ಎನ್ನ ಬರವಲೇ ಬಿಡುತ್ತವಿಲ್ಲೆ.

March 8, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎನ್ನ ಬರವಲೇ ಬಿಡುತ್ತವಿಲ್ಲೆ:

ಎನಗೂ ಆವ್ತು ಬರೇಕು ಹೇಳಿ ಬೈಲಿಂಗೆ
ಬಿಡುತ್ತವಿಲ್ಲೆ , ದಡಮ್ಮೆ ದಾಂಟಲೆ ಬೈಲಿಂಗೆ |

ಗ್ರೇಶಿದ್ದಾನು ಎನ್ನಂದೆಡಿಗೊ ಷಟ್ಪದಿ

ಬರ್ಸಿಯೇ ಬಿಟ್ಟ, ಮುಳಿಯ ಭಾವ ಗಂಗಾನದಿ |

ಬರವಲೆ ಇದ್ದವು ಜನಂಗೊ ಇಲ್ಲಿ ಬೇಕಷ್ಟು,
ಬರೆತ್ತವೆ ಇಲ್ಲೆ, ಅವ್ವು ಇಲ್ಲಿಗೆ ಸಾಕಷ್ಟು |

ಲೆಕ್ಕಕ್ಕಿದ್ದು ಬೈಲಿ ಜೆನಂಗೋ ಅಲ್ಪ ಸಂಖ್ಯೆಲಿ,
ಬಪ್ಪವವು ಮಾತ್ರ, ಖಾಯಂ ಸ್ವಲ್ಪ ಸಂಖ್ಯೆಲಿ |

ಬೈಲು ಹೇಳಿ ಮಾಡಿದದ್ದು ನವಗೆ ಎಲ್ಲೋರಿಂಗೂ,
ಬಪ್ಪಲೆಡಿತ್ತಿಲ್ಲೆ, ಮಾತ್ರ ನಿತ್ಯ ಹಲವರಿಂಗೂ |

ಬೇಕು ಇದಕ್ಕೆ ಭಂಡವಾಳ ಸ್ವಂತ ಬರವಲೆ,
ತಪ್ಪಲೆಡಿಯ, ಹೆರಂದ ರಾಶಿ ಎರವಲು |

ಗ್ರೇಶಿದೆ ಆನು ಬರವ ಒಂದು ವಿಷಯವ,
ಕಂಡತ್ತಿಲ್ಲೆ ದಾರಿ, ಮುಂದೆ ಕೊಂಡು ಹೋಪಲೆ |

ಕಂಡತ್ತೆನಗೆ ಬರವೋ ಒಂದು ತಿಳಿ ಹಾಸ್ಯವ,
ಹೆದರಿತ್ತೆನಗೆ ಬೋಸ, ಬಟ್ಯ ಚೂಂಟಿರೆನ್ನ ವೇಷವ |

ಇದ್ದವಿಲ್ಲಿ ಕಣ್ಣು ಮಡುಗಿ ಕಾದೊಂಡು,
ಕಾಲ ಎಳಗು ಹೋಪಗ, ಡಂಕಿ ನಡಕ್ಕೊಂಡು |

ಗ್ರೇಶಿದಾನು ಬರವ ಗೋಕರ್ಣಕ್ಕೆ ಹೊದ್ದರ
ಬಂತದ ಚಂದಕೆ , ಅಪ್ಪಚಿದೆ ವಾಕ್ ವೈಖರ. I

ಹೋದ ಅದ ಮಹೇಶಣ್ಣ ಇಲ್ಲಿಂದ ಅಲ್ಲ್ಯಂಗೆ
ಬರದ, ಅವನ ಅನುಭವ ಅಲ್ಲಿನ್ದಿಲ್ಲ್ಯಂಗೆ I

ಸುಭಗ ಇದ್ದ ನೆಗೆಗಾರ ಇದ್ದ ಒಪ್ಪಣ್ಣ ಇದ್ದವು
ನಮ್ಮಂದಾಗ ಅವರ ಹಾಂಗೆ, ಬರವಲೆ ಎಂದುಎಂದಿಂಗೂ|

ಸಣ್ಣ ಮಾಣಿಯೊಬ್ಬ ಬರದ ಗುಟ್ಟು  ಪುಟ್ಟನ
ಪುಟ್ಟಕ್ಕನೂ ಸೋತತ್ತದಾ, ಒಪ್ಪ ಕೊಟ್ಟಿಕ್ಕಿ. I

ಮಾಸ್ಟ್ರು ಮಾವ ಬರತ್ತವದಾ ಎಂತ ತೂಕದ್ದು
ತಾಕತ್ತೆಲ್ಲಿ ಪ್ರಶ್ನೆ ಮಾಡ್ಲೆ, ನವಗೆ ಅವ್ವು ಬರದದ್ದು. I

ಅಕ್ಕಂದ್ರೂ ಬರೆತ್ತವದ ಕಾಲ ಕಾಲಕ್ಕೆ
ಕೇಳುತ್ತದ ನವಗೆ ಇಲ್ಲಿ, ದೊಡ್ಡ ಸ್ವರಕ್ಕೆ. I

‘ಸ್ತೋತ್ರ’ ಪುಸ್ತಕಂದ ಕದ್ದು ಬರವೋ ಗ್ರೇಶಿದೆ
ಬಂತದಾ ಶ್ರೀ ಅಕ್ಕನ ಸ್ತೋತ್ರ, ಅರ್ಥ ಸಹಿತದ್ದೆ. I

ಬರವೋ ಮಂತ್ರ ಹೇಳಿ ಹೆರಟು ಕೂದೆ ಒಂದರಿ
ಎಡಿಯಾ ಕಂಡತ್ತೆನಗೆ, ಭಟ್ಟಮಾವನೋಟ್ಟಿಲ್ಲಿ . I

ಇಲ್ಲಿಯೂ ಇದ್ದು ದೃಶ್ಯ ಹಲವು ಫಟ ತೆಗೆತ್ತರೆ
ಹಳೆಮನೆಣ್ಣ ಕೊಡುತ್ತವಿಲ್ಲೆ ಕಾಮರ ಕೇಳಿರೆ. I

ಗುಡ್ಡಗೋಗಿ ಹುಡುಕ್ಕುವೋ ವಿಷಯ ಎಂತಾರು
ಸಿಕ್ಕುತ್ತದು ಮಮ್ಮದೆ, ಡಾಕುಟರಣ್ಣ ಒಬ್ಬಂಗೆ. I

ಪ್ರಶಾಂತಣ್ಣ ಹೋದ ಹಾಂಗೆ ಹೆರಟು ಹೋಪನೋ
ಬಂದು ಹಿಡುಡು ಪರಂಚುತ್ತಾರ, ಬಂದ ಕೋಪವ. I

ಅಂತು ಇಂತು ಬರವಲೆಡಿಗೋ ಎನಗೆ ಇಲ್ಲಿ ಬೈಲಿಂಗೆ,
ಬರದರೆಂತ, ಬೊಳುಂಬುಮಾವ ಅಂತೆ ಕೂರುಗೋ. I

ಒಟ್ಟಾರೆ ಇದಾ  ‘ಬರೆಕು’ ಹೇಳಿ ಕಾಣುತ್ತೆನಗೆ ಬೈಲಿಂಗೆ,
ಕುಟ್ಟಾರೆ ತಳ್ಳೆ ಎಲ್ಲಿ ಹೇಳಿ, ಹುಡುಕ್ಕದ್ರೆ ಸಾಕು ಅಖೇರಿಗೆ. II

~*~*~*~

ವಿ.ಸೂ : ಇದು ಅಂತೇ ಕೂದು ಬರದದ್ದು. ಅಂತೇ ಕೂದು ಓದಲಿಪ್ಪದು. ತಾಳ ಹಾಕಿ ಓದೊದೋ, ವಾದ್ಯದೊಟ್ಟಿಗೆ ಹಾಡೊದೋ ತಪ್ಪು ಆವ್ತು. ಇದರ ಕಾಸೆಟ್ಟು / ಸಿ ಡಿ ಮಾಡ್ಲೋ, ಪುಸ್ತಕ ಮಾಡ್ಲೋ ಆರಿಂಗೂ ಹಕ್ಕು ಇಲ್ಲೆ.

ಎನ್ನ ಬರವಲೇ ಬಿಡುತ್ತವಿಲ್ಲೆ., 5.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ನಿಂಗೊ ಇನ್ನೂ ಪದ್ಯ ಬರೆಯಿ.
  ನಿಂಗಳ ತಡೆತ್ತವಾರಾರು-ನೋಡುವೊ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಗೋಪಾಲಣ್ಣ ಸುಭಗಣ್ಣ ಕೃತಜ್ಞತೆಗಳು. ಇದಕ್ಕೇ ಹೇಳೋದಿದಾ ನಮ್ಮ ಹೆಮ್ಮಯ – ಬೈಲು.

  [Reply]

  ತುಪ್ಪೆಕ್ಕಲ್ಲ ತಮ್ಮ

  ತುಪ್ಪೆಕ್ಕಲ್ಲ ತಮ್ಮ Reply:

  ಇದು ಏವ ರಾಗಲ್ಲಿ ಹೆಳೆಕ್ಕಾದ್ದು ಅಪ್ಪಚ್ಚಿ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ನಿಂಗೊಗೆ ಏವ ಪೋಕಿಂಗೆ ಸಿಕ್ಕುತ್ತು ನೋಡಿ. ಗೊಂತಾಗದ್ರೆ ೪ – ೫ ಸರ್ತಿ ಓದಿ ನೋಡಿ (ಓದುವಾಗ ವಿ.ಸೂ ಕೂಡ ೨ ಸರ್ತಿ ಹೆಚ್ಚಿಗೆ ಓದೆಕ್ಕಾವ್ತು ಭಾವ.) ಮತ್ತೂ ಸಿಕ್ಕಿತ್ತಿಲ್ಯೋ ಬಿಟ್ಟಿಕ್ಕಿ ಭಾವ . ನವಗೆ ಇದರಿಂದೊಳ್ಳೇದು ಸಿಕ್ಕದೋ ಬೇರೇ.

  [Reply]

  VN:F [1.9.22_1171]
  Rating: 0 (from 0 votes)
 3. ಭೂಪಣ್ಣ

  ಚೆನ್ನೈ ಭಾವಯ…
  ನಿಜವಾಗ್ಲೂ ಫಸ್ತ್ ಕ್ಲಾಸ್ ಆಯಿದು.

  ಆನು ಪದ್ಯ ಎರಡೆರಡು ಸರ್ತಿ ಓದಿದೆ… ಎನ್ನ ಹೆಸರೋ ಎಲ್ಲಿಯಾದರೂ ಬತ್ತೋ ಹೇಳಿ…
  ಃ)

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಧನ್ಯವಾದಂಗೋ ಭೂಪಣ್ಣ

  ಭೂ ಸೇರ್ಸಿ ಇನ್ನೂ ಉದ್ದ ಎಳವದು ಬೇಡ ಹೇಳಿ ನಿಲ್ಸಿದ್ದು ಮತ್ತೆ ಭೂಪಣ್ಣ. ಇದ್ದು ಇದ್ದು ನಿಂಗೊಗೂ ಮುಂದಂಗೆ ಇನ್ನು . ಪ್ರೀತಿಯಿರಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣಪೆಂಗಣ್ಣ°ಮುಳಿಯ ಭಾವಸರ್ಪಮಲೆ ಮಾವ°ಡಾಗುಟ್ರಕ್ಕ°ಶ್ಯಾಮಣ್ಣದೊಡ್ಡಭಾವಶ್ರೀಅಕ್ಕ°ಡಾಮಹೇಶಣ್ಣಬಟ್ಟಮಾವ°ಮಾಷ್ಟ್ರುಮಾವ°ದೀಪಿಕಾಕಜೆವಸಂತ°ಸುವರ್ಣಿನೀ ಕೊಣಲೆಮಂಗ್ಳೂರ ಮಾಣಿಶರ್ಮಪ್ಪಚ್ಚಿಕೇಜಿಮಾವ°ಶಾ...ರೀಪುತ್ತೂರಿನ ಪುಟ್ಟಕ್ಕವಿಜಯತ್ತೆಕೊಳಚ್ಚಿಪ್ಪು ಬಾವಅನು ಉಡುಪುಮೂಲೆಶೇಡಿಗುಮ್ಮೆ ಪುಳ್ಳಿಕಾವಿನಮೂಲೆ ಮಾಣಿಪೆರ್ಲದಣ್ಣಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ