Oppanna.com

ಹುಂಡು ಹುಂಡು ಭಾಮಿನಿಗೊ

ಬರದೋರು :   ಜಾಣ    on   21/05/2012    14 ಒಪ್ಪಂಗೊ

ಜಾಣನ “ಭಾಮಿನಿ” ಬರವ ಪ್ರಯತ್ನ ಇಲ್ಲಿದ್ದು.
ನಾವೆಲ್ಲರೂ ಬೆನ್ನುತಟ್ಟಿ ಮುಂದುವರ್ಸಲೆ ಹೇಳುವೊ, ಅಲ್ಲದೋ?

ಹುಂಡು ಹುಂಡು ಭಾಮಿನಿಗೊ:
ಇದು ಆನು ಬರದ ಸುರೂವಾಣ ಪ್ರಯತ್ನಂಗೊ. ಸಲಹೆಗೊ ಇದ್ದರೆ ಸಂತೋಷಲ್ಲಿ ಸ್ವೀಕರಿಸುತ್ತೆ.

ಬೂಂದಿ ಚೀಲ (bean bag)

ಬೂಂದಿ ಚೀಲದ ಮೇಗೆ ಕೂದರೆ
ಹಂದಲೆಡಿಯದ ಹಾಂಗೆ ಅಪ್ಪದು
ಹೊಂದಿಗೊಂಬದು ಭಾಳ ಸುಲಭವು ನೀಟ ಬಿದ್ದೊಂಡ್ರೆ |
ಪೆದ್ದು ಗುಂಡನ ಹಾಂಗೆ ಕಂಡರು
ಬಿದ್ದುಗೊಂಡಿರ ಒಂದು ಮೂಲೆಲಿ
ಎದ್ದು ಹೋಪಲೆ ಮನಸು ಬಾರದೊ ಎನಗೆ ಇದರಿಂದ ||

~

ಎಲಿ ಓಡುಸುದು:

ಎಲಿಯ ಓಡ್ಸಿಂಡಿಪ್ಪ ಬೋಚನು
ಒಲೆಯ ಕಟ್ಟೆಲಿ ಲಾಗ ಹಾಕಿದ
ಬೆಳಿಯ ತೋಳೆಯ ಕಂಡು ಒಂದರಿ ನೆಗೆಯು ಬಂತಲ್ಲೋ |
ಹಲಸು ಬೇಳೆಯ ಹಾಂಗೆ ಕಂಡರು
ತಲೆಯು ಕೈ ಕಾಲಾಡುಸುತ್ತದು
ಬಲೆಯ ಹಾಕಿರು ಕೈಗೆ ಸಿಕ್ಕದೊ ಬೋಚ ಬಾವನ್ಗೆ ||

~

ಸಜ್ಜಿಗೆ:

ಅಜ್ಜನಾ ಮನೆಲಿದ್ದ ಒಂದಿನ
ಅಜ್ಜಿ ತಂದವು ದೊಡ್ಡ ತಟ್ಟೆಲಿ
ಹೆಜ್ಜೆ ನಮುನೆಲಿ ಬೆಂದು ಬೊದುಳಿದ ದೊಡ್ಡ ಸಜ್ಜಿಗೆಯ |
ಗುಜ್ಜೆ ಕೊಯಿವಲೆ ಮರವ ಹತ್ತಿದ
ಅಜ್ಜ ಬಂದವು ರಜ್ಜ ಹೊತ್ತಿಲೆ
ಮಜ್ಜಿಗೆಯ ಕಲಸಿಂಡು ತಿಂದೆಯೊ ಹೊಟ್ಟೆ ಹಶುವಿಂಗೆ ||

~

~*~*~

14 thoughts on “ಹುಂಡು ಹುಂಡು ಭಾಮಿನಿಗೊ

  1. ಸುಬ್ರಾಯಣ್ಣ ಬರದ ಭಾಮಿನಿಯ ಇಂಗ್ಳೀಷಿಲ್ಲಿ ಓದಲೆ ಕಷ್ಟ ಅಪ್ಪದಕ್ಕೆ ಕನ್ನಡಲ್ಲಿ ಬರದು ಮಡಗಿದ್ದು ಅಷ್ಟೆ. ಲಾಯಕಾಯಿದು.

    ನಿನ್ನ ಭಾಮಿನಿ ಓದಿಯಪ್ಪಗ
    ಎನ್ನ ಭಾವನೆ ತುಂಬಿ ಬಪ್ಪಗ
    ಚಿನ್ನದೊಪ್ಪವ ಕೊಡೆಕು ಜಾನುಸಿ ಹೆರಟೆ ಆನೀಗ ।
    ಪೆನ್ನು ಹಿಡುದರು ಎಂತ ಮಾಡುವ
    ದಿನ್ನು ಹೇಳಿಯೆ ಅರಡಿಯದ್ದೇ
    ಚಿನ್ನ ನೀನೇ ಜಾಣ ಖಂಡಿತ ಅರ್ತೆ ಬಲು ಬೇಗ ॥

    ಅಣ್ಣ, ನಿಂಗೊಗೆ ಕನ್ನಡಲ್ಲಿ ಒಪ್ಪ ಕೊಡ್ಳೆ ಭಾರೀ ಸುಲಾಬ ಇದ್ದು. ಒಂದೆರಡು ಸರ್ತಿ ರಜಾ ಕಷ್ಟ ಅಕ್ಕು ಮತ್ತೆ, ಸುಲಾಬ ಆವ್ತು. ನಿಂಗಳ ಒಪ್ಪ, ಲೇಖನಂಗೊ ಬೈಲಿಂಗುದೆ ಬತ್ತಾ ಇರಳಿ.

  2. NINNA BHAAMINI ODIYAPPAGA
    ENNA BHAAVANE TUMBI BAPPAGA
    CHINNADOPPAVA KODEKU JAANUSI HERATE AANEEGA
    PENNU HIDUDARU ENTAMAADUVA
    DINNU HELI ARADIYADDE
    CHINNA NEENE JAANA KHANDITA ARTE BALU BEGA

  3. ಜಾಲಸೂರಿನ ಜಾಣ ಅ೦ತ
    ರ್ಜಾಲ ಬೈಲಿ೦ಗಿಳುದು ಲೀಲಾ
    ಜಾಲವಾಗಿಯೆ ಬರದ ಭಾಮಿನಿ ಓದಿಯಪ್ಪಗಳೇ|
    ಮೂಲ ಛ೦ದಸ್ಸಿಲಿಯೆ ಮಲ್ಲಿಗೆ
    ಮಾಲೆ ಕಟ್ಟಿದ ಹಾ೦ಗೆಯಕ್ಷರ
    ಸಾಲುಗಳ ಜೋಡುಸಿದ ಚೆ೦ದಕೆ ಮನಸು ಮರುಳಾತೂ||

    ಚಾಣೆ ಮ೦ಡೆಯ ಒಳವೆ ಕತ್ತರಿ
    ಸಾಣೆ ಮಾಡಿರೆ ಒಪ್ಪ ಬ೦ತಿದ
    ಗಾಣಕಲ್ಲಿ೦ದಿಳಿವಯೆಣ್ಣೆಯ ಹಾ೦ಗೆ ಘಮಘಮನೇ|
    ಮಾಣಿ ಗಟ್ಟಿಗನಾಗಿ ಬೆಳೆಯಲಿ
    ಜಾಣನಾಗಿಯೆ ಕೀರ್ತಿ ಪಡೆಯಲಿ
    ವಾಣಿದೇವಿಯ ಸೇವೆ ಮು೦ದರುಶುತ್ತ ಭಕ್ತಿಲಿಯೇ||

  4. ಜಾಣ,
    ಲಾಯಿಕ ಆಯಿದು.
    ಮುಂದುವರಿಯಲಿ ಈ ಭಾಮಿನಿ ಕೃಷಿ

  5. ಜಾಣ ಲಾಯ್ಕಾಯ್ದು..ಶುಭವಾಗಲಿ..

  6. ಜಾಣನ ಭಾಮಿನಿಯ ಹನಿ ಮನಸ್ಸಿನ ತಂಪು ಮಾಡಿತ್ತು. ಜಾಣನ ಭಾವನೆಗೊ ಭಾಮಿನಿಲಿ, ಇಲ್ಲದ್ರೆ “ಮಿನಿ”ಲಿ ಆದರುದೆ ಏವತ್ತುದೆ ಹೊರಹೊಮ್ಮಲಿ. ದೂರಂದಲೆ ಮಾಣಿಯ ಬೆನ್ನು ತಟ್ಟುತ್ತ್ತಾ ಇದ್ದೆ.

  7. ಜಾಣ….ಜಾ….ಣ…..

  8. ಭಾರಿ ಲಾಯಿಕಾಯಿದು..ಭಾಮಿನಿ ಬರವದರಲ್ಲಿ ನೀನು ತು೦ಬಾ ಜಾಣನೇ!!

  9. ಜಾಣನೀನಹುದು. ಭಳಿರೆ!

    ಲಾಯಕ ಆಯ್ದು. ರೈಸಲಿ . ಒಳ್ಳೆದಾಗಲಿ.

  10. ಶುರುವಾಣ ಪ್ರಯತ್ನ ಲಾಯಿಕಾಯಿದು. “ಜಾಣ”ನೆ ಸರಿ ನೀನು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×