ಎಲೆ ಪೆಟ್ಟಿಗೆ ಹೆರ ತಪ್ಪಿರೊ – “ಧವಳ”ಲ್ಲಿ

ಎಲೆ ಪೆಟ್ಟಿಗೆ ಹೆರ ತಪ್ಪಿರೊ ತೆ೦ಕ್ಲಾಗಣ ಭಾವಾ।
ಗೆಲವಕ್ಕದ ಸುಭಗಣ್ಣನು ರ೦ಗೇರಿದಭಾವಾ°
ತಲೆ ತಿರ್ಗಿರೆ ಹೊಗೆಸೊಪ್ಪಿನ ಘಾಟೊ೦ದರಿಯೆಡ್ಪೀ।
ಬಲಗೈಲಿಯೆ ಹಿಡಿಯೊ೦ದರಿ ಹೋಳೊ೦ದರ ಕುಡ್ಪೀ॥

ಹಸಿ ತಿ೦ಡಿಗೊ ಕುರೆಯಾದರು ಭಾರೀ ರುಚಿಯಯ್ಯಾ।
ಕಿಸೆಲಿದ್ದರೆ ಹೊಸ ನೂರರ ನೋಟಕ್ಕದು ಮಾಯಾ।
ಮೊಸರಿದ್ದರೆ ಅವಲಕ್ಕಿಗೆ ಸಾಕಲ್ಲದೊ ಬಾರೋ°
ಹಸಿಮಾವಿನ ಮೆಡಿಯುಪ್ಪಿನ ಕಾಯೊ೦ದರಿ ತಾರೋ°

ಹಳೆತೋಟದ ನೆಡು ಬಾಳೆಯ ಸಾಲೊ೦ದರಿ ನೋಡೂ।
ಮಳೆ ಬ೦ದರೆ ಬುಡಗೊಬ್ಬರ ಹಾಕದ್ದರೆ ಕೇಡೂ।
ಕೊಳೆರೋಗವು ಬಿಡ ಹಬ್ಬಿದರಾ ಮದ್ದು ಲಗಾಡೀ।
ಚಳಿಯಾದರು ಮರ ಹತ್ತುಗು ಚಾದೊತ್ತಕೆ ಪೋಡೀ॥

ಒಣಡಕ್ಕೆಯ ಹೊಗೆಯಟ್ಟದ ಮೇಲೇರುಸು ಶ೦ಭೂ।
ಮೆಣಸಿದ್ದರೆ ಹೊಸ ಗೋಣಿಲಿ ಕಟ್ಟದ್ದರೆ ಕು೦ಬೂ।
ತಣುಸಿದ್ದರೆ ಮನೆ ಜಾಲಿನ ಗುದ್ದದ್ದರೆ ಕಷ್ಟಾ।
ಮಣವಾದರು ಒಳಿಗಲ್ಸೊ ಪ-ಟೋರಾದರೆ ನಷ್ಟಾ॥

ಮನೆ ಜಾಲಿಲಿ ಮುದಿ ತಿಮ್ಮಯ° ಮುಟ್ಟಾಳೆಯ ಹಾಕೀ।
ಗೆನ ತೆ೦ಗಿನ ಹೊರೆ ತಪ್ಪದು ಇನ್ನೆಷ್ಟದು ಬಾಕೀ।
ಸೊನೆ ಮಾವಿನ ಮೆಡಿ ಕೊಯ್ವಲೆ ಆರಿದ್ದವು ಮೇಲೇ।
ದಿನ ಚಾಕರಿ ಜೆನ ಮಾಯವೆ ಹೀ೦ಗಾದರೆ ಸೋಲೇ॥
~~~**~~~

ಶತಮಾನದ ಶತಾವಧಾನ ಕಳುದು ಕೆಲವು ದಿನ ಕಳುದರೂ ಅದರ ಗು೦ಗಿ೦ದ ಹೆರ ಬಪ್ಪಲೆ ಸಾಧ್ಯ ಆಗದ್ದೇ ಇಪ್ಪ ಸುಖ ಎನ್ನ ಹಾ೦ಗೆ ಕೆಲವು ಜೆನರದ್ದು.ತಲೆಯೊಳ ಅವು ಕಟ್ಟಿದ ಕವಿತೆಯ ಕೆಲವು ಶಬ್ದ೦ಗೊ ಹಾ೦ಗೇ ತಿರುಗಿಗೊ೦ಡಿತ್ತು.
“ಪ್ರಶಮೇರಣವಿದು ಸಜ್ಜನ ಸ೦ಕಷ್ಟದ ಕಾಲಾ”
ಹೇಳಿ ಮನಸ್ಸು ತನ್ನಷ್ಟಕ್ಕೆ ಪದ ಹೇಳಿಗೊ೦ಡಿತ್ತು,ಚೆಲ.. ಈ ಧಾಟಿ ಲಾಯ್ಕ ಇದ್ದು ಹೇಳಿ ರಜಾ ವಿಮರ್ಶೆ ಮಾಡಿಯಪ್ಪಗ ಇದು “ಧವಳ ಛ೦ದಸ್ಸು ಹೇಳಿ ಅವಧಾನಿಗೊ ಹೇಳಿದ ಮಾತು ನೆ೦ಪಾತು.

ಹವಳದ ಹಾ೦ಗಿಪ್ಪ ಈ ಧವಳ ಛ೦ದಸ್ಸಿನ ಮಾತ್ರೆ ಲೆಕ್ಕಾಚಾರ ಹೀ೦ಗಿದ್ದು.

೧೧_/೧೧೧/೧_೧/೧_ _/೧೧_/_

ನನನಾನನ/ನನನಾನನ/ನಾನಾ/ನನನಾನಾ

( ಒಟ್ಟು ೧೬ ಅಕ್ಷರ೦ಗೊ ಇಪ್ಪ ನಾಲ್ಕು ಸಾಲುಗಳ ಜೋಡಣೆ).
ಓದಿ, ನಿ೦ಗಳೂ ಮು೦ದುವರಿಸಿ.

ಕವಳ ಹಾಕಿಗೊ೦ಡು ಧವಳ ಹಾಡುವ° ,ಸ್ವರ ಸೇರುಸಿ,ಬನ್ನಿ.

ಶ್ರೀಶಣ್ಣನ ಸ್ವರಲ್ಲಿ ಇಲ್ಲಿ ಕೇಳಿಃ

ಮುಳಿಯ ಭಾವ

   

You may also like...

12 Responses

  1. Raja Kunjathody says:

    Layaka aidu padyavu padya heliddude

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *