Oppanna.com

ಹಟದ ಕವಿ

ಬರದೋರು :   ಗೋಪಾಲಣ್ಣ    on   21/02/2012    10 ಒಪ್ಪಂಗೊ

ಗೋಪಾಲಣ್ಣ

ಗೀಚುವ ಕವಿ ಸಂಪಾದಕಂಗೆ ಬರೆದ್ದು – ಈ ಕವಿತೆಯ ಹವ್ಯಕ ರೂಪಾಂತರ

ಪುಟ ತುಂಬ ಗೀಚಿದ್ದೆ ಆನು ಇಲ್ಲಿ
ಮನಕೊಟ್ಟು ಓದಿದ್ದಿ ನಿಂಗೊ ಅಲ್ಲಿ
ಇಂದು ಬರೆದರು ಕೂಡ ಅಂದ್ರಾಣ ಹಾಂಗೆಯೇ
ಓದುತ್ತಿ ಎನಗಿಲ್ಲೆ ರಜವು ಅನುಮಾನ
ಎನ್ನಂತವಂಗೆ ಇದೇ ದೊಡ್ಡ ಸಮಾಧಾನ ॥ಪುಟ॥

ಎಲ್ಲ ಓದಲಿ ಹೇಳಿ ಆನು ಬರೆವದು ಅಲ್ಲ
ಬರೆವದೊಂದೇ ಗೊಂತು,ಕರ್ಮ ಎನ್ನ!
ಓದುತ್ತವಿದ್ದವದ ಹೇಳಿ ಎನಗೊಂತಿದ್ದು
ಕಳುಗುತ್ತೆ ಕವಿತೆಗಳ ಕಂತೆ ಕಂತೆ
ಆರು ಹರಿದಿಡ್ಕಿದರೂ ಎನಗಿಲ್ಲೆ ಚಿಂತೆ ॥ಪುಟ॥

[ಡಾ.ಜಿ.ಎಸ್.ಶಿವರುದ್ರಪ್ಪನವರ ಕ್ಷಮೆ ಕೇಳಿ ಬರವದು]

10 thoughts on “ಹಟದ ಕವಿ

  1. ನಿ೦ಗೊ ಬರೆತ್ತಾ ಇರಿ ಹೀ೦ಗೆ ಚೆ೦ದದ ಪದ್ಯ೦ಗಳ.
    ಆರಿ೦ಗು ಹರಿದಿಡುಕ್ಕಲೆಡಿಯ ಅದರ.
    ಭಾವನ ಭಾವ೦ದ ಬೆರಳಿ೦ದ ಮಊಡಿ ಬರಲಿ
    ಇನ್ನು ಹಲವು ಕವನಗಳ ಸಾಲು ಸಾಲು

  2. ಹಟದ ಕವಿ ಬರದ ಪದ ಓದಿ ಆತು
    ಪುಟವ ತಿರುಗಸಲುದೇ ಮರದು ಹೋತೂ.. sss
    ಬರಳಿ ಕವಿತೆಯ ಕ೦ತೆ ಗೋಣಿಗಟ್ಟಲೆ ಬೇಗ
    ಕೆಲಸದಾ ಬೆಶಿ ಮರವೆ ಓದಿ ನಿತ್ಯ
    ಸುಳ್ಳಲ್ಲ ಹೇಳುತ್ಸು ಎನ್ನಾಣೆ ಸತ್ಯಾ ॥ಹಟದ॥

  3. ಎಲ್ಲ ಓದುವೆ ಎಂಗೊ
    ನೀನು ಬರವದು ಬಿಡೆಡ
    ಬರಲಿ ನಿತ್ಯವು ನಿನ್ನ ಭಾವ ಸಾರ
    ಹಾಡು ಕವನವೆ ಇರಲಿ
    ಲೆಕ್ಕ ಚೊಕ್ಕಕೆ ಇರಲಿ
    ಕೊಡುವೆ ಒಪ್ಪವ ನಿನಗೆ, ನಿನ್ನ ಮತಿಗೆ

  4. ಪದ್ಯ ಲಾಯ್ಕಾಯ್ದು ಗೋಪಾಲಣ್ಣ. ಬೊಳುಂಬು ಮಾವ ಹೇಳಿದಾಂಗೆ, ನಮ್ಮ ಬೈಲಿಲಿ ಬರದ್ದರ ಹರುದಿಡ್ಕುವ ಪ್ರಶ್ನೆಯೇ ಇಲ್ಲೆಪ್ಪ. ಎಲ್ಲದಕ್ಕೂ ಸ್ವಾಗತ, ಪ್ರೋತ್ಸಾಹ ಇದ್ದೇ ಇದ್ದು.

  5. ಓ..ಖಂಡಿತಾ..! ಮನಕೊಟ್ಟು ಓದುತ್ಯೊ ಎಂಗೊ ಇಲ್ಲಿ.
    ಬರಲಿ ಇನ್ನೂ…

  6. ನಿಂಗಳ ಕಥೆ, ಕವನಂಗಳ ಹರುದಿಡ್ಕುತ್ತೆಯೊ° ಹೇಳಿ ಚಿಂತೆ ಮಾಡೆಕಾದ ಅಗತ್ಯ ಇಲ್ಲೆ ಗೋಪಾಲಣ್ಣ. ಓದಿ, ಮೆಚ್ಚಿ ಖಂಡಿತಾ ಒಪ್ಪ ಕೊಡುತ್ತೆಯೊ. ನಿಂಗೊ ಬೈಲಿನ ಬಲು ದೊಡ್ಡ ಆಸ್ತಿ.
    ಕವನ ಸೂಪರ್ ಆಯಿದು. ಹವ್ಯಕಲ್ಲಿ ಎದೆ ತುಂಬಿ ಹಾಡಲುದೆ ಅಕ್ಕು.

  7. ಹಠ ಒಳ್ಳೆದೆ… ನಾವು ಅದರ ಯಾವ ತರಲ್ಲಿ ಉಪಯೋಗಿಸುತ್ತು ಹೇಳುದರಲ್ಲಿ ಇಪ್ಪದು… ‘ಸರ್ವೇ ಜನಾ: ಸುಖಿನೋ ಭವಂತು’ ಹೇಳುವ ಉದ್ದೇಶಂದ ಒಳ್ಳೆ ತರಲ್ಲಿ ಹಠವ ಉಪಯೋಗಿಸಿರೆ ತುಂಬಾ ಉತ್ತಮ ಫಲ ಕೊಡುತ್ತು…

    ಕವಿ ಹೃದಯವ ಬಲ್ಲ ಓದುಗಳಾಗಿ ಹೇಳುತ್ತಾ ಇದ್ದೆ “ಗೋಪಾಲಣ್ಣನ ಛಲದ ಜೀವನದ ಬಗ್ಗೆ ಎನಗೆ ತುಂಬಾ ಹೆಮ್ಮೆ ಇದ್ದು”

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×