply]

  VA:F [1.9.22_1171]
  Rating: +2 (from 2 votes)
 4. ಬೊಳುಂಬು ಮಾವ°
  ಬೊಳುಂಬು

  ಸುಬ್ರಾಯಣ್ಣ ಬರದ ಭಾಮಿನಿಯ ಇಂಗ್ಳೀಷಿಲ್ಲಿ ಓದಲೆ ಕಷ್ಟ ಅಪ್ಪದಕ್ಕೆ ಕನ್ನಡಲ್ಲಿ ಬರದು ಮಡಗಿದ್ದು ಅಷ್ಟೆ. ಲಾಯಕಾಯಿದು.

  ನಿನ್ನ ಭಾಮಿನಿ ಓದಿಯಪ್ಪಗ
  ಎನ್ನ ಭಾವನೆ ತುಂಬಿ ಬಪ್ಪಗ
  ಚಿನ್ನದೊಪ್ಪವ ಕೊಡೆಕು ಜಾನುಸಿ ಹೆರಟೆ ಆನೀಗ ।
  ಪೆನ್ನು ಹಿಡುದರು ಎಂತ ಮಾಡುವ
  ದಿನ್ನು ಹೇಳಿಯೆ ಅರಡಿಯದ್ದೇ
  ಚಿನ್ನ ನೀನೇ ಜಾಣ ಖಂಡಿತ ಅರ್ತೆ ಬಲು ಬೇಗ ॥

  ಅಣ್ಣ, ನಿಂಗೊಗೆ ಕನ್ನಡಲ್ಲಿ ಒಪ್ಪ ಕೊಡ್ಳೆ ಭಾರೀ ಸುಲಾಬ ಇದ್ದು. ಒಂದೆರಡು ಸರ್ತಿ ರಜಾ ಕಷ್ಟ ಅಕ್ಕು ಮತ್ತೆ, ಸುಲಾಬ ಆವ್ತು. ನಿಂಗಳ ಒಪ್ಪ, ಲೇಖನಂಗೊ ಬೈಲಿಂಗುದೆ ಬತ್ತಾ ಇರಳಿ.

  [Reply]

  VA:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿಶೇಡಿಗುಮ್ಮೆ ಪುಳ್ಳಿಪುತ್ತೂರಿನ ಪುಟ್ಟಕ್ಕಶೀಲಾಲಕ್ಷ್ಮೀ ಕಾಸರಗೋಡುವೇಣಿಯಕ್ಕ°ಮಾಷ್ಟ್ರುಮಾವ°ಮುಳಿಯ ಭಾವಕಜೆವಸಂತ°ಪುಟ್ಟಬಾವ°ಬಟ್ಟಮಾವ°ಸುವರ್ಣಿನೀ ಕೊಣಲೆಚೆನ್ನೈ ಬಾವ°ಕೆದೂರು ಡಾಕ್ಟ್ರುಬಾವ°vreddhiಡೈಮಂಡು ಭಾವವಿನಯ ಶಂಕರ, ಚೆಕ್ಕೆಮನೆಶರ್ಮಪ್ಪಚ್ಚಿಬಂಡಾಡಿ ಅಜ್ಜಿಪೆಂಗಣ್ಣ°ವಸಂತರಾಜ್ ಹಳೆಮನೆಪ್ರಕಾಶಪ್ಪಚ್ಚಿಪಟಿಕಲ್ಲಪ್ಪಚ್ಚಿಜಯಶ್ರೀ ನೀರಮೂಲೆಗಣೇಶ ಮಾವ°ಕೇಜಿಮಾವ°ಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ