Oppanna.com

ಚುಟುಕಂಗೊ ಮೂವತ್ತರವರೆಗೆ..

ಬರದೋರು :   ರವಿಕುಮಾರ ಕಡುಮನೆ    on   30/04/2012    6 ಒಪ್ಪಂಗೊ

ಕೆಲವು ಚುಟುಕಂಗೊ ಇಲ್ಲಿದ್ದು.
ನೋಡಿ, ಹೇಂಗಿದ್ದು ತಿಳುಸಿ.
೨೧.”ಜಗ-ಜನ”
ಸಂಪತ್ತು ಬಂದರೆ ಮೆರೆತ್ತವು..
ಜಗತ್ತು ಮುಂದಾಗಿ ಮರೆತ್ತವು..
ಆಪತ್ತು  ಆದರೆ ಮೊರೆತ್ತವು..
ಕೊನೆಗೆ ಕೊರಳು ಬಗ್ಗಿ ಮುರಿತ್ತವು.!!
೨೨.”ಸೃಷ್ಟಿ-ದೃಷ್ಟಿ”
ನಿಸರ್ಗವೊಂದು  ಅವನ ಸೃಷ್ಟಿ..
ಪೊರವದು ನಿತ್ಯ ನಿರಂತರ ವೃಷ್ಟಿ..
ಸ್ವರ್ಗಹೇಳಿ  ತಿಳಿಯೆ ಚಿಂತನ ದೃಷ್ಟಿ..
ಅರಿವದು ಸತ್ಯ ಅನಂತ ಸಮಷ್ಟಿ…
೨೩.”ಮಾತು-ಮಂಥನ”
ಬಂದು ಕೇಳಿರೆ ರುಚಿರ ಮಾತಿನ..
ಹೊಂದಿ ಬಾಳುವಿ ಚಿರ ನೂತನ..
ಇಂದು ಕಾಣುವೇ ತಾರ ದೂರಲ್ಲಿ..
ಮುಂದೆ ತಾಣವೇ ಚಿತ್ತಾರ ತೀರಲ್ಲಿ…
೨೪.”ಮಗಳು”
ದೂರೆಡಿ ಹೆಣ್ಣೆಂದು ಮಗಳ..
ಅರಿತಿರಿ ಪುಣ್ಯ ಜನುಮಗಳ..!
ತೊಲಗುಗು ಬರಡುಮನ ಗಲ್ಲಿ
ಬೆಳಗುಗು ಎರಡುಮನೆ ಜಗಲಿ…!!
೨೫.”ಕಲಿಕೆ”
ಬೀಳುವದು ಸಹಜ ಮೊದಲು..
ಹೇಳುವದು ಶುರು ನಿಜ ತೊದಲು..
ಹೊರಳಿ ಕಲಿಯದ್ದೆ ಸಾಧ್ಯವೆ ನಡೆವಲೆ..?
ಮರಳಿ ಉಲಿಯದ್ದೆ ವೇದ್ಯವೆ ನುಡಿವಲೆ..?
೨೬.”ಹೊಂದಾಣಿಕೆ”
ಬದುಕಲೆ ಇಪ್ದದು ಹೊಟ್ಟೆಪಾಡು
ಬದುಕಿಸುಲೆ ಬಪ್ದದು ಕಟ್ಟುಪಾಡು
ಬದುಕಿಲಿ ಹೊಂದಿರೆ ಮಾರ್ಪಾಡು
ಬದುಕುವಿ ಹಗಲಿರುಳ ಏರ್ಪಾಡು…!!
೨೭.”ತೃಪ್ತಿ”
ಎಷ್ಟು ದಿನ ಇಪ್ಪೆ ನೀ ನಗದೇ..?
ಕಷ್ಟ ಚಿನ್ನ ತಾರೆ ಆನ್ ನಗದೇ…!
ತೃಪ್ತಿಯಿರೆ ಅಷ್ಟು ಸಾಕು ಅವಂಗದೇ..
ವ್ಯಾಪ್ತಿಮೀರೆ ನಷ್ಟಭಾಕ್ ಅವನೀ-ಗಾದೆ…!(ಅವನಿ=ಭೂಮಿ)
೨೮.”ಮಾಯಾಜಾಲ”
ನಲ್ಲೆ ಎನಗೆ ಸಿಕ್ಕಿತ್ತು ಹೇಳಿ ತಬ್ಬಿದ್ದೆ..
ಬಲ್ಲೆ ನೀ ಎನ್ನ ಎಂದು ಉಬ್ಬಿದ್ದೆ..
ಒಳ್ಳೇ ಮನದನ್ನೆ ಅಕ್ಕೆಂದು ನಂಬಿದ್ದೆ
ಸುಳ್ಳೇ ನೀ ಹೇಳಿದ್ದೇಕೆ ಆನ್ ಬಿದ್ದೆ…!
೨೯.”ಮಾತು-ವ್ಯವಹಾರ”
ಸ್ವಚ್ಛ ಇರಲಿ ನಮ್ಮ ಮನದಾಳ
ತುಚ್ಛ ಏಕಿರಲಿ ಸುಮ್ಮನೇ ಮನ-ದಾಳ
ಹೆಚ್ಚು ಬಾಡದ್ದೆ.. ಸೂಕ್ಷ್ಮ ಮನ -ದಳ.
ಕೊಚ್ಚಿ ಹೋಗೆಡಿ ಭಸ್ಮಮಾಗೆ ಮನತಳ
೩೦.”ವಿವೇಕ”
ಸಾಧಿಸುಲೆ ಸಾಲ ಕೇವಲ ಇಯತ್ತೆ (ವಿದ್ಯಾಭ್ಯಾಸ)
ಭೇದಿಸುಲೆ ಕೇಳ ಭೀಮಬಲ ನೋಯತ್ತೆ..!
ಬಲಿತಪ್ಪಗ ಬೆಳೆಯೆಕ್ಕು ಬುದ್ಧಿಮತ್ತೆ..
ಸೋತಪ್ಪಗ ಹೊಳವದು ಬುದ್ಧಿ… ಮತ್ತೆ…!
~*~*~

6 thoughts on “ಚುಟುಕಂಗೊ ಮೂವತ್ತರವರೆಗೆ..

  1. ಲಾಯ್ಕ ಆಯಿದು

  2. ದೃಷ್ಟಿ ಇಪ್ಪ ಸಮಷ್ಟಿ ಕಾವ್ಯ ನಿ೦ಗಳಿ೦ದ ಸೃಷ್ಟಿಯಾಗಲಿ. ಚುಟುಕುಗೊ ಲಾಯ್ಕಿದ್ದು.ಅಭಿನ೦ದನೆಗೊ.

  3. ಚುಟುಕುಗೊ ಪ್ರಾಸದೊಟ್ಟಿಂಗೆ ಚೆಂದ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×