ಭೋಜನಕಾಲೇ…-ಭಾಮಿನಿಲಿ

May 23, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 44 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಓ ಮನ್ನೆ,ಬೈಲಿಲಿ ಕೂದೊ೦ಡು ಮದುವೆ ಕಥೆ ಹೇಳೊಗ ಊಟದ ಗೌಜಿಯನ್ನೇ ಮರದ್ದೆ೦ತಗೆ ಭಾವ? ಹೇಳಿ ಚೆನ್ನೈಭಾವ° ಪರ೦ಚಿದವು.
ಸರಿ ಹೇಳಿ, ಅದನ್ನೂ ಬೈಲಿ೦ಗೆ ಹೇಳುವ ಧೈರ್ಯ ಮಾಡಿದೆ ಇದಾ.

—————————–

ಮದುವೆ ಮ೦ಟಪ ಹತ್ತಿ ನೆ೦ಟರು
ಮುದದಿ ಒಸಗೆಯ ಕೊಟ್ಟು ಕೂಡಲೆ
ಎದುರು ಒಡ್ಡಿದ ಎಲೆಯ ತಟ್ಟೆಯ ಮುಟ್ಟಿ ಇಳುದವದಾ
ಅದುರು ಕೈಲಿಯೆ ನೀರಿನಾ ಮಡು
ಗಿದವು ಸಭೆಗೆ ಹೊಡಾಡಿಯಪ್ಪಗ
ಹದದಿ ನೀರಿನ ತಳುದು ಉಡುಗುಲೆ ಭಾವ° ಹೆರಟಿದವು
~

ಭೋಜನಕಾಲೇ...
ಹಸೆಯ ಉದ್ದಕೆ ಬಿಡುಸುವದರೊಳ
ಪಿಸಿಪಿಸಿಯ ಮಾತುಗಳ ಗೌಜಿಲಿ
ಹಸುರು ಬಾಳೆಯ ಎಲೆಯ ಹ೦ತಿಗೆ ಹಾಕಿ ಭಾವಯ್ಯ°
ಹಸಿಯ ನೀರಿನ ಚೆ೦ಬು ತು೦ಬುಸಿ
ನಸುನೆಗೆಯ ಮೋರೆಯನು ತೋರುಸಿ
ಉಸುಲು ಕಟ್ಟುವ ಹಾ೦ಗೆ ಬೀಸಕೆ ನೆಡದ° ಚೆಪ್ಪರಕೆ
~
ನಾಕು ಜೆನ ಹೊಡಿ ಜವ್ವನಿಗರದ
ಹೋಕು ತಾಳಿನ ಹಿಡುದು ರೈಸುತ
ಊಕಿಲಿಯೆ ಬಳುಸಿದರೆ ಗೌಜಿಲಿ ಇರ ವಿಚಾರಣೆಗೆ
ಕೂಕಿಲಿಲೆ ಹೇಳಿದವು ಮಾವನು
ಹಾಕಿ ಉಪ್ಪಿನಕಾಯಿ ಎ೦ತದು
ಬಾಕಿ ಒಳುಶೆಡಿ ಅಡಿಗೆಕೊಟ್ಟಗೆಯೊಳವೆ ಮರೆಯೆಡಿರೊ°
~
ಎರಡು ಗಟ್ಟಿಯ ಜೆನವೆ ಬೇಕಿದ
ಸರುತ ಹಿಡಿವಲೆ ಹೆಡಗೆಲಶನವ
ಪರಡಿದರೆ ತಡವಕ್ಕು ಹ೦ತಿಯ ಕೊಡಿಗೆ ಎತ್ತುಸಲೆ
ಹಿರಿಯರೆಲ್ಲರ ಕೈಯ ಮುಟ್ಟುಸಿ
ಎರದು ನೀರಿನ ಗೋವು ತಟ್ಟೆಗೆ
ಎರಗಿ ಹೇಳಿದವೀಶ್ವರಾರ್ಪಣ ಮನೆಯ ಯೆಜಮಾನ
~
ಹೊಡಿಯ ಉಪ್ಪಿನ ಬಳುಸಿ ಗತ್ತಿಲಿ
ಗುಡುಗುಡುನೆ ನೆಡದೊಬ್ಬ ಮಾಣಿಯ
ಸಡಗರಲಿ ನೋಡಿದವು ಉ೦ಬಲೆ ಕೂದ ನೆ೦ಟ್ರೆಲ್ಲಾ
ಹೊಡಿಹೊಡಿಯು ಚರಪರನೆ ಹಪ್ಪಳ
ಹಿಡಿವ ಸಾರಿನ ಕೈಲು ಬೇಗನೆ
ನೆಡವ° ಹ೦ತಿಯ ನೆಡುಕೆ ಬಳುಸುಲೆ ಹೇಳಿದವು ಭಾವ°
~
ಸಾವಕಾಶವಾಗಿ ಇರುವಾರ ಹಾಕ್ಸಿಯೊ೦ಡು ಊಟ ಮಾಡಿ!
ಸಾರು ವಿಚಾರಣೆ ಆವುತ್ತಷ್ಟೇ..ಇನ್ನೂ ಬಗೆ ಸುಮಾರಿದ್ದು,ಆತೋ…?
ಭೋಜನಕಾಲೇ...-ಭಾಮಿನಿಲಿ, 5.0 out of 10 based on 3 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 44 ಒಪ್ಪಂಗೊ

 1. ವಿನಯಾ

  ಲಾಯಿಕಾಯಿದು …….ಸದ್ಯ ಜೆ೦ಬರಕ್ಕೆ ಹೋಗದ್ದರೂ ಮನೆಲಿಯೇ ಕೂದು ಜೆ೦ಬರದ ಊಟ ಉ೦ಡಹಾ೦ಗೆ ಆತು. {ಸಾರಿನ ವರೆಗೆ. 😉 }

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ವಿನಯಕ್ಕಾ,
  ಬೈಲಿನವೆಲ್ಲ ಒ೦ದು ಜೆ೦ಬ್ರ೦ದ ಮತ್ತೊ೦ದು ಜೆ೦ಬ್ರಕ್ಕೆ ಅರಿಷ್ಟ ಕುಪ್ಪಿಯೊಟ್ಟಿ೦ಗೆ ಸಾಗುತ್ತಾ ಇದ್ದವು ಹೇಳಿ ಶುದ್ದಿ..

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ನಿನ್ನೆ ಒಬ್ಬ ಅರಿಷ್ಟ ಕುಪ್ಪಿ ಅಲ್ಲಿ ಮಡಿಗಿಕ್ಕಿಯೇ ಬಯಿಂದೆ ಹೇಳಿ ಹೇಳಿಕ್ಕಿ ಚೀಲಲ್ಲಿ ತುಂಬ್ಸಿಯೊಂಡೇ ಹೋಯಿದನಡ ಬೆಂಗಳೂರಿಂಗೆ ಡೋ….ಯಿ!. ಸುಭಗ ಹೋಗಿ ಅದರ ಇಲ್ಲಿ ಹುಡುಕಿದ್ದೇ ಬಂತು!!.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಭಾಮಿನಿ ಲಾಯ್ಕಾಕಿದು ಭಾವಾ. ಅದಕ್ಕಿಂತ ಲಾಯ್ಕಾದ್ದದು ಕಡೆಂಗೆ ಉಪಚಾರ. ಇನ್ನೂ ಎರಡನೆಯ ಭಾಗ ಬಪ್ಪಲಿದ್ದೊ ಹೇಳಿಗೊಂಡು…

  [Reply]

  VN:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  Gopalakrishna BHAT S.K.

  ಊಟದ ಪದ್ಯ ಲಾಯ್ಕ ಆಯಿದು.ವಿಸ್ತರಿಸಿ ಭೋಜನವ………………….

  [Reply]

  VA:F [1.9.22_1171]
  Rating: 0 (from 0 votes)
 4. ಮೋಹನಣ್ಣ
  ಮೊಹನಣ್ಣ

  ಮುಳಿಯ ಭಾವ ಕೆಲವು ತಿ೦ಗಳಿ೦ದ ಸ೦ಸಾರ ತಾಪತ್ರ್ಯಲ್ಲಿಯೂ ಈ ಪಾಚ ಉ೦ಬ ಗೌಜಿಲಿಯು ಆಗಿ ಬಯಲಿ೦ಗೆ ಇಳುದ್ದಿಲ್ಲೆ.ಇಳುದಪ್ಪಗ ಮದಲು ಕ೦ಡದೇ ಭಾವನ ಭಾಮಿನಿ.ಜೆ೦ಬಾರ೦ಗೊ ಎಲ್ಲ ಒಟ್ಟು ಸೇರುಸಿ ಒ೦ದೇದಿಕ್ಕೆ ಮಾಡಿದ ಹಾ೦ಗೆ ಆತದ.ರೈಸಲಿ ಭವ ಭಾಮಿನಿ.

  [Reply]

  VA:F [1.9.22_1171]
  Rating: 0 (from 0 votes)
 5. ಮೋಹನಣ್ಣ
  ಮೊಹನಣ್ಣ

  ನಿನ್ನೆ ಎ೦ಗಳ ತರವಾಡಿಲ್ಲಿ ಪಾಚ ಉ೦ಬಾಗ ಸುಭಗ ಭಾವನ ಕ೦ಡತ್ತು.ಬೋಸಭಾವನ ಕ೦ಡತ್ತಿಲ್ಲೆ.ಕ೦ಡರೆ ನಾಲ್ಕು ಹೋಳಿಗೆ ಸ್ಪೆಶಲಾಗಿ ಹಾಕಲಾವುತೀತು.ಎ೦ತ ಮಾಡುವದು ಯೋಗ ಇಲ್ಲೆ.

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಕೃಷ್ಣಮೋಹನ ಮಾವಾ,
  ಎಡಕ್ಕಿಲಿ ಪುರುಸೊತ್ತು ಮಾಡ್ಯೊ೦ಡು ಬ೦ದಿರನ್ನೆ,ಸ೦ತೋಷ ಆತು.
  ನಿನ್ನೆ ಸುಭಗ ಭಾವ° ಅರಿಷ್ಟ ಕುಪ್ಪಿ ಹುಡುಕ್ಕಿದ್ದು ಕ೦ಡಿರೋ?ಬೋಚ ಭಾವ೦ಗೆ ಕಟ್ಟು ಕಳುಸಿದ್ದವೋ ಏನೋ..

  [Reply]

  VA:F [1.9.22_1171]
  Rating: 0 (from 0 votes)
 6. ಮೋಹನಣ್ಣ
  ಮೋಹನಣ್ಣ

  ಅರಿಷ್ಟ ಅರಿಷ್ಟ ಹೇಳುವದೇನೋ ಕೇಳಿತ್ತು ಅ೦ಬಗ ಬೋಸ ಭಾವನ ನೆ೦ಪಾಯಿದಿಲ್ಲೆ ಬಟ್ಯನ ನೆ೦ಪಾತು.ಇದು ಪಟ್ಟ ಬದಲಿದ್ದು ಗೊ೦ತಾಯಿದಿಲ್ಲೆ.

  [Reply]

  VA:F [1.9.22_1171]
  Rating: 0 (from 0 votes)
 7. ಕೇಶವ ಕುಡ್ಲ
  keshava kudla

  ಶ್ರೀ ಮುಳಿಯ ಭಾವ ಅವರ ಊಟದ ವರ್ಣನೆ ನನ್ನಂತಹ ಅಭ್ಯಾಗತನಿಗೆ ಸಂಪೂರ್ಣ ಅರ್ಥ ಆಗದಿದ್ದರೂ ಸಹಾ ಸವಿಯಾದ ಅನುಭವವನ್ನೇ ಕೊಟ್ಟಿದೆ. ನನ್ನ ಮಾವನ ಮನೆಯ (ಹೊಸನಗರ) ಇಂತಹುದೇ ಸಮೃದ್ಧಿಯ ಭೋಜನಗಳು ನೆನೆಪಾದವು. ಈಗ ನಮ್ಮ ಕರಾವಳಿಯ ತುಳು ನಾಡವರ ಭೋಜನದ ಸಮೃದ್ಧಿಯ ಬಗ್ಗೆ ಪಾಡ್ದನದ ಒಂದು ತುಣುಕು ಕೇಳಿ.

  “ಮುತ್ತು ವರ್ಣದ ಉನುಪು ಕಾಜಿ ವರ್ಣದ ಕಜಿಪು
  ಪಚ್ಚೆ ವರ್ಣದ ಪಸಂಗರಿ
  ನೀಲ ವರ್ಣದ ನೆಯಿ. ಅಲೆ ಕೂಟುದು ಅಇನೂದು ಬಗೆ
  ಪುಳಿ ಕೂಟುದು ಮುನ್ನೂದು ಬಗೆ
  ಎಣ್ಣೆಲ್ಲ ಕಾಯೋದೆ ಬಂನಲ್ಲ ಚಕ್ಕುಲಿ, ಪದೆನ್ಜಿದ ಪಾಯಸ
  ಕಣಿಲೆ ಮಾಪಲಂದ್ ಉಪ್ಪಡ್.
  ಅಂಗೈ ಮುರಕಲ್ಲ ನೆಯಿ ಮುಂಗೈ ಮುರಕಲ್ಲ ಕೊಜಪು
  ಪೇರಡ ಉಂದರ್ ಅಲೆತ್ ಕೈ ದೆಕ್ಕಿಯೇರ್”

  ಮುತ್ತಿನಂತೆ ಬಿಳಿಯಾದ ಅನ್ನ, ಗಾಜಿನ ಬಣ್ಣದ ಮೇಲೋಗರ, ಹಸಿರು ಬಣ್ಣದ ತಂಬುಳಿ, ನಸು ನೀಲ ಬಣ್ಣದ ತುಪ್ಪ. ಮಜ್ಜಿಗೆಯಲ್ಲಿ ಮುನ್ನೂರು ಬಗೆ, ಹುಳಿಯಲ್ಲಿ ಐನೂರು ಬಗೆ ಎಣ್ಣೆಯಲ್ಲಿ ಕರಿದ ಕಜ್ಜಾಯಗಳು, ಬಣ್ಣಬಣ್ಣದ ಚಕ್ಕುಲಿಗಳು, ಹೆಸರು ಬೆಲೆ ಪಾಯಸ, ಎಲೆ ಬಿದಿರು, ಕಾಮ್ಟೆ, ಮಾಪಲಂಡದ ಉಪ್ಪಿನಕಾಯಿ,. ಅಂಗೈ ಮುಳುಗುವಷ್ಟು ತುಪ್ಪ. ಮುಂಗೈ ಮುಳುಗುವಷ್ಟು ಮೊಸರು. ಹಾಲಿನಲ್ಲಿ ಊಟ ಮುಗಿಸಿದರು. ಮಜ್ಜಿಗೆಯಲ್ಲೇ ಕೈ ತೊಳೆದರು.

  [Reply]

  VA:F [1.9.22_1171]
  Rating: +2 (from 2 votes)
 8. ಮುಳಿಯ ಭಾವ
  ರಘು ಮುಳಿಯ

  ಕೇಶವ ಕುಡ್ಲರಿ೦ಗೆ ನಮಸ್ಕಾರ.
  ಒಪ್ಪಣ್ಣನ ಬೈಲಿ೦ಗೆ ಬ೦ದು ಪ್ರೀತಿಲಿ ಬರೆದ ಈ ಪಾಡ್ದನ ತುಳು ನಾಡವರ ಭೋಜನದ ವರ್ಣನೆ ವರ್ಣಮಯವಾಗಿಯೂ ಇದ್ದು.ಬಣ್ಣ೦ಗಳ ಹೋಲಿಕೆ,ನೂರಾರು ವೈವಿಧ್ಯಮಯ ತಿ೦ಡಿಗೊ ಅಲ್ಲದ್ದೆ “ಅಂಗೈ ಮುರಕಲ್ಲ ನೆಯಿ ಮುಂಗೈ ಮುರಕಲ್ಲ ಕೊಜಪು
  ಪೇರಡ ಉಂದರ್ ಅಲೆತ್ ಕೈ ದೆಕ್ಕಿಯೇರ್” ಹೇಳುವ ಮಾತುಗೊ ಊಟ ಹೇ೦ಗಿಕ್ಕು ಹೇಳೊದರ ತಿಳಿಸಿಕೊಟ್ಟತ್ತು.
  ಬೈಲಿ೦ಗೆ ಹೀ೦ಗೆಯೇ ಬತ್ತಾ ಇರಿ,ಕೇಶವಣ್ಣ.

  [Reply]

  VA:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣಶಾ...ರೀಅಕ್ಷರದಣ್ಣಮಾಲಕ್ಕ°ಡಾಗುಟ್ರಕ್ಕ°ಎರುಂಬು ಅಪ್ಪಚ್ಚಿವಿಜಯತ್ತೆತೆಕ್ಕುಂಜ ಕುಮಾರ ಮಾವ°ಚೆನ್ನೈ ಬಾವ°ಮಾಷ್ಟ್ರುಮಾವ°ಪುಣಚ ಡಾಕ್ಟ್ರುಪ್ರಕಾಶಪ್ಪಚ್ಚಿಬೊಳುಂಬು ಮಾವ°ಕೆದೂರು ಡಾಕ್ಟ್ರುಬಾವ°ಶೇಡಿಗುಮ್ಮೆ ಪುಳ್ಳಿಜಯಗೌರಿ ಅಕ್ಕ°ಶ್ಯಾಮಣ್ಣಉಡುಪುಮೂಲೆ ಅಪ್ಪಚ್ಚಿಯೇನಂಕೂಡ್ಳು ಅಣ್ಣಬೋಸ ಬಾವದೊಡ್ಡಭಾವಸಂಪಾದಕ°ದೀಪಿಕಾಪೆಂಗಣ್ಣ°vreddhiವೇಣಿಯಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ