ಜ್ಞಾನದ ಬೆಣಚ್ಚು

ಶ್ರೀ ಗುರುಗಳ ವಾಣಿಯೊಟ್ಟಿಂಗೆ ಆದಿಗುರುಗಳ ಚಿಂತನೆಗಳನ್ನುದೇ ಸೇರಿಸಿಯೊಂಡು ಬರದ ಪದ್ಯ ಇದು.ಬತ್ತೀಸ ಹೇಳಿರೆ ಮೂವತ್ತೆರಡು. ಬತ್ತೀಸೆರಡರ ಹೇಳಿರೆ ಅರುವತ್ತನಾಕು. ಇದು ಮನಸ್ಸಿನ ಅರಳುವಿಕೆಗೆ ಸಹಾಯ ಮಾಡುವ ವಿದ್ಯೆಗೊ. ಆದರೆ ಉಪನಿಷತ್ತುಗೊ ಆತ್ಮಜ್ಞಾನಕ್ಕಾಗಿ ಮೂವತ್ತೆರಡು ವಿದ್ಯೆಗಳ ಹೇಳ್ತು. ತನ್ನ ತಾನರಿವಲೆ ಮನಸ್ಸು ಅಂತರ್ಮುಖ ಆಯೆಕ್ಕಡ. ಹಾಂಗೆ ಆಯೆಕ್ಕಾರೆ ತಪಸ್ಸಿನ ಅಗತ್ಯ ಇದ್ದು. ತಪಸ್ಸು ಮನಸ್ಸಿನ ಏಕಾಗ್ರತೆಗೆ ದಾರಿಮಾಡಿಕೊಡ್ತು. ಮನಸ್ಸಿನ ಏಕಾಗ್ರತೆಂದ ಸೃಜನಶೀಲವಾದ ಶಕ್ತಿಗಳ ಉದ್ದೀಪನೆ ಅಪ್ಪದರೊಟ್ಟಿಂಗೆ ಸಂಸ್ಕಾರವೂ ಸೇರಿಗೊಳುತ್ತು. ಈ ಬಗೆಯ ಉಪಾಸನೆ ತಪಸ್ಸಿಂಗುದೇ ತಪಸ್ಸು ಆತ್ಮಜ್ಞಾನಕ್ಕೂ ದಾರಿಮಾಡಿಕೊಡ್ತು.

~ಬೊಳುಂಬು ಕೃಷ್ಣಭಾವ°

~

ಕಾ೦ಬಲೆ ಎಡಿಗೋ ಕಲ೦ಕಟೆ ನೀರಿಲಿ
ಪ್ರಭಾಕರ ಬಿಂಬವ ನಿತ್ಯ
ಕಾ೦ಬಲೆ ಎಡಿಗೋ ಕಲ೦ಕಟೆ ಮನಸ್ಸಿಲಿ
ಜ್ಞಾನದ ಬೆಣಚ್ಚಿನ ನಿತ್ಯ

ಬಲು ಆಳದ ತೆಳಿನೀರಿಲಿ ಕಾ೦ಗೋ
ಒಳಗಣ ಹಲ ಬಗೆಯ ಜಂತು
ಜ್ಞಾನವಿಜ್ಞಾನದ ಸಮತುಲನವೇ ಇಲ್ಲದ್ದೆ
ಒಳಗಣ್ಣ ಒಡವದು ಎಂತು

ಬಲು ಕಠಿಣವೂ ಆದ ತಪಸ್ಸೊಂದಿಲ್ಲದ್ದೆ
ಏಕಾಗ್ರತೆ ಒದಗೊದು ಹೇಂಗೆ
ನಿತ್ಯೋಪಾಸನೆಯ ಮಾರ್ಗವ ಅಱಿಯದ್ದೆ
ತನ್ನ ತಾನಱಿವದು ಹೇಂಗೆ

ಬತ್ತೀಸೆರಡರ ವಿದ್ಯೆಯ ಅಱಿಯದ್ದೆ
ಮನಸ್ಸಿನ ಅರಳುಸುಲೆಡಿಗೋ
ಬತ್ತಿಯ ಹೊತ್ಸದ್ದೆ ಮೂಢನ ಮನಸ್ಸಿಲಿ
ಭಕ್ತಿಯ ಹುಟ್ಟುಸುಲೆಡಿಗೋ

ಬೊಳುಂಬು ಕೃಷ್ಣಭಾವ°

   

You may also like...

22 Responses

 1. ಪ್ರೇಮಲತಾ, ಗಾಯಕಿ. says:

  ಮುರ್ಸಂಧ್ಯಪ್ಪಗ ಜೆಗಿಲಿಲಿ ಕೂದೊಂಡು ಸಣ್ಣ ಸ್ವರಲ್ಲಿ ಅಜ್ಜ ಹೇಳಿದ ಹಾಂಗೋ..
  ತೋಟದೊಳ ಕೆರೆಕರೆಲಿ ನಿಂದು ನೀರಿನ್ಗೊಂದು ಕಲ್ಲಿಡ್ಕಿ ನೀವೇ ಹೇಳಿಕೊಂಡ ಹಾಂಗೋ..
  ಮತ್ತೆ ಇರುಳು ದೀಪದ ಬೆಣ೦ಚ್ಚಿಲಿ ಕಣ್ಣು ಮಡಿಗಿ ನಾವೇ ಪ್ರಶ್ನಿಸಿಕೊಂಡ ಹಾಂಗೋ.. – ಇದ್ದು ಈ ಪದ್ಯ! ಅಭಿನಂದನೆಗೊ…

  • ಬೊಳುಂಬು ಕೃಷ್ಣಭಾವ° says:

   ಧನ್ಯವಾದಂಗೊ ಅಕ್ಕಾ.
   ಭಾವತುಂಬಿದ ಹಾಡುವಿಕೆಗೆ ಹೆಸರಾದ ನಿಂಗೊಗೆ ಈ ಪದ್ಯ ಕೊಶಿಕೊಟ್ಟದು ಬರದ್ದಕ್ಕೆ ಸಾರ್ಥಕ ಆದ ಹಾಂಗಾತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *