ಕಾಲಚಕ್ರವ ಹಿ೦ದೆ ತಿರುಗುಸುಲೆಡಿಗೊ – ಭಾಮಿನಿಲಿ

August 13, 2012 ರ 6:00 amಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಳೆಗಾಲದ ತೆರಕ್ಕಿನೆಡೆಲಿ ಒ೦ದೊ೦ದು ಮರದೇ ಹೋಪದು,ಅಪ್ಪೋ?

ತೋಟ ಬುಡ ಬಿಡುಸಿಕ್ಕಿ ಸುತ್ತಲು
ಕಾಟುಹುಲ್ಲಿನ ಕೆರಸಿಯಪ್ಪಗ
ನೋಟ ಹಸುರಾಗಿಕ್ಕು ಕಿಸೆಯೊಳ ಹಸುರು ನೋಟಕ್ಕು|
ಸೂಟುಮಣ್ಣಿನ ಹಾಕಿದರೆ ಸರಿ
ನಾಟುಗದ ಮಳೆನೀರು ಕ೦ತೊಗ
ಈಟು ಹಿಡುಶಿರೆ ಫಸಲು ಹೆಚ್ಚುಗು ಕೇಳು ಭಾವಯ್ಯ॥

ಉಪ್ಪಳಿಗ ಮರಹತ್ತಿ ಗೆಲ್ಲುಗ
ಳಿಪ್ಪ ಹೊಡೆ ಕಡುಶಿಕ್ಕಿ ಕೆಳ ಬೇ
ಕಪ್ಪ ಬಾಳೆಯ ನೆಟ್ಟುಬಿಟ್ಟರೆ ಬೇಗ ಫಲ ಬಕ್ಕು|
ಸೊಪ್ಪು ಕಡಿಯುವವಕ್ಕೆರಡು ಹೊಗೆ
ಸೊಪ್ಪು ಕುಣಿಯದ್ದಕ್ಕು ತಪ್ಪಿರೆ
ಚಪ್ಪೆ ಆಪು೦ಡುಳ್ಳಯಾ ಹೇಳುಗವು ಭಾವಯ್ಯ॥

ಬೆ೦ಡೆ ಬಿತ್ತಿದರಕ್ಕು ಸೆಸಿ ಅಲ
ತೊ೦ಡೆ ಕಳ ಮಾಡೆಕ್ಕು ಜಾಲಿಲಿ
ತೊ೦ಡೆ ಚೆಪ್ಪರ ಬಗ್ಗಿ ನಿ೦ದಿದು ಗು೦ಟ ಹಾಕೆಕ್ಕು|
ಮ೦ಡಗೆಯ ಕಿಚ್ಚಿ೦ಗೆ ಸೌದಿಯ
ತು೦ಡು ಮಾಡಿಯೆ ಒಯಿಶುಲಿ೦ದೀ
ತೊ೦ಡ° ದೂಮನ ನ೦ಬಿದರೆ ಕೆಟ್ಟತ್ತು ಭಾವಯ್ಯ॥

ಬಲ್ಲೆ ಕಡುಶೆಕ್ಕಾತು ತೋಟದ
ಹುಲ್ಲು ತೆಗೆಶೆಕ್ಕಾತು ಹಟ್ಟಿಲಿ
ಕಲ್ಲು ಕಟ್ಟುಸಿ ಬೈಪ್ಪಣೆಯ ಸರಿ ಮಾಡುಸೆಕ್ಕಾತು|
ಎಲ್ಲಿ ಮಾಯಕವಾಗಿ ಹೋದವೊ
ಇಲ್ಲೆ ಆಳುಗೊ ಪೈಸೆ ಸೊರುಗಿರು
ಮೆಲ್ಲ ಜಾರಿದವೆಲ್ಲ ಊರಿನ ಬೂತ ಕೋಲಕ್ಕೆ॥

ಕೋಲ ಮುಗುದರೆ ಬಕ್ಕೊ ಮದಲಾ
ಸಾಲ ಸಲ್ಲುಸುಲಿಕ್ಕೊ ಈ ಮಳೆ
ಗಾಲ ತೋಟದ ಕೆಲಸ ಮಾಡುಸುಲೆಡಿಗೊ ನೇರ್ಪಲ್ಲಿ|
ಜಾಲಿನುದ್ದಕ್ಕೇ ಕಿಡಿ೦ಜೆಲು
ಸಾಲು ಕಾ೦ಬಲೆ ಆಸೆಯಾಯಿದು
ಕಾಲಚಕ್ರವ ಹಿ೦ದೆ ತಿರುಗುಸುಲೆಡಿಗೊ ಭಾವಯ್ಯ॥

ಶ್ರೀಶಣ್ಣನ ಸ್ವರಲ್ಲಿ ಕೇಳುಲೆಃ

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಮುಳಿಯಬಾವನ ಭಾಮಿನಿಯ ಓದಿದೆ,ಬಾರೀ ಲಾಯಕ ಆಯಿದು. ನಿಂಗೊ ಬರದ ಎಲ್ಲ ಭಾಮಿನಿಗಳ ಸೇರುಸಿ ಒನ್ದು ಹವ್ಯಕ ಪದ್ಯ. ಪುಸ್ತಕ ಮಾಡಲಕ್ಕನ್ನೆ ಹೇಳಿ ತೋರುತ್ತು ಎನಗೆ.ಈಗ ಆರೂ ಜೆನ ಸಿಕ್ಕದ್ದೆ ಆನೇ ನೆಟ್ಟಿ ಚೆಪ್ಪರ ಹಾಕಿಕ್ಕಿ ಬಂದು ಕೂದ್ದಸ್ತೆ ನಿಂಗಳಪದ್ಯ ಕಂಡತ್ತು ಸರೀ ಅಯಿದು ಕಾಕತಾಳೀಯ ಹೇದರೆ ಇದುವೆಯೊ?ಧನ್ಯವಾದಂಗೊ.

  [Reply]

  VN:F [1.9.22_1171]
  Rating: +1 (from 1 vote)
 2. ಮುಳಿಯ ಭಾವ
  ರಘು ಮುಳಿಯ

  ಓದಿದ,ಶ್ರೀಶಣ್ಣನ ಸ್ವರ ಕೇಳಿ ಆಸ್ವಾದಿಸಿದ,ಒಪ್ಪ ಕೊಟ್ಟು ಪ್ರೋತ್ಸಾಹಿದ ಎಲ್ಲಾ ನೆ೦ಟ್ರಿ೦ಗೆ ಧನ್ಯವಾದ೦ಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕಚೆನ್ನೈ ಬಾವ°ಚೂರಿಬೈಲು ದೀಪಕ್ಕಸಂಪಾದಕ°ವಿನಯ ಶಂಕರ, ಚೆಕ್ಕೆಮನೆಶ್ಯಾಮಣ್ಣಕಳಾಯಿ ಗೀತತ್ತೆಕೇಜಿಮಾವ°ಎರುಂಬು ಅಪ್ಪಚ್ಚಿಕಜೆವಸಂತ°ಗೋಪಾಲಣ್ಣಶಾ...ರೀಪ್ರಕಾಶಪ್ಪಚ್ಚಿಪವನಜಮಾವಕೆದೂರು ಡಾಕ್ಟ್ರುಬಾವ°ಸರ್ಪಮಲೆ ಮಾವ°ಗಣೇಶ ಮಾವ°ಮಾಲಕ್ಕ°ಸುವರ್ಣಿನೀ ಕೊಣಲೆಡಾಗುಟ್ರಕ್ಕ°ಮಂಗ್ಳೂರ ಮಾಣಿಬಟ್ಟಮಾವ°ಅಡ್ಕತ್ತಿಮಾರುಮಾವ°ಮುಳಿಯ ಭಾವಮಾಷ್ಟ್ರುಮಾವ°ಪುಣಚ ಡಾಕ್ಟ್ರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
"ಆನು ಕಂಡುಂಡ ಕಾಶೀಯಾತ್ರೆ"
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಬೆಣಚ್ಚಿಪ್ಪಲ್ಲಿ ಹುಡ್ಕಲೆ