ಬಿಗನಾಶಿ ಮಾಣಿ

ಬಿಗನಾಶಿ ಮಾಣಿ  

 ” ಏ ಮಾಣಿ ಬಾ ಇತ್ತೆ
ಎಂತಾಕೆ ಬೊಡುಶುತ್ತೆ 
ಓ  ಇಲ್ಲಿ ತಳಿಯದ್ದೆ ಕೂರು |
ಎಷ್ಟು ಹೇಳಿರು ನಿನಗೆ
ಭಾಷೆ  ಎಂಬುದೆ ಇಲ್ಲೆ
ಎನಗೆಡಿಯ  ಬೈಗು ಆರಾರು ”  |೧|

 ” ನೀ ಬರೀ ಬಿಗನಾಶಿ 
ಬಿಂಗಿ ಪೋಕಿರಿ  ಪಿರ್ಕಿ 
ನಿನಗೆಂತ ಕೆಮಿಗೆಂಡೆ  ಬೆಶಿಮಾಡೆಕೋ ? |
ವರ್ಷ ಹನ್ನೆರಡಾತು 
ಬೆನ್ನು  ಬಗ್ಗುಸಲೆಡಿಯ 
ಸಮಕ್ಕೆ  ಬಾರುಸಿ ಕುಂಡೆ ಚೋಲಿ  ತೆಗೆಕೋ ” ?|೨|

 ದಿನ  ನಿತ್ಯ  ಇದೆ ರಾಗ 
ಆಚ ಮನೆ  ಚುಬ್ಬಕ್ಕ 
ಒಂದು  ಘಳಿಗೆಯು  ಮುಚ್ಚ  ಅದರ ಬಾಯಿ  |
ಇಷ್ಟು ದಿನ  ಕೊಂಗಾಟ
ಮಾಡಿ  ಸಾಂಕಿದ  ಮಗನ 
ಆಳುಸಲೆ  ಎಡಿತ್ತಿಲ್ಲೆ , ಬಾಯಿ ಬೊಂಬಾಯಿ  |೩|

 ಮಾಣಿಯೋ  ಬರಿ ಲೂಟಿ 
ನಿಂದಲ್ಲಿ ನಿಲ್ಲ   ಅವ°
ಮನೆಂದ  ಹೆರವೇ ಊರ ಮೇಗೆ  ತಿರುಗಾಟ  |
ಗೆಡುವ ಬಗ್ಗುಸಲೆಡಿಗು
ಮರವ  ಬಗ್ಗುಸಲೆಡಿಗೋ 
ಹಾಳು ಮಾಡಿತ್ತಬ್ಬೆ , ಅದರ ಕೊಂಗಾಟ |೪|

 ಮನೆಂದ ಶಾಲಗೆ  ಹೇಳಿ
ಹೋಪದೆಲ್ಲಿಗೊ  ಏನೋ  !
ಒಂದು ದಿನ  ಇತ್ತಿದ್ದ ಮರದ ಕೊಡಿಲಿ  |
ಮತ್ತೊಂದು ದಿನ  ಅದಾ
ಬಾಯಿಂದ  ಹೊಗೆ ಹೋವ್ತು 
ಆಂಜಿದಾಂಗಾತೆನಗೆ  ಬ್ಯಾರಿ ಅಂಗಡಿಲಿ   |೫|

 ಕತ್ತಲಪ್ಪಗ  ಜೆತಗೆ
ಆರಾರೋ ಇರುತ್ತವಡ  
ಸಂಕದಾ ಚಿಟ್ಟೇಲಿ  ಕೂರುತ್ತನಾಡ  |
ಮೇಗಾಣ  ಅಂಗಡಿಲಿ
ಎಂತೆಂತೋ  ತಿಂತಾಡ
ಡೋಲು ಪೇಂಟಿನ  ಹಾಕಿ    ತಿರುಗುತ್ತನಾಡ  |೬|

 ಈಗ  ಮಾಣಿಯೆ ಮನಗೆ
ಬಪ್ಪಲಿಲ್ಲೆಡ  ನಿತ್ಯ 
ಬಾರದ್ದೆ  ಅದ  ಎಷ್ಟೋ  ದಿನವೇ  ಕಳುತ್ತು  |
ಹಿಂಗೆಲ್ಲ  ಹೇಳಿಂಡು 
ಚುಬ್ಬಕ್ಕ  ಬೈಂದಾಗ 
ದಿನ ನಿತ್ಯ  ಕಣ್ಣೀರು  ಹಾಕಿ  ಕೂಗುತ್ತು  |೭|

 ಮಾಣಿ ಹೇಂಗೇ ಇರಲಿ
ಹೆತ್ತಬ್ಬೆ  ಅಲ್ಲದೋ
ಆರಾರು  ಕಂಡಿದಿರೊ  ಅದರ  ಮಗನ ?|
ಅಲ್ಲೆಲ್ಲಿಯಾದರೂ
ತಿರುಗಿಂಡಿಪ್ಪಲು ಸಾಕು 
ಇನ್ನಾದರೂ ಅವಂಗೆ ಬರಲಿ ಒಳ್ಳೆ ಗುಣ  |೮|

~~~***~~~

 

 

 

ಬಾಲಣ್ಣ (ಬಾಲಮಧುರಕಾನನ)

   

You may also like...

9 Responses

 1. ಶ್ಯಾಮಣ್ಣ says:

  ಬಿಗನಾಶಿ ಮಾಣಿಯ ಒಂದು ಚಿತ್ರವೂ ಬರದು ಹಾಕುತಿತ್ತರೆ ಎಲ್ಲಿಯಾದರು ಕಂಡರೆ ಗುರ್ತ ಆವುತಿತ್ತು…. ಎಂತ ಹೇಳ್ತಿ ಬಾಲಣ್ಣ?

  • ಬಾಲಣ್ಣ (ಬಾಲಮಧುರಕಾನನ) says:

   ಆ ಮಾಣಿಯ ಅಲ್ಲೆಲ್ಲೋ ವಿಟ್ಲದ ಹೊಡೆಲಿಯೋ,ನೀರ್ಚಾಲ ಹೊಡೆಲಿಯೋ ಕಂಡ ಹಾಂಗಾತಡ ..ಇಂದ್ರಾಣ ಪೇಪೆರಿಲಿ ಇತ್ತಲ್ಲದೋ?( ಶಾಮಣ್ನನ ಪೆನ್ಸಿಲಿಲಿ ಬರಕ್ಕಂಡು ಕಂಡತ್ತು )

   • ಶ್ಯಾಮಣ್ಣ says:

    ಪೆನ್ಸಿಲಿಲಿ ಇತ್ತಿದ್ದ ಮಾಣಿಯ ಹೆಸರು ನಾಣಿ. ಅವ ಬಿಗನಾಶಿ ಅಲ್ಲ ಆತಾ… ಅವ ಪಾಪ…

 2. ತೆಕ್ಕುಂಜ ಕುಮಾರ ಮಾವ° says:

  ಚಿತ್ರ ಅಲ್ಲದ್ದರೆ ಫಟವನ್ನದರೂ ಹಾಕಿಕ್ಕಿ. ಎಲ್ಲಿ ಹೋದರೂ ಮದಾಲು ಕೇಳೊದು ಅದನ್ನೆ. ಕಲರ್ ಫಟ ತೆಗದು ವ್ಯಾಟ್ಸಾಪಿಲಿ ಹಾಕಿ. ಹುಡ್ಕುವೋ.? ಗೂ ಗೂಲು ಇದ್ದು ನಮ್ಮತ್ರೆ.

 3. ಶರ್ಮಪ್ಪಚ್ಚಿ says:

  ಕೊಂಗಾಟಲ್ಲಿ ಸಾ೦ಕಿದ ಮಾಣಿ, ತಿರುಗಾಡಿ ಆದ್ದು ಕವನಲ್ಲಿ ಲಾಯಿಕಲಿ ಮೂಡಿ ಬಯಿಂದು.
  ಆಶಯವ ಅಕೇರಿಯಾಣ ಸಾಲುಗಳಲ್ಲಿ ಹೇಳಿದ್ದು ಕೂಡಾ ಲಾಯಿಕ ಆಯಿದು.

 4. ಚೆನ್ನೈ ಭಾವ° says:

  😀 ಪಷ್ಟಾಯ್ದು. ರೈಸಿದ್ದು

 5. ಬೊಳುಂಬು ಗೋಪಾಲ says:

  ಮಾಣಿ ಏವ ರೀತಿಲಿ ಬೆಳವಲಾಗ ಹೇಳುವುದರ ಬಾಲಣ್ಣ ಸೊಗಸಾಗಿ ಪದ್ಯ ರೂಪಲ್ಲಿ ಕೊಟ್ಟಿದವು. ಚುಬ್ಬಕ್ಕನ ಬಾಯಿಲಿ ಬಂದ ಬೈಗುಳ ಸುಪ್ರಭಾತವ ಆ ಮಾಣಿ ಜೀವನಲ್ಲಿ ಸರಿಯಾಗಿ ಹೊಂದುಸಿಕೊಂಡಿದ. ಪದ್ಯ ಒಳ್ಳೇ ರೈಸಿದ್ದು.

 6. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಹೀಂಗೆ ಮಾಣಿಂಗೊ ಅಪ್ಪಲಾಗ;ಆದರೂ ಅಬ್ಬೆಗೆ ಮಾಣಿ ಬೇಕನ್ನೆ? ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ-ಈ ಶ್ಲೋಕವ ನೆನಪು ಮಾಡಿಸಿತ್ತು.

 7. ಸವಿತಾ says:

  ಮಾವ … ಪದ್ಯ ಓದಿದೆ.ಲಾಯಿಕಾಯಿದು… 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *