ಗೆಣಪ್ಪನ ಕಥೆ

ಗೆಣಪ್ಪನ     ಕಥೆ  ಮಧೂರು ಮಹಾಗಣಪತಿ

ಶ್ರೀ ಮಧೂರ ಗೆಣಪ್ಪಂಗೆಅಡ್ಡಬಿದ್ದು
ಬರವ ಕಥೆ ಇದು ಭಾರಿ ಸ್ವಾರಸ್ಯ ಇದ್ದು
ಅವನದ್ದೆ ಕಥೆ ಹೇಳ್ಲೆ ಹೆರಟೆ  ಇಂದು
ಕೇಳೆಕ್ಕು ನಿಂಗೊ ಕೆಮಿಕೊಟ್ಟು  ನಿಂದು   /೧/

ಒಂದಾರಿ ಚೌತಿ ದಿನ  ಪ್ರತಿ ಸರ್ತಿ  ಹಾಂಗೇ
ಗಣಪಯ್ಯ  ಹೆರಟಾಡ  ಮನೆಂದ   ಮನಗೆ
ಅಲ್ಲಿ  ಮಾಡುವ   ಪೂಜೆ   ಸ್ವೀಕಾರ ಮಾಡಿ
ಮುಂದಾಣ  ಮನೆ ಹೊಡೆಂಗೆ  ಬಿಟ್ಟಾಡ ಗಾಡಿ  /೨/

 ಚೌತಿ  ದಿನ ಪ್ರತಿ ಮನೆಲು ಭಾರಿ ಗಮ್ಮತ್ತು 
ಪೂಜೆಯೋ ಹೋಮವೋ  ಎಲ್ಲ  ಮಾಡುತ್ತು
ಹೋಮದಾ  ಹೊಗೆ ಎಲ್ಲ ಮನೆಲು ಏಳುತ್ತು
ಭಟ್ರ  ಮಂತ್ರವೊ   ಅದ  ದೂರಂಗೆ   ಕೇಳುತ್ತು  /೩/

 ಗೆಣಪಯ್ಯ ಮನೆಮನೆಗೆ ಹೊಕ್ಕು  ಹೆರಟ
ಸಣ್ಣ ಅಲ್ಲದೋ ಮಾಣಿ ಹೊಟ್ಟೆ ಹದ ಮರದ 
ನೈವೇದ್ಯ ಮಾಡಿದವು ಪಚ್ಚಪ್ಪಪಾಯಸ
ತಿಂದ ಇವ ಎಲ್ಲದರತುಂಬ ಆಯಾಸ   /೪/

 ಸುಟ್ಟವಿನ  ತಿಂದ  ಅದ ಹೊಟ್ಟೆ ತುಂಬಾ  
ಮತ್ತದಾ  ಪಚ್ಚಪ್ಪ ಅದರ   ಬಿಡ್ಲೆಡಿಗಾ
ಪಂಚ   ಕಜ್ಜಾಯವೋ ಅವಂಗೆ   ಬೇಕದುವೂ
ಪಾಯಸವ  ಸುರುದುಂಡ ಉಸಿಲು ಬಿಡ್ಲೆಡಿಯ   /೫/

ಎಲ್ಲ  ದಿಕ್ಕಿಲು  ಹೀಂಗೆ  ರೆಜ್ಜ  ರೆಜ   ತಿಂದುಂಡ
ಗೆಣಪತಿಯ  ಸಮತೂಕ   ತಪ್ಪಿತ್ತಡ
ನೆಡವಲೂ  ಎಡಿಯಡ  ಕೂಪಲೂ  ಎಡಿಯಡ
ಒಂದೆಸಮ  ಸೇಂಕು ಬಿಡಲೇ   ಸುರುಮಾಡಿದಡ /೬/

ಮನಗೆ  ಬಪ್ಪಾ   ದಾರಿ   ಗೆದ್ದೆ  ಹುಣಿಲಲ್ಲದೋ
ಸೇಡಿಮಣ್ಣಿನ  ದಾರಿ ಜಾರಿ  ಹೊಟ್ಟುತ್ತು
ಎಲಿಮೇಗೆ ಕೂದಂಡು  ಅತ್ತಿತ್ತೆ  ವಾಲಿಂಡು
ಹೆರಟದಾ  ಗೆಣಪತಿ  ಕತ್ತಲಾದತ್ತು   /೭/

ಹಕ್ಕಿ  ಗೂಡಿಂಗಾಗಿ  ಹೋದವದ  ಓಡೋಡಿ
ಕೆಂಬಾನ  ಹೊಳೆ  ಹೊಳೆವ  ಬಣ್ಣ  ಮುಗಿಲು
ಕಪ್ಪು  ಮರ   ಕರಿ ಕಲ್ಲು  ದಾರಿ  ಕಾಣುತ್ತಿಲ್ಲೆ
ಪಡು  ಹೊಡೆಲಿ ನೋಡು  ಹೊಳೆ ಹೊಳೆವ  ಕಡಲು  /೮/

ಕತ್ತಲಾತು  ಹೇಳಿ  ಎಲಿರಾಯ  ಓಡಿದ
ಗೆದ್ದೆ  ಹುಣಿ  ದಾರಿ ಅದ ಜಾರಿ  ಹೋತು
ಗೆದ್ದೆ  ಕಿರಿಂಚಿಲಿ ಬಿದ್ದು  ಕಾಲು ಕೈ ಹುಗುದತ್ತು
ಪಟ್ಟೆ ವಸ್ತ್ರವೋ  ಎಲ್ಲ ಕೊಳಕ್ಕಾಗಿ ಹೋತು  /೯/

ಇಸ್ಟೆಲ್ಲ  ಆದ್ದದರ  ನೋಡಿದವ  ಇತ್ತಿದ್ದ
ಚಂದಮಾಮ  ಹೇಳಿ ಅವನ  ಹೆಸರು
ಜಾರಿ ಬಿದ್ದದು ನೋಡಿ  ನೆಗೆ ತಡವಲೆಡಿಯದ್ದೆ
ಹಲ್ಲು  ಬಿಟ್ಟವ ನೋಡಿ ಮೈ ಕೈಯ ಕೆಸರು/೧೦/

ಜಾರಿ  ಬಿದ್ದಾ  ಬೇನೆ ಆರುದೇ ನೋಡದ್ರೆ
ತನ್ನಷ್ಟಕ್ಕೆ ಕಮ್ಮಿ ಆವುತ್ತ ಹಾಂಗೆ
ಎಲ್ಲರೆದುರೇ  ಬಿದ್ದು  ಕೈ  ಕಾಲು ಜೆರುದಿದ್ರೆ
ಕೆಸರೆಲ್ಲ   ಮೆತ್ತಿದರೆ  ಹೋಪದೇಂಗೆ  ?/೧೧/

ಚಂದ್ರ  ನೆಗೆ ಮಾಡಿದ್ದದರ ನೋಡಿ  ಸುಮ್ಮನೆ ಕೂಪ
ಜೆನ ನಮ್ಮ ಗೆಣಪ್ಪನೋ  ಹೇಳಿ  ನೋಡೊ
ಕೋಪ   ಧರ್ಸಿತ್ತಡ ಮೋರೆ  ಕೆಂಪಾತಡ
ಸೊಂಡಿಲಿನ   ಅತ್ತಿತ್ತೆ  ಬೀಸಿದಾಡ   /೧೨/

ಗೆದ್ದೆ  ಕೆಸರಿನ  ಮಣ್ಣು  ಬಾಚಿ  ಇಡ್ಕಿದ  ಮೇಗೆ
ಚಂದ್ರನಾ  ಮೋರೆಗೆ  ಬಿದ್ದತ್ತಡ
ಗೆಣಪ  ಇಡ್ಕಿದ  ಕೆಸರು  ಸರಿಯಾಗಿ  ಮೆತ್ತಿತ್ತು
ಅದು  ಎಂದು  ಮಾಸದ್ದ   ಕಲೆ  ಆತಡ /೧೩/

 ~~~***~~~~

 ಫೋಟೋ : ಇಂಟರ್ನೆಟ್ ಕೃಪೆ

ಬಾಲಣ್ಣ (ಬಾಲಮಧುರಕಾನನ)

   

You may also like...

8 Responses

 1. drdpbhat says:

  ಗೆನಪ್ಪನ ಪದ್ಯ ಲಾಇಕಕೆ ಬರದ್ದು ನೋಡಿ ಖುಷಿ ಆತು.

 2. ಚೆನ್ನೈ ಭಾವ° says:

  ಕಥೆಪದ್ಯ ಭಾರೀ ಪಷ್ಟಾಯ್ದು. ಹರೇ ರಾಮ. ಚೌತಿ ಶುಭಾಶಯಂಗೊ

 3. divya says:

  Kathe padya rupalli laykake bayindu.

 4. ಬೊಳುಂಬು ಗೋಪಾಲ says:

  ಗೆಣಪ್ಪ ಚಾಮಿಯ ಕಥೆ ಹವ್ಯಕ ಪದ್ಯ ರೂಪಲ್ಲಿ ಚೆಂದಕೆ ಬಯಿಂದು. ಚೌತಿ ದಿನ ಚಂದ್ರನ ನೋಡಿರೆ ಅಪವಾದ ಬತ್ತು ಹೇಳುವ ವಿಷಯವುದೆ ಇದ್ದು. ಈ ಸರ್ತಿ ಚೌತಿ ದಿನ ಮುಗಿಲು ಇದ್ದ ಕಾರಣ, ಆರಿಂಗು ಅಪವಾದ ಬಾರ ಅಲ್ಲದೊ ?

  • ಬಾಲಣ್ಣ (ಬಾಲಮಧುರಕಾನನ) says:

   ಚೌತಿ ದಿನ ಆರಾರು ನಿನ್ನ ನೋಡಿದವಕ್ಕೆ
   ಕಳ್ಳ ಹೇಳುವ ಅಪವಾದ ಬಕ್ಕು /
   ಹೀಂಗೆ ಶಾಪವ ಕೊಟ್ಟ ನಮ್ಮ ಗೆಣಪತಿ ಅವಂಗೆ ,
   ಕೈ ಮುಗಿದ ” ಗಣಪಯ್ಯ ನೀನೆ ದಿಕ್ಕು ” //

   ಮೊದಲು ಪೂಜೆಯ ಮಾಡಿ ಎನಗೆ ಕೈ ಮುಗುದವಕ್ಕೆ
   ಈ ಶಾಪ ಎಂದಿಂಗು ತಟ್ಟ ಹೇಳಿ
   ಕೈ ಹಿಡುದು ನೆಗ್ಗಿ ಕಳುಸಿದ ಅವನ ವಾಪಾಸು
   ಇಲ್ಲಿಗೀ ಕತೆ ಮುಗುದತ್ತು ಹೇಳಿ //

   (ಗೋಪಾಲಣ್ಣ ಹೇಳಿದ್ದು ಸರಿ .ಹಾಂಗೆ ಈ ಎರಡು ನುಡಿ ಸೇರಿಸ್ಯೊಂಡು ಓದೆಕ್ಕು ಹೇಳಿ ಕೇಳಿಯೊಳುತ್ತೆ )

 5. ರಘು ಮುಳಿಯ says:

  ಚೌತಿ ಹಬ್ಬದ ಗೌಜಿ ಕಳುದು ದಿನ ಕೆಲವಾತು
  ಪುರುಸೊತ್ತಿಲೀ ಪದ್ಯ ಓದುಲೆಡಿಗಾತು
  ಸೀವು ಮೋದಕ ಕಡುಬು ತಿ೦ದ ರುಚಿ ಮನಸಿ೦ಗೆ
  ಮಾವ ರೂಪಕ ಬರದ ಪಾಕ ಹೇ೦ಗೇ?

 6. ಬಾಲಣ್ಣ (ಬಾಲಮಧುರಕಾನನ) says:

  ಮುಳಿಯದಣ್ಣ, ಅಂದೊಂದು ದಿನ ಮನೆ ಅಟ್ಟಲ್ಲಿ ಕೂದೊಂಡು ಹಳೆ ಕಂತೆ ಬಿಚ್ಚಿಯಪ್ಪಾಗ ಈ ಪದ್ಯ ಸಿಕ್ಕಿತ್ತದಾ…ಸುಮಾರು ೧೯೮೦ರ ಆಸುಪಾಸು ಆಗಿಕ್ಕು. ಹಳೆ ಕಾಕತಲ್ಲಿ ಇತ್ತು . ‘ಪಾಕ’ ಎಳಮ್ಮೆ ಆತೋ?

 7. ರಘು ಮುಳಿಯ says:

  ಮಾವಾ.. ನಿ೦ಗಳ ಈಗಾಣ ರಚನಾಶೈಲಿಗೆ ಹೋಲುಸಿದರೆ ಹಾ೦ಗೆ ಹೇಳುಲಕ್ಕು.
  ಅದು ಬಿಟ್ರೆ ಪಾಕ ಹದಾ ಆಯಿದು..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *