ದೇವ್ರೇ ಎಂತಕ್ ಕಣ್ಮುಚ್ಕಂಡ್ದೆ?

August 17, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದೇವ್ರೇ ದೇವ್ರೇ
ಏಂತಕೆ ಹೀಂಗೆ ಕಣ್ಮುಚ್ಕಂಡ್ದೆ?
ಹವ್ಯಕ್ರೆಲ್ಲ ಹಾಳಪ್ಪಂಗೆ ಶಾಪ ಕೊಟ್ಟಿದ್ದೆ?
ಹೆಣ್ಮಕ್ಕೊ ಎಲ್ಲ ಬೇರೆ ಜಾತೀನ ಇಷ್ಟಪಡ್ತಿದ್ದೊ
ಗಂಡ್ಮಕ್ಕೊ ಎಲ್ಲ ಹೆಣ್ಣಿಲ್ದೆ ಪರದಾಡ್ತಿದ್ದೊ||

ಎಲ್ಲ ಕಡೆಗೂ ಪ್ರೀತ್ಸಿದ್ ಮದ್ವೆ ಬಂದೊಯ್ದು ಈಗ
ಅಪ್ಪ ಆಯಿ ಕೇಳ್ವರಿಲ್ದೆ ಬೇಜಾರು ದಿನ
ಸೊಸೆಯಕ್ಕೋಗೆ ಅತ್ತೆ ಮಾವ ಬೇಕಾಯ್ದಿಲ್ಲೆ
ಕೊಟ್ಗೆ ತೋಟ ಹಳ್ಳಿಮನೆ ಕೇಳ್ವರೇ ಇಲ್ಲೆ
ನೌಕ್ರಿಯೊಂದೇ ಬಾಳಿನಲ್ಲಿ ಗಟ್ಟಿ ಎಂದೆ||

ಎಲ್ರೂ ಪಟ್ಣ, ನೌಕರಿ ಜೀವ್ನ ಬಯ್ಸರೆದೋ
ಪಟ್ಟಕ್ಕೆ ಶಿಸ್ತಾಗಿ ಇರೋ ಹೇಳಿ ನಿರ್ಧಾರ ಮಾಡಿದ್ದೊ
ಗೋಜ್ಲು ಗೊಂದ್ಲ ಎಲ್ಲ ಹಳ್ಳಿ ಮುದ್ಕ ಮುದ್ಕಿರೇಗೆ (ಮುದ್ಕೀಗೆ)
ಆಚೀಚೆ ಹಚ್ಕಂಡ್ ನೆಂಟ್ರ ಹಿಡ್ಕಂಡ್ ಬದ್ಕಿ ಬಾಳ್ದವ್ಕೆ
ಈಗ್ನವೆಲ್ಲ ಶಹರ ಸುತ್ತಿ ಶೋಕಿಗೀಕಿಗೆ||

ಎಂತಕ್ ದೇವ್ರೆ ಇಂತದ್ನೆಲ್ಲ ಖಂಡಿಸ್ತಿಲ್ಲೆ?
ಸಮಾಧಾನ ಮಾಡಿ ಹವ್ಯಕ್ರನೆಲ್ಲ ಉಳಿಸ್ತೀಲ್ಲೆ
ಕಮ್ಮಿ ಜನಾನೇ ಇದ್ರೂ ಈ ಜಗತ್ನಲ್ಲಿ
ಬುದ್ಧಿ ಕೊಟ್ಟು ಸಲಹೀದ್ದೆ ಮೊದ್ಲಣ ಕಾಲ್ದಲ್ಲಿ
ಜಾತಿ ಮತ ಅಭಿಮಾನ ಅವರ ಕೈಯಲ್ಲಿ||

ಈಗ್ನ ಹವ್ಯಕ್ರಲ್ಲಿ ಜಾತಿ ಮತ ಹೇಳೋ ಅಭಿಮಾನ ಬೆಳ್ಸು
ತಂತಮ್ಮಲ್ಲೇ ಸಂಬಂಧ ಮಾಡೋ ಒಗ್ಗಟ್ ಮೂಡ್ಸು
ದೇವ್ರೇ ನಿಂಗೆ ನಿತ್ಯ ಪೂಜೆಗೆ ಜನಾ ಬೇಡ್ದಾ?
ಭಟ್ಟ ಭಡ್ತೀರ್ ಶಾಸ್ತ್ರ ಮಾಡಿ ಮಂತ್ರ ಬೆಳೂದ್ ಬೇಡ್ದಾ?
ನಿಂಗೆ ನಂಗೋ ಪೂಜೆ ಮಾಡೂದ್ ಸಾಕಾಯ್ದಿಲ್ಯಾ?||

ನಂಗಂತೂ ಹವ್ಯಕ್ರ ಜೀವ್ನ ಮುಂದೂ ಇರೋ
ಮಕ್ಳ ಮರೀಗೆಲ್ಲ ಅದ್ರ ಅರಿವು ಉಳಿಯೋ
ಅದ್ಕಾಗಿ ನಾನು ನಿನ್ನತ್ರ ವರವ ಕೇಳ್ತೆ
ಹವ್ಯಕ್ರ ಹೆಣ್ಣು ಗಂಡೀಗೆಲ್ಲ ಬುದ್ಧಿ ಕೊಡೊ
ನಂಗ್ಳತನ ಉಳ್ಸೊ ಬೆಳ್ಸೊ ಮನಸ ಕೊಡೋ||

ಅಪ್ಪ ಆಯಿ ಮಾತ್ ಕೇಳೋ ಶಕ್ತಿ ತಾರೋ
ಮುಂದಿನ ಜನ್ಮದವರೆಗೂ ಹವ್ಯಕ್ರ ಬಾಳ ನೋಡೋ
ನಂಗ್ಳ ಕುಲ ಗೋತ್ರ ಛಲೋ ಇಪ್ಪಂಗ್ ಮಾಡೋ
ದೇವ್ರು ಅಂದ್ರೆ ನೀನೇ ಹೇಳೋ ಛಲವ ನೀಡೋ
ನಿನ್ನ ತನಾನೂ ನಂಗ್ಳ ಸಂತೀಗೆ ಉಳ್ಸಿಕಂಡ್ ಬಾರೋ||

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಕವನದ ಆಶಯ ತು೦ಬಾ ಛಲೋ ಇದ್ದು.ಕಲ್ಪನಕ್ಕಾ ಹೀ೦ಗೇ ಬರೆತ್ತಾ ಇರಿ.ಅಭಿನ೦ದನೆಗೊ.

  [Reply]

  VA:F [1.9.22_1171]
  Rating: +1 (from 1 vote)
 2. ಕಲ್ಪನಾ ಅರುಣ್
  kalpanaarun

  ನಿಂಗೊ ಮೂರು ಮಂದಿಗೊ ನನ್ನ ಕ್ರತಜ್ಣತೆಗಳು.ಗೊಟಾವಳಿ ಮಾಡು ಜನ ಕಂಡು ದೇವ್ರ ಮೊರೆ ಹೋದೆ . ನನ್ನ ಕೈಲಿ ಆಗದ್ದ ನಾ ಮಾಡೋ ಹೇಳಿ ಮನಸಲ್ಲಿ.

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  “ನಂಗ್ಳತನ ಉಳ್ಸೊ ಬೆಳ್ಸೊ ಮನಸ ಕೊಡೋ||”
  ಇದೇ ನಮ್ಮೆಲ್ಲೋರ ಪ್ರಾರ್ಥನೆ ಕೂಡ. ಬೈಲಿಂಗೆ ಬರ್ತಾ ಇರಿ,ಕವನ ಬರೀತಾ ಇರಿ.

  [Reply]

  VN:F [1.9.22_1171]
  Rating: +1 (from 1 vote)
 4. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಹವ್ಯಕ ಸಮಾಜಲ್ಲಿಪ್ಪ ಸಮಸ್ಯೆಗಳ ಎತ್ತಿ ತೋರುಸಿದ ಕವನ ಚಲೋ ಇದ್ದು. ದೇವರೇ, ನಮ್ಮತನ ಉಳಿತ್ತ ಹಾಂಗೆ ಆಗಲಿ. ಕಲ್ಪನಕ್ಕನ ಕವನಂಗೊ ಬೈಲಿಂಗೆ ಬತ್ತಾ ಇರಳಿ.

  [Reply]

  VA:F [1.9.22_1171]
  Rating: +1 (from 1 vote)
 5. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ನಿಂಗ್ಳ ಆಶಯನೇ ನಮ್ಮ ಆಶಯ..ಅದು ನೆರವೇರಲಿ..

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿದ್ವಾನಣ್ಣವೇಣೂರಣ್ಣಕಾವಿನಮೂಲೆ ಮಾಣಿvreddhiಶ್ರೀಅಕ್ಕ°ಅನಿತಾ ನರೇಶ್, ಮಂಚಿಗಣೇಶ ಮಾವ°ಚೂರಿಬೈಲು ದೀಪಕ್ಕಪುತ್ತೂರಿನ ಪುಟ್ಟಕ್ಕಹಳೆಮನೆ ಅಣ್ಣಅಕ್ಷರದಣ್ಣದೊಡ್ಮನೆ ಭಾವಮಾಲಕ್ಕ°ಸಂಪಾದಕ°ಪ್ರಕಾಶಪ್ಪಚ್ಚಿಅನುಶ್ರೀ ಬಂಡಾಡಿಶೇಡಿಗುಮ್ಮೆ ಪುಳ್ಳಿಶಾ...ರೀರಾಜಣ್ಣವಿನಯ ಶಂಕರ, ಚೆಕ್ಕೆಮನೆಕಜೆವಸಂತ°ಕಳಾಯಿ ಗೀತತ್ತೆಶ್ಯಾಮಣ್ಣವೇಣಿಯಕ್ಕ°ಬಟ್ಟಮಾವ°ಶುದ್ದಿಕ್ಕಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ