ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಬೈಲಿ೦ಗೆ ಉದಯೋನ್ಮುಖ ಬರಹಗಾರರಾದ ಗುಣಾಜೆ ರಾಮಚ೦ದ್ರ ಭಟ್ ಬೈ೦ದವು.
ಇವು ಮ೦ಗ್ಳೂರು ಎಲೋಸಿಯಸ್ ಪ್ರೌಢಶಾಲೆಲಿ ಕನ್ನಡ ಅಧ್ಯಾಪಕರಾಗಿದ್ದವು. ಶಾಲೆಲಿ ಕನ್ನಡಸ೦ಘವ ಚೆ೦ದಕೆ ನೆಡೆಶಿಗೊ೦ಡು ಭಾಷೆಯ ಬೆಳವಣಿಗೆಗೆ ಸಕ್ರಿಯವಾಗಿ ಕೆಲಸ ಮಾಡುತ್ತಾ ಇದ್ದವು. ಮ೦ಗಳೂರಿನ ಚುಟುಕು ಸಾಹಿತ್ಯ ಪರಿಷತ್ತಿನ ಸಹ ಕೋಶಾಧಿಕಾರಿಯಾಗಿ ಸೇವೆ ಸಲ್ಲುಸುತ್ತಾ ಇದ್ದವು.
ಬನ್ನಿ,ಗುಣಾಜೆ ಭಾವನ ಶುದ್ದಿಗಳ ಓದುವ°,ಒಪ್ಪ ಕೊಟ್ಟು ಪ್ರೋತ್ಸಾಹ ಕೊಡುವ°.
ಹವಿಕರ ಹೆಗ್ಗಳಿಕೆ
ಹವಿಕರು ಹಿಂದಿಂದಲೇ ಒಳ್ಳೆ ಕೃಷಿಕರು,
ಹವಿಸ್ಸಿನ ಹೋಮಕ್ಕೆ ಅರ್ಪಿಸುವ ವೈದಿಕರು;
ಈಗ ಅದಕ್ಕೇ ಅಂಟದ್ದೆ ಆಯಿದವು ಡಾಕ್ಟ್ರು,ಲೆಕ್ಚರು
ಮಾಸ್ಟ್ರು, ಎಂಜಿನಿಯರಕ್ಕೊ, ಹೆಸರಾಯಿದವು ಹವಿಕರು ||
ಜಾತಕ ಹೊಂದಾಣಿಕೆ
ಮಾಣಿಯ ಕಡೆಯವಕ್ಕೆ ಜಾತಕ ಕಳ್ಸಿದರೆ,
ಹೇಳ್ತವು ಕೂಸಿನ ಜಾತಕ ಮಾಣಿಗೆ ಹೊಂದಿದರೆ
ಮಾತ್ರ, ಹೇಳಿ, ಮಾಣಿಗೆ ಕೂಸು ಹಿಡ್ಸಿದರೆ,
ಜಾತಕ ನೋಡದ್ದೆ, ಎರಶಿಕೊಳ್ಳುತ್ತವು ಧಾರೆ ||
ಕಾಲಕ್ಕೆ ತಕ್ಕ ಕೋಲ
ಪ್ರಾಕಿಲ್ಲಿ ಹೇಳುಗೆಂಗಳ ಕೂಸಿಂಗೆ, ಮಾಣಿ ಇದ್ದನೋ?
ಈಗ ಮಾಣಿಗೆ ಕೂಸು ಹುಡ್ಕಲೆ ಕಷ್ಟ ಆವ್ತನ್ನೆ !
ಈಗೀಗ ಮಾಣ್ಯಂಗೊ ಅಲ್ಲಲ್ಲಿ ಹೆರಜ್ಜಾತಿಯವರ ಒಪ್ಪುತ್ತವು
ಮದುವೆ ಆವ್ತವು,”ಕಾಲಕ್ಕೆ ತಕ್ಕ ಕೋಲ’ ಹೆರಿಯವು ಹೇಳ್ತವು
ಜಾತಕ ಹೊಂದದ್ದರೆ?
ಮದುವೆ ಅಪ್ಪಲೆ ಹೆರಟ ಮಾಣಿ, ಕೂಸಿನ ಜಾತಕ ತೋರಿಸಿದರೆ,
ಹೊಂದಿಕೆ ಆವುತ್ತಿಲ್ಲೆ; ಆದ್ರೆ ಕೂಸು ತುಂಬಾ ಹಿಡಿಸಿರೆ?
ಎಂತರ ಮಾಡುದು ಹೇಳಿ ಸಂದಿಗ್ಧ ! ಜಾತಕ ಹೊಂದಿದರೆ!?
ಸರ್ವತಾ ಕೂಸು ಹಿಡಿಸುತ್ತಿಲ್ಲೆ, ಹೇಳಿ ನಿಂಗೊ? ಮಾಡುದೆಂತರ?
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಚಂದ್ರಮಾವ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಕಾಲಕ್ಕೆ ತಕ್ಕ ಕೋಲ ಲಾಯ್ಕ ಆಯಿದು.
ಇದೆಲ್ಲಾ ಪರಿಹಾರ ಕಷ್ಟ ಆದ ಸಮಸ್ಯೆ!
ಕಾಲವೇ ಉತ್ತರ ಹೇಳುಗು.
[ಉತ್ತರುಸಿ]
ಹೊತ್ತುವೇಳೆ: 2 December,2011ರ 9:14 PM ಗೆ. (ಒಪ್ಪಸಂಕೊಲೆ)
ನಿಂಗಳ ಸಹೃದಯ ವಿಮರ್ಶೆ ಊರ ಬೆಲ್ಲ ತಿಂದಷ್ಟು ಕೊಶೀ ಆತು.
ಧನ್ಯವಾದಂಗೊ
[ಉತ್ತರುಸಿ]
ಮಾವಾ , ಈಗ ಕಾಲ ಬದಲಾದ್ದದೋ ಅಲ್ಲ ನಾವೇ ಬದಲಾದ್ದದೋ…? ಹೇಳಿ ಗೊಂತಾಗದ್ದ ಹಾಂಗೆ ಆಯಿದಲ್ಲದೋ
ನೋಡಿ,
ಮೊದಲಾಣವು ಆವುತ್ತಿದ್ದವು ಮದುವೆ
ನಮ್ಮದೇ (ಹವ್ಯಕ) ಜಾತಿಯವರ
ಈಗೀಗ ಹೊಸತ್ತಾಗಿ ಆವುತ್ತವು ಮದುವೆ
ಅದದೇ (ಗಂ-ಗಂ ,ಹೆ-ಹೆ) ಜಾತಿಯವರ
ಹಾಂಗೇ
ಆಗ ಹೆಮ್ಮಕ್ಕೊ ಉಡುತ್ತಿದ್ದವು ಸೀರೆ
ಆಗ ಹಾಂಗಿತ್ತು ಕಾಲ
ಈಗಾಣವು ಹಾಕುತ್ತವು ಸ್ಕರ್ಟ್,ಪೇಂಟು
ಇದು ಹೇಂಗಪ್ಪದು ಕೋಲ..?
ಅಂಬಗ ಮಾಣಿಯಂಗೊ ಹುಡುಕ್ಕುತ್ತಿದ್ದದ್ದು
ಕೂಸುಗಳ
ಈಗ ಹುಡುಕ್ಕೆಕ್ಕಾದ ಅನಿವಾರ್ಯತೆ ಇದ್ದು
ಕೂಸು ಇಲ್ಲದ್ದ ಕೂಸುಗಳ
ಅಂಬಗ ಕಳುಸೆಕ್ಕಾದ ಅಗತ್ಯಇತ್ತು
ಜಾತಕ ಪಟ
ಈಗ ನೆಟ್ಟಿಲೇ ಸಿಕ್ಕುತ್ತಲ್ಲೋ
ಡೈರೆಕ್ಟು ನೋಟ
ಆಕಾಲ ಹಾಂಗೆ ಈಕಾಲ ಹೀಂಗೆ ನಾವು ಬದಲಾಗದ್ದರೆ ಹೇಂಗೆ….?
[ಉತ್ತರುಸಿ]
ಹೊತ್ತುವೇಳೆ: 2 December,2011ರ 7:11 PM ಗೆ. (ಒಪ್ಪಸಂಕೊಲೆ)
ಗುಣಾಜೆ ಭಾವ ಬೈಲಿಂಗೆ ಇಳುದ್ದು ನೋಡಿ ಸಂತೋಷ ಆತು! ಇದು ಕಾಲಕ್ಕೆ ತಕ್ಕ ಬದಲಾವಣೆ!! ಸ್ವಾಗತ!!!
ನಾವು “ಆ ಕಾಲವೊಂದಿತ್ತು, ಭವ್ಯವಾಗಿತ್ತು, ದಿವ್ಯವಾಗಿತ್ತು” ಹೇಳೆಂಡು ಕೂದರೆ ಆಗ! ಕಾಲಂದ ಕಾಲಕ್ಕೆ ಸಮಾಜಲ್ಲಿ ಬದಲಾವಣೆ ಸ್ವಾಭಾವಿಕ. ಮದಲೆ ಬದಲಾವಣೆ ನಿದಾನ; ಈಗ ಹಾಂಗಲ್ಲ. ಕಳುದ ೫-೧೦ ವರ್ಷಲ್ಲಿ ಆದಷ್ಟು ಬದಲಾವಣೆ ಅದರಿಂದ ಮದಲಾಣ ಐವತ್ತು ವರ್ಷಲ್ಲಿ ಆಯಿದಿಲ್ಲೆ! ಇದು ಬರೇ ಹವ್ಯಕ ಸಮಾಜದ ಕತೆ ಅಲ್ಲ. ಬದಲಾವಣೆಲಿ ಒಳ್ಳೆದೂ ಇಕ್ಕು, ಹಾಳೂ ಇಕ್ಕು. ಅದರ ಸರಿ ದಾರಿಲಿ ಹೋಪ ಹಾಂಗೆ ನೋಡ್ಯೊಂಬದು ಹೇಂಗೆ? ಸರಿ ದಾರಿ ಹೇಳಿದರೆ ಯಾವದು? ಒಳ್ಳೆದು ಯಾವದು, ಕೆಟ್ಟದು ಯಾವದು? ಆರು ಹೇಳೆಕು? ಜಗತ್ತೇ ಭಾರೀ ಸ್ಪೀಡಿಲ್ಲಿ ಬದಲಪ್ಪಗ, ಅದರ ಪ್ರಭಾವವ ತಡವದು ಸುಲಭ ಅಲ್ಲ; ಅಲ್ಲದೋ?
“ನಾಣಜ್ಜೆರ್ ಸುದೆ ತಿರ್ಗಾಯೆರ್” ಹೇಳಿ ನೇತ್ರಾವತಿಯ ಬೇಕಾದ ಹಾಂಗೆ ತಿರುಗಸಲೆ ಎಡಿಗೋ? ಹಾಂಗೆ ಹೇಳಿ “ಗುಂಪಿಲ್ಲಿ ಗೋವಿಂದಾ” ಹೇಳೆಕೋ? ಉತ್ತರ ಸುಲಭ ಅಲ್ಲ!
[ಉತ್ತರುಸಿ]
ಹೊತ್ತುವೇಳೆ: 2 December,2011ರ 8:50 PM ಗೆ. (ಒಪ್ಪಸಂಕೊಲೆ)
ಹರೇ ರಾಮ ಮಾವ,
ಪುನ: ಇದೇ ಸ್ಪೀಡಿಲ್ಲಿ ಜಗತ್ತು ಬದಲಕ್ಕು. ಕೆಲವು ಮಂದಿ ಕೆಚ್ಹೆದೆಯವು ಪೇಟೆಲ್ಲಿ ಹೊಟ್ಟೆ ತುಂಬಿದವು… ಹಳ್ಳಿಲ್ಲಿ ಬಂದು ಸಾಧಿಸಿ ತೋರುಸುಲೇ ಎಡಿಗಾದವು ಬೇಕು ಅಷ್ಟೇ. ಅರೋಗ್ಯ ನೆಮ್ಮದಿಯ ಜೀವನ ಆರಿಂಗೆ ಇಷ್ಟ ಇಲ್ಲದ್ದು ಹೇಳಿ… ಅವರ ಸಾಧನೆಯ ನಮ್ಮ ಹಾಂಗೆ ಅರೋಗ್ಯ ನೆಮ್ಮದಿಯ ಜೀವನಲ್ಲಿ ಆಸಕ್ತಿ ಇಪ್ಪವು ಇಂಟರ್ನೆಟ್ ಲಿ ಪ್ರಚಾರ ಮಾಡಿರೆ ಸಾಕು… ತನ್ನಷ್ಟಕ್ಕೆ ಗುಂಪಿನಲ್ಲಿ ಗೋವಿಂದ ಹೇಳುವ ಹೊಸ ಗುಂಪೊಂದು ಬೆಳೆತ್ತಾ ಹೋವುತ್ತು…
[ಉತ್ತರುಸಿ]
ಹೊತ್ತುವೇಳೆ: 3 December,2011ರ 10:33 AM ಗೆ. (ಒಪ್ಪಸಂಕೊಲೆ)
ಅಕ್ಕೋ,
ನಮ್ಮಲ್ಲಿ ಕೆಚ್ಚೆದೆಯವು ಇಲ್ಲೆ ಹೇಳಿದ್ದಾರು ನಿಂಗೊಗೆ? ಹಾಂಗಿಪ್ಪವು ಇಲ್ಲದ್ದೇ ಈ ಬಯಲು ಸುರುವಾದ್ದದೋ?,
ಹಾಂಗೇ ಪೇಟೆಲಿ ಹೊಟ್ಟೆ ತುಂಬಿದವು ಊರಿಂಗೆಬಂದು ಎಂತಾರು ಮಾಡ್ಲೆ ಹೆರಟ್ರೆ ನಮ್ಮವು ಎಂತಾಳಿ ಹೇಳುಗು ? ಅವನೋ, ಅವ ಮೂಗಿಲಿ ಉಂಬಜಾತಿ ಅವಂಗೆಂತಾಯೆಕ್ಕು ಅವಹೇಳಿದಾಂಗೆ ನಾವುಮಾಡ್ಲೆ ಹೆರಟ್ರೆ ಹೇಂಗಪ್ಪದು ಹೇಳಿ ಅಲ್ಲದೋ , ಜಗತ್ತಿನ ಬದಲಾವಣೆ ಸ್ಪೀಡಿಲಿ ಆಯೆಕ್ಕಾದ್ದು ಅಪ್ಪು ಹಾಂಗೇಳಿ ನಮ್ಮತನವ ಬಿಟ್ರೆ ಅದು ಹೇಂಗಕ್ಕು? ಈ ನೆಮ್ಮದಿ ಹೇಳ್ತದು ನಾವು ಕಂಡುಗೊಂಡಾಂಗಿಪ್ಪದು ಅಲ್ಲದೋ,
ನವಗೆ ಬೇಕಾದ್ದದು ಗುಂಪಿನಲ್ಲಿ ಗೋವಿಂದಾ ಹೇಳುವವೋ ಅಲ್ಲಾ ಆ ಗುಂಪಿನ ಕಟ್ಟುವವೋ? , ಕಷ್ಟ ಅಲ್ಲದೋ…..?
[ಉತ್ತರುಸಿ]
ಹೊತ್ತುವೇಳೆ: 3 December,2011ರ 10:45 AM ಗೆ. (ಒಪ್ಪಸಂಕೊಲೆ)
ಹರೇ ರಾಮ,
ಕೆಚ್ಹೆದೆಯವು ಸುಮಾರು ಜೆನ ಇಪ್ಪ ಕಾರಣವೇ ಅಲ್ಲದೋ ಗುರುಗೊಕ್ಕೆ ಈ ಬೈಲು ಹೇಳಿರೆ ಅತಿಯಾದ ಪ್ರೀತಿ…
ಯಾವುದೇ ಕೆಲಸ ಆದರೂ ಸುರು ಮಾಡುವಗ ಇದು ಸಾಧ್ಯ ಅಪ್ಪಲಿಲ್ಲೇ… ಹೇಳಿ ಮೂಗು ಮುರಿವವೇ ಜಾಸ್ತಿ… ಅದರ ಮೀರಿ ಪ್ರಯತ್ನಿಸಿ ಸಾಧಿಸಿ ತೋರ್ಸುವುದಕ್ಕೆ ಅಲ್ಲದ ಕೆಚ್ಚೆದೆ ಹೇಳುದು?
“ಜಗತ್ತಿನ ಬದಲಾವಣೆ ಸ್ಪೀಡಿಲಿ ಆಯೆಕ್ಕಾದ್ದು ಅಪ್ಪು ಹಾಂಗೇಳಿ ನಮ್ಮತನವ ಬಿಟ್ರೆ ಅದು ಹೇಂಗಕ್ಕು? ”
ನಮ್ಮತನ ಒಳಿಶೆಕ್ಕಾದ್ದು… ಬಿಡುದು ಎಂತಕೆ ಹೇಳಿ ಗೊಂತಾಯಿದಿಲ್ಲೇ…
[ಉತ್ತರುಸಿ]
ಹೊತ್ತುವೇಳೆ: 3 December,2011ರ 10:50 AM ಗೆ. (ಒಪ್ಪಸಂಕೊಲೆ)
ಅಕ್ಕೋ,ಆನುದೇ ನಮ್ಮತನವ ಒಳುಶೆಕ್ಕು ಹೇಳುವವನೆ ಬಿಡೆಕ್ಕು ಹೇಳುವವ ಖಂಡಿತಾಅಲ್ಲ.
[ಉತ್ತರುಸಿ]
ಹೊತ್ತುವೇಳೆ: 3 December,2011ರ 10:58 AM ಗೆ. (ಒಪ್ಪಸಂಕೊಲೆ)
ಹರೇ ರಾಮ,
ಗುಂಪಿನಲ್ಲಿ ಗೋವಿಂದ ಹೇಳುವ ಹೊಸ ಗುಂಪಿನ ಕುಟ್ಟುವ ಉದ್ದೇಷಲ್ಲಿಪ್ಪ ನಿಂಗಲೋತ್ಟಿಂಗೆ ಆನೂ ಸೇರೆಕ್ಕ?
[ಉತ್ತರುಸಿ]
ಹೊತ್ತುವೇಳೆ: 3 December,2011ರ 10:17 AM ಗೆ. (ಒಪ್ಪಸಂಕೊಲೆ)
ಅಪ್ಪು ಮಾವಾ, ಉತ್ತರ ಸುಲಭದ್ದಂತೂ ಅಲ್ಲವೇ ಅಲ್ಲ .
ಅಂದು ನಾಣಜ್ಜೆರ್ ಸುದೆ ತಿರ್ಗಾಯೆರ್ ಹೇಳುವವು ಇತ್ತಿದ್ದವು ಆದರೆ ಇಂದು ಸುದೆ ಅದರಷ್ಟಕೆ ನೀರುಹರಿವಗ ಅಗಲಆದರುದೇ ಯಾನೇ ಸುದೆ ಅಗೆಲಮಲ್ತಿನಿ ಹೇಳುವವರ ಸಂಖ್ಯೆಯೇ ಜಾಸ್ತಿಆಯಿದಲ್ಲದೋ? ಹಾಂಗಾಗಿ ಹರಿವಸುದೆಯ ದಾಂಟುಲೆ ನೀರ ಒಯಿಲನ್ನುದೇ ಉಪಯೋಗುಸಿ ಗೊಂಡು ಒಯಿಲಿಂಗೆ ಸಿಕ್ಕದ್ದೆ ಹೊಳೆ ದಾಂಟಿಕ್ಕಿ ಗೋವಿಂದಾ ಹೇಳುದು ಬುದ್ದಿವಂತಿಕೆ ಅಲ್ಲದೋ..?
ನಿನ್ನ ನೀನು ಮರೆತರೇನು ಸುಖವಿದೇ ತನ್ನ ತನವ ತೊರೆದರೇನು ಸೊಗಸಿದೇ ಈಪದ್ಯ ಸ್ವಲ್ಪ ಹಳತ್ತಾದರೂ ಇಂದಿಂಗೂ ಪ್ರಸ್ತುತ ಅಲ್ಲದೋ…?
[ಉತ್ತರುಸಿ]
ಹೊತ್ತುವೇಳೆ: 6 December,2011ರ 7:28 AM ಗೆ. (ಒಪ್ಪಸಂಕೊಲೆ)
ಹರೇ ರಾಮ ಪ್ರಸಾದಣ್ಣ,
ಇದು ವೈಯುಕ್ತಿಕವಾಗಿ ನಿಂಗೊಗೆ ಹೇಳುತ್ತಾ ಇಪ್ಪದು ಅಲ್ಲ… “ನೀನು ನಿನ್ನ ಮರೆತರೇನು ಸುಖವಿದೆ…” ಕುರಿತು ಜನರಲ್ ಆಗಿ ಹೇಳುತ್ತಾ ಇಪ್ಪದು…
“ನಮ್ಮತನಕ್ಕಾಗಿ ತನ್ನತನವ ತೊರೆದರೆ ಅದರಲ್ಲಿ ನಿಜವಾಗಿಯೂ ತುಂಬಾ ತುಂಬಾ ಸುಖ ಇದ್ದು”
“ತನ್ನತನವ ಬಿಡದೆ ಮೊಗ್ಗು ಅರಳಿ ಹೂವಾಗುವುದೆಂತು…”
ಒಂದು ಸಣ್ಣ ಉದಾಹರಣೆ ಕೊಡುತ್ತೆ. ಮನೆಯವರೆಲ್ಲರ ಸುಖಕ್ಕೆ ಬೇಕಾಗಿ ನಾವು ಎಂತಾದರೊಂದು ತ್ಯಾಗ ಮಾಡಿರೆ ಅದರಲ್ಲಿ ಎಷ್ಟೊಂದು ಆನಂದ,ತೃಪ್ತಿ ಇದ್ದು ಅಲ್ಲದ?
[ಉತ್ತರುಸಿ]
ಹೊತ್ತುವೇಳೆ: 6 December,2011ರ 9:19 AM ಗೆ. (ಒಪ್ಪಸಂಕೊಲೆ)
ಅಕ್ಕೋ,
ವೈಚಾರಿಕವಾಗಿ ನೋಡಿತ್ತುಕಂಡ್ರೆ ಪ್ರಕ್ರುತಿಗೂ ಸಂಸ್ಕ್ರುತಿಗೂ ತುಂಬಾ ವ್ಯತ್ಯಾಸ ಇದ್ದನ್ನೇ?
ನಿಂಗೊ ಕೊಟ್ಟ ಉದಾಹರಣೆ ನಿಂಗಳ ವೈಯುಕ್ತಿಕ ಅಭಿಪ್ರಾಯಆದಿಕ್ಕು , ಏನೇ ಹೇಳಿದರುದೇ ಚೆ ಅವಕ್ಕೆಬೇಕಾಗಿ ಆನುತ್ಯಾಗಮಾಡಿದ್ದು ಹೇಳುವಕೊರಗು ಹೆಚ್ಚಿನವರಲ್ಲಿ ಇದ್ದೇಇರ್ತು ಅಲ್ಲದಾ….?
[ಉತ್ತರುಸಿ]
ಹೊತ್ತುವೇಳೆ: 6 December,2011ರ 10:36 AM ಗೆ. (ಒಪ್ಪಸಂಕೊಲೆ)
ಅನುಭವಂದ ಹೇಳುತ್ತಾ ಇದ್ದೆ… ನಿಜವಾಗಿಯೂ ಮನೆಯವರ ಮೇಲೆ ಪ್ರೀತಿಗೋಸ್ಕರ ತ್ಯಾಗ ಮಾಡಿದ್ದರೆ ಅದು ತ್ಯಾಗಕ್ಕಿಂತ ಎಷ್ಟೋ ಮಹತ್ತರವಾದ್ದದರ ನಮಗೆ ತಂದು ಕೊಡುತ್ತು… ನಿಜವಾಗಿಯೂ ಪ್ರೀತಿ ಇದ್ದು ಹೇಳಿ ಆದರೆ ಆ ಮಹತ್ತರವಾದು ಸಿಕ್ಕುವವರೆಗೂ “ಛೆ! ಅವಕ್ಕೋಸ್ಕರ ತ್ಯಾಗ ಮಾಡಿದನ್ನೇ” ಹೇಳಿ ಅನ್ನಿಸುಲೇ ಸಾಧ್ಯವೇ ಇಲ್ಲೆ… ನಿಜವಾದ ಪ್ರೀತಿಗೋಸ್ಕರ ತ್ಯಾಗ ಮಾಡಿದ ಆರತ್ರೆ ಬೇಕಾರೂ ಕೇಳಿ…
[ಉತ್ತರುಸಿ]
ಹೊತ್ತುವೇಳೆ: 7 December,2011ರ 8:02 AM ಗೆ. (ಒಪ್ಪಸಂಕೊಲೆ)
ಹರೇ ರಾಮ ಪ್ರಸಾದಣ್ಣ,
“ಅಂದು ನಾಣಜ್ಜೆರ್ ಸುದೆ ತಿರ್ಗಾಯೆರ್ ಹೇಳುವವು ಇತ್ತಿದ್ದವು ಆದರೆ ಇಂದು ಸುದೆ ಅದರಷ್ಟಕೆ ನೀರುಹರಿವಗ ಅಗಲಆದರುದೇ ಯಾನೇ ಸುದೆ ಅಗೆಲಮಲ್ತಿನಿ ಹೇಳುವವರ ಸಂಖ್ಯೆಯೇ ಜಾಸ್ತಿಆಯಿದಲ್ಲದೋ?”
ನಿಂಗ ಹೇಳಿದ್ದು ತುಂಬಾ ಸರಿ. ಸುದೆ ಯಾವತ್ತೂ ಪರಮಾತ್ಮನ ಇಚ್ಚೆಯಂತೆ ಹರಿತ್ತಾ ಇರುತ್ತು. ಒಂದು ವೇಳೆ ನಾರಾಯಣಜ್ಜನ ಹಾಂಗಿಪ್ಪವು ತಿರುಗಿಸಿದ ಹಾಂಗೆ ಕಂಡರೂ ‘ಕೃಷ್ಣನ ಬಳಿಯ ಅರ್ಜುನ’ ನ ಹಾಂಗೆ ಅವ ನಿಮಿತ್ತ ಮಾಂತ್ರ. ಆನೆ ತಿರುಗಿಸಿದ್ದು ಹೇಳಿ ಎಣಿಸುವವಂಗೆ ಮಾಂತ್ರ ತೊಂದರೆ.
[ಉತ್ತರುಸಿ]
ಹೊತ್ತುವೇಳೆ: 7 December,2011ರ 1:46 PM ಗೆ. (ಒಪ್ಪಸಂಕೊಲೆ)
‘ಕೃಷ್ಣನ ಬಳಿಯ ಅರ್ಜುನ’ ಹೇಳಿರೆ ಈಗಣ ಕಾಲದವಕ್ಕೆ ಗೊಂತಾಗ… ‘ಗುರುಗಳ ಬಳಿಯ ಪ್ರಸಾದ’ ಅಥವಾ ‘ಗುರುಗಳ ಬಳಿಯ ಒಪ್ಪಣ್ಣ’ ಹೇಳಿರೆ ಸುಲಭಲ್ಲಿ ಅರ್ಥ ಅಕ್ಕು !!!
[ಉತ್ತರುಸಿ]
ಹೊತ್ತುವೇಳೆ: 9 December,2011ರ 9:17 PM ಗೆ. (ಒಪ್ಪಸಂಕೊಲೆ)
ಎಲೋಶಿಯಸ್ ಕಾಲೇಜಿಲ್ಲಿ ಎನಗೆ ಅರ್ಥ ಶಾಸ್ತ್ರವ ಕಲಿಸಿದ ಗುರು ನಿಂಗೊ.
ನಿಂಗಳ ವಿಮರ್ಶೆಗೆ ಧನ್ಯವಾದಂಗೊ
[ಉತ್ತರುಸಿ]
ಬೈಲಿ೦ಗೆ ಉದಯೋನ್ಮುಖ ಬರಹಗಾರರಾದ ಗುಣಾಜೆ ರಾಮಚ೦ದ್ರ ಭಟ್ ಇವಕ್ಕೆ ಸ್ವಾಗತ…
ಎಲ್ಲ ಕವನಂಗಳೂ ತುಂಬಾ ಲಾಯಕ ಇದ್ದು ಹೇಳಿ ಒಂದು ಒಪ್ಪ…
ಹವಿಕರ ಹೆಗ್ಗಳಿಕೆ ತುಂಬಾ ಇಷ್ಟ ಆತು…
“ಅಂದಿನ ಹವ್ಯಕರ ತಪಸ್ಸು ಕಾರಣವಾಗಿದೆ
ಇಂದಿನ ಹೆಗ್ಗಳಿಕೆಗೆ…
ಇಂದು ನಾವು ತಪಸ್ಸು ಮಾಡಬೇಕಾಗಿದೆ
ನಮ್ಮತನದ ಉಳಿಕೆಗೆ… “
[ಉತ್ತರುಸಿ]
ಹೊತ್ತುವೇಳೆ: 2 December,2011ರ 9:17 PM ಗೆ. (ಒಪ್ಪಸಂಕೊಲೆ)
ಆನು ಮೊದಲು ಬರದ ಚುಟುಗಳ ಮೆಚ್ಚುಗೆ ನಿಂಗಳಿಂದ ಬಂದದು ನೋಡಿ ಕೊಶಿ ಆಗಿ ಇನ್ನೂ ಬರವಲೆ ಉಮೇದು ಕೊಟ್ಟಿದು
ಧನ್ಯವಾದಂಗೊ
[ಉತ್ತರುಸಿ]
ಗುಣಾಜೆ ಭಾವಂಗೆ ಸ್ವಾಗತ. ಕವನ ಲಾಯಕ ಆಯ್ದು ಹೇಳಿ ಇತ್ಲಾಗಿಂದ ಒಪ್ಪ.
[ಉತ್ತರುಸಿ]
ಹೊತ್ತುವೇಳೆ: 2 December,2011ರ 9:18 PM ಗೆ. (ಒಪ್ಪಸಂಕೊಲೆ)
ನಮ್ಮತನದ ಉಳಿಕೆಗೆ ನಿಂಗಳ ಕರೆ ಕಾಲೋಚಿತ.
ಧನ್ಯವಾದಂಗೊ
[ಉತ್ತರುಸಿ]
ಗುಣಾಜೆ ಭಾವ೦ಗೆ ಸ್ವಾಗತ.
ಕೃಷಿ,ಹವ್ಯಕವ್ಯ ಬಿಟ್ಟು ನವ್ಯಲ್ಲಿಯೂ ಹೆಸರು ಪಡೆತ್ತಾ ಇದ್ದವು ಹೇಳುವ ಚುಟುಕು ಕಾವ್ಯ ಲಾಯ್ಕ ಆಯಿದು.
ಒಳುದ್ದದು ಕಾಲಕ್ಕೆ ತಕ್ಕ೦ತೆಯೇ ಸರಿ..ಮಾಡುದೆ೦ತರ?
[ಉತ್ತರುಸಿ]
ಹೊತ್ತುವೇಳೆ: 2 December,2011ರ 9:21 PM ಗೆ. (ಒಪ್ಪಸಂಕೊಲೆ)
ಆನು ಬರದ ಚುಟುಕುಗಳ ಓದಿ, ಇನ್ನುದೆ ಬರವಲೆ ಬೆಂಬಲ ಕೊಡ್ತಾ ಇಪ್ಪ ನಿಂಗೊಗೆ ಆಭಾರಿ
ಧನ್ಯವಾದಂಗೊ
[ಉತ್ತರುಸಿ]
ಹವಿಗನ್ನಡಲ್ಲಿ ಚುಟುಕುಗೋ ಒಳ್ಳೆದಿದ್ದು.
[ಉತ್ತರುಸಿ]
ಹೊತ್ತುವೇಳೆ: 2 December,2011ರ 9:23 PM ಗೆ. (ಒಪ್ಪಸಂಕೊಲೆ)
ಹವಿಗನ್ನಡಲ್ಲಿ ಇದು ಎನ್ನ ಮೊದಲ ಪ್ರಯತ್ನ.ನಿಂಗಳ ಪ್ರೋತ್ಸಾಹ ಎನಗೆ ಹೆಚ್ಚಿನ ಬಲ ಕೊಡ್ತಾ ಇದ್ದು
ಧನ್ಯವಾದಂಗೊ
[ಉತ್ತರುಸಿ]
ಗುಣಾಜೆ ಭಾವಂಗೆ ಸ್ವಾಗತ.
ಒಳ್ಳೆಯ ಪ್ರಯತ್ನ.. ಮುಂದುವರಿಯಲಿ..
[ಉತ್ತರುಸಿ]
ಹೊತ್ತುವೇಳೆ: 9 December,2011ರ 9:12 PM ಗೆ. (ಒಪ್ಪಸಂಕೊಲೆ)
ಧನ್ಯವಾದಂಗೊ
[ಉತ್ತರುಸಿ]
ರಾಮ ರಾಮ..>
[ಉತ್ತರುಸಿ]
ಸ್ವಾಗತ ಮಾವಾ…
[ಉತ್ತರುಸಿ]
ಹೊತ್ತುವೇಳೆ: 9 December,2011ರ 9:12 PM ಗೆ. (ಒಪ್ಪಸಂಕೊಲೆ)
ಧನ್ಯವಾದಂಗೊ ಮಂಗ್ಳೂರು ಮಾಣಿಗೆ
[ಉತ್ತರುಸಿ]
ಹವಿಗನ್ನಡದ ಹನಿಗವನಂಗೊ ಜೇನು ಹನಿಯ ಹಾಂಗೆ ಸಿಹಿ ಸಿಹಿಯಾಗಿ ಇದ್ದು.
[ಉತ್ತರುಸಿ]
ಹೊತ್ತುವೇಳೆ: 9 December,2011ರ 9:15 PM ಗೆ. (ಒಪ್ಪಸಂಕೊಲೆ)
[ಜೇನು ಹನಿಯ ಹಾಂಗೆ ಸಿಹಿ ಸಿಹಿಯಾಗಿ ಇದ್ದು.]-ಈ ಸಿಹಿ ಮಾತುಗೊಕ್ಕೆ ಧನ್ಯವಾದಂಗೊ. ಬರೆವ ಎನ್ನ ಪ್ರಯತ್ನ ಮುಂದುವರಿಸುತ್ತೆ
[ಉತ್ತರುಸಿ]
ದಕ್ಷಿಣ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿಲ್ಲಿ ಕಂಚಿನ ಕಂಠಲ್ಲಿ ರಾಗವಾಗಿ ನಿಂಗೊ ಓದಿದ ಹಲವಾರು ಕವನಂಗಳ ಸವಿದವರಲ್ಲಿ ಆನೂ ಒಬ್ಬ°. ಈಗ ನಮ್ಮ ಬೈಲಿಂಗೆ ಬಂದು ನಮ್ಮ ಭಾಷೆಲಿ ಚೆಂದಕೆ ಕವನಂಗಳ ಕೊಟ್ಟದು ಲಾಯಕಾತದ. ಬೈಲಿಂಗೆ ಸ್ವಾಗತ.
[ಉತ್ತರುಸಿ]
ಹೊತ್ತುವೇಳೆ: 9 December,2011ರ 9:20 PM ಗೆ. (ಒಪ್ಪಸಂಕೊಲೆ)
ಬೈಲಿಂಗೆ ಸ್ವಾಗತಿಸಿದ್ದಕ್ಕೆ, ಕಂಚಿನ ಕಂಠ ಹೇಳಿ ಪ್ರಶಂಸಿದ್ದಕ್ಕೆ ಎದೆ ತುಂಬಿದ ಧನ್ಯವಾದಂಗೊ
[ಉತ್ತರುಸಿ]
ರಾಮಚಂದ್ರಣ್ಣಂಗೆ ಸ್ವಾಗತ.ನಿಂಗಳ ಕವನ ಓದುವಗ ನೀರ್ಚಾಲಿಲ್ಲಿ ಶಾಲೆಯ ಗಾಯತ್ರಿ ಗೋಡೆ ಪತ್ರಿಕೆಲಿ ನಿಂಗಳ ಪದ್ಯಂಗಳ ಓದಿದ ನೆಂಪಾತು.ಸಾಮಾಜಿಕ ಸಂದಿಗ್ಧತೆಗೊ ಎತ್ತಿ ತೋರಿಸಿದ್ದಿ!ಈಗ ತಾನೆ ಆನು ಓದಿದ ನಾಲ್ಕು ಸಾಲುಗೊ-
Before 15 Years …
Parents Wanted Their GIRL To Get Married To A Good BOY …
Now A Days …
Parents Wants Their BOY To Get Married To A Good GIRL …
HIT LIKE IF U AGREE … o.O
ಲೋಕ ಹೇಂಗೆ ಬದಲಾಯಿದು!! ಇನ್ನೂ ಮಾರ್ಮಿಕ ಚಿಂತನೆಗೊ ನಿಂಗಳ ಲೇಖನಿಂದ ಬರಳಿ ಹೇಳಿ ಆಶಿಸುತ್ತೆ
[ಉತ್ತರುಸಿ]
ಎನ್ನ ಹವಿಗನ್ನಡದ ಚುಟುಕುಗಳ ಓದಿ ವಿಮರ್ಶಿಸಿ ಪ್ರಶಂಸಿಸಿದ್ದಕ್ಕೆ ಆತ್ಮೀಯ ಪಾಂಡೇಲು ಶಂಕರಂಗೆ ಸ್ವಾಗತ, ಧನ್ಯವಾದ. ಆನು ನಲವತ್ತೆರಡು ವರ್ಷ ಹಿಂದೆ ನೀರ್ಚಾಲು ಶಾಲೆಯ ಗೋಡೆ ಪತ್ರಿಕೆ, ಗಾಯತ್ರಿಲ್ಲಿ ಬರೆದ ಹನಿಗವನಗಳ ಗುರ್ತಿಸಿ ನೆಂಪಿಸಿದ್ದಕ್ಕೆ ಮೌಲಿಕವಾಗಿ ಇನ್ನೂ ಬರವಲೆ ಪ್ರೋತ್ಸಾಹ ಕೊಟ್ಟದ್ದು ಭಾರೀ ಕುಶಿ ಆತು. ಧನ್ಯವಾದಂಗೊ.
[ಉತ್ತರುಸಿ]
ಹೊತ್ತುವೇಳೆ: 25 December,2011ರ 7:43 AM ಗೆ. (ಒಪ್ಪಸಂಕೊಲೆ)
ಚಂದ್ರಮಾವ!!
ಹೆಸರು ಲಾಯಿಕ್ಕಿದ್ದು,ಆದರೆ ಆನು ಇನ್ನೂ ಆತ್ಮೀಯವಾಗಿ ರಾಮಚಂದ್ರಣ್ಣ ಹೇಳಿಯೇ ಹೇಳುತ್ತೆ!!
[ಉತ್ತರುಸಿ]
ಹೊತ್ತುವೇಳೆ: 24 January,2012ರ 11:12 PM ಗೆ. (ಒಪ್ಪಸಂಕೊಲೆ)
ಚಂದ್ರ ಮಾವ ಹೇಳುವ ಎನ್ನ ಕಾವ್ಯನಾಮವ ಹೊಗಳಿ ಮೆಚ್ಚಿ ಆತ್ಮೀಯವಾಗಿ ರಾಮಚಂದ್ರಣ್ಣ ಹೇಳಿ ಹೇಳಿದ್ದು ಎನಗೆ ತುಂಬಾ ಸಂತೋಷ ಆತು
[ಉತ್ತರುಸಿ]