Oppanna.com

ಹೆತ್ತಬ್ಬೆ

ಬರದೋರು :   ರಾಜಣ್ಣ    on   16/11/2012    8 ಒಪ್ಪಂಗೊ

ರಾಜಣ್ಣ

ಎನ್ನ ಅಪ್ಪನ ಅಬ್ಬೆ ಈಗ ನಾಲ್ಕು ತಿಂಗಳ ಹಿಂದೆ ತೀರಿ ಹೋದವು. ಅವಕ್ಕೆ ಸುಮಾರು 95 ವರ್ಷ

ಎನ್ನ ಅಜ್ಜಿ ಸರಸ್ವತಿಅಮ್ಮ

ವಯಸ್ಸಾಗಿತ್ತು. ಕಳುದ ವರ್ಷದವರೆಗೂ ಇಡೀ ಮನೆಯ ಜವಾಬ್ದಾರಿ ವಹಿಸಿಗೊಂಡು, ಚುರುಕಿಲಿ ಓಡಾಡ್ಯೊಂಡು, ಮನೆ ನೆಡೆಶಿಗೊಂಡಿದ್ದ ಅಜ್ಜಿಯ ಎಂಗೊಗೆ ಮರವಲೆ ಎಡಿತ್ತಾ ಇಲ್ಲೆ.

ಎನ್ನ ಸೋದರತ್ತೆ ಹೇಮಾ.ಎನ್. ಭಟ್ ಪುಂಡಿಕಾಯಿ ನಾರಾಯಣ ಭಟ್ಟರ ಧರ್ಮಪತ್ನಿ. ಇಬ್ರೂ ಬೇಂಕಿಲಿ ಕೆಲಸಲ್ಲಿ ಇದ್ದು ಈಗ ನಿವೃತ್ತ ಜೀವನ ನಡೆಶುತ್ತಾ ಇದ್ದವು. ಬೆಂಗಳೂರಿನ ರಾಜರಾಜೇಶ್ವರಿ ನಗರಲ್ಲಿ ಮನೆ ಮಾಡ್ಯೊಂಡು ಅತ್ತೆ, ಎರಡು ಜನ ಮಗಂದಿರು, ಎರಡು ಜನ ಸೊಸೆಯಕ್ಕ,ಒಂದು ಪುಳ್ಳಿಯೊಟ್ಟಿಂಗೆ ಕೊಶಿಲಿ ಜೀವನ ಮಾಡ್ಯೊಂಡು ಇದ್ದವು. ಬೈಲಿಲಿ ಬರವಲೆ ಸುರುಮಾಡದ್ದರೂ ಆಗಾಗ ನಮ್ಮ ಬೈಲಿಂಗೆ ಬಂದು ಶುದ್ದಿಗಳ ಓದ್ಯೊಂಡು ಇದ್ದವು.

ಎನ್ನ ಸೋದರತ್ತೆ ಅಜ್ಜಿಯ ಬಗ್ಗೆ ಹೇದರೆ ಅವರ ಅಬ್ಬೆಯ ಬಗ್ಗೆ ಒಂದು ಪದ್ಯ ಬರದ್ದವು . ಮುಂದೊಂದು ದಿನ ತಾವೇ ಖುದ್ದಾಗಿ ಇಲ್ಲಿಗೆ ಬಂದು ಶುದ್ದಿ ಹೇಳುಗು ಹೇಳ್ತ ಸದಾಶಯಲ್ಲಿ ಅವರ ಪದ್ಯವ ಇಲ್ಲಿ ಬರೆತ್ತಾ ಇದ್ದೆ.

ಎನ್ನ ಸೋದರತ್ತೆ -ಮಾವ°
ಹೇಮಾ-ನಾರಾಯಣ ಭಟ್

ಕಳೆದು ಹೋದ ಅಬ್ಬೆನಿನ್ನ
ಎಲ್ಲಿ ಆನು ಹುಡುಕಲೀ…?
ತಿರುಗಿ ನೋಡದ್ದೋದೆ ನೀನು , ಎಂತಮಾಡಲಿ ॥

ನಿನ್ನ ದಾರಿ ನೋಡಿ ನೋಡಿ
ನೀನು ಬಪ್ಪೆ ಹೇಳಿ ಆನು
ಕಾದು ಕಾದು ಸೋತು ಹೋದೆ ಎನ್ನ ಮನಸಿಲೀ ॥

ನೀನು ಇದ್ದ ದಿನಂಗೊ ಎಲ್ಲಾ
ಕನಸಿನ್ಹಾಂಗೆ ಕಾಣುತ್ತೆನಗೆ
ನೆಂಪು ಆಗಿ ಬಂದೆ ನೀನು ಎನ್ನ ಮನಸಿಲೀ ॥

ನೀನೆ ಅಬ್ಬೆ ನೀನೆ ಅಪ್ಪ°
ನೀನೆ ಬಂಧು ನೀನೆ ಬಳಗ
ನೀನೆ ಎಲ್ಲ ಆಗಿ ಹೋದೆ ಎನ್ನ ಬದುಕಿಲೀ ॥

ನೀನೆ ಎನ್ನ ಮೊದಲ ಗುರು
ಅಂಬಗೆನ್ನ ಬದುಕು ಶುರೂ
ನಿನ್ನ ಹೇಂಗೆ ಮರೆಯಲಬ್ಬೆ ಎನ್ನ ಬಾಳಿಲಿ ॥

ನೀನು ಹಾಕಿಕೊಟ್ಟ ಹಾದಿ
ಆನು ನಡದು ಬಂದ ದಾರಿ
ನಿನ್ನ ಮರವದೆಂತು ಅಬ್ಬೆ ನೀನೆ ದೇವರೂ ॥

ಹೆತ್ತು ಹೊತ್ತು ಸಾಂಕಿ ನೀನು
ಮತ್ತೆ ಚಿತ್ತ ಶುದ್ಧಿ ಆನು
ತುತ್ತು ಕೊಟ್ಟ ನಿನ್ನ ಹೇಂಗೆ ಆನು ಮರೆಯಲಿ ॥

ಅಬ್ಬೆ ಎಂಬ ಎರಡು ಅಕ್ಷರ
ಜಪಿಸಿ ಎನ್ನ ಹೃದಯ ಶುದ್ಧ
ನಿನಗೆ ಅಲ್ಲಿ ಸ್ಥಾನ ಸಿದ್ಧ ಅದುವೆ ಎನ್ನ ಭಾಗ್ಯವೂ ॥

ಎನ್ನ ತನು ಮಾಂಸ ಮಜ್ಜೆ
ನೀನೇ ಕಟ್ಟಿದ ಗೋಪುರ
ಅಲ್ಲಿ ನಿನ್ನ ನೆಂಪಿನುಸಿರೇ ಜೀವವದುವೆ ಶಾಶ್ವತ ॥

8 thoughts on “ಹೆತ್ತಬ್ಬೆ

  1. ಅತ್ತೇ..ಬೈಲಿ೦ಗೆ ಸ್ವಾಗತ.
    ಭಾವಪೂರ್ಣ ಕವಿತೆ.
    ಹೊತ್ತು,ಹೆತ್ತು,ತುತ್ತು ಕೊಟ್ಟು ಬೆಳೆಶಿದ ಅಬ್ಬೆಯ ನೆನಪ್ಪು ಸದಾ ಹಸಿಯಾಗಿರಲಿ.ಅವರ ಆತ್ಮಕ್ಕೆ ಸದ್ಗತಿ ಸಿಕ್ಕಲಿ ಹೇಳಿ ಆಶಯ.

  2. ಮಗಳಿಂದ ಅಬ್ಬೆಗೆ ಹೃದಯಸ್ಪರ್ಶಿ ಶ್ರದ್ಧಾಂಜಲಿ.
    ಲಾಯಿಕ ಆಯಿದು.

  3. ಹೆತ್ತಬ್ಬೆ ಮೇಗಾಣ ಪ್ರೀತಿ ಹೃದಯಸ್ಪರ್ಶಿಯಾಗಿ ಮೂಡಿ ಬೈಂದು, ರಜಾ ಭಾವಪೂರ್ಣವಾಗಿ ಓದಿಯಪ್ಪಗ ಕಂಠ ಗದ್ಗದಿತ ಆತು ಹೇದು ಹೇಳುವದೀಗ ನಮ್ಮ ಒಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×