ಹನಿಗವನಂಗೊ..

ಬೈಲಿನೆಲ್ಲೋರಿಂಗು ರಘುವಿನ ನಮಸ್ಕಾರ ,
ರಜ ಕವನಲ್ಲಿ ಸೌಖ್ಯ ವಿಚಾರಣೆ ಮಾಡೊದಿದಾ..

ಭೂತ ಕನ್ನಡಿ

ಜೆನ ಭವಿಷ್ಯ ಹೇಳುತ್ಸು  ಜೆನರ ಮೊರೆಯ ನೋಡಿ
ಆನು ನೋಡೊದು ಭೂತಕನ್ನಡಿಲಿ  ರೂಢಿ
ಕುಶಿ ಆದರಂತೆ ಕೂರೆಡಿ ನೆಗೆಯ ಮಾಡಿ
ವ್ಯಾಯಾಮ ಆವುತ್ತು ಮೋರೆಗೆ ನೋಡಿ

ಕಾನೂನು ಸಚಿವ ಈ ಬಚ್ಚೇಗೌಡ
ಅಧಿಕಾರದಮಲಿಲಿ ಡ೦ಕಿತ್ತು ನೋಡಾ
ಮಾರ್ಗಲ್ಲಿ ಹಿಂದೆ ಹಾಕಿದ ಜೆನಕೆ ಏಟು
ಕೊಡುಲಾಗ ಇಂಥ ಅಯೋಗ್ಯಂಗೆ ಓಟು

ಅಖಿಲ ಕರುನಾಟಕದ ಒಳ ಎಲ್ಲ  ಕತ್ತಲು
ಹೇಳುತ್ತ  ಇಪ್ಪ ನೆವ ಇಲ್ಲೆ ಕಲ್ಲಿದ್ದಲು
ಜಲವಿದ್ಯುತಿನ ಯಂತ್ರದೊಳ ಎಲ್ಲ ಗೆದ್ದಲು
ಬೇಕು ನಾಳೆಗೆ  ಸೂಟೆ ಕಟ್ಟುಲೇ ಮಡಲು

ಗನಿಧನಿಗಳೆದೆಯ ನಡುಗುಸುಲೆ ಪದಯಾತ್ರೆ
ಬೆಶಿತಣಿವ ಮದಲೆ ಶುರು ಆತು ರಥಯಾತ್ರೆ
ನಾಡಿನೇಳಿಗೆ ಹೇಂಗೆ ಕೈಲಿ ಭಿಕ್ಷಾಪಾತ್ರೆ
ಊರಿನೆಲ್ಲೋರಿಂಗು  ತಲೆಬೇನೆ ಮಾತ್ರೆ

ಹಾರಿಬಂತದ ನೋಡಿ ನೆಗೆಮೋರೆ ರಾಹುಲ
ಸೀರೆ ಸುತ್ತಿದ ಕೂಸು ಸೇರಿತ್ತು ಗುರುಕುಲ
ಪ್ರಶ್ನೋತ್ತರಂಗಳ ಹೊಗಳಿದರೆ ಸಾಲ
ತೊಂಡ೦ಗೊ ಪರಂಚಿದವು ನಿಲ್ಲಿಸೀ ಕೋಲ

ಆಟಿ ಸಮ್ಮಾನ ಆಹಾ ಬಾರಿ ಕಮ್ಮೇನ

ಎದ್ದತ್ತು ಬೈಲಿಲಿ ಆಟಿ ಸಮ್ಮಾನ
ಜಾಲುಡುಗಿ ಬಟ್ಯನ ಸೊಂಟ ಸೋಬಾನ

ಅಪ್ಪಚ್ಚಿ ನಿನ್ನೆ ತಂದವು ಹೊಸತು ಸೀರೆ
ಕುಶಿಲಿ ಕೆಂಪಾತು ಚಿಕ್ಕಮ್ಮನ ಮೋರೆ

ಬೈಲ ನೆರೆಕರೆಗೆಲ್ಲ ಹೇಳಿಕೆಯು ಇಕ್ಕು
ಹೋಪಲೆಡಿಯದ್ದರೆ ಹೋಳಿಗೆಯು ಬಕ್ಕು

ನೆಗೆಗಾರ ಕೇಳುತ್ತ ಯಾವಾಗ ಕೋಡಿ
ಭಟ್ಟಜ್ಜ ಹೇಳುಗಡ ಸುಮುಹೂರ್ತ ನೋಡಿ

ಏವ  ಜೆಂಬರಕು ಹೋಪಲೆ ನಾವು ಫಸ್ಟು
ಹೊಟ್ಟೆ ಬೆಳೆದರೆ ಮಾಂತ್ರ ಉಪವಾಸ  ಬೆಷ್ಟು

ಮುಳಿಯ ಭಾವ

   

You may also like...

13 Responses

 1. ಕುವೈತ್ ಭಾವ says:

  ಏ ಮುಳಿಯ ಭಾವ, ಎಲ್ಲೋರನ್ನೂ ಜಾಲಾಡಿಸಿದ ಹಾಂಗೆ ಇದ್ದು. ರಾಜಕೀಯಕ್ಕೆ ಸೇರುವ ಆಲೋಚನೆ ಎಂತಾರೂ ಇದ್ದೊ? ಎಂತದೆ ಆಗಲಿ, ಕವನಕ್ಕೆ ಒಪ್ಪ ಕೊಡೆಕ್ಕಾದ್ದೆ.

 2. ಶ್ರೀಶ ಹೊಸಬೆಟ್ಟು says:

  ಎರಡು ಕವನಂಗಳೂ ಲಾಯಿಕ ಆಯಿದು ಭಾವಯ್ಯ.
  [ಬೇಕು ನಾಳೆಗೆ ಸೂಟೆ ಕಟ್ಟುಲೇ ಮಡಲು]-ಗೊಂತಾದರೆ ಅದಕ್ಕೂ ಹಾಕುಗು ಟೇಕ್ಸ್.
  [ನೆಗೆಗಾರ ಕೇಳುತ್ತ ಯಾವಾಗ ಕೋಡಿ]- ಬೇಗ ಇದ್ದಂಬಗ ಪಾಚದೂಟ

 3. ಪುಟ್ಟಭಾವ ಹಾಲುಮಜಲು says:

  ಭವಿಷ್ಯ ನೋಡುಲೆ ಭೂತ ಕನ್ನಡಿ ಬೇಕಾ? ಬರೇ ಕನ್ನಡಿ ಸಾಕಾ ಹೇಳಿ!!! ನಮ್ಮ ಭವಿಷ್ಯ ನಮ್ಮ ಕೈಲಿ ಅಲ್ಲದ!!!?ಎರಡೂ ಕವನಂಗ ಭಾರೀ ಲಾಯ್ಕಾಯ್ದು!!!

  • raghumuliya says:

   ಎಲ್ಲೋರು ಭವಿಷ್ಯ ಹೇಳೋಗ ಆನು ನಿನ್ನಾಣದ್ದರ ( ಭೂತಕಾಲ) ರಜ ಸೂಕ್ಷ್ಮಲ್ಲಿ ನೋಡಿ ಗೀಚುತ್ತೆ ಹೇಳ್ತ ಅಭಿಪ್ರಾಯಲ್ಲಿ ಬರದ್ದು ಭಾವ.

  • ಶ್ರೀಕೃಷ್ಣ ಶರ್ಮ.ಹಳೆಮನೆ says:

   ಕೈ ನೋಡಿ ಭವಿಷ್ಯ ಹೇಳುವವು ಭೂತ ಕನ್ನಡಿ ಉಪಯೋಗಿಸುತ್ತವು.

 4. ಗೋಪಾಲ ಮಾವ says:

  ಮುಳಿಯದಳಿಯನ ಕಳಕಳಿಯ ಕವನ ಒಳ್ಳೆ ಕಳಿತ ಕದಳೀಫಲದ ಹಾಂಗೆ ಸುಮಧುರವಾಗಿತ್ತು. ಅರ್ಥವತ್ತಾಗಿತ್ತು. ಆಟಿ ಸಮ್ಮಾನದ ಪರಿಮಳವೂ ಮೂಗಿಂಗೆ ಬಡುದತ್ತು. ಎನ್ನ ಒಪ್ಪಂಗೊ.

  • raghumuliya says:

   ಮಾವಾ ನಿಂಗಳ ಆಶೀರ್ವಾದ ಇದ್ದರೆ , ಮುಳಿಯದ ಅಳಿಯ ,ಅಳಿಯದ ಮುಳಿಯರ ನೆನಪ್ಪುಸುವ ಹಾಂಗೆ ಬರವಲೆ ಪ್ರಯತ್ನ ಮಾಡುಗು.

 5. ರಘು ಬಾವಾ.. ಲಾಯ್ಕ ಆಯಿದು…ಹೀಂಗೆ ಅಂಬಂಗಂಬಗ ಬರೆತ್ತಾ ಇರೆಕ್ಕದ ಕವನಂಗೊ°

 6. ಶ್ರೀದೇವಿ ವಿಶ್ವನಾಥ್ says:

  ಮುಳಿಯ ಭಾವ, ಕವನಂಗ ಲಾಯಕ ಆಯಿದು. ನಿಂಗ ಬರವ ಎಲ್ಲಾ ಕವನದೇ ಆ ಕ್ಷಣಲ್ಲಿ ತಯಾರಾಗಿ ತುಂಬಾ ಲಾಯಕ ಬತ್ತಾ ಇದ್ದು.
  ಮುಂದುವರೆಶಿ.., ಸೃಜನಾತ್ಮಕವಾಗಿ ಇನ್ನುದೇ ಹೊಸ ಕವನಂಗ, ಶುದ್ದಿಗೋ ಬರಲಿ..
  ಬೈಲಿಲಿ ಇನ್ನುದೇ ಇಪ್ಪ ಪ್ರತಿಭೆಗಳೂ ಹೆರ ಬರಲಿ…

 7. raghumuliya says:

  ಧನ್ಯವಾದ ಅಕ್ಕಾ.ಬೈಲಿನ ಬಂಧುಗಳ ಪ್ರೋತ್ಸಾಹ ,ಬರವಲೆ ಹೊಸ ಉಮೇದು ಕೊಡುತ್ತಾ ಇದ್ದು.
  ಸ್ಥಳ,ಅವಕಾಶ ಕೊಡುತ್ತಾ ಇಪ್ಪ ಒಪ್ಪಣ್ಣ೦ಗೆ ಎರಡು ಕೈ ಮುಗುದು ನಮಸ್ಕಾರ.

 8. ಕವನಂಗ ಬಾರೀ ಲಾಯಿಕ ಆಯಿದು…

 9. { ಬೈಲ ನೆರೆಕರೆಗೆಲ್ಲ ಹೇಳಿಕೆಯು ಇಕ್ಕು
  ಹೋಪಲೆಡಿಯದ್ದರೆ ಹೋಳಿಗೆಯು ಬಕ್ಕು }

  ಕಾದು ಕೂದ ನೆಗೆಗಾರಂಗೆ ಕೊರಳು ಬೇನೆ ಬಕ್ಕು
  ಚಿಕ್ಕಮ್ಮಂಗೆ ನೆಂಪಾದರೆ ಅಜ್ಜಿಗೆ ಮೀಸೆ ಬಕ್ಕು!!

 10. ಎರಡೂ ಕವನಂಗೊ ಸೂಪರ್ ಆಯಿದು. ತ್ರಾಸ ಇಲ್ಲದ್ದ ಪ್ರಾಸಂಗೊ. ಅರ್ಥಪೂರ್ಣವಾಗಿ ಮೂಡಿಬಯಿಂದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *