ದೊಡ್ಡರಜೆ ಹೀಂಗಕ್ಕೋ? – ಭಾಮಿನಿಲಿ

February 12, 2011 ರ 11:31 pmಗೆ ನಮ್ಮ ಬರದ್ದು, ಇದುವರೆಗೆ 35 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದೊಡ್ಡ ರಜೆ ಶುರುವಾತು ಮನ್ನೆಯೆ
ದೊಡ್ದ ಯೋಜನೆ ಹಾಕಿ ಕೂಯಿದೆ
ದೊಡ್ಡ ತರಗತಿ ಪಾಟಗಳ ಈ ರಜೆಲಿ ಕಲಿಯೆಕ್ಕು |
ಹೆಡ್ಡ° ಆನಲ್ಲಪ್ಪ ಬೀಜದ
ಗುಡ್ಡೆ ಹತ್ತುಲೆ ತೋಟಕಿಳಿವಲೆ
ಒಡ್ಡಣವು ಸಾಕೆನಗೆ ಪೇಟೆಯಸುಖದ ಜೀವನವು ||

ಮರವ ಹತ್ತುಲೆ ಆನು ಮ೦ಗನೊ
ಕೆರೆಯ ಕೆಸರಿ೦ಗಿಳಿವ ಗೋಣನೊ
ಮರುಳು ಹಿಡಿಗೆನಗಿನ್ನು ಊರಿನ ಸೆಕೆಯ ಜಾನ್ಸಿದರೆ |
ಪೆರಟ ಪಾಯಸ ಬೇಡ ಸೇಮಗೆ
ನೆರಳ ಕ೦ಡರೆ ಬಿರಿಗು ಹಶುವದು
ಇರಳಿ ರದ್ದಿಯ ತಿ೦ಡಿಯೇ ರುಚಿಯೆನ್ನ ತನುಮನಕೆ ||

ಮನಗೆ ನೆ೦ಟರು ಬ೦ದರಾಕ್ಷಣ
ಎನಗೆ ಕಿರಿಕಿರಿ ಅಕ್ಕು ಅಮ್ಮನೆ
ಹನಿಯ ಹೊತ್ತಿ೦ಗಾನು ಕೋಣೆಯ ಒಳವೆ ಸೇರುತ್ತೆ |
ದಿನವ ಕಳವಲೆ ಸಕಲರೊಟ್ಟಿಗೆ
ಕನರು ಚಿರಿಪಿರಿ ಮಾತದೆ೦ತಗೆ
ಮನುಗಿದರೆ ಸುಖವಾಗಿ ಒರಗುವೆ ಕನಸುಗಳ ಕ೦ಡು ||

ಗಣಕಯ೦ತ್ರದ ಒಳವೆ ಹೊಕ್ಕರೆ
ಗುಣಿಸು ಭಾಗಿಸು ಲೆಕ್ಕ ಸುಲಭವು
ಗುಣುಗುಣಿಸುತಿರಲೊ೦ದು ಸಿನೆಮದ ಪದ್ಯ ಹಿತವಾಗಿ |
ಮಣಿಯ ಆಡುಸಿ ಎತ್ತಿ ಆರತಿ
ಮಣಮಣದ ಜೆಪ ಒದರೊದೆ೦ತಗೆ
ಕೊಣಿವಲೆಡ್ತರೆ ಸಾಕು ಆ ಸಲುಮಾನು ನಾಟ್ಯವನು ||

ಬೈಲ ಶುದ್ದಿಯೆ ಬೇಡ ಎನಗೆ ಮೊ
ಬೈಲು ಸಿಕ್ಕಿರೆ ಸಾಕು ಗುರುಟುಲೆ
ಜೈಲ ಜೀವನವದುವೆ ಅಜ್ಜನ ಮನೆಯ ಸಹವಾಸ |
ಮೈಲು ಬಸ್ಸೇ ತಲೆಬೆಶಿಯು ಈ
ಮೈಲು ಮೋರೆಯಪುಟವೆ ನೆಮ್ಮದಿ
ಮೈಲಿಗೆಯು ಮನಸಿ೦ಗೆ ಊರಿನ ಬದುಕ ಗ್ರೇಶುವಗ !!!

ದೊಡ್ಡರಜೆ ಹೀಂಗಕ್ಕೋ? - ಭಾಮಿನಿಲಿ, 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 35 ಒಪ್ಪಂಗೊ

 1. ಬೊಳುಂಬು ಮಾವ°
  ಬೊಳುಂಬು ಮಾವ

  ಪಟ್ಟಣದ ಮಾಣಿಯ ಬೇಸಗೆರಜೆಯ ಪ್ಲಾನುಗೊ ಅವನ ಮನಸ್ಸಿಲ್ಲಿ ಬತ್ತ ಹಾಂಗೇ ಬಯಿಂದು. ಪೇಟೆಯ ಮಕ್ಕಳ ಮನಸ್ಸಿಲ್ಲಿ ಬತ್ತ, ಮೊಬೈಲು, ಫೇಸುಬುಕ್ಕು, ಇಂಟರ್ನೆಟ್ಟು, ಸಿನೆಮಾ, ಬ್ರೇಕು ಡ್ಯಾನ್ಸು, ಪಿಜ್ಜ, ಹೊಲಸು ತಿಂಡಿಗಳ ಎಲ್ಲವನ್ನು ಒಂದು ಪದ್ಯಲ್ಲಿ ಅದೆಷ್ಟು ಚೆಂದಕೆ ವಿವರುಸಿದ್ದ. ಲಾಯಕಾಯಿದು. ನಿಜವನ್ನೇ ಮುಳಿಯ ಭಾವ ಹೇಳಿದರುದೆ, ಅದರ ಹಿಂದಾಣ ವ್ಯಂಗ್ಯ ಎದ್ದು ಕಾಣುತ್ತು. ಪೇಟೆಯ ಮಾಣಿಯ ಕಲ್ಪನೆಗಳುದೆ, ಬೈಲಿನ ಮಾಣಿಯ ಕಲ್ಪನೆಗಳುದೆ ಅಜಗಜಾಂತರ ಅಲ್ಲದೊ ? ಕಳುದ ಸರ್ತಿಯಾಣ ಭಾಮಿನಿಯುದೆ, ಈ ಸರ್ತಿಯಾಣ ಭಾಮಿನಿಯುದೆ ಎರಡು ಮಕ್ಕಳ ಭಾವನೆಗಳ ವ್ಯತ್ಯಾಸಂಗಳನ್ನು ತೋರುಸಿ ಕೊಟ್ಟಿದು. ರಘು ಬಾವಯ್ಯ ಇಬ್ಬರ ಮನಸ್ಸಿನೊಳಾಂಗು ಹೊಕ್ಕು ಭಾಮಿನಿಲಿ ಅದರ ಹೊರಹೊಮ್ಮುಸಿದ ರೀತಿ ಅಭಿನಂದನೀಯ.

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಎರಡು ಸ್ಥಿತಿಯನ್ನೂ ಅಳದ ರೀತಿ ಲಾಯ್ಕಾಯಿದು ಮಾವ.ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 2. ಮುಣ್ಚಿಕ್ಕಾನ ಪ್ರಮೋದ
  ಮುಣ್ಚಿಕ್ಕಾನ ಪ್ರಮೋದ

  ಆಹಾ ಲಾಯಿಕ ಆಯಿದು ಬಾವ.ಇದು ದೊಡ್ದ ರಜೆ ಮುಗಿವನ್ನಾರ ಮುಂದುವರಿಯಲಿ………

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಬಚಾವ್,ದೊಡ್ಡರಜೆ ಮುಗಿಯಲಿ ಹೇಳಿದಿರೋ ಹೇಳಿ ಹೆದರಿದೆ !!

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  Gopalakrishna BHAT S.K.

  ಬಲು ಚೊಕ್ಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 4. ಬೋಸ ಬಾವ
  ಬೋಸ...

  ರಘು ಭಾವ ತೋಟಕ್ಕೆ ಸ೦ಕೋಲೆ ತೊಕ್ಕೊ೦ಡು ಹೋದಿರೋ ಇಲ್ಯೊ?? 😉

  [Reply]

  ಅರ್ಗೆ೦ಟು ಮಾಣಿ

  argentumaani Reply:

  ಕೋಲು ಹಿದ್ಕೊನ್ಡು ಹೋಗಿಕ್ಕು ನಿನ್ನ ಹಾನ್ಗಿಪ್ಪೊರ ಓಡ್ಸುಲೆ! ರ್ರಘು ಭಾವ ಎನ್ಥ ತೆಕ್ಕೊನ್ದಿದೆ?

  [Reply]

  ಬೋಸ ಬಾವ

  ಬೋಸ... Reply:

  ಕೋಲು ಹಿಡಿತ್ತು ಗಾ೦ದಿ ಅಜ್ಜ ಅಲ್ಲದೋ?? :)
  ಗಡಿಬಿಡಿಲಿಪ್ಪವಕ್ಕೆ ಸಮಾಧನ ಹೇಳಿ ಕೊಡ್ಲೆ ಬೇಕಿದಾ.. 😀
  ಅಲ್ಲದ್ರೆ ಡ೦ಕ್ಕಿ ಬೀಳುಗು.. ಆ…!!ಆನು ಹೇಳಿದ್ಲೇ ಬೇಡ… 😉

  [Reply]

  ಅರ್ಗೆ೦ಟು ಮಾಣಿ

  argentumaani Reply:

  ಈಗ ಇಪ್ಪ ಗಾಂಧಿ ಅಜ್ಜಿಯ ಓಡ್ಸುಲೆ ನೀನೆ ಕೋಲು ಹಿಡಿಯೆಕ್ಕಷ್ಟೇ ಭಾವ!
  ಬೈಲಿನೆಲ್ಲೋರ ಬೆಂಬಲ ನಿನಗಿದ್ದು :)

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣರಾಜಣ್ಣಪಟಿಕಲ್ಲಪ್ಪಚ್ಚಿಎರುಂಬು ಅಪ್ಪಚ್ಚಿಶ್ರೀಅಕ್ಕ°ಗಣೇಶ ಮಾವ°ಮಾಲಕ್ಕ°ಪೆಂಗಣ್ಣ°ಸಂಪಾದಕ°ದೊಡ್ಡಮಾವ°ಪ್ರಕಾಶಪ್ಪಚ್ಚಿದೀಪಿಕಾಮಾಷ್ಟ್ರುಮಾವ°ಚೂರಿಬೈಲು ದೀಪಕ್ಕvreddhiಶೇಡಿಗುಮ್ಮೆ ಪುಳ್ಳಿಅಕ್ಷರ°ಪುತ್ತೂರಿನ ಪುಟ್ಟಕ್ಕಕೇಜಿಮಾವ°ಕೆದೂರು ಡಾಕ್ಟ್ರುಬಾವ°ಪವನಜಮಾವಹಳೆಮನೆ ಅಣ್ಣಡೈಮಂಡು ಭಾವಬೋಸ ಬಾವತೆಕ್ಕುಂಜ ಕುಮಾರ ಮಾವ°ಶಾಂತತ್ತೆಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ