ಗೋಮಾತೆಗೆ ಸುಪ್ರಭಾತ

ಗೋಮಾತೆಗೆ ಸುಪ್ರಭಾತ         ಗೋಮಾತೆಗೆ ಸುಪ್ರಭಾತ

ಎದ್ದೇಳು ಗೋಮಾತೆ ರಾಘವೇಶ್ವರ ಪ್ರೀತೆ|
ಸುಪ್ರಭಾತವು ನಿನಗೆ ಲೋಕ ಸಂಪ್ರೀತೆ|| ಪ.||

ಮುಕ್ಕೋಟಿ ದೇವರ್ಕಳ ಹೊತ್ತು ನಿಂತಬ್ಬೆ|
ಮುಕ್ಕಣ್ಣಂಗೆ ನಂದಿಯ ಹೆತ್ತು ಕೊಟ್ಟಬ್ಬೆ|
ಮುಂಗೋಳಿ ಕೂಗಿತ್ತು ಏಳಮ್ಮ ಮಾತೆ|
ಮುಂದಾಗಿ ಸಂಪದವ ಕರುಣಿಸೆಮಗೇ||೧||

ಕ್ಷೀರಸಾಗರ ಮಥನಲ್ಲಿ ಒಲಿದು ಬಂದಬ್ಬೆ|
ಕ್ಷೀರಾದಿ ಮಧುರರಸ ಸದಾ ನೀಡುತಿಪ್ಪೆ||
ಜಗವೆಲ್ಲ ಒಲಿದು ಸಲಹುವ ಜಗದಂಬೆ|
ಜಗಜನನಿ ಗ್ರಾಸವ ನೀಡಿ ಬೇಡಿಕೊಂಬೆ||2||

ನಿನ್ನ ಕಣ್ಣಿಲ್ಲಿಪ್ಪ ಸೂರ್ಯ-ಚಂದ್ರರಿಂಗೆ ನಮಿಪೆ|
ಕೊಂಬಿಲ್ಲಿಪ್ಪ ಯಮಧರ್ಮರಿಂಗೆ ವಂದಿಸುವೆ||
ಹೊಕ್ಕುಳಿಲ್ಲಿಪ್ಪ ನರ-ನಾರಾಯಣರಿಂಗೆ ಕೈಮುಗಿವೆ|
ಬೀಲಲ್ಲಿ ಭದ್ರವಾಗಿಪ್ಪ ಭಾಗೀರತಿಗೆ ಬಾಗುವೆ||೩||

ಗೋ ಮೂತ್ರಲ್ಲಿಪ್ಪ ಗಂಗೆಯೇ ನಮಿಪೆ|
ಗೋಮಯಲ್ಲಿಪ್ಪ ಮಹಾಲಕ್ಷ್ಮಿಗೆ ಮಣಿವೆ||
ಪಾದಂಗಳಲ್ಲಿಪ್ಪ ದಿಕ್ಪಾಲಕರಿಂಗೆರಗುವೆ|
ಬೆನ್ನಿಲ್ಲಿಪ್ಪ ಬ್ರಹ್ಮಾದಿಮೂರುತಿಗೆ  ಮಣಿವೆ||೪||

ಮುಟ್ಟಿ ಪ್ರದಕ್ಷಿಣೆ ಗೈದವನ ಆಜನ್ಮ ಪಾಪ ನೀಗುವ|
ಮೂರು  ಪ್ರದಕ್ಷಿಣೆ ಮಾಡಿದವನ ಮೂರುಜನ್ಮಪಾಪ ತೊಳೆವ|
ಏಳುಪ್ರದಕ್ಷಿಣೆಗೆ ಸಪ್ತಜನ್ಮ ಪಾಪ ಕಳೆವಾ||
ಗೋಅರ್ಕಂದ ಸಕಲರೋಗ ಕಳೆದು ಸುಖವ ನೀಡುವೆ||೫||

ಎದ್ದೇಳು ಗೋಮಾತೆ ರಾಘವೇಶ್ವರ ಪ್ರೀತೆ|
ಸುಪ್ರಭಾತವು ನಿನಗೆ ಲೋಕ ಸಂಪ್ರೀತೆ||
– –೦—-

 ಪಟ- ಶರ್ಮಪ್ಪಚ್ಚಿಯ ಸಂಗ್ರಹಂದ

 

ವಿಜಯತ್ತೆ

   

You may also like...

14 Responses

 1. ವಿಜಯತ್ತೆ says:

  ಕಲ್ಪನಾಅರುಣ,ಅಪರೂಪಲ್ಲಿ ಬಂದು ಒಪ್ಪ ಕೊಟ್ಟಿದೆ ಧನ್ಯವಾದ. ನೀರಮೂಲೆ ಜಯಶ್ರೀಯ ಕವನಪೂರ್ವಕ ಒಪ್ಪಕ್ಕೆ ಶುಭಾಶೀರ್ವಾದ. {ಇಬ್ರಿಂಗೂ}

 2. ಗೋಮಾತೆಗೆ ಸುಪ್ರಭಾತ ಗೋಮಾತೆಗೆ ಸುಪ್ರಭಾತ

  ಎದ್ದೇಳು ಗೋಮಾತೆ ರಾಘವೇಶ್ವರ ಪ್ರೀತೆ|
  ಸುಪ್ರಭಾತವು ನಿನಗೆ ಲೋಕ ಸಂಪ್ರೀತೆ|| ಪ.||

  ಮುಕ್ಕೋಟಿ ದೇವರ್ಕಳ ಹೊತ್ತು ನಿಂತಬ್ಬೆ|
  ಮುಕ್ಕಣ್ಣಂಗೆ ನಂದಿಯ ಹೆತ್ತು ಕೊಟ್ಟಬ್ಬೆ|
  ಮುಂಗೋಳಿ ಕೂಗಿತ್ತು ಏಳಮ್ಮ ಮಾತೆ|
  ಮುಂದಾಗಿ ಸಂಪದವ ಕರುಣಿಸೆಮಗೇ||೧||

  ಕ್ಷೀರಸಾಗರ ಮಥನಲ್ಲಿ ಒಲಿದು ಬಂದಬ್ಬೆ|
  ಕ್ಷೀರಾದಿ ಮಧುರರಸ ಸದಾ ನೀಡುತಿಪ್ಪೆ||
  ಜಗವೆಲ್ಲ ಒಲಿದು ಸಲಹುವ ಜಗದಂಬೆ|
  ಜಗಜನನಿ ಗ್ರಾಸವ ನೀಡಿ ಬೇಡಿಕೊಂಬೆ||2||

  ನಿನ್ನ ಕಣ್ಣಿಲ್ಲಿಪ್ಪ ಸೂರ್ಯ-ಚಂದ್ರರಿಂಗೆ ನಮಿಪೆ|
  ಕೊಂಬಿಲ್ಲಿಪ್ಪ ಯಮಧರ್ಮರಿಂಗೆ ವಂದಿಸುವೆ||
  ಹೊಕ್ಕುಳಿಲ್ಲಿಪ್ಪ ನರ-ನಾರಾಯಣರಿಂಗೆ ಕೈಮುಗಿವೆ|
  ಬೀಲಲ್ಲಿ ಭದ್ರವಾಗಿಪ್ಪ ಭಾಗೀರತಿಗೆ ಬಾಗುವೆ||೩||

  ಗೋ ಮೂತ್ರಲ್ಲಿಪ್ಪ ಗಂಗೆಯೇ ನಮಿಪೆ|
  ಗೋಮಯಲ್ಲಿಪ್ಪ ಮಹಾಲಕ್ಷ್ಮಿಗೆ ಮಣಿವೆ||
  ಪಾದಂಗಳಲ್ಲಿಪ್ಪ ದಿಕ್ಪಾಲಕರಿಂಗೆರಗುವೆ|
  ಬೆನ್ನಿಲ್ಲಿಪ್ಪ ಬ್ರಹ್ಮಾದಿಮೂರುತಿಗೆ ಮಣಿವೆ||೪||

  ಮುಟ್ಟಿ ಪ್ರದಕ್ಷಿಣೆ ಗೈದವನ ಆಜನ್ಮ ಪಾಪ ನೀಗುವ|
  ಮೂರು ಪ್ರದಕ್ಷಿಣೆ ಮಾಡಿದವನ ಮೂರುಜನ್ಮಪಾಪ ತೊಳೆವ|
  ಏಳುಪ್ರದಕ್ಷಿಣೆಗೆ ಸಪ್ತಜನ್ಮ ಪಾಪ ಕಳೆವಾ||
  ಗೋಅರ್ಕಂದ ಸಕಲರೋಗ ಕಳೆದು ಸುಖವ ನೀಡುವೆ||೫||

  ಎದ್ದೇಳು ಗೋಮಾತೆ ರಾಘವೇಶ್ವರ ಪ್ರೀತೆ|
  ಸುಪ್ರಭಾತವು ನಿನಗೆ ಲೋಕ ಸಂಪ್ರೀತೆ||
  Sooper
  ……………..amma……

 3. ಎರಡು ವರ್ಷದ ಹಿಂದಿನದ್ದರ ನೋಡಿ ಮೆಚ್ಚಿಗೆ ಸೂಚಿಸಿದ ದುರ್ಗಾ ಪ್ರಸಾದಂಗೆ ಮನತುಂಬಿದ ಧನ್ಯವಾದಂಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *