ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಸ್ವಾತಂತ್ರ್ಯದಾ ಸಭೆಲಿ ಮಂತ್ರಿಗೋ ಹೇಳಿದವು
ಆಯೆಕ್ಕು ನಿರ್ಮೂಲ ಭಿಕ್ಷಾಟನೆ
ತುರ್ತಲ್ಲಿ ಓಡಿ ಮರುವಸತಿ ಅಧಿಕಾರಿಗೋ
ಮಾಡಿದವು ಭಿಕ್ಷುಕರ ನಿರ್ಮೂಲನೆ
ವರುಷದಾ ವ್ರತ ಇದು ವರಮಹಾಲಕ್ಷ್ಮಿ
ನೆಗೆಮಾಡಿ ಬಂತಿಂದು ಸ್ವಾರಾಜ ಲಕ್ಷ್ಮಿ
ತಳಿರುತೋರಣ ಪುಷ್ಪ ಶೋಭೆ ಬಳ್ಳಾರಿ
ಇಳಿದುಬಾ ಮೈತುಂಬಿ ಅದಿರಿನಾ ಲಾರಿ
ಕೂಗಿದವು ಮನ್ನೆ ವೋಟಿಲಿ ಗೆದ್ದ ನಾಯಕರು
ಹೆಚ್ಚು ಮಾಡೆಕ್ಕೀಗ ಸಂಬಳ
ಕೆಲಸ ಮಾಡವು ಇನ್ನು ಸರಕಾರೀ ಸೇವಕರು
ಹೆಚ್ಚು ಮಾಡದ್ದರೆ ಗಿಂಬಳ
ಯಶವಂತಪುರದ ಸರ್ಕಲಿಲಿ ಬ್ರಿಗೇಡು
ಮೂವತ್ತು ಮಾಳಿಗೆಯ ಮೇಲೆ ಹೆಲಿಪ್ಯಾಡು
ಕ್ರಯ ಹೇಳುವವು ನಿಂದಿದವು ಹಿಡಿದು ಬ್ಲೇಡು
ಹರಿತಕ್ಕೆ ಹೆದರಿ ಓಡಿದೆ ಬಿಟ್ಟು ಜೋಡು
ವರುಶಾವಧಿಯ ಜಾತ್ರೆ ಅಮೆರಿಕೆಯ ಅಕ್ಕ
ಕಾದು ಕೂಯಿದವು ಜೆನ ಹೇಳಿಕೆಯು ಬಕ್ಕಾ
ಮಂತ್ರಿಗೊ ಹೆರಟರೆ ರಾಜ್ಯಬೊಕ್ಕಸ ಚೊಕ್ಕ
ಕಂತ್ರಿನಾಯಿಗಳ ಹಾಂಗಿಕ್ಕು ತಲೆ ಲೆಕ್ಕ
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಮುಳಿಯ ಭಾವ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಭಾವಯ್ಯ ಕವನ ಭಾರೀ ಲಾಯ್ಕಾಯ್ದು!
(ತಳಿರುತೋರಣ ಪುಷ್ಪ ಶೋಭೆ ಬಳ್ಳಾರಿ)
“ಶೋಭೆ” ಗೂ ಬಳ್ಳಾರಿಗೂ ಇಪ್ಪ ಸಂಬಂಧವ ಸೂಕ್ಷ್ಮವಾಗಿ ಹೇಳಿದ್ದಿ(??!! )!
[ಉತ್ತರುಸಿ]
ಹೊತ್ತುವೇಳೆ: 23 September,2010ರ 3:28 PM ಗೆ. (ಒಪ್ಪಸಂಕೊಲೆ)
ಭಾವಾ,
ನಿಂಗೊ ಶಬ್ದಂಗಳ ಎಡೆಲಿಯೂ ಓದುವ ಶಗುತಿ ಇಪ್ಪವು ಹೇಳಿ ಬೇರೆ ಹೇಳೆಡನ್ನೇ.
[ಉತ್ತರುಸಿ]
ಪದ್ಯ ಬರದ್ದು ಚೆಂದ ಆಯ್ದು
[ಉತ್ತರುಸಿ]
ಮುಳಿಯ ಭಾವನ “ಸತ್ಯ ದರ್ಶನ” ಲಾಯಿಕ್ ಆಯಿದು.
[ಉತ್ತರುಸಿ]
ಹೊತ್ತುವೇಳೆ: 23 September,2010ರ 3:25 PM ಗೆ. (ಒಪ್ಪಸಂಕೊಲೆ)
ಈ ಶೀರ್ಷಿಕೆ ಒಪ್ಪುತ್ತು ಅಪ್ಪಚ್ಚಿ.
[ಉತ್ತರುಸಿ]
ಮುಳಿಯ ಭಾವ ಒಳ್ಳೆ ಚಾಟಿ ಬೀಸಿದ ಹಾಂಗಿದ್ದು.ಬಳ್ಳಾರಿ ಹೇಳೊಗ ” ಬೀಚಿ ” ಯ ನೆಂಪಾತು.
[ಉತ್ತರುಸಿ]
ಹೊತ್ತುವೇಳೆ: 23 September,2010ರ 3:25 PM ಗೆ. (ಒಪ್ಪಸಂಕೊಲೆ)
ಮಾವ,” ಕೊಶಿ ಆದರಂತೆ ಕೂರೆಡಿ ನೆಗೆಯ ಮಾಡಿ ”
ಚಾಟಿ ಬೀಸೊದು ಗಾಳಿಲಿ.ಗೋಣ೦ಗೋ ಅವಕ್ಕೆ ಬೇಕಾದಲ್ಲಿಗೆ ಎಳಕ್ಕೊಂಡು ಹೋವುತ್ತವು !!
[ಉತ್ತರುಸಿ]
ಲೋಕದ ವೀಕಿನ ಟೀಕುಸಿ ಲಾಯಕಾಗಿ ಬರದ್ದ ಮುಳಿಯದವ. ರಾಜಕಾರಣಿಗವಕ್ಕೆ ದೇವರು ಒಳ್ಳೆ ಬುದ್ದಿ ಕೊಡಲಿ.
[ಉತ್ತರುಸಿ]
ಹೊತ್ತುವೇಳೆ: 24 September,2010ರ 12:32 PM ಗೆ. (ಒಪ್ಪಸಂಕೊಲೆ)
ಎನ್ನದೂ ಒಂದು ಪ್ರಾರ್ಥನೆ ಮಾವಾ – ರಾಜಕಾರಣಿಗಕ್ಕೆ ದೇವರು ಒಂದರಿ ಬುದ್ದಿ ಕೊಡಲಿ..
[ಉತ್ತರುಸಿ]
ರಾಜಕಾರಣಿಗೊಕ್ಕೆ ಬುದ್ದಿ ಬಾರಲೇ ಬಾರ.
ಬುದ್ದಿ ಇಪ್ಪವ್ವ್ ರಾಜಕಾರಣಿ ಆಗಲಿ ಹೇಳಿ ಎನ್ನ ಹಾರೈಕೆ.
ಬುದ್ದಿ ಇಪ್ಪ ರಾಜಕಾರಣಿಗೆ ವೋಟು ಕೊಡ್ಲೆ ಭಾರತೀಯರಿಂಗೆ ಬುದ್ದಿ ಕೊಡ್ಲಿ.
[ಉತ್ತರುಸಿ]
ಹೊತ್ತುವೇಳೆ: 24 September,2010ರ 3:48 PM ಗೆ. (ಒಪ್ಪಸಂಕೊಲೆ)
ವೋಟು ಕೊಡ್ಲೆ ಭಾರತೀಯರಿಂಗೆ ಬುದ್ದಿ ಕೊಡ್ಲಿ.
ಈಗ ನೂರರಲ್ಲಿ ಅರುವತ್ತು ಜೆನ ಕಂಬಳಿ ಹೊದ್ದು ಒರಗೊದಲ್ಲದೋ ವೋಟಿನ ದಿನ?
[ಉತ್ತರುಸಿ]
ವೋಟು ನೋಟಿಂದ ಹೆರ ಬಂದು,ಆಟದ ವೋಟು ಆಗದ್ದೆ,ಒಳ್ಳೆ ನೋಟದ ವೋಟಾಟ ಆದ್ರೆ ,ಒಳ್ಳೇದಕ್ಕು…
[ಉತ್ತರುಸಿ]