ಭೂತಕನ್ನಡಿಲಿ ಸತ್ಯದರ್ಶನ..

ಆಗಸದ ಚಂದ್ರಂಗೆ ಮತ್ತೆ ಅಮವಾಸ್ಯೆ
ಆರೋಗ್ಯ ಮಂತ್ರಿಗೆ ಮುಗಿಯದ ಸಮಸ್ಯೆ
ಸೀಟು ಹಗರಣ ಮಾಡಿ ಆತೀಗ ಗ್ರಹಣ
ನೋಟು ನೋಡಿರೆ ಇನ್ನು ಅಕ್ಕು ಮತಿಭ್ರಮಣ

ಇಟಲಿಯಮ್ಮನ ಶಿಷ್ಯ ಈ ರಾಜ್ಯಪಾಲ
ಆಟಲಪಕ್ಷದ ರಾಜ್ಯಲಿವನದ್ದೆ ಕೋಲ
ಕುಟಿಲತೆಲಿ ಎದುರಿಲ್ಲೆ ಇವನೆ ಜಗಮೊಂಡು
ಜಟಿಲಬದುಕುಲೆ ಪಾಪ ದನಕಂಜಿ ಹಿಂಡು

ಕಟ್ಟಾಳು ಸೇರಿದರೆ ಆಟ ಕಾಮನುವೆಲ್ತು
ಮುಟ್ಟಾಳೆ ಇಲ್ಲದ್ರೆ ಹಾಳಕ್ಕು ಹೆಲ್ತು
ಮಾಡಿನಡಿಯಿಂದ ಬೀಳುಗು ಫಾಲ್ಸುರೂಫು
ನೋಡಿನೆಡೆಯೆಕ್ಕು ಬೀಳದ ಹಾಂಗೆ ಪಾಪು

ಮಂತ್ರಿಪದವಿಯೊ ಇದು ಸಂಗೀತಕುರ್ಚಿ
ಕಂತ್ರಿ ನಾಯಕರಿಂಗೆ ಹೆಚ್ಚಾತು ಪೆರ್ಚಿ
ತಂತ್ರಿ ಕುತ್ತಿದ° ತಲೆಗೆ ತೆಗದೊಂದು ಭರ್ಚಿ
ಸೀಂತ್ರಿ ತೋರಿದ ಭಿನ್ನ ಮತರಿಂಗೆ ಮಿರ್ಚಿ

ಓದು ಗೊಂತಿಲ್ಲೆ ಗ್ರಂಥಾಲಯದ ಮಂತ್ರಿ
ಮೇದು ಗೊಂತಿಕ್ಕು ಶುರು ಅಕ್ಕಿನ್ನು ಸೀಂತ್ರಿ
ಒರಳೆಗೋದುಲೆ ಗೊಂತೊ?ತಿಂತು ಪುಸ್ತಕವ
ಮರುಳೆ ಯೋಚನೆ ಬಿಟ್ಟು ಕೆರೆಯೊ° ಮಸ್ತಕವ

ಮುಳಿಯ ಭಾವ

   

You may also like...

15 Responses

 1. ಶ್ರೀದೇವಿ ವಿಶ್ವನಾಥ್ says:

  ಮುಳಿಯ ಭಾವನ ಭೂತಕನ್ನಡಿಯ ಸತ್ಯ ದರ್ಶನ !
  ಆತು ಬೈಲಿಲಿ ನಮ್ಮ (ಕ)ಮಂತ್ರಿಗಳ ಸತ್ಯ ನರ್ತನ!!
  ಮಂತ್ರಿಗೋ ಕುತಂತ್ರ ಮಾಡುದರ ಕಂಡು ಮಾಧ್ಯಮಲ್ಲಿ.
  ತೋರ್ಸಿತ್ತು ಹಾಸ್ಯಲ್ಲಿ ರಘುಭಾವನ ಭೂತಕನ್ನಡಿ ನಮ್ಮ ಬೈಲಿಲಿ….

  ಮುಳಿಯ ಭಾವ.., ಲಾಯ್ಕಾಯಿದು… ನಿಂಗಳ ಭೂತಕನ್ನಡಿಗೆ ಈ ಮಂತ್ರಿಗಳ ಕೆಲಸಂದಾಗಿ ಪುರುಸೊತ್ತೇ ಇರ ಅಪ್ಪೋ? ಪಾಪ!!!
  ಇನ್ನುದೇ ಬರಲಿ ಭೂತಕನ್ನಡಿಯ ಸತ್ಯಂಗ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *