ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ವಸಂತರಾಜ್ ಹಳೆಮನೆಡಾಗುಟ್ರಕ್ಕ°ಪುತ್ತೂರಿನ ಪುಟ್ಟಕ್ಕದೀಪಿಕಾಎರುಂಬು ಅಪ್ಪಚ್ಚಿವೇಣೂರಣ್ಣಕಳಾಯಿ ಗೀತತ್ತೆಬೊಳುಂಬು ಮಾವ°ಶರ್ಮಪ್ಪಚ್ಚಿಶುದ್ದಿಕ್ಕಾರ°ನೆಗೆಗಾರ°ನೀರ್ಕಜೆ ಮಹೇಶಮುಳಿಯ ಭಾವಸುವರ್ಣಿನೀ ಕೊಣಲೆಅಕ್ಷರದಣ್ಣಬಂಡಾಡಿ ಅಜ್ಜಿಚೆನ್ನೈ ಭಾವ°ಗಣೇಶ ಮಾವ°ಅಕ್ಷರ°ಚುಬ್ಬಣ್ಣವಿದ್ವಾನಣ್ಣಸಂಪಾದಕ° (editor)ಸುಭಗಮಾಷ್ಟ್ರುಮಾವ°ಜಯಶ್ರೀ ನೀರಮೂಲೆಕೊಳಚ್ಚಿಪ್ಪು ಬಾವಬಟ್ಟಮಾವ°ಡಾಮಹೇಶಣ್ಣಅನುಶ್ರೀ ಬಂಡಾಡಿಮಂಗ್ಳೂರ ಮಾಣಿಕೇಜಿಮಾವ°ಬಲ್ನಾಡುಮಾಣಿಶಾಂತತ್ತೆಅಡ್ಕತ್ತಿಮಾರುಮಾವ°ಪುತ್ತೂರುಬಾವಕಾವಿನಮೂಲೆ ಮಾಣಿಕೆದೂರು ಡಾಕ್ಟ್ರುಬಾವ°ಪೆಂಗಣ್ಣ°ತೆಕ್ಕುಂಜ ಕುಮಾರ ಮಾವ°ಶೇಡಿಗುಮ್ಮೆ ಪುಳ್ಳಿಡೈಮಂಡು ಭಾವಸರ್ಪಮಲೆ ಮಾವ°ದೇವಸ್ಯ ಮಾಣಿಶ್ಯಾಮಣ್ಣಪುಟ್ಟಬಾವ°ಶ್ರೀಅಕ್ಕ°ಒಪ್ಪಕ್ಕವೇಣಿಯಕ್ಕ°ಪೆರ್ಲದಣ್ಣಚೆನ್ನಬೆಟ್ಟಣ್ಣಗೋಪಾಲಣ್ಣಹಳೆಮನೆ ಅಣ್ಣಅಜ್ಜಕಾನ ಭಾವಚೂರಿಬೈಲು ದೀಪಕ್ಕಅನು ಉಡುಪುಮೂಲೆದೊಡ್ಡಭಾವಯೇನಂಕೂಡ್ಳು ಅಣ್ಣಪವನಜಮಾವ


ಭೋಜನಕಾಲೇ – (4) ಭಾಮಿನಿಲಿ

August 25, 2011 ರ 9:00 amಗೆ ನಮ್ಮ ಮುಳಿಯ ಭಾವ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಊಟ ಅರ್ಧಲ್ಲೇ ಬಾಕಿ ಆಗಿ ಮುಳಿಯಭಾವ ಎಲ್ಲಿ ತಪ್ಪುಸಿಗೊ೦ಡವೋ ಹೇಳಿ ಸ೦ಶಯ ಆತೊ?
ಕೈ ಒಣಗಿತ್ತೋ?
ಇದಾ ನಾವು ಹಾಜರು.

ಜೆ೦ಬ್ರದ ಊಟಲ್ಲಿ ಏನೆಲ್ಲಾ ನೆಡಾತು ಹೇಳಿ ನೆಂಪಿದ್ದನ್ನೇ?
ಮರದು ಹೋದರೆ ಇದಾ ಇಲ್ಲಿದ್ದು.

ಮುಂದೆಂತಾತು..?? :

ಪಾಯಸವ ಸುರುದಾಗಿಯಪ್ಪಗ
ಬಾಯಿ ಸೀಕಟೆಯಾದರುಪ್ಪಿನ
ಕಾಯಿ ಎಸರಿನ ತೋರುಬೆರಳಿಲಿ ನಕ್ಕಿದರೆ ಸಾಕು|
ವಾಯು ಹೊಟ್ಟೆಲಿ ಜೋರು ತಿರುಗಿ ಲ
ಡಾಯಿ ಮಾಡಿರೆ ಹೆದರುಲಾಗ ಕ
ಷಾಯ ದಶಮೂಲದ್ದು ಕುಡುದರೆ ಗುಣವೆ ಇರುಳಿ೦ಗೆ||

ಪೋಡಿ ಬಳುಸುತ ಸುಭಗ ಭಾವನು
ಓಡಿ ನೆಡವಗ ಬಗ್ಗಿ ಬೇಗನೆ
ಮೂಡ ಕಟ್ಟುವ ಹಾ೦ಗೆ ಬಾಳೆಯ ಮುಚ್ಚಿ ಭಾವಯ್ಯ|
ಬೇಡ ಬಳುಸೆಡ ಭಾವ ಎಡಿಯದೊ°
ಮಾಡೆಡೆನಗೊತ್ತಾಯ ತಿ೦ದರೆ
ಗಾಡಿ ಎಳವದು ಕಷ್ಟ ಏಳುಲೆ ಎಡಿಯ ದಮ್ಮಯ್ಯ||

ಉಂಬಗೌಜಿ (ಚಿತ್ರ: ಹಳೆಮನೆ ಅಣ್ಣ)

ಅಡಿಗೆ ಕೊಟ್ಟಗೆ ಚೆ೦ದ ನೋಡುಲೆ
ಮಡಲ ಎಡಕಿ೦ದಾನು ನಿಲ್ಕಿರೆ
ಹೊಡದವದ ಬೆಶಿ ಮೆಣಸ ಪೋಡಿಯ ಬಳುಸಿ ಬ೦ದ ಜೆನ|
ಬಿಡೆಡಿ ಮೆಣಸದು ಖಾರವಾದರೆ
ಎಡದ ಕೈಲಿಯೆ ಹಿಡಿ ಜಿಲೇಬಿಯ
ಜಡಿದು ಬಿಟ್ಟರೆ ಬಾಯಿ ಹೊಗೆಯದೊ° ಚೆಪ್ಡಿಯಲ್ಲ ನಿಜ||

ಕಾನದಜ್ಜನು ಕೊಟ್ಟು ಕಳುಗಿದ
ಕೇನೆಗೆ೦ಡೆಗೆ ಹುಳಿಯ ಮಜ್ಜಿಗೆ
ಏನು ಮೇಲಾರವಿದು ಅದ್ಭುತ ಬಳುಸಿ ಹೋಳೆರಡು|
ಲಾನ ಭಾವನೆ ಕೇಳು ಅಶನವ
ಆನು ಹಿ೦ದೆಯೆ ತ೦ದೆ ಮಜ್ಜಿಗೆ
ಸಾನುರಾಗದಿ ಊಟ ಮುಗಿಯಲಿ ಸಾವಕಾಶಲ್ಲಿ||

ಎರುಗು ಹರದಾ೦ಗಾತೊ ಕಾಲಿಲಿ
ಮಿರಿಮಿರಿನೆ ಕುಡುಗಿದರು ಪಾದವ
ಎರಡು ಜೆನ ಬೇಕಕ್ಕೊ ನೆಗ್ಗುಲೆ ಉ೦ಡು ಕೂದವರ|
ಎರಡು ಮುಕ್ಕುಳಿ ಚಾಯ ಕುಡುದರೆ
ಕರಗಿ ಹೋಗದೊ ಜೆ೦ಬ್ರದೂಟವು
ಅರಡಿಯದ್ದವು ಮು೦ದೆ ಮರೆಯೆಡಿ ಎನ್ನ ಈ ಪದವಾ||

~
ಊಟದ ಗವುಜಿ ಮುಗಾತೋ? ಆಗಿರ, ಇನ್ನೂ ಇದ್ದೋ?

ಭೋಜನಕಾಲೇ - (4) ಭಾಮಿನಿಲಿ, 4.5 out of 5 based on 6 ratings
ಶುದ್ದಿಶಬ್ದಂಗೊ (tags): , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಮುಳಿಯ ಭಾವ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

  1. ವಿನಯಾ
    VA:F [1.9.3_1094]
    Rating: +1 (from 1 vote)

    ಲಾಯಿಕಾಯಿದು…
    ೧ನೆ ಹ೦ತಿ ಮುಗುದರೆ … ಕಾದುಗೊ೦ಡು ಇಪ್ಪ ೨ ಹ೦ತಿಯೂರು ಇದ್ದವು+ ಬಳುಸಿ ಜೊರು ಹಶುಆಗಿಗೊ೦ಡು ಇಪ್ಪೊರುಇದ್ದವಿದ.ಹಾ೦ಗಾಗಿ ಮದುವೆ ಊಟ ಆಗಿರ, ಇನ್ನೂ ಮು೦ದುವರಿಯಲಿ.

    [ಉತ್ತರುಸಿ]

  2. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.3_1094]
    Rating: +1 (from 1 vote)

    [ಮೂಡ ಕಟ್ಟುವ ಹಾ೦ಗೆ ಬಾಳೆಯ ಮುಚ್ಚಿ] [ಮಡಲ ಎಡಕಿ೦ದಾನು ನಿಲ್ಕಿರೆ] [ಕೇನೆಗೆ೦ಡೆಗೆ ಹುಳಿಯ ಮಜ್ಜಿಗೆ] [ಎರುಗು ಹರದಾ೦ಗಾತೊ] – ನಾಕು ದಿನ ತಡವಾಗಿ ಬಂದರೂ ನಾಜೂಕಾಗಿ ನೈಜತೆಯಿಂದ ಒಡಗೂಡಿ ಬಯಿಂದು ಹೇಳಿ ಒಪ್ಪ.

    [ಉತ್ತರುಸಿ]

  3. ಹಳೆಮನೆ ಅಣ್ಣ
    VN:F [1.9.3_1094]
    Rating: 0 (from 0 votes)

    ರಘು ಭಾವಾ… ಸೂಪರ್…!!!

    [ಉತ್ತರುಸಿ]

  4. ದೊಡ್ಡಭಾವ
    ದೊಡ್ಡಭಾವ
    VA:F [1.9.3_1094]
    Rating: +2 (from 2 votes)

    ರಘು ಭಾವಾ…
    ಹನ್ನೆರಡು ಹೋಳಿಗೆ ತಿಂದವರ ಹೆಸರು ಇದರಲ್ಲಿ ಬರಕ್ಕೊಂಡಿದ್ದೋ…
    ಹೇಳಿ,
    ಹುಡುಕ್ಕುತ್ತಾ ಇದ್ದೆ,
    ಹಸಿ ಮಡಲ ಸೂಟೆ ಹಿಡುಕ್ಕೊಂಡು :-)

    [ಉತ್ತರುಸಿ]

  5. ತೆಕ್ಕುಂಜ ಕುಮಾರ ಮಾವ°
    ತೆಕ್ಕುಂಜ ಕುಮಾರ ಮಾವ°
    VN:F [1.9.3_1094]
    Rating: +2 (from 2 votes)

    ಮಜ್ಜಿಗೆ ಮೊಸರು ಆಗದ್ದವಕ್ಕೆ ಎಂತ ಏರ್ಪಾಡು, ಗೊಂತಾಯಿದೊ…

    [ಉತ್ತರುಸಿ]

    ಶರ್ಮಪ್ಪಚ್ಚಿ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: 0 (from 0 votes)

    ಮಜ್ಜಿಗೆ ಆಗದ್ದವು ಐ ಕ್ಕೀಂ ಇದ್ದಾ ಹೇಳಿ ನೋಡಿದಲ್ಲೇ ಬಾಕಿ

    [ಉತ್ತರುಸಿ]

  6. ಶರ್ಮಪ್ಪಚ್ಚಿ
    ಶರ್ಮಪ್ಪಚ್ಚಿ
    VA:F [1.9.3_1094]
    Rating: +2 (from 2 votes)

    ರಘ್ಹು,
    ಕೈ ತೊಳವಲೆ ಏಳುವಾಗ ಕಾಲಿಲ್ಲಿ ಎರುಗು ಹರುದ ಹಾಂಗಾತು. ಎಂತ ಹೇಳಿರೆ ಬಳುಸುದು ರೆಜಾ ನಿಧಾನ ಆತಿದಾ
    ಆದರೂ ಭೋಜನ ಫಸ್ಟ್ ಕ್ಲಾಸ್.
    ಭೋಜನದ ನಂತರದ್ದಕ್ಕೆ ಕಾದೊಂಡು ಇದ್ದೆ

    [ಉತ್ತರುಸಿ]

  7. ಓಣಿಯಡ್ಕ ಕಿಟ್ಟಣ್ಣ
    ಓಣಿಯಡ್ಕ ಕಿಟ್ಟಣ್ಣ
    VN:F [1.9.3_1094]
    Rating: 0 (from 0 votes)

    ಎಲೆ ತಟ್ಟೆ ಕಂಡತ್ತಿಲ್ಲೆ ಮಾವ..
    ಊಟ ಮಾತ್ರ ಸೂಪರ್..

    [ಉತ್ತರುಸಿ]

    ಚೆನ್ನೈ ಭಾವ ಉತ್ತರ ಕೊಟ್ಟದು:
    ಚೆನ್ನೈ ಭಾವ°

    VA:F [1.9.3_1094]
    Rating: 0 (from 0 votes)

    ಮಂಟಪಂಗಳಲ್ಲಿ ಸರ್ಬತ್ತು ಕಾಪಿ ಚಾಯೆ ಎಲೆ ತಟ್ಟೆ ಎಲ್ಲಾ ಸಭೇಲಿ ಆರಿಂಗೆ ಬೇಕು , ನಿಂಗೊಗೆ ಆತೋ ಹೇಳಿ ವಿಚಾರ್ಸಲೆ ಇಲ್ಲೇ ಕಿಟ್ಟಣ್ಣ. ನಿಂಗೊಗೆ ಆತನ್ನೇ ಹೇಳಿ ಕೇಳಿರಾತು. ನಿಂಗೊಗೆಂತರ ಈಗ ಎಲೆ ತಟ್ಟೆ ಅಲ್ಲದೋ ಬೇಕಾದ್ದು. ಸುಭಗಣ್ಣ ಎಲ್ಲಿದ್ದ ನೋಡಿ. ಅಲ್ಲೇ ಹತ್ರವೇ ಇಕ್ಕು ಅದಾ.

    [ಉತ್ತರುಸಿ]

    ಓಣಿಯಡ್ಕ ಕಿಟ್ಟಣ್ಣ ಉತ್ತರ ಕೊಟ್ಟದು:
    ಓಣಿಯಡ್ಕ ಕಿಟ್ಟಣ್ಣ

    VN:F [1.9.3_1094]
    Rating: 0 (from 0 votes)

    ಎಲೆ ತಟ್ಟೆಯೇ ಆಯೆಕ್ಕು ಹೇಳಿ ಇಲ್ಲೆ ಮಾವ.. ಬೀಡಾ ಆದರುದೆ ಅಡ್ಡಿ ಇಲ್ಲೆ..

    [ಉತ್ತರುಸಿ]

    ಚೆನ್ನೈ ಭಾವ ಉತ್ತರ ಕೊಟ್ಟದು:
    ಚೆನ್ನೈ ಭಾವ°

    VA:F [1.9.3_1094]
    Rating: +1 (from 1 vote)

    ಬೆಂಗಳೂರ ಮದುವಗೇ ಹೋಯೇಕ್ಕಷ್ಟೇ ನಿಂಗೊ!
    ಏ ಮುಳಿಯ ಭಾವ, ಇವಂಗೆ ಕೊಡದ್ದೇ ಬಿಡುತ್ತಾ ಇಲ್ಲೇ ಕಂಡತ್ತೋ.! ಹೋಪ ದಾರೀಲಿ ಉಂಬಾಯಿ ಅಂಗಡಿಂದ ತೆಗದು ಕೊಡುತ್ತೆ ಹೇಳಿರೂ ಹೆರಡುತ್ತಾ ಇಲ್ಲೇ. ನಮ್ಮ ಮದುವೇಲಿ ಒಂದು ಎಲೆ ತಟ್ಟೆ ಸಾನ ಮಡುಗಿದ್ದವಿಲ್ಲೇಲಿ ಹೇಳುತ್ಸು ಬೇಡ ಇನ್ನು. ಒಂದಾರಿ ಮಾಸ್ಟ್ರು ಮಾವಂಗೆ ನೆಂಪು ಮಾಡಿಕ್ಕಿ.

    [ಉತ್ತರುಸಿ]

  8. ಗಣೇಶ
    ಗಣೇಶ ಪೆರ್ವ
    VA:F [1.9.3_1094]
    Rating: 0 (from 0 votes)

    ಒಳ್ಳೇದಾಯಿದು ರಘು ಭಾವಾ.. ಒಪ್ಪ೦ಗೊ..

    [ಉತ್ತರುಸಿ]

  9. ಮಂಗ್ಳೂರ ಮಾಣಿ...
    ಮಂಗ್ಳೂರ ಮಾಣಿ
    VA:F [1.9.3_1094]
    Rating: 0 (from 0 votes)

    ರಘು ಮಾವಾ°… ಸೂಪರ್…!!!

    [ಉತ್ತರುಸಿ]

  10. ವಿದ್ಯಾ ರವಿಶಂಕರ್
    ವಿದ್ಯಾ ರವಿಶಂಕರ್
    VN:F [1.9.3_1094]
    Rating: 0 (from 0 votes)

    ತುಂಬಾ ಚೆಂದಕೆ ಬರದ್ದಿ.

    [ಉತ್ತರುಸಿ]

  11. ಉಂಡೆಮನೆ ಕುಮಾರ°
    ಉಂಡೆಮನೆ ಕುಮಾರ°
    VA:F [1.9.3_1094]
    Rating: 0 (from 0 votes)

    ಒಪ್ಪ೦ಗೊ..ಒಳ್ಳೇದಾಯಿದು ಭಾವಾ

    [ಉತ್ತರುಸಿ]

  12. ಕೆ.ಜಿ.ಭಟ್
    ಕೇಜಿಮಾವ°
    VA:F [1.9.3_1094]
    Rating: 0 (from 0 votes)

    you are exceeding yourselves.good.

    [ಉತ್ತರುಸಿ]

  13. ಬೊಳುಂಬು ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: +1 (from 1 vote)

    ಒಂದೆರಡು ದಿನ ತಡವಾದರು, ಭಾಮಿನಿಯ ನಾಲ್ಕ್ಲನೆಯ ಕಂತು ಭರ್ಜರಿ ಆಯಿದು. ಸೀಕಟೆಯಾದ ಬಾಯಿಗೆ ಉಪ್ಪಿನಕಾಯಿ ಎಸರು, ಸುಬಗ ಪೋಡಿ ಬಡುಸುವಗ ಬಾಳೆಲೆ ಮಡುಸಿ ಬೇಡ ಹೇಳಿದ್ದು ಲಾಯಕಾತದ. ತೆರೆಮರೆಯ ದೃಶ್ಯವನ್ನುದೆ, ಮುಳಿಯ ಭಾವ ಚೆಂದಕೆ ವಿವರುಸಿದ್ದ. (ಮಡಲ ಎಡಕಿ೦ದಾನು ನಿಲ್ಕಿರೆ ಹೊಡದವದ ಬೆಶಿ ಮೆಣಸ ಪೋಡಿಯ ಬಳುಸಿ ಬ೦ದ ಜೆನ). ಬಡುಸಿದವು , ಕಾರದ ಪೋಡಿ ಒಟ್ಟಿಂಗೆ ಎಡದ ಕೈಲಿ ಜಿಲೇಬಿ ಹಿಡುದು ಗಮಸಿದವದ. ಕಡೆಂಗೆ ಕಾಲಿಲ್ಲಿ ಎರುಗು ಹರುದ್ದರಲ್ಲೂ ರಿಯಾಲಿಟಿ ಇದ್ದು. ಚೆಂದದ ಭಾಮಿನಿಲಿ ಬೈಲಿನ ರಂಜಿಸಿದ ಮುಳಿಯದ ಭಾವಯ್ಯಂಗೆ ಅಭಿನಂದನೆಗೊ.

    [ಉತ್ತರುಸಿ]

  14. Suvarnini Konale
    ಸುವರ್ಣಿನೀ ಕೊಣಲೆ
    VA:F [1.9.3_1094]
    Rating: 0 (from 0 votes)

    ಎಂದಿನ ಹಾಂಗೆ ರೈಸಿದ್ದು :)

    [ಉತ್ತರುಸಿ]

  15. ಅಡ್ಕತ್ತಿಮಾರುಮಾವ°
    ಅಡ್ಕತ್ತಿಮಾರುಮಾವ°
    VN:F [1.9.3_1094]
    Rating: 0 (from 0 votes)

    ಬಾರೀ ಲಾಯಿಕ ಆಯಿದು ..ಇನ್ನೂ ಮುಂದುವರಿಯಲಿ…

    [ಉತ್ತರುಸಿ]

  16. ಎಸ್.ಕೆ.ಗೋಪಾಲಕೃಷ್ಣ ಭಟ್ಟ
    ಗೋಪಾಲಣ್ಣ
    VA:F [1.9.3_1094]
    Rating: 0 (from 0 votes)

    ಚೂರ್ಣಿಕೆ ಹೇಳಿ ಆತೊ?

    [ಉತ್ತರುಸಿ]

  17. narayana yaji
    ನಾರಾಯಣ ಯಾಜಿ
    VA:F [1.9.3_1094]
    Rating: 0 (from 0 votes)

    muliya bhava laik aagi bayindu. hinge baretaa iri matte.

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME