ಗೆಣಪ್ಪಣ್ಣ೦ಗೊಂದು ನಮನ ..

ಬೈಲಿನೆಲ್ಲೋರಿಂಗೂ ನಮಸ್ಕಾರ.
ನಿನ್ನೆ, ಮನ್ನೆ ಚವುತಿ ಹಬ್ಬದ ಜೋರು(?!) ಅನುಭವಿಸಿ ಬರೆದೆ ಹೀಂಗೆ , ಭೂತಕನ್ನಡಿಲಿ ನೋಡಿ !!..
ಜನುಮದಿನ ಗೆಣಪಂಗೆ ಎಲ್ಲಿದ್ದು ಶಾಂತಿ?
ಮನುಜಮತಿ ನೋಡಿಂದು ಆಗಿಕ್ಕು ಭ್ರಾಂತಿ

ಪರ್ವ ಇದು ಜೆನಕೆ ಕರಸಂಗ್ರಹಣೆ ತಂತ್ರ
ಸರ್ವ ಜೆನ ಉತ್ಸವದ ಹೆಸರು ನೆಪ ಮಾಂತ್ರ

ಎತ್ತುಗಾರತಿ ಮನಸಿಲಿಲ್ಲೆ ನಿಜ ಭಕುತಿ
ಗೊತ್ತುಗುರಿ ಇಲ್ಲದ್ದ ಈ ಕೊಂಕು ಯುಕುತಿ

ಮಳೆಯ ಹನಿ ನೀರವನ ಮೆಯ್ಯೆಲ್ಲ  ಬಿದ್ದು
ಚಳಿಯಾದರೂ ಹೋಪಲೆಡಿಯನ್ನೆ ಎದ್ದು

ಬೆಡಿಮದ್ದಿನೆಡೆ ಕೇಳಿಬಂತೊಂದು ಕವನ
ಹೊಡಿಮಗನೆ ಬಡಿಮಗನೆ ಬಿಡಬೇಡ ಅವನ

ನೂಕಿದವು ಮರದಿನವೆ ಗೆಣವತಿಯ ಗುಂಡಿಗೆ
ಶೋಕಿಯವು ಕುಡುದೆಲ್ಲ ಬಿದ್ದಿದವು ಗಂಡಿಗೆ

ಮುಳಿಯ ಭಾವ

   

You may also like...

15 Responses

 1. “….ಹೊಡಿಮಗನೆ ಬಡಿಮಗನೆ ಬಿಡಬೇಡ ಅವನ”… ಇದು.. ಯಾವದೊ ಕನ್ನಡ ಸಿನುಮೆಯ ಹಾಡಿಲ್ಲಿ ಕೇಳಿದ ಹಾ೦ಗೆ ಇದ್ಡನೆಪಾ?? 😛 😀

  • raghumuliya says:

   ಬೆಡಿ ಮದ್ದಿನ ಎಡೆಲಿ ಮೈಕಲ್ಲಿ ಕೇಳಿತ್ತು ಭಾವಾ,ಹಾಂಗೇ ಬರದೆ..

   • ಹಾ… ಅದು ಸರಿ… ಗಣಪತಿ ಕುರ್ಸುದು ಹೇಳಿ… ಬೀದಿ.. ಬೀದಿ.. ’ಲಿ ಮಾಡುದು ಇದೆ… ಸಿನುಮೆಯ ಹಾಡು ಹಾಕುಸು.. 😀 😛

   • ಗುಣಾಜೆ ಮಹೇಶ says:

    ಅಪ್ಪು ಭಾವಾ, ಈಗ ದೇವರ ಮೇಲೆ ಭಕ್ತಿ ಕಮ್ಮಿ ಆಗಿ, ಬರೇ ಆಡಂಬರ ಜಾಸ್ತಿ ಆಯಿದು. ಎಲ್ಲರಿಂಗೂ ಒಳ್ಳೆಯದಾಗಲಿ ಹೇಳುವ ಬದಲು ಹೊಡಿ- ಕಡಿ ಮಗ ಹೇಳುತ್ತವು.

    • ರಾಜಾರಾಮ ಸಿದ್ದನಕೆರೆ says:

     ಗುಣಾಜೆ ಭಾವೋ ನಿಂಗ ಹೇಳಿದ್ದದರ ನಮ್ಬುಲೇ ರಜಾ ಕಷ್ಟ ಇದ್ದು ಎನಗೆ !! ಎಂಥಹ್ಕೆ ಹೇಳಿರೆ ಇಲ್ಲಿ ಆನು ಇಪ್ಪ ಊರಿಲಿ ಅಥವಾ ಊರಿಲಿ ಆದರೂ ದಿನ ಹೋದ ಹಾಂಗೆ ದೇವರಲ್ಲಿ ಇಪ್ಪ ಭಕ್ತಿ ಹೆಚಾವುತ್ತ ಇದ್ದು ನಮ್ಮ ಹಿಂದೂಗೊಕ್ಕೆ !!
     ೧೯೯೪ ರಲ್ಲಿ ಆನು ಈ ಊರಿಂಗೆ ಬಂದ ಸಮಯಲ್ಲಿ ದೇವಸ್ಥಾನಲ್ಲಿ ಜನನ್ಗೊಕ್ಕೆ ಕೂ ಲಿ ನಿಲ್ಲದ್ದೆ ದೇವರ ನೋಡಿ ಕೈ ಮುಗುದು ಬಂದುಗೊಂಡಿತ್ತ ಎನಗೀಗ ಒಂದೆರಡು ಘಂಟೆ ಬೇಕಾವುತ್ತು ಎಲ್ಲಾ ಮುಗುಶಿಗೊಂದು ಬರೆಕ್ಕಾರೆ !!

     • raghumuliya says:

      ಭಾವಾ,ದೇವರ ದರ್ಶನ ಆಗಿ ತಿರುಗಿ ಬಪ್ಪಗ ಚಪ್ಪಲಿ ಒಳುದಿರುತ್ತೋ?
      ಮನ್ನೆ ಚೌತಿ ದಿನ ಆಟ ನೋಡಿ ತಿರುಗಿ ಬಪ್ಪಗ ಚಪ್ಪಲಿ ಕಾಣೆ ಆಗಿ ಮತ್ತೆ ಪೇಚಾಟವೇ!!
      ಇನ್ನು ದೇವರ ದರುಶನಕ್ಕೆ ಹೋದರೆ ಬೆನಕ ಬೆನಕ ಹೇಳಿಕ್ಕಿ ,ಎನ್ನ ಚೆರ್ಪು ಒಳುಸು ಹೇಳಿಯೂ ಒಂದು ಬೇಡಿಕೆ ಸೇರುಸಿರೆ ಹೆಂಗೆ?ಅಂತೂ ಗೆಣಪ್ಪಣ್ಣನೂ ವಾಚಮೇನ್ ಆಯೆಕ್ಕಾದ ಅವಸ್ಥೆ !!

      ಹೇಳಿದ ಹಾಂಗೆ ನಿನಗೋ ಏವ ಊರಿಲಿ ಇಪ್ಪೋದು?ರಶ್ ನೋಡಿರೆ ಪೂನವೋ ಬೊಂಬಾಯಿಯೋ ಹೇಳಿ ಕಾಣುತ್ತನ್ನೇ ?

     • ರಾಜಾರಾಮ ಸಿದ್ದನಕೆರೆ says:

      ಮುಳಿಯ ಭಾವಯ್ಯ ನಿಂಗೋಗೆ ಗೊಂತಿದ್ದ ಪ್ರಪಂಚದ ಅತೀ ಎತ್ತರದ ಕಟ್ಟೋಣ ಇಪ್ಪ ಊರು !!
      ಬ್ಯಾರಿಗಳ ಊರು !,ಸಮುದ್ರ ಹಾರಿದರೆ ಸಿಕ್ಕುವ ಊರು!,ಇತ್ತೀಚೆಗೆ ಮಂಗಳೂರ್ಲಿ ಬಿದ್ದು ಹೊತ್ತಿದ ವಿಮಾನ ಹಾರಿ ಬಂದ ಊರು !!ಈಗ ಥಟ್ಟಂತ ನಿಂಗಳೇ ಹೇಳುವಿ !!
      ಅಪ್ಪು ಭಾವಯ್ಯ; ಇಲ್ಲಿ ಇಪ್ಪವು ಹೆಚ್ಹಾಗಿ ಶುಕ್ರವಾರ ದೇವಸ್ಥಾನಕ್ಕೆ ಹೋಪದು,ಎಂಥ ಹೇದರೆ ಇಲ್ಲಿ ವಾರದ ರಜೆ ಶುಕ್ರವಾರ ಆವುತ್ತು !!
      ನಮ್ಮ ಊರಿನ ಹಾಂಗೆ ದೇವಸ್ಥಾನಕ್ಕೆ ಹೋಗಿ ಬಪ್ಪಗ ಚೆರ್ಪು ಗಿರ್ಪು ಎಲ್ಲಾ ಆರಾದರೂ ಕೈ ಕೊಟ್ಟಿಕ್ಕುಗೋ ಹೇಳಿ ಹೆದರೆಕ್ಕೊಳಿಯೇ ಇಲ್ಲೆ !!
      ಭಕ್ತಿಲಿ ಕೈ ಮುಗುದು ಆಸರಿಂಗೆ ಕೊಟ್ಟದರ ಕುಡುದು ಫಲಾಹಾರ ವ ತಿಂದು ಕ್ಹೊಶೀಲಿ ಮನೆಗೆ ಬಪ್ಪಲಾವುತ್ತಯ್ಯ !!
      ಅಲ್ಲಾ ನಿಂಗೋ ಪುತ್ತೂರಿಲಿ ಬಂಗಾರ ಏಪಾರ ಮಾಡುವವರ……………………..?

     • ಪುಟ್ಟಭಾವ ಹಾಲುಮಜಲು says:

      ಈ ಜನಂಗ ಬೇಡದ್ದರ ಮಾಡಿಕ್ಕಿ ಕಾಣಿಕೆ ಹಾಕುದು ಈಗ ಜಾಸ್ತಿ ಆಯ್ದು!! (ನಿಂಗ ಕುಕ್ಕೆಲಿ ಇಲ್ಲೆ ಧರ್ಮಸ್ಥಳಲ್ಲಿ ನೋಡಿರೆ ಗೊಂತಕ್ಕು, ನಮ್ಮ ಘಟ್ಟದವರ ಅವಸ್ಥೆಯ!!) ಪುನ ದೇವಸ್ಥಾನಂದ ಬಂದಿಕ್ಕಿ ಅದನ್ನೇ ಮಾಡುದು!! ಹಂಗಾದ ಕಾರಣ ರಶ್ಶು ಜಾಸ್ತಿ!!

     • raghumuliya says:

      ತಪ್ಪು ಕಾಣಿಕೆಯೋ,ಲೈಸೆನ್ಸ್ ನವೀಕರಣವೋ (ಬೇಡ೦ಗಟ್ಟೆ ಮಾಡುಲೆ) ,ಆ ದೇವರೇ ಗೆತಿ..
      ರಶ್ಶು ಹೆಚ್ಚಾಗದ್ದೆ ಇಕ್ಕೋ ಪಾಪಿಗ ತುಂಬಿದ ಭೂಮಿಲಿ??
      ಘಟ್ಟ ಇಳಿವದು ಒಳ್ಳೆ ಪ್ರಸಾದ ಭೋಜನ ಸಿಕ್ಕುತ್ತು ಹೇಳುವ ಕಾರಣಂದಲೋ ಹೇಳಿ ಸಂಶಯ.

     • ಗುಣಾಜೆ ಮಹೇಶ says:

      ರಾಜಾರಾಮ ಅಪ್ಪಚ್ಚಿ, ಎನ್ನ ವಾಕ್ಯಲ್ಲಿ ಒಂಚೂರು ತಪ್ಪಾತು. ಕೆಲವರು ಭಕ್ತಿ ಬದಲು ಆಡಂಬರವನ್ನೇ ಜಾಸ್ತಿ ಮಾಡುತ್ತವು. ಮತ್ತೆ ಚೌತಿಗೆ ಅಲ್ಲಿ(ದೇವಸ್ತಾನಲ್ಲಿ)ಪ್ರಸಾದ ಹೇಳಿ ಎಂತ ಕೊಟ್ಟವು?

     • ರಾಜಾರಾಮ ಸಿದ್ದನಕೆರೆ says:

      ಗುಣಾಜೆ ಮಹೇಶ (ಅಪ್ಪಚ್ಚಿ/ಪುಳ್ಳಿ/ಭಾವ/ಮಾವ)ನಿಂಗಳ ಈ ಮೂಲಕ ಪರಿಚಯ ಆತನ್ನೆ !
      ಮಹೇಶನ್ನೋ ನಿಂಗಳ ತಪ್ಪು ಹುಡುಕ್ಕಿ ಬರದ್ದದು ಅಲ್ಲ ಆತೊ.ಮತ್ತೆ ಇಲ್ಲಿ ಎಂಗೋ ಹೋಪ ದೇವಸ್ಥಾನಲ್ಲಿ ಪ್ರಸಾದ ಹೇಳಿ ಎರಡು ತುಂಡು ಬ್ರೆಡ್ ದೇ
      ಅದಕ್ಕೆ ಕೂಡುಲೇ ಎಂತಾರೂ ಬೆಂದಿ ಸಿಕ್ಕುತ್ತು.ಕುಡಿವಲೆ ಆಸರಿಂಗೆ ಎಂತಾರೂ!

 2. ಕೆಪ್ಪಣ್ಣ says:

  ರಘು ಬಾವಾ
  ಪಷ್ಟಾಯಿದು ಪದ್ಯ….

 3. ಶ್ರೀಶಣ್ಣ says:

  ಕವನ ಲಾಯಿಕ್ ಆಯಿದು. ಮುಳುಗಸಲೆ ಬೇಕಾಗಿ ಗಣಪತಿಯ ಮಡುಗುವದಲ್ಲದ್ದೆ ಪೂಜೆ ಮಾಡ್ಲೆ ಅಂತೂ ಖಂಡಿತಾ ಅಲ್ಲ. ವಿಗ್ರಹ ವಿಸರ್ಜನೆ ಸಮಯಲ್ಲಿ ಒಂದರಿ ಹೋಗಿ ನೋಡಿರೆ ಗೊಂತಕ್ಕು.

 4. ಪುಟ್ಟಭಾವ ಹಾಲುಮಜಲು says:

  ಕವನ ಭಾರೀ ಲಾಯ್ಕಾಯ್ದು!! ಕೊನೆ ಸಾಲು ಸೂಪರ್!! ನಿಂಗ ಹೇಳಿದ ಹಾಂಗೆ ಕುಡುದು ಗಂಡಿಲಿ ಇಪ್ಪ ಜನಂಗ ಜಾಸ್ತಿ ಆಯ್ದವು!!
  ಇನ್ನು ಗಣಪತಿ ಮುಗಿವಗ ರಾಜ್ಯೋತ್ಸವ ಅದಾದ ಮೇಲೆ ಅಣ್ಣಮ್ಮ ಉತ್ಸವ!! ಅಂತೂ ವಂತಿಗೆ ಕೇಳುವವಕ್ಕೆ ದೆಸೆ!!

  • {ಅಂತೂ ವಂತಿಗೆ ಕೇಳುವವಕ್ಕೆ ದೆಸೆ!!}
   ಕೇಳುವವಕ್ಕೆ ಶುಕ್ರದೆಸೆ..
   ಕೊಡುವವಕ್ಕೆ ಶನಿದೆಸೆ..
   ಕೊಡದ್ದವಕ್ಕೆ ರಾಹುದೆಸೆ..
   ಕೊಡದ್ದೆ ಜಗಳಕ್ಕೆ ಹೋಪವಕ್ಕೆ ಕುಜರಾಹು ಸಂಧಿ ಅಡ!!
   ಜೋಯಿಷಪ್ಪಚ್ಚಿ ಮೊನ್ನೆ ಹೇಳಿತ್ತಿದ್ದವು! 😉 😉 😉

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *