ಭೋಜನಕಾಲೇ…(೨) -ಭಾಮಿನಿಲಿ

June 9, 2011 ರ 8:00 amಗೆ ನಮ್ಮ ಬರದ್ದು, ಇದುವರೆಗೆ 47 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಓ, ಬಳುಸೊದು ನಿಧಾನ ಆಗಿ ಕೈ ಒಣಗಿತ್ತೋ ಹೇ೦ಗೆ? ನಿಧಾನವಾಗಿ ಊಟ ಮಾಡಿ ಹೇದು ಕೇಳಿಗೊ೦ಡಿತ್ತಿದ್ದೆ ಇದಾ.ಮು೦ದುವರಿಯಲಿ ಸಹಭೋಜನ,ಅಲ್ಲದೋ?

ತೊ೦ಡೆಕಾಯಿಯ ತಾಳು ರುಚಿ ಅಲ
ಸ೦ಡೆ ಹಾಕಿದ ಅವಿಲು ಬೆ೦ದಿಯ
ದೊ೦ಡೆಯೊಳ ಇಳುಶುವಗ ಸ೦ತೋಷವದು ಖ೦ಡಿತವೇ
ಗು೦ಡು ಸೌಟಿಲಿ ಎರದ ಸಾರಿನ
ಕ೦ಡು ಹೊಟ್ಟೆಯ ಹಶುವು ಹೆಚ್ಚೊಗ
ಹಿ೦ಡಿನಾ ತರ ಬ೦ದವದ ಜೆನ ಮರುವಿಚಾರಣೆಗೆ

ಒ೦ದು ಕೈಯಲಿ ಲೋಟೆ ಹಿಡುದಿ
ನ್ನೊ೦ದು ಕೈಯಲಿ ನೀರ ಚೆ೦ಬಿನ
ಚೆ೦ದದಲಿ ಹಿಡುಕೊ೦ಡು ಬ೦ದವು ಆಚಕರೆ ಭಾವ°
ಹಿ೦ದೆ ಅಶನವ ಹಿಡುದು ಬೀಸಕೆ
ಬ೦ದವರ ಕಳುಸಿಕ್ಕಿ ಬಲು ಆ
ನ೦ದದಿ೦ದಲೆ ನಿ೦ದು ಮಾತಾಡಿದವು ಹ೦ತಿಲಿಯೆ

ಗುಳ್ಳ ಕೊದಿಲಿನ ಈಶ್ವರಜ್ಜನ
ಪುಳ್ಳಿ ಬಳುಸುಲೆ ಹೆರಟ ಗೌಜಿಯ
ಹಿಳ್ಳೆಯೂ ನೋಡಿತ್ತು ಪಿಳಿಪಿಳಿ ಕಣ್ಣುಗಳ ಬಿಟ್ಟು
ಸುಳ್ಳು ಹೇಳುತ್ತಿಲ್ಲೆ ಸೌತೆಯ
ಸಳ್ಳಿ ಬಳುಸುಲೆ ಮರದು ಹೋಯಿದು
ತಳ್ಳಿ ಬಿಡುವನೊ ಕೊದಿಲ ಹಿ೦ದೆಯೆ ಸಾರವಿಲ್ಲೆನ್ನೆ

ಊಟದಕ್ಷಿಣೆ ಕೊಡುತ ಬಪ್ಪಗ
ಗೀಟು ಅ೦ಗಿಯ ಬೋಸ ಭಾವನು
ನೋಟು ಸಿಕ್ಕುಗೊ ಹೇಳಿ ನೋಡಿದ° ಓರೆಕಣ್ಣಿಲಿಯೆ
ಲೂಟಿ ಕೆಲಸದ ನಿಪುಣನೀ ವೈ
ವಾಟು ಮಾಡುವ ನೆಗೆಯಮಾಣಿಯು
ಲಾಟು ಬಿಟ್ಟನು ಮಾವ° ಬಕ್ಕಡ ಮರುವಿಚಾರಣೆಗೆ

ಎಸರು ಭಾಗವ ಬೇರೆ ಮಾಡುತ
ರಸಭರಿತ ಕೊದಿಲನ್ನೆ ಕೇಳೊಗ
ಉಸುಲು ಬಿಟ್ಟವು ಉ೦ಬ ಜೆನ ಎಡಿಯಪ್ಪ ಭಾರಿ ಸೆಕೆ
ಅಸಲು ಅಚ್ಚಿನ ಬೆಲ್ಲ ಹಾಕಿದ
ಹಸರ ಸೀವದ ಬ೦ತು ಹ೦ತಿಗೆ
ಪಸರಿಸಿತು ಸವಿ ಸುರಿವ ಶಬ್ದವು ಚೆಪ್ಪರದ ತು೦ಬಾ

ಹ್ಮ್, ಈಗಾಣ ಮಕ್ಕೊಗೆ ಚಮಚಲ್ಲಿಯೇ ಸೀವು ಬಳುಸೆಕ್ಕಕ್ಕೋ ಏನೋ,ಛೆ.ಇದಾ,ಒ೦ದು ದಿನ ಸೀವು ರಜಾ ಹೆಚ್ಚು ತಿ೦ದರೆ ಎ೦ತ್ಸೂ ಆಗ.

ಇನ್ನಾಣದ್ದು ಬತ್ತು,ಮದಲೇ ಹೇದ ಹಾ೦ಗೆ ಸಾವಕಾಶ,ನಿಧಾನಕ್ಕೆ…

ಭೋಜನಕಾಲೇ...(೨) -ಭಾಮಿನಿಲಿ, 5.0 out of 10 based on 3 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 47 ಒಪ್ಪಂಗೊ

 1. ಓಣಿಯಡ್ಕ ಕಿಟ್ಟಣ್ಣ
  ಓಣಿಯಡ್ಕ ಕಿಟ್ಟಣ್ಣ

  ಭಾರೀ ಲಾಯಿಕ ಆಯಿದು..

  [Reply]

  VN:F [1.9.22_1171]
  Rating: 0 (from 0 votes)
 2. ದೀಪಿಕಾ
  ದೀಪಿಕಾ

  ವಾಹ್ ಭಾರೀ ಲಾಯ್ಕಾಯ್ದು ಮಾವ!!!
  (ಲಾಟು ಬಿಟ್ಟನು ಮಾವ° ಬಕ್ಕಡ ಮರುವಿಚಾರಣೆಗೆ) ಇದರ ಓದಿ ಎನ್ನ ಅಜ್ಜನ ಮನೆಯ ಜೆ೦ಬ್ರ೦ಗಳಲ್ಲಿ ಎ೦ಗ ಹೀ೦ಗೆ ದಕ್ಷಿಣೆ ಒ೦ದು ವಿಚಾರಣೆ ಆಎಕಷ್ಟೆ ಹೇಳಿ ತಮಾಷೆ ಮಾಡಿಗೊ೦ಡಿತ್ತದು ನೆನಪ್ಪಾತು..
  ಇನ್ನಾಣ ಭಾಗದ ನಿರೀಕ್ಷೆಲಿ ಇದ್ದೆ :-)

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ದೀಪಿಕಾ,
  ಹ.ಹ್ಹಾ..ಎ೦ಗಳದ್ದೂ ಅದೇ ಕಥೆ..

  [Reply]

  ಬೋಸ ಬಾವ

  ಬೋಸ ಬಾವ Reply:

  ಅ೦ಬಗ ಆನು ಕಾದೊ೦ದು ಬ೦ತು…
  ವಿಚಾರಣೆ ಬೈ೦ದೇ ಇಲ್ಲೆ..
  ಲೊಟ್ಟೆ ಹೇಳುದು ರಘು ಭಾವ. :(

  [Reply]

  VN:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  Gopalakrishna BHAT S.K.

  ಚೂರ್ಣಿಕೆ ಇನ್ನಾಣ ವಾರವೊ?

  [Reply]

  VA:F [1.9.22_1171]
  Rating: +1 (from 1 vote)
 4. ಅಡಕೋಳಿ
  ಅಡಕೋಳಿ

  ಇದು ಒಂದೇ ಬೈಟಕಲ್ಲಿ ಬರದ್ದೇ ಆಗಿರವು! ಇಷ್ತು ನಿರ್ಗಳವಾಗಿದು…
  ಲಾಯಿಕ್ಕಾಯ್ದು

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಅಡಕೋಳಿ ಭಾವಾ,
  ನಿ೦ಗಳ ಊಹೆ ನಿಜ .ಒ೦ದೇ ಬೈಟಕಿಲಿ ಬರದ್ದದೇ. ಪ್ರೋತ್ಸಾಹಕ್ಕೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 5. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಸೂಪರ್..ನಿಂಗಳ ಎಲ್ಲಾ ಪದ್ಯಂಗಳಲ್ಲಿಪ್ಪ ನೈಜತೆ ಇಲ್ಲಿಯೂ ಬಯಿಂದು..ಗ್ರೇಶಿ ಗ್ರೇಶಿ ನೆಗೆ ಬತ್ತು ಕೊಶಿಲಿ..ವಾಹ್..

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಉ೦ಡೆಮನೆ ಭಾವಾ,ನೆಗೆ ಮಾಡಿರೆ ಸಾಲ,ಒಟ್ಟಿ೦ಗೆ ಪಾಚ ಸುರಿಯೆಕ್ಕಿದಾ.

  [Reply]

  VA:F [1.9.22_1171]
  Rating: 0 (from 0 votes)
 6. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಹಸರು ಪಾಚ ಬಂತು. ಇನ್ನು ಭೋಜನ ಕಾಲೇ ಹಾಕಲೆ ಅಕ್ಕು.
  ಪಾಚ ಚಪ್ಪರುಸುತ್ತ ಹಾಂಗೇ ಈ ಭಾಮಿನಿಯನ್ನೂ ಸುಮಾರು ಸರ್ತಿ ಓದಿ ಚಪ್ಪರಿಸಿದೆ.
  ಲಾಯಿಕ ಆಯಿದು.
  ನಮ್ಮಲ್ಲಿ “ಸೀವು ಸುರಿವದು” ಹೇಳಿಯೇ ವಾಡಿಕೆಲಿ ಇಪ್ಪದು ಅಲ್ಲದಾ.
  ಭಾಮಿನಿಲಿ, ಕೊದಿಲು ಆಗಿ ಪಾಚ ಬಂತು. ಕೆಲವು ದಿಕ್ಕೆ ಮೇಲಾರ ಒಂದು ಸರ್ತಿ ಬಂದು ಮತ್ತೆ ಪಾಚ, ಭಕ್ಷ್ಯ ಇತ್ಯಾದಿ. ಮೇಲಾರದ ಮರು ವಿಚಾರಣೆ ಇದೆಲ್ಲಾ ಆಗಿಕ್ಕಿ

  [Reply]

  VA:F [1.9.22_1171]
  Rating: +2 (from 2 votes)
 7. ಒಪ್ಪಣ್ಣ

  ಮುಳಿಯಭಾವಾ…
  ಭಾಮಿನಿ ಭಲೇಭಲೇ ಇದ್ದು!

  ಅನ್ನ ಅನ್ನ – ಹೇಳಿಗೊಂಡು ಬರಬರನೆ ಬಂದ ಜವ್ವನಿಗರಿಂಗೆ ಸಂತೋಷಲ್ಲಿ ದಾರಿಕೊಟ್ಟ ಆಚಕರೆ ಬಾವನ ಗ್ರೇಶಿರ ನೈಜತೆ ಎದ್ದು ಬತ್ತು ಭಾವ.
  ಬೋಚಬಾವ ದಕ್ಷಿಣೆಕೊಟ್ಟೊಂಡು ಬಪ್ಪಗ ಪೈಸೆಪೆಟ್ಟಿಗೆ ಕಂಡ ವಿಶಯ ಕೇಳಿಅಪ್ಪಗ ನೆಗೆ ತಡೆಯ.
  ದಕ್ಷಿಣೆ ವಿಚಾರಣೆಗೆ ಬಂತೋ ಅಂಬಗ? 😉

  ಪಾಯಿಸ ಎಷ್ಟು ಬಗೆ? ಬೇರೆಂತೆಲ್ಲ ಇದ್ದು? ಚೂರ್ಣಿಕೆ ಆರದ್ದೆಲ್ಲ ಇತ್ತು? ಮಾದೇವ ಆರೆಲ್ಲ ಎಳದ್ದವು?
  ಮೊಸರು-ಮಜ್ಜಿಗೆಯೊಟ್ಟಿಂಗೆ ಹಾಲುದೇ ಇತ್ತೋ? 😉
  ಹೋಳಿಗೆ ತಿಂಬಲೆ ಪಂತ ಆಯಿದೋ?
  ಬೈಲಿಲಿ ಎಲ್ಲೋರುದೇ ಕಾದೊಂಡಿದ್ದವು. ಬೇಗ ವಿಶಯ ತಿಳುಸಿ.

  ಅಂಬೆರ್ಪಿಲ್ಲೆ, ಊಟ ನಿದಾನಕ್ಕೆ ಸಾಗಲಿ. ಬೇಗ ಮುಗುಶೇಕು ಹೇಳಿ ಏನಿಲ್ಲೆ.
  ಅಂಬೆರ್ಪಿನವು ಬೇಡಿತಿಂಗು ಆಚೊಡೆಲಿ. ಅಲ್ಲದೋ?

  [Reply]

  ಬೋಸ ಬಾವ

  ಬೋಸ ಬಾವ Reply:

  ಇದ ಭಾವ..
  ಚಿಲ್ಲರೆ ಅ೦ಗಿ ಕಿಸೆಲಿ ಮಡುಗಿರೆ, “ಎರಡನೇ ಹ೦ತಿಗೆ” ಬಗ್ಗೆ೦ಡು ಬಳುಸುವಾಗ ಅದು ಅತ್ತೆ ಕೊದಿಲಿ೦ಗೆ ಬೀಳುಗು..
  ಅದಕ್ಕೆ ನೋಟು ಏನಾರು ಸಿಕ್ಕುಗೋ ಹೇಳಿ ಕಾದ್ಸೊ೦ದು ಬ೦ತು.. ಪೋ..!! :(

  [Reply]

  ಅಡ್ಕತ್ತಿಮಾರುಮಾವ°

  ಅಡ್ಕತ್ತಿಮಾರುಮಾವ° Reply:

  ಏ ಬೋಚೊ ನಿನ್ನ ನೋಟಿನ ನೋಟ ಪಸ್ಟ್ಟಾಯಿದು..ಇನ್ನೂ ಬೈಲಿಲಿ ದಕ್ಶಿಣೆ ಕೊಡುವಗ ನೋಟೆ ಕೊಡೆಕ್ಕು ಹೇಳಿ ಕಾನೂನೆ ಮಾಡಿರೆ ಎಂತಾ..?ಈಗ ಸಣ್ಣ ನೋಟೇ ಸಿಕ್ಕುತ್ತಿಲ್ಲೆನ್ನೆ…ಹಾಂಗಿಪ್ಪಗ 10 ರ ಮೇಲೆ ಅಲ್ಲದ್ದೆ ಕೆಳ ಇರ ಇದಾ..!!

  [Reply]

  ನೆಗೆಗಾರ°

  ನೆಗೆಗಾರ° Reply:

  ಎಬೇಲೆ, ಕುಂಬ್ಳೆಅಜ್ಜಿಯ ಪೋಷ್ಟಾಪೀಸಿಲಿ ಒಂದ್ರುಪಾಯಿನೋಟಿನ ಕಟ್ಟ ಬೇಕಾದಷ್ಟು ಸಿಕ್ಕುಗು. 😉

  ಶ್ರೀಅಕ್ಕನತ್ರೆ ಹೇಳೆಡಿ, ಕಾನಾವಣ್ಣನ ಉಪ್ನಾನಕ್ಕೆ ಅದನ್ನೇ ಕೊಡ್ಳೆ ಲೆಕ್ಕ ಹಾಕುಗು! :-(

  VA:F [1.9.22_1171]
  Rating: 0 (from 0 votes)
 8. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಈ ಬೋಸಭಾವ° ಎಲ್ಲಿಗೆ ಹೋದರೂ ಬಿಡ್ತನಿಲ್ಲೆನ್ನೆ? :)
  ಪದ್ಯ ಲಾಯ್ಕಾಯಿದು ಮುಳಿಯದ ಭಾವಾ.

  [Reply]

  VN:F [1.9.22_1171]
  Rating: 0 (from 0 votes)
 9. ಸುಕೇಶ ನೇರೊಳು

  ತೊಟದಜ್ಜನ ಭಾಗವತಿಗೆಯ
  ಎರಡು ಸಾಲಿನ ಚೂರ್ನಿಕೆಯ ಕೇಳಿ
  ಹ೦ತಿಲಿದ್ದ ನಮ್ಮೊರೆಲ್ಲ ಒಕ್ಕೊರಲಿನ ದನಿಲಿ
  ಹೇಳಿದವು
  ಹರಃ ಹರಃ.. ಮಹದೇವ….!!

  [Reply]

  ನೆಗೆಗಾರ°

  ನೆಗೆಗಾರ° Reply:

  ಮಾದೇ……………………………
  ..
  ..
  ..
  ..
  ಯೇವಾ?

  [Reply]

  VA:F [1.9.22_1171]
  Rating: 0 (from 0 votes)
 10. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಆಹ ಪಷ್ಟ್ಲಾಸು ಭಾಮಿನಿ. ಇನ್ನಾಣದ್ದು ‘ಹೋಳಿಗೆ’ಯಾಂಗೇ ಇಕ್ಕಲ್ಲದಾ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ಶೇಡಿಗುಮ್ಮೆ ಪುಳ್ಳಿವಿನಯ ಶಂಕರ, ಚೆಕ್ಕೆಮನೆತೆಕ್ಕುಂಜ ಕುಮಾರ ಮಾವ°ಪುತ್ತೂರಿನ ಪುಟ್ಟಕ್ಕಡಾಮಹೇಶಣ್ಣಪುಟ್ಟಬಾವ°vreddhiಪಟಿಕಲ್ಲಪ್ಪಚ್ಚಿಡೈಮಂಡು ಭಾವಅನು ಉಡುಪುಮೂಲೆಡಾಗುಟ್ರಕ್ಕ°ಚೆನ್ನೈ ಬಾವ°ಪೆಂಗಣ್ಣ°ಅಜ್ಜಕಾನ ಭಾವಚೂರಿಬೈಲು ದೀಪಕ್ಕಉಡುಪುಮೂಲೆ ಅಪ್ಪಚ್ಚಿಶಾ...ರೀವೇಣಿಯಕ್ಕ°ಕೇಜಿಮಾವ°ಶ್ಯಾಮಣ್ಣಬಟ್ಟಮಾವ°ಶುದ್ದಿಕ್ಕಾರ°ಕಳಾಯಿ ಗೀತತ್ತೆಅಕ್ಷರದಣ್ಣಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ