ದಯಾಮಯ-ಮಧುರ ಗೀತಾಂಜಲಿ

November 5, 2012 ರ 10:01 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದಯಾಮಯ (ಮಧುರ ಗೀತಾಂಜಲಿ ಸಂಗ್ರಹಂದ)

(ಠಾಗೋರರ ಗೀತಾಂಜಲಿ ಕವನ ಸಂಗ್ರಹದಿಂದ ಅನುವಾದ ಮಾಡಿದ ಕವನ)

ಹಾಡಿದ್ದುಃ ಶ್ರೀಶಣ್ಣ

ನಿನ್ನ ಇಚ್ಛೆಯ ತೆರದಿ ಎನ್ನ ಜೀವನವನ್ನು
ಸಂತೋಷದಿಂದ ಕೊನೆಯಿಲ್ಲದಾಗಿಸಿದೆ
ಈ ಕಲಶ ದುರ್ಬಲವು ಬರಿದುಗೊಳಿಸುತಲದನು
ಮತ್ತೆ ನೀನದರಲ್ಲಿ ನವಜೀವವೆರೆದೆ ||೧||

 ಈ ಕಿರಿದು ಮುರಳಿಯಲಿ ನಿನ್ನುಸಿರನೂದಿದೆಯ
ಎಲ್ಲೆಡೆಗು ಎನ್ನ ದನಿಯನ್ನು ಕೇಳಿಸಿದೆ
ಗುಡ್ಡ ಕಣಿವೆಗಳಲ್ಲು ಕೊಂಡೊಯ್ದೆ ನೀನದನು
ನಿತ್ಯ ಸುಸ್ವನವ ಎನ್ನಿಂದ ಹೊಮ್ಮಿಸಿದೆ ||೨||

 

ನಿನ್ನ ಕರಗಳ ಅಮರ ಸ್ಪರ್ಶಕೆನ್ನೆದೆ ಮರೆತು
ಮೀರಿ ಪಾರವ ಒಲವಳೋಲಾಡಿತು
ನಿನ್ನ ಕರಗಳ ಮಧುರ ಸ್ಪರ್ಶಕೆನ್ನೆದೆಯರಳಿ
ಬಣ್ಣಿಸಲಸಾಧ್ಯವಹ ಮಾತ ಹೊಮ್ಮಿಸಿತು||೩||

ಅಗಣಿತದ ಕೊಡುಗೆಗಳು ನಿನ್ನಿಂದ ಬರುತಿರಲು
ಸ್ವೀಕರಿಪೆ ನನ್ನೆರಡು ಪುಟ್ಟ ಕರಗಳಲಿ
ಎರೆಯುತಿಹೆ ಕರುಣೆಯನು ಕಾಲ ಉರುಳುತಲಿರಲಿ
ತಾವಿಹುದು ಬಾಕಿ ಇದೊ ಇನ್ನು ನನ್ನಲ್ಲಿ ||೪||

~~~*~~~

ಶ್ರೀಶಣ್ಣನ ಧ್ವನಿ ಇಲ್ಲಿದ್ದು:

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಮಂಗ್ಳೂರ ಮಾಣಿ
  ಮಂಗ್ಳೂರ ಮಾಣಿ

  ಓದಿ ಆತು. ಇನ್ನು ಮನೆಗೆ ಹೋಗಿ ಕೇಳೆಕಷ್ಟೆ… :)

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ತುಂಬ ಲಾಯಕ ಆಯ್ದು ಬಾಲಣ್ಣ. ಕೊಶಿ ಅತು ಪದ್ಯ.

  ಬಾಲಣ್ಣ – ಶ್ರೀಶಣ್ಣ ಗುಡ್ ಕಾಂಬಿನೇಶನ್ ಕೂಡ.

  [Reply]

  ಬಾಲಣ್ಣ (ಬಾಲಮಧುರಕಾನನ)

  ಬಾಲಣ್ಣ (ಬಾಲಮಧುರಕಾನನ) Reply:

  ನಿಂಗಳ ಒಪ್ಪಕ್ಕೆ ಧನ್ಯವಾದಂಗೊ ಚೆನ್ನೈ ಬಾವಾ …

  [Reply]

  VN:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಒಳ್ಳೆ ಪ್ರಯತ್ನ.

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಅಪ್ಪಪ್ಪು ಬಾಲಣ್ಣ ಅಪ್ಪಪ್ಪು!
  ನಿನ್ನ ಸಿರಿಯುಸಿರ ಭಾವ ಗೀತಾ೦ಜಲಿ
  ಕಿರುಮುರಲಿಯಲೆ ಮೂಡಿದಾ ಬಗೆ
  ಅಮಮಾ ಏನು ದಿವ್ಯಾ ದರುಶನ!
  ಭಾವದೊಲುಮೆಯ ಮೆಚ್ಚಿ ಎನ್ನೆದೆ
  ಮೀರಿ ಪಾರವ ಒಲವಲೋಲಾಡಿದೆ.
  ಅಣ್ನ ಲಾಯಕಾಗಿ ಬಯಿ೦ದು ನಿ೦ಗಳ ಗೀತಾ೦ಜಲಿ ಇದಕ್ಕೊ೦ದು ಒಳ್ಳೆ ಒಪ್ಪ. ಹರೇ ರಾಮ.

  [Reply]

  VN:F [1.9.22_1171]
  Rating: 0 (from 0 votes)
 4. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಅಪ್ಪಪ್ಪು ಬಾಲಣ್ಣ ಅಪ್ಪಪ್ಪು!
  ನಿನ್ನ ಸಿರಿಯುಸಿರ ಭಾವ ಗೀತಾ೦ಜಲಿ
  ಕಿರುಮುರಲಿಯಲೆ ಮೂಡಿದಾ ಬಗೆ
  ಅಮಮಾ ಏನು ದಿವ್ಯಾ ದರುಶನ!
  ಭಾವದೊಲುಮೆಯ ಮೆಚ್ಚಿ ಎನ್ನೆದೆ
  ಮೀರಿ ಪಾರವ ಒಲವಲೋಲಾಡಿದೆ.
  ಅಣ್ಣ, ಲಾಯಕಾಗಿ ಬಯಿ೦ದು ನಿ೦ಗಳ ಗೀತಾ೦ಜಲಿ ಇದಕ್ಕೊ೦ದು ಒಳ್ಳೆ ಒಪ್ಪ. ಹರೇ ರಾಮ.

  [Reply]

  VN:F [1.9.22_1171]
  Rating: 0 (from 0 votes)
 5. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಭಾವ ಗೀತಾಂಜಲಿಯ
  ಭಾವ ಮನಸಿಲಿ ಹಿಡುದು
  ಭಾವನೆಯ ತೋರುಸಿದಿರೊಪ್ಪ ಕೊಟ್ಟು /
  ಏವಗಳು ಈ ಪ್ರೀತಿ
  ಸೀವು ಸೀವಾಗಿರಲಿ
  ನಾವು ಬೈಲಿಲಿ ಬರದು, ಸೇರಿ ಒಟ್ಟು /

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಬಾಲಣ್ಣ, ಹರೇ ರಾಮ,
  ಭಾವಕ್ಕೆ ಭಾಷೆಗೆ ಮತ್ತರ್ಥದೈಸಿರಿಗೆ
  ಪದವಿಡುವ ಬಗೆಗೆ ಅನ್ನಲಿ ಏನ?
  ಹೇಳಲಹುದೇನ;ಹೇಳುವುದದೆ೦ತು?
  ಇಬ್ಬಗೆಯ ಬ೦ದಿ ನಾನೀಗ!
  ಭಾವಾನುಭವದ ಕೂಸಿ೦ಗೆ
  ಭಾಷೆ ಅ೦ಗಿಯ ತೊಡಿಸೆ
  ಮನದ ಇ೦ಗಿತವನೆಲ್ಲ
  ಅದರೊಳಗೆ ತಿಳಿಸೆಲಹುದೆ?
  ಹಾಗೆ ಹೀಗೆ೦ದು ಬಣ್ಣಿಸಲಹುದು;
  ಬರಿದೆ ಅಲ೦ಕಾರ ತೊಡಿಸೆ
  ಫಲವದಾದರು ಏನು?
  ಸಹಜ ಸೌ೦ದರ್ಯವೇ ಸಾಕಿರಲು
  ಮಣಭಾರ ಕೃತ್ತಿಮತೆ ಅಲ್ಲಿ
  ಬೇಕೇನು ಮತ್ತೆ?
  ಮಲ್ಲಿಗೆಯ ಗ೦ಧಕ್ಕೆ
  ಹೋಲಿಕೆಯ ಕೊಡೆ
  “ಮಲ್ಲಿಗೆಯ ಗ೦ಧ”
  ಅನ್ನುವುದೆ ಸರಿಯಲ್ಲವೇನು!?

  ಅಣ್ಣಾ,
  ಮನಸ್ಸಿನ ಭಾವನಗೆ ಅ೦ಗಿ ಹಾಕಲೆ ಹೋಗಿ,
  ಆ° ಸೋತೋದೆಯಣ್ಣಾ;
  ಯೇವ ರೀತಿಲಿ ಹೊಲುದರದು “ಉದ್ದ – ಕು೦ಟು!”
  “ಮೆಚ್ಚಿದೆ” ಹೇಳ್ವದರ ಬಗೆಬಗೆಲಿ ಹೋಲಿಸಿರು,
  ಆ ಭಾವ ಆ ಅರ್ಥ ಹೇಳಲದು ಅಸಮರ್ಥ°!
  ಧನ್ಯವಾದವು ಇದುವೆ ನಿ೦ಗೊಗೆನ್ನೊಪ್ಪ.

  [Reply]

  VN:F [1.9.22_1171]
  Rating: +2 (from 2 votes)
 6. ಮಾನೀರ್ ಮಾಣಿ
  ಮಾನೀರ್ ಮಾಣಿ

  ಬರಹ ಭಾವ ಪದ್ಯ ಎಲ್ಲವೂ ಖುಷಿ ಕೊಟ್ಟಿದು.. ಧನ್ಯವಾದ ಬಾಲಣ್ಣಾ ಮತ್ತು ಶ್ರೀಶಣ್ಣ೦ಗೆ

  [Reply]

  ಬಾಲಣ್ಣ (ಬಾಲಮಧುರಕಾನನ)

  ಬಾಲಣ್ಣ (ಬಾಲಮಧುರಕಾನನ) Reply:

  ಅಪ್ಪಚ್ಚಿ, ಭಾವನೆಗೊ ಮಾತಾಡುವಾಗ ಅಲ್ಲಿ ಅಕ್ಶರಕ್ಕೆ ,ಶಬ್ದಕ್ಕೆ ಕೆಲಸ ಇಲ್ಲೆ .ನಿಂಗಳ ಒಪ್ಪಕ್ಕೊಂದೊಪ್ಪ .

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ನಿ೦ಗೊ ಹೇಳ್ವದೇನೋ ಸರಿ; ಆದರೆ ಗೋಡೆ ಇಲ್ಲದ್ದೆ ಚಿತ್ರ ಬರವಲೆಡಿಗೋ?ಹಾ೦ಗೆ ಭಾವ ಜೀವಕ್ಕೆ ಭಾಷೆ ಹೇಳುವದು ಕೆಲವು ಸರ್ತಿ ಜೆಡ ದೇಹ ಆಗಿ ಹೋವುತ್ತು. ಅ೦ತಹ ಉಭಯ ಸ೦ಕಟದ ಅನುಭವ ಕೆಲವು ಸನ್ನಿವೇಶಲ್ಲಿ ಬಪ್ಪದಿದ್ದು. ಈ ಅನುಭವ ನಿ೦ಗೊಗುದೆ ಆಗಿಪ್ಪಲೂ ಸಾಕು.ಎನಗ೦ತೂ ಈ ಇರುಸು- ಮುರುಸಿನ ಅನುಭವ ಕೆಲಾವು ಸರ್ತಿ ಆಗಿ ಹೇ೦ಗೆ ಒ೦ದು ಹ೦ತಲ್ಲಿ ನಮ್ಮ ನಿಜವಾದ ಆಸ್ವಾದನೆಯ ಅನುಭೂತಿಯ ಭಾಷೆಲಿ ಹೆರಹಾಕಲೆ,ಅದು ಅಸಮರ್ಥವಾವುತ್ತು. ಈ ಹಿನ್ನೆಲಿ ಹೀ೦ಗೆ ಬರದೆ. ಅಷ್ಟೆ. ನಿ೦ಗಳ ಅನುಭವ ಎ೦ತದೋ? “ಲೋಕೋಭಿನ್ನ ರುಚಿ!” ನಮಸ್ತೇ.

  [Reply]

  VN:F [1.9.22_1171]
  Rating: 0 (from 0 votes)
 7. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ನಿಂಗೊ ಹೇಳಿದ ಅನುಭವ ಕೆಲವು ಕಾದಂಬರಿ , ಮಹಾ ಕಾವ್ಯಂಗಳ ಓದುವಾಗ , ಆಯಾ ಸಂಧರ್ಭಕ್ಕೆ ನಮ್ಮ ಮನಸ್ಸು ಸ್ಪಂದಿಸಿ ಕಣ್ಣೀರು ಬಪ್ಪದು, ಮಾತು ತೊದಲುದು, ಮಾತಾಡಲೆ ಎಡಿಯದ್ದೆ ಅಪ್ಪದು ,ಆವುತ್ತು .ಅದು ಎಂತಕೆ ಕೇಳಿದರೆ ಸರಿ ಉತ್ತರ ಕೊಡಲೆ ಕಷ್ತ .ಅಂತಹ ಸಂಧರ್ಭ ಲ್ಲಿ ಮೌನ ವಾಗಿದ್ದರೆ ಅದರ ಅನುಭವುಸಲೆ ಸುಖ ಆವುತ್ತು. ಒಬ್ಬಂಗೆ ಆದ ಅನುಭೂತಿ ಯೇ ಇನ್ನೊಬ್ಬರಿಂಗೆ ಆಯೆಕ್ಕು ಹೇಳಿ ಇಲ್ಲೆ, ಅವರದ್ದು ಬೇರೆಯೆ ಇಕ್ಕು.ಆನು ಹೇಳಿದ್ದರಲ್ಲಿ ತಪ್ಪು ಇಪ್ಪಲೂ ಸಾಕು . ಕ್ಷಮುಸಿ .ಆಸ್ವಾದನೆ ಯ ಅನುಭವವ ನಿಂಗೊ ಹೇಳಿದ ಹಾಂಗೆ, ಇನ್ನೊಬ್ಬರಿಂಗೆ ಮುಟ್ಟುಸೆಕ್ಕಾರೆ ಭಾಷೆ ಬೇಕೇ ಬೇಕು .ನಮಸ್ಕಾರಂಗೊ ಅಪ್ಪಚ್ಚಿ .

  [Reply]

  VN:F [1.9.22_1171]
  Rating: 0 (from 0 votes)
 8. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಒಪ್ಪಣ್ಣನ ಭಾಷೆಲಿ ಇಲ್ಲೆ. ಆದರೆ ಹೀಂಗಿಪ್ಪದರ ಒಪ್ಪಣ್ಣನ ಭಾಷೆಲಿ ಬರವಲೂ ಕಷ್ಟ.
  ಅನುವಾದ ಲಾಯಿಕಾಯಿದು, ಅಭಿನಂದನೆಗೊ. ಅನುವಾದದ ನೆರಳು ಕಾಣ್ತಿಲ್ಲೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೊಳುಂಬು ಮಾವ°ವೇಣೂರಣ್ಣಸರ್ಪಮಲೆ ಮಾವ°ನೀರ್ಕಜೆ ಮಹೇಶದೇವಸ್ಯ ಮಾಣಿಕೆದೂರು ಡಾಕ್ಟ್ರುಬಾವ°ಬೋಸ ಬಾವಡಾಗುಟ್ರಕ್ಕ°ಡೈಮಂಡು ಭಾವಪವನಜಮಾವಗೋಪಾಲಣ್ಣಹಳೆಮನೆ ಅಣ್ಣಗಣೇಶ ಮಾವ°ಡಾಮಹೇಶಣ್ಣಅಜ್ಜಕಾನ ಭಾವಅನಿತಾ ನರೇಶ್, ಮಂಚಿಚುಬ್ಬಣ್ಣತೆಕ್ಕುಂಜ ಕುಮಾರ ಮಾವ°ಮುಳಿಯ ಭಾವಅನುಶ್ರೀ ಬಂಡಾಡಿಕೇಜಿಮಾವ°ಸುವರ್ಣಿನೀ ಕೊಣಲೆಶಾಂತತ್ತೆರಾಜಣ್ಣವೇಣಿಯಕ್ಕ°ಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ