ಧನ್ಯವಾದ ಎಲ್ಲೋರಿಂಗೆ

ಈ ಚೆಂದದ ಒಪ್ಪಣ್ಣನ ಬೈಲಿಂಗೆ
ಬಪ್ಪಲೆ ಕಾರಣವಾದ ಎಲ್ಲೋರಿಂಗೆ
ಪ್ರೀತಿಂದ ಸ್ವಾಗತ ಕೋರಿದ ನಿಂಗೋಗೆ
ಕೃತಜ್ಞತೆ ಎಷ್ಟು ಹೇಳಲಿ ಹೇಂಗೆ?

ಆ ಸಮಯ ಬಪ್ಪ ಹೊತ್ತಿಂಗೆ
ಭಾವೋದ್ವೇಗದ ಮನಸ್ಸಿಂಗೆ
ಬಂತು ಕಣ್ಣಿನ ಅಂಚಿಂಗೆ
ಹರುದತ್ತು ಸಂತೋಷದ ಗಂಗೆ

ಹಾರುವ ಹಕ್ಕಿಗೆ ಬೇಕು ಬಲ,ರೆಂಕೆಗೆ
ನಿಂಗೋ ಎಲ್ಲೋರು ಕಲೆಗೆ ಕೊಟ್ಟ ಬೆಲಗೆ
ಅರಳಿತ್ತು ಮನಸ್ಸು ಹೂಗಿನ ಹಾಂಗೆ
ನಿಂಗಳ ಪ್ರೋತ್ಸಾಹದ ಉತ್ಸಾಹ ಎನಗೆ

ವಿದ್ಯಾಮಾತೆ ಸರ್ವರೀತಿಲಿ ಹರಸಲಿ ನವಗೆ
ಪ್ರಯತ್ನಿಸುತ್ತೆ ಲಾಯಿಕ ಬರವಲೆ ಮುಂದಂಗೆ
ಪರಿಚಯ ಓದಿ ಒಪ್ಪ ಕೊಟ್ಟ ನಿಂಗೋಗೆ
ಧನ್ಯವಾದ ಎಷ್ಟು ಹೇಳಲಿ ಎಲ್ಲೋರಿಂಗೆ?!!

ವಾಣಿ ಚಿಕ್ಕಮ್ಮ

   

You may also like...

25 Responses

 1. ವಾಣಿಅತ್ತೆಯ ಬೈಲಿಲಿ ನೋಡಿ ಕೊಶಿ ಆತು. ಪದ್ಯ ಭಾರಿ ಲಾಯ್ಕ ಆಯ್ದು. ನಿಂಗ ಬರೆತ್ತಾ ಇರಿ . ಆನು ಓದುತ್ತಾ ಇರ್ತೆ……

 2. ಶ್ಯಾಮ್ ಪ್ರಸಾದ್ says:

  ಅತ್ತೆ, ಪದ್ಯ ಭಾರೀ ಲಾಯ್ಕ ಆಯ್ದು. ಹೀನ್ಗೆ ಪದ್ಯ, ಲೀಖನ ಬರ್ತಾ ಇರಲಿ

 3. Supriya says:

  sulabhadhinda artha madikonde…
  nimma padhya!
  Layakka iddhu 🙂
  thank you chikkamma.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *