ಕೋಲೇಜಿಗೆ ಹೋಪ್ ಹೆಣ್ಮಕ್ಕೊ

ಹೊಸ ಬರಹಗಾರರಿಂಗೆ ಪ್ರೋತ್ಸಾಹ ಕೊಡ್ತ ದೃಷ್ಟಿಲಿ ಪೋಷ್ಟು-ಕಾಗತಲ್ಲಿ ಕಳುಸಿದ ಶುದ್ದಿಗಳ ಬೈಲಿಂಗೆ ತಿಳುಶುತ್ತ ಏರ್ಪಾಡು ಇಪ್ಪದು ನಿಂಗೊಗೆ ಅರಡಿಗು.
ಈಗಾಗಲೇ ಹಲವು ಶುದ್ದಿಗೊ ಆ ರೀತಿಲಿ ಪ್ರಕಟ ಆದ್ಸಿದ್ದು. ಅದಾಗಲೇ ಒಂದು ಪದ್ಯವ ನಮ್ಮ ಬೈಲಿಂಗೆ ಹೇಳಿದ ಕಲ್ಪನಾ ಅಕ್ಕ, ಇದೀಗ ಎರಡ್ಳೇ ಪದ್ಯವ ಕಳುಸೆಂಡು ಇದ್ದವು.
ಕಲ್ಪನಾ ಅರುಣ” ರ ಪರಿಚಯ ಪುಟ ಇಲ್ಲಿದ್ದು.
ಅವು ನಮ್ಮ ಬೈಲಿಂಗೆ ಕಳುಸಿದ ಸುರುವಾಣ ಕವನ, “ದಾಯವಾದ್ರು” ಎರಡನೇ ಕವನ, ಈಗಾಣ ಕಾಲದ ಕೂಸುಗಳ ಬಗ್ಗೆ; ಹೊನ್ನಾವರದ ಹವ್ಯಕ ಭಾಷೆಲಿ.
ನಾವೆಲ್ಲರೂ ಓದಿ, ಒಪ್ಪ ಪ್ರೋತ್ಸಾಹ ಕೊಡುವೊ°.
ನಮಸ್ಕಾರ.

ಕೋಲೇಜಿಗೆ ಹೋಪ್ ಹೆಣ್ಮಕ್ಕೊ:

ಕವಿ: ಕಲ್ಪನಾ ಅರುಣ್

ರಚನೆ: ಕಲ್ಪನಾ ಅರುಣ್

ಕೋಲೇಜಿಗೆ ಹೋಪ್ ಹೆಣ್ಮಕ್ಕೊ ಅಂದ್ರೆ ಹೆದ್ರಕೆ ಮತೆ
ಎಲ್ಲಿಗೆ ಹೋಗ್ತ್ವೊ ಎಲ್ಲಿಂದ್ ಬತ್ವೊ ತೆಳೀತೆ ಇಲ್ಲೆ
ಎಷ್ಟೊತ್ತಿಗೂ ಮೊಬೈಲ ಫೋನ ಹಿಡ್ಕಂಡಿರ್ತೊ ಅತ್ತೆ ||

ಯಾವಾಗ ನೋಡ್ದ್ರೂ ಮಿಸ್ಡಕಾಲ್ ಬಿದ್ಗಂಡ್ ಇರ್ತು ಅಲ್ಲಿ
ಯಾರ್ಯಾರ ಫೋನಿಗೋ ಟ್ರೈ ಮಾಡಿ ಕುಡ್ಗತೊ ಕೈ
‘ಲವರ್ ’ ಮಾಡ್ಕಂಡ್ ಹುಡಗ್ರ ಕಾಲಿಗೆ ಮಿಸ್ ಮಾಡ್ತಾ ಇರ್ತೊ ||

ರಾತ್ರಿ ಹಗ್ಲು ಅದೇ ಯೋಚ್ನೇಲಿ ಕಾಲ ಕಳೆತೋ
ಭಾರೀ ಕಲ್ತವು ಏನೋ ಅವ್ಕೆ ಬೇಕಾಯ್ದಿಲ್ಲೆ
ಅರ್ಧಂಬರ್ಧ ಇಂಗ್ಲೀಷ್ ಆಡ್ದ್ರೆ ಸಾಕಾಗೋಗ್ತು ||

ಮೀಸೆಗಡ್ಡ ಕೆತ್ಕಂಡು ಗಾಡಿಯೊಂದ ಬಿಟ್ಕಂಡು
ಟುಸ್ಸು ಪುಸ್ಸು ಮಾತಾಡ್‌ದ್ರೆ ಮೆಚ್ಗೆ ಆಗ್ತು
ಅಪ್ಪ ಅಮ್ಮ ಗಂಡ್ ಹುಡ್ಕದ್ರೆ ಸರೀನೇ ಅಲ್ಲಾ ||

ತಂಗೋ ಅರ್ಸಕಂಡದ್ದೆಲ್ಲ ಛಲೋವೇ ಎಲ್ಲಾ
ಕಡೆಗೊಂದಿನ ಡೈವರ್ಸ ಅಂದ್ರೆ ಹೆಚ್ಚ್ಗೇನೂ ಅಲ್ಲಾ
ಬಾಳ್ ಹಾಳ್ ಮಾಡ್ಕಂಬುದೇ ಬೇಜಾರು ಕಲಿ ಕಾಲ್ದಲ್ಲೆಲ್ಲ ||

ಹೆಣ್ಮಕ್ಳ ಜೀವ್ನ ಅಂದ್ರೆ ಸೂಕ್ಷ್ಮ ಹೇಳಿ
ಅಪ್ಪ ಅಮ್ಮ ಯೋಚ್ನೆ ಮಾಡುದು ಬರೀ ಸುಮ್ನೆ ಈಗ
ಎಲ್ಲ ಬದಿಗೂ ಶೋಕಿಯಾಯ್ದು “ಲವ್ ಕೇಸೀಗ ” ||

ಸೊಯ್‌ಸೂಲೆ ಹೋದ್ರೆ ಸಿಕ್ತು ಎಲ್ರ ಚರಿತ್ರೆಯೂವಾ
ಬಗೆಲಾದ್ರೂ ಇರ್ಲಿ ಕಟ್ಲೆ ಕಂದಾಚಾರ
ನಮ್ ಜಾತಿ ಧರ್ಮ ಅನ್ನೋ (ಹೇಳೋ) ಅಭಿಮಾನ ||

ನಾ ಬೇಡ್ಕತ್ತೆ ದೇವ್ರ ಹತ್ರೆ ನನ್ನ ಮಗ್ಳನೂ ಸೇರ್ಸಿ
“ಎಲ್ಲ ಹೆಣ್ಮಕ್ಕೊ ಹವ್ಯಕ್ರ ಮಾನ ಮರ್ಯಾದೆ ಇರ್ಸಲಿ
ಅಂಥಾ ಬುದ್ಧಿಕೊಡು ದೇವ ನಮ್ ಮಕ್ಕೊಗೆ ||

ಬೇರೆ ಜಾತಿ ಮದ್ವೆ ದೂರ ಆಗ್ಲೊ ಇವತ್ತಿಗೆ
ನಾಳೆಗಣ್ಣ ಮಕ್ಕೊಗೆ ಸಂಸ್ಕೃತಿ ಸಂಸ್ಕಾರ ಉಳಿಸೊ ಅಪ್ಪ
‘ಹವ್ಯಕ’ ನಾಗರೀಕರನ್ನ ಬೆಳ್ಸೊ ಶಿವಪ್ಪ” ||

~*~*~

ಸೂ:

 • ಲೇಖಕಿಯ ವಿಳಾಸ:
  ಶ್ರೀಮತಿ ಕಲ್ಪನಾ ಅರುಣ
  ಪತಿ: ಅರುಣ ಹೆಗಡೆ,
  57, “ಚೈತನ್ಯ”,
  5 ನೇ ಮುಖ್ಯ ರಸ್ತೆ,
  ಶ್ರೀ ಲಕ್ಷ್ಮೀನಾರಾಯಣ ಬಡಾವಣೆ
  ಮುನ್ನೆಕೊಳಾಲು, ಮಾರತಹಳ್ಳಿ
  ಬೆಂಗಳೂರು – 560037

You may also like...

6 Responses

 1. ಚೆನ್ನೈ ಭಾವ° says:

  [ಎಲ್ಲ ಬದಿಗೂ ಶೋಕಿಯಾಯ್ದು ] – ಎಲ್ಲೋ ನಾಲ್ಕಾರು ಕಡೆ ಇಂತದ್ದು ನಡದದ್ದಾದ್ರೂ ಸಮಾಜದಲ್ಲಿ ಗಂಭೀರವಾಗಿ ಬೆಟ್ಟೆತ್ತಿ ತೋರ್ಸುವಾಂಗಾಯ್ದು. ಇದು ಆರೋಪ ಅಲ್ಲ, ಕೆಲವು ಕಡೆ ನಿಜವಾಗಿ ನಡೆತ್ತ ಇಪ್ಪದು ಹೇಳ್ವದರ ಪ್ರಾಯೋಗಿಕವಾಗಿ ವಿಷಯವ ತೆಕ್ಕೊಳ್ಳೆಕು. ಹೇಳಿದ ವಿಷಯ ಶೋಕಿಯಾಯ್ದು ಎಂಬುದು ಸತ್ಯ .

  [‘ಹವ್ಯಕ’ ನಾಗರೀಕರನ್ನ ಬೆಳ್ಸೊ ಶಿವಪ್ಪ” ] – ಅಕ್ಕನ ಕಳಕಳಿ ನಿಜಕ್ಕೂ ನನಸಾಯೇಕು.

 2. ಬಾಲಣ್ಣ (ಬಾಲಮಧುರಕಾನನ) says:

  ಅರುಣಕ್ಕ, ಛಲೋ ಬರದ್ದಿ.ಗುರು ಹೆರಿಯೋರ ಮಾತು ಎಲ್ಲೊರು ಕೇಳೆಕ್ಕು ,ಬರೀ ಪ್ರೀತಿ ಪ್ರೇಮ ಹೇಳಿ ಸಿಕ್ಕೋರೊಟ್ಟಿಂಗೆ ಹೋದ್ರೆ
  ಜೀವನದ ಮುಂದಾಣ ಗತಿ ಬಗ್ಗೆ ಯೋಚ್ನೆ ಬ್ಯಾಡ್ದ? ನಮ್ಮ ಹೆಣ್ಮಕ್ಕೊ ಮಾಂತ್ರ ಅಲ್ಲ, ಎಲ್ಲ ಹೆಣ್ಮಕ್ಕಳೂ ತಿಳ್ಕೊ ಬೇಕಾದ ವಿಚಾರ .

 3. kalpanaarun says:

  Hi,channi bava&ballanna, nimage nanna anatha dhanyavadagalu, nanna kavanada mele vimarshe kottiddu thumba santhosh. nimma protsaha sada irali.
  inti
  kalpana

 4. ಎಲ್ಲಾ ಕನ್ಯಾಮಣಿಗಳೂ ಹೀಂಗಿಪ್ಪವು ಅಲ್ಲವಾದರೂ, ಲೋಕದ ನಿಜವ ಸರಿಯಾಗಿಗಯೇ ಹೇಳಿದ್ದು ಅಕ್ಕ. ಕವನದ ಒಳಾಣ ಆಶಯವ ಮನಗಂಡು ಸರಿಯಾದ ರೀತಿಲಿ ಆಧುನಿಕ ಕೂಸುಗೊ ಬೆಳೆತ್ತ ಹಾಂಗಾಗಲಿ ಹೇಳುವ ಹಾರೈಕೆ. ಪದ್ಯ ಸೊಗಸಾಗಿ ಬಯಿಂದು.

 5. ಕಲ್ಪನಾಅರುಣ says:

  ಸಂಪದಕರಿಗೆ ನಮಸ್ಕಾರ
  ನನ್ನ ಕವಿತೆಯನ್ನು ಪ್ರಕಟ ಮಾಡಿರುವದು ನನಗೆ ಕುಶಿ ಕೊಟ್ಟಿದ್ದು. ಇನ್ನೊಂದು ಕಳುಹಿಸಿದ್ದೆ.ಪ್ರಕಟಿಸಿರಿ
  ದನ್ಯವಾದಗಳು

 6. ರಘು ಮುಳಿಯ says:

  ಪಶ್ಚಿಮ೦ದ ಬೀಸುವ ಗಾಳಿಗೆ ಪೂರ್ವಾಪರ ಇಲ್ಲದ್ದೆ ಬಜಕ್ಕಿರೆ(ತರಗೆಲೆ)ಯ ಹಾ೦ಗೆ ಹಾರುವ ಇ೦ದ್ರಾಣ ಬದುಕ್ಕು ಸ೦ಕಟ ತತ್ತು.ಕವನದ ಆಶಯ ಲಾಯ್ಕಿದ್ದು.ಶುಭಾಶಯ ಅಕ್ಕ೦ಗೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *