ಭೋಜನಕಾಲೇ…(3) – ಭಾಮಿನಿಲಿ

ಹೇಳಿದ ಹಾ೦ಗೆ, ಊಟ ಎಲ್ಲಿಗೆತ್ತಿತ್ತೂ!?
ಹಸರ ಪಾಯಸ ಸುರಿವ ಶಬ್ದ ಚೆಪ್ಪರಲ್ಲಿ ಕೇಳಿತ್ತಲ್ಲದೋ?

ಇದರಿಂದ ಮೊದಲಾಣ ಶುದ್ದಿಗಳಲ್ಲಿ ನಾವು ಮಾತಾಡಿದ್ದು.

ಭೋಜನಕಾಲೇ.. 01: ಸಂಕೊಲೆ
ಭೋಜನಕಾಲೇ.. 02: ಸಂಕೊಲೆ

ಮು೦ದೆ ಎ೦ತಾತು ಹೇಳಿ ನೋಡುವ°, ಆಗದೋ?

ಭೋಜನಕಾಲೇ… (03):

ಯೋಗವಿದು ದಾಕ್ಷಿಣ್ಯ ಮಾಡಿದ-
ರಾಗ ಸಾಗಲಿ ಊಟ ಡರ್ರನೆ
ತೇಗು ಬ೦ದರೆ ಹೊಟ್ಟೆಯೊಳ ರಜ ಜಾಗೆಯಕ್ಕನ್ನೆ |
ಸಾಗು ಪಾಯಸ ಬೇಗ ಹಿಡುದು ಸ
ರಾಗವಾಗಿಯೆ ಬಳುಸುಲಪ್ಪಗ
ಸಾಗರದ ಅಲೆ ಎದ್ದ ರೀತಿಲಿ ಚೂರ್ಣಿಕೆಯ ಮಳೆಯೇ ||

ಭೋಜನಕಾಲೇ....

~
ಹರಿವ ಬೆಗರಿನ ಶಾಲಿಲುದ್ದಿದ
ನೆರಿಗೆ ಮೋರೆಯ ಅಜ್ಜ° ಪೂರ್ಣೇ
ಶ್ವರಿಯ ಹೇಳೊದರೊಳವೆ ಚೆಪ್ಪರ ಹಾರಿ ಹೋಪಾ೦ಗೆ |
ಹರಹರಾ ಮಹದೇವ ಹೇಳುತ
ಬರಗಿ ಉ೦ಡವು ಪಾಚ ಹೋಳಿಗೆ
ಕೆರಿಶಿ ಹೆರಡುಲೆ ಮೂರ್ತ ಕೂಡಿತ್ತೀಗ ರೈಸುಗಿದಾ ||
~
ಇದ್ದು ತುಪ್ಪವು ಹಿ೦ದೆಯೇ ಮರೆ
ಯದ್ದೆ ಕಾಯಿಯ ಹಾಲಿದಾ ತಳಿ
ಯದ್ದೆ ಕೂದರೆ ನೆಡೆಯ ತಿನ್ನೆಕ್ಕೀಗ ಬೇಗಳಿಯೋ |
ಬಿದ್ದರೆ೦ತಾತೆರಡು ಹೋಳಿಗೆ
ಅದ್ದಿ ಬೊದುಲುಸಿ ತಿ೦ಬ° ಸುಮ್ಮನೆ
ಜಿದ್ದು ಮಾಡುತ ಬಗ್ಗಿ ಬಳುಸುಲೆ ಅಡ್ಡಿ ಮಾಡೆಡದೋ° ||
~
ಚಿನ್ನದಾ ಬಣ್ಣದ ಜಿಲೇಬಿಯ
ಕನ್ನಡಕ ಹಾಕೆ೦ಡು ಬಳುಸುಲೆ
ಚೆನ್ನಬೆಟ್ಟಿನ ಅಣ್ಣ ಹೆರಟದು ನೋಡುಲೇ ಚೆ೦ದ |
ಹನ್ನೆರಡು ಬಳುಸಿದರು ಬೇಕೆನ
ಗಿನ್ನೆರಡು ಹೇಳುವಗ ಬೋಸನು
ಎನ್ನ ತಲೆ ತಿರುಗಿತ್ತು ಗಿರ್ರನೆ ಇವನ ಜೋಳಿಗೆಯೇ ||
~
ಹೋಳಿಗೆಯ ಕೇಳುವಗ ಬಾಳೆಗೆ
ಬೀಳುಗದ ಗೌಜಿಲಿಯೆ ಸಮ ಹದಿ
ನೇಳು ತಿ೦ದವು ಪ೦ಥ ಕಟ್ಟಿಯೆ ಬೈಲಿನೆರಡು ಜೆನ |
ಹೇಳೆ ಹೆಸರಿನ ಉ೦ಡ ಮೇಲಿವು
ಏಳುಲೆಡಿವದು ಸ೦ಶಯವೆ ಮನೆ
ಮಾಳಿಗೆಲಿ ತಲೆಗೊ೦ಬು ಹಸೆ ಬೇಕಕ್ಕು ಇಬ್ರಿ೦ಗೂ ||

…ಊಟ ಮುಗುದ್ದಿಲ್ಲೆ, ಇನ್ನೂ ಇದ್ದು…

ಸೂ:

ಮುಳಿಯ ಭಾವ

   

You may also like...

27 Responses

 1. ಭಾಮಿನಿಲಿ ಭೋಜನ ಕಾಲೇ ರೈಸುತ್ತಾ ಇದ್ದು…
  ಊಟ ಇಷ್ಟು ಬೇಗ ಮುಗುದತ್ತೋ ಹೇಳಿ ಕೇಳಿತ್ತಿದ್ದವು ಚೆನ್ನೈ ಭಾವ ಅಂದೊಂದರಿ,
  ಈಗ ನೋಡಿರೆ ಮದುವೆಂದ ದೊಡ್ಡ ಭೋಜನ ಕಾಲೇ ಆವ್ತಾ ಇದ್ದು..!
  ಬರಳಿ ಭಾವಾ ಇನ್ನುದೇ,
  ಕಾದೊಂಡಿದ್ದೆಯೊ° 😉

  • ಬೊಳುಂಬು ಮಾವ says:

   ಮದುವೆಂದ ದೊಡ್ಡ ಭೋಜನ ಕಾಲೇ ಆತ ? ಇಲ್ಲೆಪ್ಪಾ. ಅದು ಭಾವಾ, ಬಹುಜನರ ಅಪೇಕ್ಷೆ ಮೇರೆಗೆ. ರಘುಭಾವ ಚೆಂದಕೆ ಬರೆತ್ತ. ಇಷ್ಟೊಳ್ಳೆ ವಿಷಯವ, ಸುಯಿಂಕನೆ ದುರುಸು ಬಿಟ್ಟ ಹಾಂಗೆ ಮುಗುಶುತ್ತು ಎಂತಕೆ ಹೇಳಿ. ವಿವರಣೆ ಬಂದಪ್ಪಗಳೆ ರಂಜನೆ, ಎಂತ ಹೇಳ್ತೆ. ಮದುವೆ ಊಟ ಭರ್ಜರಿ ಆಗಲಿ. ಇನ್ನುದೆ ಮುಂದುವರಿಯಲಿ.

  • ರಘು ಮುಳಿಯ says:

   ಅದಪ್ಪು,ಮದುವೆ ಚುಟುಕಲ್ಲಿ ಮುಗುದತ್ತು.

 2. ಮದುವೆ ಮುಗುದರೆ ಸಟ್ಟುಮುಡಿ ಇದ್ದನ್ನೇ

 3. ಅದು ಹೇಂಗೆ ಅಪ್ಪದು..?ಚತುರ್ಥಿ,ಕೆರೆಮೀಯಣ,,ಹೀಂಗೆ ಎಲ್ಲಾ ಅಗೆಡದ ?

 4. ರಘು ಭಾವ°,

  ಮದುವೆಯ ಊಟ ಭಾಮಿನಿಲಿ ತುಂಬಾ ಲಾಯ್ಕಲ್ಲಿ ಬಯಿಂದು. ನಮ್ಮ ಅಡುಗೆಗಳ ವಿವರ ಕೊಟ್ಟು ಒಂದಾಗಿ ಒಂದು ಬತ್ತಾ ಇಪ್ಪದು ನೋಡಿದರೆ ಹಂತಿಲಿ ಕೂದ ಹಾಂಗೇ ಆತು!!! ಚೂರ್ಣಿಕೆ ರೈಸಿದ್ದು!!!

  ಪಾಯಸ, ಹೋಳಿಗೆ, ಜಿಲೇಬಿ ಬೋಚಭಾವ° ಹೊಡದ್ದದು ನೋಡಿ ಸಮಾಧಾನ ಆತು. ಬೇಕಾದಷ್ಟು ಅಲ್ಲಿ ತಿನ್ನದ್ದರೆ ನಮ್ಮ ಮನೆಗೆ ಬಕ್ಕಲ್ಲದಾ ಎಂತ ವಿಶೇಷ ಮಾಡಿದ್ದಿ ಹೇಳಿ ಕೇಳುಲೇ!! ಆ ಹೊತ್ತಿಂಗೆ ಅವಂಗೆ ಇಷ್ಟ ಅಪ್ಪದರ ಎಂತರ ಮಾಡಿ ಕೊಡುದಪ್ಪಾ ಅಲ್ಲದ್ದರೆ???

  ಅಂಬಗ ಕಾರ ಇನ್ನಾಣದ್ದಕ್ಕೆ ಬಪ್ಪದಾ? ಅಲ್ಲಿಯವರೆಗೆ ಸೀವು ನೆತ್ತಿಗೇರನ್ನೆ ಭಾಮಿನಿಯ ಸೀವಿನ ಒಟ್ಟಿಂಗೆ?
  ಇನ್ನಾಣ ಕಂತುಗೋ ಬರಲಿ!!!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *