ಬರದೋರು :   ಗೋವಿಂದ ಮಾವ, ಬಳ್ಳಮೂಲೆ    on   03/01/2012    11 ಒಪ್ಪಂಗೊ

ವರ್ಷ …ವರ್ಷ….
ಕಳುದರೂ ….
ಮತ್ತೊಂದಾರಿ ..
ಹೊಸವರ್ಷ ..ಬತ್ತಾ ..ಇದ್ದು ..

ಕಾಲದ ..ಹಕ್ಕಿ ..
ಎಲ್ಲಾ ..ದಾಂಟಿ ..ದಾಂಟಿ ..
ಕೊನೆ ..ಇಲ್ಲದ್ದೆ ..ಅನಂತ ..
ದೂರ ..ದೂರಕ್ಕೆ..
ಹಾರಿಂಡು ..ಹಾರಿಂಡು .
ಮುಂದೆ ..ಮುಂದೆ ..
ಹೊವುತ್ತಾ ಇದ್ದು ..

ಕಿಚ್ಚು ಧಗ ಧಗಿಸಿಂಡು ಎತ್ತರ ಎತ್ತರ ಹೊತ್ತುವಾಗ
ಬೆಣಚ್ಚು ಎಲ್ಲಾ ದಿಕ್ಕೂ ಹರಡುತ್ತ ಹಾಂಗೆ ಸದ್ವಿಚಾರಂಗೋ ಹರಡಲಿ .
ಹಾಂಗೆ ಕಿಚ್ಚು ಹೊತ್ತಿ ಉರುದು ಬೂದಿ ಅಪ್ಪ ಹಾಂಗೆ ನಕಾರಾತ್ಮಕತೆ ಭಾಸ್ಮವಾಗಿಯೆ ಹೋಗಲಿ
ಆ ಜಗನ್ಮಾತೆ ಎಲ್ಲೋರನ್ನೂ ಕಾಯಲಿ
ನಿಂಗಳ ಎಲ್ಲೋರಾ ಒಟ್ಟಿಗೆ

– ಗೋವಿಂದಬಳ್ಳಮೂಲೆ

11 thoughts on “ಹೊಸ ವರ್ಷ

  1. ಕಾಲದ ಹಕ್ಕಿ ಹಾರುತ್ತಾ ಇದ್ದು…ನಾವು ಹಳತ್ತಾವುತ್ತಾ ಇದ್ದೆಯೊ….ಕಾಲ ಮಾತ್ರ ದಿನಾಲೂ ಹೊಸತ್ತೇ…

  2. ಗೋವಿಂದಣ್ಣಂಗೆ ಸ್ವಾಗತ.
    ಎರಡು ಕವನಂಗಳೂ ಲಾಯಿಕ ಆಯಿದು
    ಧನ್ಯವಾದಂಗೊ

  3. ನಿಂಗಳ ಎಲ್ಲೋರಾ ಒಳ ಭಗವಂತ ಇದ್ದ..!! ನಿಂಗಳ ಮಾತುಗೊಕ್ಕೆ ದೇವ ಭಾವ ಇದ್ದು .ಹಾಂಗಾದ ಕಾರಣ ಕೃತಜ್ಞತೆ ಹೇಳುವ ಬದಲು “ಆನು ಧನ್ಯ ” ಹೇಳಿ ಹೇಳುತ್ತೆ ಆಗದೋ ..??

  4. ನಕರಾತ್ಮಕತೆ (ನಮ್ಮ ಮನಸ್ಸಿಂದ, ಮನೆಂದ,ಬೈಲಿಂದ,ದೇಶಂದ…) ಭಸ್ಮವಾಗಿ ಹೋಗಲಿ… ಸದ್ವಿಚಾರಂಗ ಎಲ್ಲೆಲ್ಲೂ ಹರಡಲಿ… ಜಗನ್ಮಾತೆ ಎಲ್ಲೋರಾ ಕಾಯಲಿ… ಎಷ್ಟು ಒಳ್ಳೆಯ ಪ್ರಾರ್ಥನೆ… ನಿಂಗ ತುಂಬಾ ಅರ್ಥಗರ್ಭಿತವಾದ ಪದ್ಯಂಗಳ ಬರೆತ್ತಿ… ತುಂಬಾ ಖುಷಿ ಆವುತ್ತು… 🙂

  5. ಹವಿಗನ್ನಡಲ್ಲಿ ಬರದ ಪದ್ಯ ಲಾಯಿಕ್ಕಿದ್ದು, ಇನ್ನುದೇ ಹೀಂಗಿಪ್ಪ ಪದ್ಯಂಗಳ ಅಪೇಕ್ಷೆ ಮಾಡ್ತೆಯೊ°

  6. “ನಕಾರಾತ್ಮಕತೆ ಭಸ್ಮವಾಗಲಿ” — ಒಳ್ಳೆ ಸ೦ದೇಶ ಮಾವ.

  7. ಬಳ್ಳಮೂಲೆ ಮಾವ, ಲಾಯಕ ಆಯ್ದು.

    ಇನ್ನೂ ಸುಮಾರು ನಿಂಗಳಿಂದ ಅಪೇಕ್ಷೆ ಪಡುತ್ತು. ಶಾಲಗೆ ರಿಟೈರ್ಡ್ ಆದರೂ ನಮ್ಮ ಬೈಲಿಂಗೆ ರಿಟೈರ್ಡೂ ಇಲ್ಲೆ ಟೈರ್ಡೂ ಇಲ್ಲೆಡಾ! (ಮಾಷ್ಟ್ರುಮಾವ ಹೇಳಿದ್ದು) .

  8. ಬಳ್ಳಮೂಲೆ ಮಾವನ ಹುಂಡುಪದ್ಯ ಲಾಯಿಕಿದ್ದು.
    ಇದೇ ನಮುನೆ ಯುಗಾದಿಗೆ ಒಂದು ಬರದಿಕ್ಕಿ; ಇನ್ನೂ ಲಾಯಿಕದ ಪ್ರಕೃತಿ ಇರ್ತಲ್ಲದೋ – ಅದರ ವರ್ಣನೆ ಮಾಡಿಗೊಂಡು. 🙂

  9. ಒಳ್ಳೇದು..
    ಸುರುವಿನ ಸಾಲುಗಳ ಓದಿಯಪ್ಪಗ
    ಯುಗ ಯುಗಾದಿ ಕಳೆದರೂ
    ಯುಗಾದಿ ಮರಳಿ ಬರುತಿದೆ
    ನೆ೦ಪಾತು.

  10. ಹೊಸವರುಶದ ಸ್ವಾಗತ – ವರ್ಣನೆ ಲಾಯಿಕಾಯಿದು ಮಾವಾ ಹೇಳಿ ಒಪ್ಪ…..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×