ಚುಟುಕಂಗೊ..

March 4, 2012 ರ 9:00 amಗೆ ನಮ್ಮ ಬರದ್ದು, ಇದುವರೆಗೆ 23 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದು ಆನು ಬರದ ಚುಟುಕಂಗೊ..ಕೋಲೇಜಿಂಗೆ ಹೋಪಗ ಹಿಡುದ ಅಭ್ಯಾಸ..ಒಂದಿನ್ನೂರು ಬರದಿತ್ತಿದ್ದೆ..ಅದರ ತಂಗೆ ತಂಗೆಯ ಫ್ರೆಂಡು ಕೇಳಿದ್ದು ಹೇಳಿ ಕೊಟ್ಟದು..ನಾಪತ್ತೆ…ಹಾಂಗೆ ಅಷ್ಟು ಚುಟುಕ ನಷ್ಟ ಆಗಿತ್ತು..ಮತ್ತೆ ಈಗ ಹೀಂಗೆ ಸಂಮುಖೀ(ಫೇಸ್ಬುಕ್ಕು) ಲಿ ಬರವಗ ಹೀಂಗೆ ಒಪ್ಪಣ್ಣಂಗೂ ತೋರ್ಸಿಕ್ಕುವ ಹೇಳಿ ಆತು.ಹಾಂಗೆ ಬರದ್ದು..

೧.ಚದುರಂಗ
“ಆಟದ ಚದುರಂಗ
ಯುದ್ಧದ ರಣರಂಗ
ಗೆದ್ದವ ನಿಜ ರಂಗ
ಸೋತವ ಬರಿ ಪೆಂಗ!”

೨.ರಾಜಕಾರಣಿ
ರಾಜ್ಯಾಧಿಕಾರಕ್ಕಾಗಿ ಗೆಲ್ಲುತ್ತ “ಜನಮನ”
ಜಯಗಳಿಸಲು ಮಾಡುತ್ತ “ನಮನ”
ಗೆದ್ದಮೇಲೆ ಅಭಿವೃದ್ಧಿಗೆ ಒಪ್ಪುತ್ತಿಲ್ಲೆ ಅವನ “ಮನ”
ಆರೇನೇ ಕೇಳಿದರೂ ಅವನ ಉತ್ತರ “ನ”…..!!

೩.ರಾಜಕಾರಣಿ
ಗೆದ್ದರೆ “ಟೀ ಪಾರ್ಟಿ”…
ಸೋತರೆ “ಆಂಟೀ ಪಾರ್ಟಿ”….!!

೪.ಮಾತು
ತಪ್ಪಲಾಗ ಮಾತಿನ ಟ್ರ್ಯಾಕ್ಕು
ತಪ್ಪಿದರೆ ಅಕ್ಕು ಮನಸ್ಸಿಗೆ ಕ್ರ್ಯಾಕ್ಕು..(ನೋವು)
ಇರೆಕ್ಕದಾ ಮಾತಿಲಿ,ನಡತೆಲಿ ಬ್ರೇಕು
ಬಾಯಿಗೆ ಸಿಕ್ಕದ್ದೇ ಬದುಕು ಬೇಕು…

೫.ಮದುವೆ
ಬೇಕೇಳಿ ಬಯಸುತ್ತವು ಮನಲ್ಲಿ
ಯಾಕೇಳಿ ಬೆಳೆಸುತ್ತವು ಮಾತಿಲಿ..!
ಆಗದ್ದರೆ ಇದ್ದ್ಹಾಂಗೆ ಕೋತಿ ವನಲ್ಲಿ..
ಆಗುವಿರೆ..ಬಿದ್ದ್ಹಾಂಗೆ ಭೀತಿ ಮನೆಲಿ…!!

೬.ಮಾರ್ಗ
ಕಾಸರಗೋಡು ಮಂಗಳೂರು ರೋಡು
ರೋಡಲ್ಲ ಮಳೆಗಾಲದ ತೋಡು…!
ಪಯಣಿಸಿ ಉಳಿದವಂಗೆ ಬೇಕು ಪಂಚಕರ್ಮ
ಸ್ವರ್ಗಕ್ಕೆ ತಲುಪಿದರೆ ಷಟ್ಕರ್ಮ…!!(ಬೊಜ್ಜ)

೭.ಮದುವೆ
ಮದುವೆ ಬೇಡಡ್ಡ ನಮ್ಮ ಗಂಡಿಗೆ
ಆದರೂ ತಾಳಿ,,! ಕಟ್ಟುವ “ಗುಂಡಿ”ಗೆ (ಗುಂಡ,ಗುಂಡಿ)
ಸಂಭಾಳುಸುಲೆ ಇರೆಕು ಗಟ್ಟಿ ಗುಂಡಿಗೆ
ತಾಳ್ಮೆ ಇದ್ದರೆ ಬೀಳೆಯಿ ಗುಂಡಿಗೆ..!!

೮.ತಾಳ್ಮೆ
ಬೇಸರಿಸೆಡಿ ಸುಮ್ಮನೆ ಮಾಡಿದೇ ಹೇಳಿ ಕಟಕಿ..
ಹಾರಿಹೋತೆಲ್ಲೋ..ಅದು…ಎನ್ನ ಹೃದಯವೊಂದು ಕಿಟಕಿ..!
ನಷ್ಟವಿದ್ದರೂ ಸುಡುತ್ತಿಲ್ಲೆಯೊ ಖುಷಿಗೆಂದು ಪಟಾಕಿ..
ಲಾಭಇದ್ದರೆ ಮಾಡಿ(ಮಾಡಲಿ)ಬಿಡಿ ಈ ರೀತಿ ಚಟಾಕಿ….!!

೯.ಸೈನಿಕ
ಕೃತಜ್ಞತೆ ಇರಲಿ ನಮ್ಮ ಜೀವನದಿ ದಾಟುಸುವ ಅಂಬಿಗರಿಂಗೆ…
ಕೊಡುತ್ತಿಲ್ಲೆ ನಾವೇನು ಆ ಶೌರ್ಯ ಸಾಮರ್ಥ್ಯಗಳ ಬೀಗರಿಂಗೆ..!
ಹೊಟ್ಟೆಪಾಡಿಂಗಾಗಿ ತಮ್ಮ ಶೌರ್ಯ ಪದಕಗಳ ಮಡುಗುತ್ತವು ಬಿಕರಿಗೆ…
ಕೇಳಿಗೊಳಿ ಆತ್ಮಸಾಕ್ಷಿಯ ಇದು ಶೋಭೆಯೇ ಭಾರತ ಸಭಿಕರಿಗೆ…?!!

೧೦.ಭೂಮಿ
ಭೂಮಿಯಿದು ಜೀವಜಲ ಜನ್ಯ..
ನೇಮಂದ ಸುರಿದರೆ ಪರ್ಜನ್ಯ..
ಸಮ್ಮಾನಅದು ಹಸಿದ ಜೀವಿಗೆ ಧಾನ್ಯ…
ಬ್ರಹ್ಮನೇ ಪರಿಶ್ರಮಿಗೆ ಕೊಡುವ ಪ್ರಾಧಾನ್ಯ,

೧೧.ಆಹಾರ ಮಿತಿ
ಒಮ್ಮೆ ಉಂಡವ ಯೋಗಿ.!
ಎರಡು ಬಾರಿ ಉಂಡವ ಭೋಗಿ..!!
ಮೂರು ಬಾರಿ ಉಂಡವ ರೋಗಿ..!!!
ನಾಲ್ಕು ಬಾರಿ ಉಂಡವನ ಹೊತ್ತುಗೊಂಡು (ಚಿತೆಗೆ) ಹೋಗಿ…!!!!

೧೨.ಧನಾತ್ಮಕ ಚಿಂತನೆ
ಕಟ್ಟುವಿರೆ ನಾಡಿನ ಹೆರ್ಕಿ ಈ ಜಗ..
ಕಟ್ಟುವುದು ಗೂಡಿನ ಹಕ್ಕಿ ಗೀಜಗ..!
ನಿಲ್ದಾಣ ಕ್ಷೇಮ ಸರಿ ವಿಮಾನಕ್ಕೆ..
ಹಾರದ್ದರೆ ಕ್ಷೋಭೆಯಲ್ಲದಾ ಮಾನಕ್ಕೆ…!!

೧೩.ರಸ್ತೆ
ಹಾಳಾಗಿ ಹೇಂಗಿದ್ದು..ನಮ್ಮ ರಸ್ತೆ..?
ಹೋಳಾಗಿ ಹೋಯಿದು ಇದು ದುರವಸ್ಥೆ…!
ಹೊಂಡದಲ್ಲಿ ಬಿದ್ದಪ್ಪಗ ಸರಕಾರಿ ರಸ್ತೆ ಸಾರಿಗೆ..
ತುಂಡಾಗಿ ಬಿದ್ಧಾಂಗೆ ತರಕಾರಿ ಚಪ್ಪೆ ಸಾರಿಗೆ….!!

೧೪.ಅಭಿರುಚಿ
ಅಣಕದ ಹಾಂಗಿದ್ದರೂ ಬೇಕು ಮೂರ್ಖರ ಪೆಟ್ಟಿಗೆ….
ಗಣಕ ಯಂತ್ರ ಸಾಕು ಬುದ್ಧಿವಂತರ ಮಟ್ಟಿಂಗೆ
ನೋಡುಲೆ ಚಂದ ತಿಳಿಗೇಡಿ ಕ್ರಿಕೆಟ್ ಒಟ್ಟಿಂಗೆ
ಆಡುಲೆ ಚದುರಂಗ ಬುದ್ಧಿಯ ಕಟ್ ನಿಟ್ಟಿಂಗೆ..!!

೧೫.ಉಪದೇಶ
ತಿಳಿದುಕೊಳ್ಳೆಡಿ ಲೋಕವ ಅರ್ಧಂಬರ್ಧ,
ಹಳಿದು ಕಳೆಯೆಡಿ ವಾಕ್ಯವ ಅಸಂಬದ್ಧ,
ಉಳಿದರೆ ಬೆಳೆಯುವಿ ಜನಕೆ ಬದ್ಧ,
ಬೆಳೆದರೆ ಹೊಳೆಯುವಿ ದಿನಕೆ ಪ್ರಬುದ್ಧ..!

೧೬.೪ ರೀತಿಯ ಚುಟುಕ
ಪರಿಸರಕ್ಕನುಸರಿಸಿ ಹೊಳೆತ್ತೊಮ್ಮೆ ಚುಟುಕ
ಕರಕರೆ ಮಾತಿಂಗೆ ಥಟ್ಟನೇ ಒಂದು ಮೊಟಕ..!
ಸರಿಯಾಗ ಹೇಳಿ ಅರ್ತಪ್ಪಗ ಕುಟುಕು..
ಪರಿಪೂರ್ಣ ಕೆಲಸಕ್ಕೆ ಜೀವಜಲ ಗುಟುಕು..

೧೭.ಕೃತಘ್ನತೆ
ತಿನ್ನದೇ ಸಾಧ್ಯವೆ ಅಬ್ಬೆ ನಿನಗಿವರ ಜೀರ್ಣಿಸುಲೆ..?
ನಿನ್ನ ಸಹನೆಯ ಆ ಸೋತೆ ವರ್ಣಿಸುಲೆ..
ಜನ್ಮಭೂಮಿಯೆ ಕೊಡುಶಕ್ತಿ ಕೃತಘ್ನರ ನಾಶಕ್ಕೆ ಗುಣಿಸುಲೆ…
ಪನ್ನಗದ ವಿಷ ಕಡಿಮೆಯಪ್ಪುದೆ ಹಾಲುಣಿಸುಲೆ..?

೧೮.ಸ್ವಭಾವ
ದ್ವೇಷಾಗ್ನಿಗೆ ದೂಡೆಡ ಚಾಡಿಯ ಕಟ್ಟಿಗೆ..
ವಶಬೀಳುವೆ ಒಂದೊಮ್ಮೆ ನೀ ಇಕ್ಕಟ್ಟಿಗೆ..
ಕಟ್ಟು ಪರಸ್ಪರರಲ್ಲಿ ನಂಬಿಕೆಯ ಇಟ್ಟಿಗೆ..
ಒಟ್ಟು ತುಂಬುವುದು ನಿನ್ನ ಪುಣ್ಯದ ಪೆಟ್ಟಿಗೆ..

೧೯.ಕೋಪ-ತಾಪ
ಹೆಚ್ಚಾಗಿ ತಾಪ ಹೋತು ಸುಟ್ಟು ಬೀರಿತ್ತು ಬೆಳಕು ನಾರಿತ್ತು ಹೊಗೆ ಉಳುಸಿತ್ತು ಬೂದಿ
ಹುಚ್ಚಾದ ಕೋಪ ಆತು ಸಿಟ್ಟು ಸೋರಿತ್ತು ಹುಳುಕು ಕಾರಿತ್ತು ಹಗೆ ಉಳುಸಿತ್ತು ಬೇಗುದಿ..

೨೦.ಭಿನ್ನರುಚಿ
ಅಮ್ಮ ಯಕ್ಷಗಾನಕ್ಕೆ ಬದ್ಧ
ಎನ್ನ ಇಷ್ಟ ಸಿನೆಮಕ್ಕೆ ಶುದ್ಧ..!
ಸಾಕು, ಬೇಡ ಹೇಳಿ ಒಂದೊಂದರಿ ವಿರುದ್ಧ..
ಬೇಕು ಬಿಡೆ ಹೇಳಿ ಸುಮ್ಮನೇ ಯುದ್ಧ..!!

~~~

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 23 ಒಪ್ಪಂಗೊ

 1. ರವಿಕುಮಾರ ಕಡುಮನೆ
  ರವಿಕುಮಾರ ಕಡುಮನೆ

  ಧನ್ಯವಾದ… ಎನ್ನ ಕವನಂಗೊ ಎಲ್ಲಾ http://karaveera99.blogspot.com ಇಲ್ಲಿ ಸಿಕ್ಕುತ್ತು.ಆಸಕ್ತಿ ಇಪ್ಪವು ಓದಿ..

  [Reply]

  VN:F [1.9.22_1171]
  Rating: 0 (from 0 votes)
 2. ಅಡ್ಕತ್ತಿಮಾರುಮಾವ°

  ಚುಟುಕುಗ ಬಾರೀ ಲಾಯಿಕ ಆಯಿದು ರವಿ …ಮೋರೆಪುಟಲ್ಲಿ ಓದಿದ್ದೆ ಆದರೆ ಇಲ್ಲಿ ಓದುವ ರುಚಿಯೇ ಬೇರೆ…ಒಂದು ಒಪ್ಪ…

  [Reply]

  VN:F [1.9.22_1171]
  Rating: 0 (from 0 votes)
 3. ಅನು ಉಡುಪುಮೂಲೆ

  ರವಿಯಣ್ಣನ ಇಲ್ಲಿ ಕಂಡು ಕೊದಶಿ ಆತಿದಾ….. ಈಂಗೆ ಬತ್ತಾ ಇರಿ ಬರೆತ್ತಾ ಇರಿ. ಎಲ್ಲ ಲಾಯ್ಕ ಆಯಿದು….

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಣಚ ಡಾಕ್ಟ್ರುಕೊಳಚ್ಚಿಪ್ಪು ಬಾವಪುಟ್ಟಬಾವ°ಅನು ಉಡುಪುಮೂಲೆಚುಬ್ಬಣ್ಣಸರ್ಪಮಲೆ ಮಾವ°ಶ್ಯಾಮಣ್ಣದೊಡ್ಡಭಾವvreddhiಪ್ರಕಾಶಪ್ಪಚ್ಚಿಜಯಗೌರಿ ಅಕ್ಕ°ಪೆಂಗಣ್ಣ°ಡೈಮಂಡು ಭಾವವಸಂತರಾಜ್ ಹಳೆಮನೆಬೋಸ ಬಾವಉಡುಪುಮೂಲೆ ಅಪ್ಪಚ್ಚಿಅನುಶ್ರೀ ಬಂಡಾಡಿಮುಳಿಯ ಭಾವವಿಜಯತ್ತೆಮಾಲಕ್ಕ°ವಾಣಿ ಚಿಕ್ಕಮ್ಮಪವನಜಮಾವಅಕ್ಷರದಣ್ಣಶೇಡಿಗುಮ್ಮೆ ಪುಳ್ಳಿಬೊಳುಂಬು ಮಾವ°ದೀಪಿಕಾ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ