Oppanna.com

ಈ ಜಗತ್ತೇ ಹಾಂಗೆ !

ಬರದೋರು :   ಗೋವಿಂದ ಮಾವ, ಬಳ್ಳಮೂಲೆ    on   02/02/2012    23 ಒಪ್ಪಂಗೊ

ಈ ಜಗತ್ತೇ ಹಾಂಗೆ !

ಈ ಜಗತ್ತೇ ಹಾಂಗೆ !
ಹೇಂಗೆ ?
ಅದು ತಪ್ಪು ಇದು ತಪ್ಪು
ಏವದು ತಪ್ಪು ?
ಅದು ಸರಿ ಇದು ಸರಿ
ಏವದು ಸರಿ ?

ತಪ್ಪು ಸರಿಗಳ ಜಗಳವೇ?
ತಪ್ಪುಗೊ ಒಂದೂ ಇಲ್ಲೆ
ಸರಿಗೊ ಅಂತೂ ಇಪ್ಪಲೇ ಇಲ್ಲೆ!
ಈ ಜಗತ್ತೇ ಹಾಂಗೆ !
ಹೇಂಗೆ ?

ಆನು ಸರಿ ನೀನು ತಪ್ಪು
ನೀನು ಸರಿ ಆನು ತಪ್ಪು
ನೀನು ಆರು ? ಆನು ಆರು ?
ನೀನು ಅವ ಆನು ಇವ !
ನೀನು ಅವ ಅಲ್ಲ
ಆನು ಇವನೂದೆ ಅಲ್ಲ !

ಎಲ್ಲಿಂದಲೋ ಬಂದವು
ಬಿಸಿಲ್ಗುದುರಗೊ
ಹೆರಟಿದು ನಾವು
ಏವಗಳೋ ಹೋದವರ ಒಟ್ಟಿಂಗೆ

ಈ ಜಗತ್ತೇ ಹಾಂಗೆ !
ಹೇಂಗೆ ?
ಗೊಂತಿಪ್ಪದು ಒಂದಿಷ್ಟು
ಗೊಂತು ಮಾಡ್ಳೊ ಒಂದಷ್ಟು

ನಿನ್ನೆಯ ನೆಂಪು ಇಲ್ಲೆ
ನಾಳಂಗಾಣ ಜ್ನಾನವೂ ಇಲ್ಲೆ
ಇಂದು ಒಳ್ಳೆ  ದಿನ
ಬದುಕು ಇಂದು ಮಾತ್ರ

ಈ ಜಗತ್ತೇ ಹಾಂಗೆ !
ಹೇಂಗೆ ?
ನೀನು ಕೂಗು
ಆನು ನೆಗೆ ಮಾಡುತ್ತೆ
ನೀನು ನೆಗೆ ಮಾಡು
ಆನು ಕೂಗುತ್ತೆ
ನೀನು ಬಿಕ್ಕಿ ಬಿಕ್ಕಿ ಕೂಗು
ಆನು ಕಟಕಟನೆ ನೆಗೆಮಾಡುತ್ತೆ
ನೀನು ಕಟಕಟನೆ ನೆಗೆ ಮಾಡು
ಆನು ಬಿಕ್ಕಿ ಬಿಕ್ಕಿ ಕೂಗುತ್ತೆ

ಈ ಜಗತ್ತೇ ಹಾಂಗೆ !
ಹೇಂಗೆ ?
ಹುಟ್ಟು  ಚೌಕೀಂದ ರಂಗಸ್ಠಳಕ್ಕೆ
ಪ್ರವೇಶ ,ಅಟ್ಟಾಸು !
ತೈ..ತ..ತ..ಕ..ತ..
ಮುಂದೆ ಎಂತರ ?
ತದ್ದಿಂದಿತ್ತಾ
ತರಿಕಿಟಕಿಟತಕ
ತಕ್ಕಿಟಾಂ ದಿನ್ನತ್ತಾಂ
ತದಿ..ಗಿಣ..ತೋಂ !!
ಎರಡ್ಣೇ ಚೌಕೀಗೆ

ಈ ಜಗತ್ತೇ ಹಾಂಗೆ!
ಹೇಂಗೆ ?!

– ಗೋವಿಂದ ಬಳ್ಳಮೂಲೆ

~*~*~

23 thoughts on “ಈ ಜಗತ್ತೇ ಹಾಂಗೆ !

  1. ಪದ್ಯ ಲಾಯಕ ಆಯಿದು… ಈ ಜಗತ್ತು ಮಿಥ್ಯ ಆದ ಕಾರಣ ನಾವು ನೋಡಿದ ಹಾಂಗೆ ಅದು ಕಾಣುತ್ತು… ಆ ಸತ್ಯವೇ ಅಮರ… ಅದುವೇ ಅಮೃತ… ನಾವು ಹವ್ಯಕರು ಆ ಮಧುರಾಮೃತವ ಸವಿವಲೆ ಅರ್ಹರಾದವು… ಪ್ರಯತ್ನ ಮಾಡುವ…

    1. {ನಾವು ಹವ್ಯಕರು ಆ ಮಧುರಾಮೃತವ ಸವಿವಲೆ ಅರ್ಹರಾದವು}… !!!!!?????????? ಜಗತ್ತು ಮಿಥ್ಯ.. ಸತ್ಯವೇ ಅಮರ.. ಅಮೃತ.. ಒಳ್ಳೇ ಮಾತುಗೊ ಸರಿ. ಹವ್ಯಕರು ಮಾ೦ತ್ರವೊ ಆ ಮಧುರಾಮೃತವ ಸವಿವಲೆ ಅರ್ಹರು? ‘ವಸುಧೈವ ಕುಟು೦ಬಕ೦’ ಹೇಳಿ ಕಲಿಶಿದ ಸ೦ಸ್ಕಾರ೦ದ ಬಪ್ಪ ನಾವೇ ಹೀ೦ಗೆ ಸ೦ಕುಚಿತವಾಗಿ ಆಲೋಚನೆ ಮಾಡ್ಲಕ್ಕೋ?!!!!

      1. ಛೆ!ಹವ್ಯಕರು ‘ಮಾಂತ್ರ’ ಹೇಳಿ ಕಿಸೆಂದ ಸೇರುಸಿ ಆಲೋಚನೆ ಮಾಡಿದಿರಾ?

        ಅಮ್ಮ ಯೋಗ್ಯತೆ ಮತ್ತು ಸಾಮರ್ಥಿಗೆ ಇಪ್ಪ ಮಕ್ಕೋ ಮುಂದೆ ಬರಲಿ ಹೇಳಿ ಕಾಯ್ತಾ ಇರುತ್ತು ಮತ್ತು ಅವಕಾಶ ಕೊಡುತ್ತು… ಅವಕಾಶವ ಉಪಯೋಗಿಸಿಗೊಲ್ಲದ್ದೆ ಹಠ ಮಾಡಿಗೊಂಡು ಕೂದರೆ ಒಳುದವು ಅವಕಾಶವ ಸದುಪಯೋಗ ಮಾಡಿಗೊಳ್ಳುತ್ತವು ಅಷ್ಟೇ…

  2. ಎರಡೆರಡು ಸರ್ತಿ ಓದಿ ಅಪ್ಪಗ ಅರ್ಥ ಆತದ. ಈ ಜಗತ್ತೇ ಹಾಂಗೆ, ಈ ಜೀವನವು ಹಾಂಗೆ.
    ಜೀವನವೇ ಒಂದು ನಾಟಕ ಅಲ್ಲದೊ ?

  3. ಈ ಜಗತ್ತೇ ಹಾಂಗೆ
    ಅರ್ಥ ಮಾಡ್ಲೆ ಹೆರಟಷ್ಟು ಎಂತದೂ ಅರ್ತ ಆಯಿದಿಲ್ಲೆ ಹೇಳಿ ಗೊಂತಪ್ಪಷ್ಟು.
    ಕವನ ಲಾಯಿಕ ಆಯಿದು.

  4. ಈ ಜಗತ್ತೇ ಹಾಂಗೆ !
    ಹೇಂಗೆ?
    ಎನ್ನಂದಲೇ ಎಲ್ಲ
    ಹೇಳಿ ಹೇಳ್ತವೆಲ್ಲ
    ಆನು ಇಲ್ಲದ್ದರೂ
    ಈ ಜಗತ್ತು ಇಲ್ಲದಿಲ್ಲ!

    ಗೋವಿಂದಣ್ಣಾ ಜೀವನದ ಸತ್ಯವ ತುಂಬಾ ಸರಳವಾಗಿ ಹೇಳಿದ್ದಿ. ಲಾಯ್ಕ ಆಯಿದು.

  5. ಬಳ್ಳಮೂಲೆ ಗೋವಿಂದಣ್ಣ ಈ ಪದ್ಯವ ನಿಂಗಳೇ ಓದುತ್ತಾಂಗೆ ಮನಸ್ಸಿಲ್ಲಿ ಕಲ್ಪಿಸಿಗೊಂಡು ಓದಿದೆ. ಹಾಂಗೇ ಹೀಂಗೇ ಈ ಜಗತ್ತು ಒಳಾರ್ಥ ಲಾಯಕ ಮೂಡಿ ಬಯಿಂದು ಹೇಳ್ತು -‘ಚೆನ್ನೈವಾಣಿ’.

    [ಮನ್ನೆ ಮಾತಾಡಿದ ಹಾಂಗೆ ಬೈಲಿಂಗೆ ಬಂದೆ ] – ಇದು ತುಂಬಾ ಸಂತೋಷ ಆತು. ಇಲ್ಲೇ ಇರಿ ಹೇಳಿ ಹೇಳುತ್ತು ನಿಂಗಳತ್ರೆ ಬೈಲು.

  6. {ಹುಟ್ಟು ಚೌಕೀಂದ ರಂಗಸ್ಠಳಕ್ಕೆ
    ಪ್ರವೇಶ ,ಅಟ್ಟಾಸು !
    ತೈ..ತ..ತ..ಕ..ತ..
    ಮುಂದೆ ಎಂತರ ?…….}
    ಅರ್ಥವತ್ತಾದ ಸಾಲುಗೊ..
    ಅಪ್ಪು…- ಈ ಜಗತ್ತೇ ಹಾಂಗೆ – ತುಂಬ ಅರ್ಥವತ್ತಾಗಿ ಬಯಿಂದು.

    1. ಕುಮಾರ ಮಾವ > ಮುಕ್ತವಾಗಿ ಅಭಿಪ್ರಾಯ ಬರದ್ದಕ್ಕೆ ಚಿರ ರಿಣಿ..

  7. ಈ ಜಗತ್ತು ಹಾಂಗೆ..
    ಅಲ್ಲಾ ಹೀಂಗೆ..
    ನೋ ನೋ…ಇಟ್ ಇಸ್ ಲೈಕ್ ದಾಟ್..
    ಏನೇನೋ ವಾದ ವಿವಾದ..
    ಸತ್ಯವಾಗಿ…
    ಆರಿಂಗೂ ಅರಡಿಯ….

    1. ಗೋಪಾಲಣ್ಣೋ….ಧನ್ಯವಾದಂಗೊ ನಿಂಗೋಗೆ

  8. ಈ ಪದ್ಯವೇ ಹಾನ್ಗೆ-
    ಹೇನ್ಗೆ?
    ಇರುಳು ಮುಗುದು ಹಗಲು ಆದ ಹಾನ್ಗೆ
    ಹಗಲು ಕಳುದು ಇರುಳು ಆದ ಹಾನ್ಗೆ
    ಓದುವಗ ರಸ ಇಲ್ಲದ್ದ ಹಾನ್ಗೆ
    ಜಗತ್ತಿನ ಸಾರವನ್ನೇ ಹೀರಿಗೊನ್ದ ಹಾನ್ಗೆ!!

    1. ಭಾಗ್ಯಕ್ಕಾ ….ಅಭಿಪ್ರಾಯ ನೋಡಿ ತುಂಬಾ ಸಂತೋಶ ಆತು

  9. ಸಣ್ಣ ಸಣ್ಣ ಸಾಲುಗಳಲ್ಲಿ ದೊಡ್ಡ ದೊಡ್ಡ ವಿಷಯ೦ಗೊ !
    ತಿ೦ಬಾ ಲಾಯ್ಕಿದ್ದು.ಕಡೆ೦ಗೆ ಒಳಿವದು ಅದೇ ಪ್ರಶ್ನೆ.
    ಈ ಜಗತ್ತೇ ಹಾಂಗೆ!
    ಹೇಂಗೆ ?!

    1. ರಗುವಣ್ಣ..> ನಿಂಗಳ ನುಡಿ ಎನಗೆ ಸ್ಪೂರ್ತಿ

    1. ಮಂಗ್ಲೊರ ಮಾಣಿ ಧನ್ಯವಾದಂಗೊ ಎಂತಾ ..

  10. ಗೌಜಿ ಆಯ್ದು ಅಪ್ಪಚ್ಚಿ ಹೇಳಿ ಈ ಮಾಣಿದು ಒ೦ದು ಒಪ್ಪ.
    {ಪ್ರವೇಶ ,ಅಟ್ಟಾಸು !….ಎರಡ್ಣೇ ಚೌಕೀಗೆ} ಭರ್ಜೆರಿ!
    ನಿ೦ಗಳ ಉ-ಟುಬ್ ಪದ್ಯದೆ ಭಾರೀ ಲಾಯ್ಕಾಯ್ದಾತ ಃ) ಇನ್ನು ಆನೊ೦ದು ಕರೇಲಿ ಕೂರ್ತೆ, ಬಿಕ್ಕಿ ಬಿಕ್ಕಿ ಸಾಕಾತು, ಚೂರು ನೆಗೆ ಮಾಡೆಕ್ಕು. 😉

    1. ಮಾಣಿ > ಪದ್ಯ ಕೇಳಿದ ಓದಿದ ಅಭಿಪ್ರಾಯ ಚೊಕ್ಕಲ್ಲಿ ಬರದ ನಿನಗೆ ಧನ್ಯವಾದಂಗೊ..

  11. ಗೋವಿಂದಣ್ಣ ಬೈಲಿಂಗೆ ಬಂದರೆ,
    ಅದರ ಗೌಜಿಯೇ ಬೇರೆ,
    ಅದರ ಹಾಂಗೇ ಆಯಿದು ಇದುದೆ… 🙂

    ಗೋವಿಂದಣ್ಣ, ಪದ್ಯ ಒಳ್ಳೆದಾಯಿದು.

    1. ನಾವು ಮನ್ನೆ ಮಾತಾಡಿದ ಹಾಂಗೆ ಬೈಲಿಂಗೆ ಬ್ದಂದೆ .ದೊದ್ದ ಮಾಣಿ ಭಾವ ..ನಿಂಗಳ ಪ್ರೊತ್ಸಾಹ ಎನ್ನ ಉತ್ಸಾಹ .ಧನ್ಯವಾದಂಗಳು.

  12. ಓಹೋ ಹೀಂಗೋ ಈಗ ಸುಲಾಭಲ್ಲಿ ಗೊಂತಾತು
    ಲಾಯಿಕಾಯಿದು ಮಾವಾ, ಧನ್ಯವಾದಂಗೊ………

    1. ಶೇಡಿಗುಮ್ಮೆ ಪುಳ್ಲಿ > ತುಂಬಾ ಕ್ರಿತಜ್ನತೆಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×