Oppanna.com

ಎಲ್ಲಿದ್ದೆ ಬಾ ಎನ್ನ ಕಿಟ್ಟ ಚಾಮಿ

ಬರದೋರು :   ಬಾಲಣ್ಣ    on   11/06/2012    16 ಒಪ್ಪಂಗೊ

ಬಾಲಣ್ಣ
Latest posts by ಬಾಲಣ್ಣ (see all)

ಶ್ರೀಕೃಷ್ಣ ಪರಮಾತ್ಮನ ಬಾಲರೂಪ ಕಿಟ್ಟಚಾಮಿಯ ಬಗ್ಗೆ ಮಧುರಕಾನ ಬಾಲಮಾವ ಬರದ ಚೆಂದದ ಪದ್ಯ ಇಲ್ಲಿದ್ದು.
ನಮ್ಮ ಬೈಲಿನ  ಶ್ರೀಶಣ್ಣ ಈ ಪದ್ಯಕ್ಕೆ ಚೆಂದದ ರಾಗ ಹಾಕಿ ಹಾಡಿದ್ದವು.
ಸರಳ – ಸುಂದರ ಪದ್ಯ ಬರದ ಬಾಲಮಾವಂಗೂ, ಚೆಂದದ ರಾಗಲ್ಲಿ ಹಾಡಿದ ಶ್ರೀಶಣ್ಣಂಗೂ ಅನಂತ ಅಭಿನಂದನೆಗೊ.

ಎಲ್ಲಿದ್ದೆ ಬಾ ಎನ್ನ ಕಿಟ್ಟ ಚಾಮಿ :

ರಚನೆ: ಬಾಲ ಮಧುರಕಾನನ
ಧ್ವನಿ: ಶ್ರೀಶಣ್ಣ


Ellidde-Baa-Kitta-Chami

ಎಲ್ಲಿದ್ದೆ ಬಾ ಎನ್ನ ಕಿಟ್ಟಚಾಮಿ
ಒಂದಾರಿ ಬಾ ಎನ್ನೆದುರು ನಿಲ್ಲು ||

ಸಿಕ್ಕದ್ದ ಹಾಂಗೆಯೇ ಸಿಕ್ಕಲ್ಲಿ ಮಡುಗಿದ
ಬೆಣ್ಣೆ ಮಸರು ನೀ ಕದ್ದು ತಿಂದೆ
ಹಾವಿನ ತಲೆ ಮೆಟ್ಟಿ ಕೊಣುದೆ ಚೆಂದಕೆ ನೀನು
ಗುಡ್ಡೆಯ ಬೆರಳಿಲೆ ನೆಗ್ಗಿ ಹಿಡುದೆ ||೧||ಎಲ್ಲಿದ್ದೆ

ಕೆಚ್ಚಲಿಂದಲೇ ಕುಡುದೆ ಉಂಬೆ ಜಾಯಿಯ ನೀನು
ಆರಿಂಗು ಕಾಣದ್ದೆ ಮಣ್ಣು ತಿಂದೆ
ನಿನ್ನಬ್ಬೆಬಾಯೊಡಶಿ ನೋಡಿದರೆ ಅಬ್ಬಬ್ಬ
ಮೂರ್ಲೋಕ ತೋರುಸಿದೆ ಅಂದು ನೀನು ||೨||ಎಲ್ಲಿದ್ದೆ

ಊರ ಮಕ್ಕಳ ಕೂಡಿ ಆಟ ಆಡಿದೆ ಮತ್ತೆ
ಕುಂಞುಂಬೆಯ ಬೀಲ ಹಿಡುದು ಓಡುಸಿದೆ
ಅಬ್ಬೆಯಾ ಜಿಡೆ ಹಿಡುದು ಉಂಬೆ ಬೀಲಕ್ಕೆಕಟ್ಟಿ
ಬಿದ್ದಪ್ಪಗ ಕೈತಟ್ಟಿ ಹಾರಿ ಕೊಣುದೆ ||೩||ಎಲ್ಲಿದ್ದೆ

ದುಷ್ಟ ಪೂತನಿ ಕೊಂದೆ ಮಾವ ಕಂಸನ ಕೊಂದೆ
ಅಬ್ಬೆ ಅಪ್ಪನ ಸೆರೆಯ ನೀ ಬಿಡುಸಿದೆ
ಒಪ್ಪೊಪ್ಪ ಕೆಲಸೊಂಗ ಮಾಡಿದೆ ಒಪ್ಪಣ್ಣ
ಊರಿಂಗೆ ನೀ ಚಾಮಿ ಆಗಿ ಹೋದೆ ||೪||ಎಲ್ಲಿದ್ದೆ

ಒಪ್ಪಕುಂಞಿಯೊ ,ಅಲ್ಲ ಪೋಕಿರಿ ಕಿಟ್ಟನೋ
ಎಂತೆಂತೋ ಎಲ್ಲೋರು ಹೇಳುತ್ತವು
ಎಷ್ಟು ಹೇಳಿರು ಕೂಡ ಚಾಮಿ ದೇವರೇ ನಿನ್ನ
ಹೆಸರ ಜೆಪ ನಿತ್ಯವೂ ಮಾಡುತ್ತವು ||೫||ಎಲ್ಲಿದ್ದೆ

~*~*~

ಧ್ವನಿ: ಶ್ರೀಶಣ್ಣ

Ellidde-Baa-Kitta-Chami

16 thoughts on “ಎಲ್ಲಿದ್ದೆ ಬಾ ಎನ್ನ ಕಿಟ್ಟ ಚಾಮಿ

  1. ಕವನ೦ ಮಧುರ೦, ಗಾಯನ೦ ಮಧುರ೦ ಮಧುರಕಾನನಾಧಿಪತೇ !
    ಮಧುರ ಕಾನನರಿ೦ಗೆ ಶ್ರೀಶಣ್ಣ೦ಗೆ ಅಭಿನ೦ದನೆಗೊ.

  2. ಕವನ೦ ಮಧುರ೦, ಗಾಯನ೦ ಮಧುರ೦ ಮಧುರಾಧಿಪತೇ !
    ಮಧುರ ಕಾನನರಿ೦ಗೆ ಶ್ರೀಶಣ್ಣ೦ಗೆ ಅಭಿನ೦ದನೆಗೊ.

  3. ಜಯಶ್ರೀ ಅಕ್ಕ ರಚನೆ ಲಾಯಕ ಆಯಿದು.ಮುಂದುವರಿಯಲಿ

  4. ರಚಿಸಿದವಕ್ಕೂ,ಹಾಡಿದವಕ್ಕೂ ಎನ್ನ ಒಂದುಒಪ್ಪ.ಲಾಯಕ ಆಯಿದು.

  5. ಮಧುರ ಪದಕ್ಕೆ ಸುಮಧುರ ಸ೦ಗೀತ. ಅಭಿನ೦ದನೆಗೊ.

  6. ಜಯಶ್ರೀ ಅಕ್ಕ ಬರದ ಪದ್ಯ ಲಾಯಕಾಯಿದು
    ಇನ್ನು ಬರಲಿ ಹೀನ್ಗೆ ಕೆಲವು ಓದೆಕಾಯಿದು

  7. ವಾ..! ಬಾಲಣ್ಣನ ಪದ್ಯ ಚಂದಾಯಿದು . ಅಭಿನಂದನೆಗೊ. ನಮ್ಮ ಶ್ರೀಶಣ್ಣನ ರಾಗ ಎಷ್ಟು ಲಾಯಕೆ ಇದ್ದು…
    ಅದ್ಭುತ ರಾಗ-ರಜನೆ..

  8. ಬಾಲ ಮಧುರಕಾನನ ಇವರ ಸಾಹಿತ್ಯ ಕ್ಕೆ ಶ್ರೀಶ ಧ್ವನಿ ಗೂಡಿಸಿದ್ದು ತುಂಬ ಲಾಯಿಕಾಯಿದು.ಇಬ್ರಿಂಗುದೆ ಅಭಿನಂದನೆ ಹಾರೈಸುತ್ತೆ..

  9. ಪದ್ಯ ಮನೋಹರ ಆಯಿದು.ಗಾಯನ ಮನಕ್ಕೆ ತಟ್ಟುತ್ತು.
    ಬಾಲಮಾವಂಗೂ ಶ್ರೀಶಣ್ಣಂಗೂ ಅಭಿನಂದನೆಗೊ.

  10. ಬಾಲಮಾವ ಪದ್ಯ ಬರದ್ದು ಲಾಯಕಾಯಿದು.. ಶ್ರೀಶಣ್ಣ ಹಾಡಿದ್ದೂ .ಲಾಯಿಕಾಯಿದು…

  11. ಬಾಲಣ್ಣನ ಪದ್ಯಕ್ಕೆ ಶ್ರೀಶಣ್ಣನ ದನಿ ಸೇರಿ ಸೂಪರ್ ಆತದ. ಕಿಟ್ಟ ಚಾಮಿಯ ಕತೆಯ ನಮ್ಮ ಬಾಷೆಲಿ ಕೇಳುವ ಕೊಶಿಯೇ ಬೇರೆ. ಶ್ರೀಶನ ಸ್ವರಲ್ಲಿ ಈ ಮದಲೇ ಕೇಳಿ ಬಂದ ಒಪ್ಪಣ್ಣ ಪುಟ್ಟಣ್ಣ ಶೋಬಾನೆ ಪದದ ಮಾಧುರ್ಯ ಮನಸ್ಸಿಲ್ಲಿ ಇಪ್ಪಗಳೇ ಕಿಟ್ಟಚಾಮಿಯ ಹಾಡಿ ಹೊಗಳಿದ ಈ ಪದ್ಯ ಬಂದದು ಲಾಯಕಾತು. ಬೈಲಿಂಗೆ ಬಾಲಣ್ಣನ ಪದ್ಯಂಗಳು ಬರಳಿ, ಅದರೊಟ್ಟಿಂಗೆ ಶ್ರೀಶಣ್ಣನ ಕಂಚಿನ ಕಂಠ ದನಿಗೂಡುಸಲಿ.

  12. ಬಾಲಣ್ಣ ಮತ್ತು ಶ್ರೀಶಣ್ಣ೦ಗೆ ಅಭಿನಂದನೆಗೋ… ಬಾಲ ಮಧುರಕಾನ ಇವರ ಕ್ಷಮೆ ಕೋರಿಗೊಂಡು ಇದೇ ಮಾದರಿಲ್ಲಿ ಎನ್ನ ಭಾವವ ಹಂಚಿಗೊಮ್ಬಲೆ ಪ್ರಯತ್ನಿಸಿದೆ

    ಎಲ್ಲಿದ್ದೆ ಬಾ ಎನ್ನ ರಾಮ ಚಾಮಿ
    ಒಂದಾರಿ ಈ ಲಂಕೆಂದ ಪಾರು ಮಾಡು||

    ಕೂಸುಗೋ ಕಲಿವದೆಂತಕೆ ಕೇಳಿರೂ
    ಛಲದಿ ಕಲಿವಲೆ ದಾರಿ ತೋರಿದೆ
    ಕಲ್ತವು ಮನೆಲಿ ಕೂರುದೆಂತಕೆ ಕೇಳಿರೂ
    ವಿನಯ ಸಹನೆಗಳ ಕಲಿಸಿ ಅಮ್ಮನಾಗಿಸಿದೆ|| ಎಲ್ಲಿದ್ದೆ

    ರಾಮನ೦ತಹ ಸುಪುತ್ರನ ಕರುಣಿಸಿ
    ರಾಮನಾಗಿ ಬೆಳೆಸುವಾಸೆ ಮೂಡಿಸಿದೆ
    ಅಮ್ಮನ ಪ್ರಾಣ ರಕ್ಷಿಸಿದ
    ಮಗಳಾಗಿ ಮನೆಗೆ ಬಂದೆ || ಎಲ್ಲಿದ್ದೆ

    ಕಠಿಣ ತಪಸ್ಸಿಂಗೆ ಮನಸೋತು
    ಹರೇರಾಮನಾಗಿ ಮನೆಗೆ ಬಂದೆ
    ಜ್ಹಾನಾನ೦ದಗಳ ಮನದಿ ತುಂಬಿ
    ವಾಲ್ಮೀಕಿಗೆ ನಾರದನಂತೆ ದರುಶನವಿತ್ತೆ || ಎಲ್ಲಿದ್ದೆ

    ಕ್ರಾಂತಿಯ ಭುಗಿಲೆಬ್ಬಿಸಿದ
    ವಿವೇಕಾನಂದನ ತೋರುಸಿದೆ
    ರಾಮ ರಾಜ್ಯದ ಕನಸು ಕಂಡ
    ಗಾಂಧೀಜಿಯ ತೋರುಸಿದೆ || ಎಲ್ಲಿದ್ದೆ

    ಅದ್ವೈತಾಮೃತವ ಜಗಕೆ ಕುಡಿಸಿದ
    ಶಂಕರಾಚಾರ್ಯರ ತೋರುಸಿದೆ
    ಕುರುಕ್ಷೇತ್ರಲ್ಲಿ ವೀರಾವೇಶಂದ
    ಹೋರಾಡಿದರ್ಜುನನ ತೋರುಸಿದೆ|| ಎಲ್ಲಿದ್ದೆ

    ಇಂದು ರಸ ಋಷಿಗೋ ಹುಟ್ಟಿದಾ೦ಗೆ
    ರಕ್ಕಸರು ಕೊಲ್ಲುತಲಿದ್ದವು
    ಅಜ್ಹಾನ ತಾಂಡವವಾಡುತಿದ್ದು
    ಹೇಳಿ ರೋದಿಸುತಲಿದ್ದವು|| ಎಲ್ಲಿದ್ದೆ

    ಮಧುರ ಮಧುರಾಧಿಪತಿ ನಿನ್ನ
    ವರ್ಣಿಸುವ ವಾಲ್ಮೀಕಿಯಾಯೇಕ್ಕ?
    ಅತ್ತು ಅತ್ತು ಲಂಕೆಗೆ ನಿನ್ನ
    ಕರೆಸುವ ಸೀತಾಮಾತೆಯಾಯೇಕ್ಕ?|| ಎಲ್ಲಿದ್ದೆ

    1. “ಇಂದು ರಸ ಋಷಿಗೋ ಹುಟ್ಟಿದಾ೦ಗೆ
      ರಕ್ಕಸರು ಕೊಲ್ಲುತಲಿದ್ದವು
      ಅಜ್ಹಾನ ತಾಂಡವವಾಡುತಿದ್ದು
      ಹೇಳಿ ರೋದಿಸುತಲಿದ್ದವು|| ಎಲ್ಲಿದ್ದೆ”

      ಇದು ಎಂತಕೆ ಹೇಳಿದ್ದು ಹೇಳಿರೆ ಅರಿಂಗಾರೂ ಭಕ್ತಿ ಮತ್ತು ವೈರಾಗ್ಯ ಜೊತೆಗೆ ಹುಟ್ಟುತ್ತಾ ಇದ್ದು ಹೇಳಿ ಆದರೆ ಸಮಾಜದ ಬಂಧುಗೋ ದಯವಿಟ್ಟು ಅವರ ನಿರುತ್ಸಾಹಗೊಳಿಸೇಡಿ. ಅವು ಸಮಾಜಕ್ಕೆ ಅತಿ ದೊಡ್ಡ ಆಸ್ತಿ ಅಕ್ಕು.
      ಪ್ರತಿಯೊಬ್ಬನ ಆಂತರ್ಯಲ್ಲಿ ಈ ಜಗತ್ತಿನ ಎಲ್ಲಾ ಜ್ಹಾನವೂ ಅಡಗಿಗೊಂಡು ಇದ್ದು.ಭಕ್ತಿ ಮತ್ತು ವೈರಾಗ್ಯ ಜೊತೆಗೆ ಬೆಳೆತ್ತಾ ಹೋದರೆ ಆ ಜ್ಹಾನ ಸ್ಪುರಣ ತನ್ನಿಂತಾನಾಗಿ ಆವುತ್ತು. ಒಬ್ಬ ಅಧುನಿಕ ವಿಜ್ಹಾನಿ ಆದರೂ ಮಾಡುದು ಅದನ್ನೇ. ಅಧುನಿಕ ವಿಜ್ಹಾನದ ಮೇಲೆ ಶ್ರದ್ದೆ ಬೆಳೆಸುತ್ತಾ ಹೋವುತ್ತ ಮತ್ತು ತನ್ನಿಂತಾನಾಗಿ ಇತರ ವಿಷಯಗಳ ಬಗ್ಗೆ ವೈರಾಗ್ಯ ಹುಟ್ಟಿಗೊಲ್ಲುತ್ತು. ಈ ದೇವರ ಮೇಲಿನ ಭಕ್ತಿಯ ಮೂಲಕ ಅಂತರ್ಯಲ್ಲಿ ಸ್ಪುರಣ ಅಪ್ಪ ಜ್ಹಾನ ಅದೆಲ್ಲದಕ್ಕಿಂತ ಮಿಗಿಲಾದ್ದು.

  13. ಬಾಲಣ್ಣನ ಪದ್ಯ ಚಂದವೂ ಲಾಯಕವೂ ಸ್ವಾರಸ್ಯವೂ ಆಗಿದ್ದು. ಅಭಿನಂದನೆಗೊ. ಹಾಸ್ಯವೂ ಗಂಭೀರವೂ ಅಡಗಿಪ್ಪ ಈ ಪದ್ಯಕ್ಕೆ ವಿಶೇಷ ಶ್ಲಾಘನೆ.
    ಶ್ರೀಶಣ್ಣನ ಧ್ವನಿಯೂ ಹಾಡಿದ ಕ್ರಮವೂ ಲಾಯಕ ಆಯ್ದು. ಬೈಲಿಲಿ ಶ್ರೀಶಣ್ಣನ ಧ್ವನಿಗೊ ಇತ್ತೀಚಗೆ ಕೇಳಿ ಬತ್ತಾ ಇಪ್ಪದು ಕೊಶಿ ಆವ್ತು.

    ಹೀಂಗೆ ಬಾಲಣ್ಣನ ಇನ್ನೂ ಪದ್ಯಂಗೊ, ಶ್ರೀಶಣ್ಣನ ದ್ವನಿಯೂ ಬತ್ತಾ ಇರಲಿ ಎಂಬುದೀಗ – ‘ಚೆನ್ನೈವಾಣಿ’.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×