Oppanna.com

ಗೋಮಾತೆಗೆ ಸುಪ್ರಭಾತ

ಬರದೋರು :   ವಿಜಯತ್ತೆ    on   28/01/2014    14 ಒಪ್ಪಂಗೊ

ಗೋಮಾತೆಗೆ ಸುಪ್ರಭಾತ         ಗೋಮಾತೆಗೆ ಸುಪ್ರಭಾತ

ಎದ್ದೇಳು ಗೋಮಾತೆ ರಾಘವೇಶ್ವರ ಪ್ರೀತೆ|
ಸುಪ್ರಭಾತವು ನಿನಗೆ ಲೋಕ ಸಂಪ್ರೀತೆ|| ಪ.||

ಮುಕ್ಕೋಟಿ ದೇವರ್ಕಳ ಹೊತ್ತು ನಿಂತಬ್ಬೆ|
ಮುಕ್ಕಣ್ಣಂಗೆ ನಂದಿಯ ಹೆತ್ತು ಕೊಟ್ಟಬ್ಬೆ|
ಮುಂಗೋಳಿ ಕೂಗಿತ್ತು ಏಳಮ್ಮ ಮಾತೆ|
ಮುಂದಾಗಿ ಸಂಪದವ ಕರುಣಿಸೆಮಗೇ||೧||

ಕ್ಷೀರಸಾಗರ ಮಥನಲ್ಲಿ ಒಲಿದು ಬಂದಬ್ಬೆ|
ಕ್ಷೀರಾದಿ ಮಧುರರಸ ಸದಾ ನೀಡುತಿಪ್ಪೆ||
ಜಗವೆಲ್ಲ ಒಲಿದು ಸಲಹುವ ಜಗದಂಬೆ|
ಜಗಜನನಿ ಗ್ರಾಸವ ನೀಡಿ ಬೇಡಿಕೊಂಬೆ||2||

ನಿನ್ನ ಕಣ್ಣಿಲ್ಲಿಪ್ಪ ಸೂರ್ಯ-ಚಂದ್ರರಿಂಗೆ ನಮಿಪೆ|
ಕೊಂಬಿಲ್ಲಿಪ್ಪ ಯಮಧರ್ಮರಿಂಗೆ ವಂದಿಸುವೆ||
ಹೊಕ್ಕುಳಿಲ್ಲಿಪ್ಪ ನರ-ನಾರಾಯಣರಿಂಗೆ ಕೈಮುಗಿವೆ|
ಬೀಲಲ್ಲಿ ಭದ್ರವಾಗಿಪ್ಪ ಭಾಗೀರತಿಗೆ ಬಾಗುವೆ||೩||

ಗೋ ಮೂತ್ರಲ್ಲಿಪ್ಪ ಗಂಗೆಯೇ ನಮಿಪೆ|
ಗೋಮಯಲ್ಲಿಪ್ಪ ಮಹಾಲಕ್ಷ್ಮಿಗೆ ಮಣಿವೆ||
ಪಾದಂಗಳಲ್ಲಿಪ್ಪ ದಿಕ್ಪಾಲಕರಿಂಗೆರಗುವೆ|
ಬೆನ್ನಿಲ್ಲಿಪ್ಪ ಬ್ರಹ್ಮಾದಿಮೂರುತಿಗೆ  ಮಣಿವೆ||೪||

ಮುಟ್ಟಿ ಪ್ರದಕ್ಷಿಣೆ ಗೈದವನ ಆಜನ್ಮ ಪಾಪ ನೀಗುವ|
ಮೂರು  ಪ್ರದಕ್ಷಿಣೆ ಮಾಡಿದವನ ಮೂರುಜನ್ಮಪಾಪ ತೊಳೆವ|
ಏಳುಪ್ರದಕ್ಷಿಣೆಗೆ ಸಪ್ತಜನ್ಮ ಪಾಪ ಕಳೆವಾ||
ಗೋಅರ್ಕಂದ ಸಕಲರೋಗ ಕಳೆದು ಸುಖವ ನೀಡುವೆ||೫||

ಎದ್ದೇಳು ಗೋಮಾತೆ ರಾಘವೇಶ್ವರ ಪ್ರೀತೆ|
ಸುಪ್ರಭಾತವು ನಿನಗೆ ಲೋಕ ಸಂಪ್ರೀತೆ||
– –೦—-

 ಪಟ- ಶರ್ಮಪ್ಪಚ್ಚಿಯ ಸಂಗ್ರಹಂದ
 

14 thoughts on “ಗೋಮಾತೆಗೆ ಸುಪ್ರಭಾತ

  1. ಎರಡು ವರ್ಷದ ಹಿಂದಿನದ್ದರ ನೋಡಿ ಮೆಚ್ಚಿಗೆ ಸೂಚಿಸಿದ ದುರ್ಗಾ ಪ್ರಸಾದಂಗೆ ಮನತುಂಬಿದ ಧನ್ಯವಾದಂಗೊ

  2. ಗೋಮಾತೆಗೆ ಸುಪ್ರಭಾತ ಗೋಮಾತೆಗೆ ಸುಪ್ರಭಾತ
    ಎದ್ದೇಳು ಗೋಮಾತೆ ರಾಘವೇಶ್ವರ ಪ್ರೀತೆ|
    ಸುಪ್ರಭಾತವು ನಿನಗೆ ಲೋಕ ಸಂಪ್ರೀತೆ|| ಪ.||
    ಮುಕ್ಕೋಟಿ ದೇವರ್ಕಳ ಹೊತ್ತು ನಿಂತಬ್ಬೆ|
    ಮುಕ್ಕಣ್ಣಂಗೆ ನಂದಿಯ ಹೆತ್ತು ಕೊಟ್ಟಬ್ಬೆ|
    ಮುಂಗೋಳಿ ಕೂಗಿತ್ತು ಏಳಮ್ಮ ಮಾತೆ|
    ಮುಂದಾಗಿ ಸಂಪದವ ಕರುಣಿಸೆಮಗೇ||೧||
    ಕ್ಷೀರಸಾಗರ ಮಥನಲ್ಲಿ ಒಲಿದು ಬಂದಬ್ಬೆ|
    ಕ್ಷೀರಾದಿ ಮಧುರರಸ ಸದಾ ನೀಡುತಿಪ್ಪೆ||
    ಜಗವೆಲ್ಲ ಒಲಿದು ಸಲಹುವ ಜಗದಂಬೆ|
    ಜಗಜನನಿ ಗ್ರಾಸವ ನೀಡಿ ಬೇಡಿಕೊಂಬೆ||2||
    ನಿನ್ನ ಕಣ್ಣಿಲ್ಲಿಪ್ಪ ಸೂರ್ಯ-ಚಂದ್ರರಿಂಗೆ ನಮಿಪೆ|
    ಕೊಂಬಿಲ್ಲಿಪ್ಪ ಯಮಧರ್ಮರಿಂಗೆ ವಂದಿಸುವೆ||
    ಹೊಕ್ಕುಳಿಲ್ಲಿಪ್ಪ ನರ-ನಾರಾಯಣರಿಂಗೆ ಕೈಮುಗಿವೆ|
    ಬೀಲಲ್ಲಿ ಭದ್ರವಾಗಿಪ್ಪ ಭಾಗೀರತಿಗೆ ಬಾಗುವೆ||೩||
    ಗೋ ಮೂತ್ರಲ್ಲಿಪ್ಪ ಗಂಗೆಯೇ ನಮಿಪೆ|
    ಗೋಮಯಲ್ಲಿಪ್ಪ ಮಹಾಲಕ್ಷ್ಮಿಗೆ ಮಣಿವೆ||
    ಪಾದಂಗಳಲ್ಲಿಪ್ಪ ದಿಕ್ಪಾಲಕರಿಂಗೆರಗುವೆ|
    ಬೆನ್ನಿಲ್ಲಿಪ್ಪ ಬ್ರಹ್ಮಾದಿಮೂರುತಿಗೆ ಮಣಿವೆ||೪||
    ಮುಟ್ಟಿ ಪ್ರದಕ್ಷಿಣೆ ಗೈದವನ ಆಜನ್ಮ ಪಾಪ ನೀಗುವ|
    ಮೂರು ಪ್ರದಕ್ಷಿಣೆ ಮಾಡಿದವನ ಮೂರುಜನ್ಮಪಾಪ ತೊಳೆವ|
    ಏಳುಪ್ರದಕ್ಷಿಣೆಗೆ ಸಪ್ತಜನ್ಮ ಪಾಪ ಕಳೆವಾ||
    ಗೋಅರ್ಕಂದ ಸಕಲರೋಗ ಕಳೆದು ಸುಖವ ನೀಡುವೆ||೫||
    ಎದ್ದೇಳು ಗೋಮಾತೆ ರಾಘವೇಶ್ವರ ಪ್ರೀತೆ|
    ಸುಪ್ರಭಾತವು ನಿನಗೆ ಲೋಕ ಸಂಪ್ರೀತೆ||
    Sooper
    ……………..amma……

  3. ಕಲ್ಪನಾಅರುಣ,ಅಪರೂಪಲ್ಲಿ ಬಂದು ಒಪ್ಪ ಕೊಟ್ಟಿದೆ ಧನ್ಯವಾದ. ನೀರಮೂಲೆ ಜಯಶ್ರೀಯ ಕವನಪೂರ್ವಕ ಒಪ್ಪಕ್ಕೆ ಶುಭಾಶೀರ್ವಾದ. {ಇಬ್ರಿಂಗೂ}

  4. ಗೋಮಾತೆಗೆ ನನ್ನನಮನ. .ಪದ್ಯ ಚಲೊ ಆಯಿದು. ಗೋವಿನ ಬಗ್ಗೆ ಪುಣ್ಯದ ಬಾವನೆ.ವಿಜಯತ್ತೆಗೆ ದನ್ಯವಾದಗಳು.

  5. ಅತ್ತೆ ಇತ್ತೆ ನೋಡುವಗ ಕಂಡತ್ತತ್ತೆ
    ನಿಂಗ ಬರದ ಗೋಮಾತೆಗೆ ಸುಪ್ರಭಾತ |
    ಮತ್ತೆ ಮತ್ತೆ ನಮಿಸುತ್ತ ಬತ್ತೆ
    ಕಂಗಳ ಹನಿ ಗೋಮಾತೆಗರ್ಪಿಸುತ ||
    ತುಂಬ ಒಳ್ಳೆದಿದ್ದು ವಿಜಯತ್ತೆ…ಹರೇ ರಾಮ…

  6. ಹರಎರಾಮ, ಒಪ್ಪಕೊಟ್ಟ ಚೆನ್ನೈಭಾವಂಗೆ, ಗೋಮಾತೆಯ ಚಿತ್ರಹಾಕಿದ ಶರ್ಮಭಾವಂಗೆ ಧನ್ಯವಾದಂಗೊ

  7. ಒಪ್ಪಕೊಟ್ಟು ಪ್ರೋತ್ಸಾಹ ಕೊಡುತಿಪ್ಪ ಎಲ್ಲರಿಂಗೂ ಧನ್ಯವಾದಂಗೊ

  8. ಗೋಮಾತೆಯ ಸುಪ್ರಭಾತ ಭಾವಪೂರ್ಣ,ಭಕ್ತಿ ಪೂರ್ಣವಾಗಿ ತುಂಬಾ ಲಾಯ್ಕ ಇದ್ದು

  9. ವಂದೆ ಗೋಮಾತರಂ.
    ಗೋಮಾತೆಗೆ ಸುಪ್ರಭಾತ ಲಾಯಿಕಿದ್ದು.

    1. ಅಕ್ಕಾ°, ತು೦ಬಾ ಅರ್ಥಪೂರ್ಣವಾಗಿ ಬಯಿ೦ದು.ಅಭಿನ೦ದನಗೊ.ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×