Oppanna.com

ಕೈಲಾಸಪತಿಯೇ ಸಲಹೋ

ಬರದೋರು :   ಗೋಪಾಲಣ್ಣ    on   20/02/2012    9 ಒಪ್ಪಂಗೊ

ಗೋಪಾಲಣ್ಣ

ಶಿವರಾತ್ರಿ ಲೆಕ್ಕಲ್ಲಿ ಶಿವಂಗೆ ಅರ್ಪಣೆ

ಧಾಟಿಜಾಕೇ ಮಥುರಾ..(ಒಂದು ಹಳೆ ಮರಾಠಿ ಪದ್ಯ)

ಕೈಲಾಸಪತಿ ಶ್ರೀ ಶಿವನೇ ಸಲಹೋ ಹರಹರ ಮಹಾದೇವ।
ಶಿವನೇ।
ಹರಹರ ಮಹದೇವ॥

ಅಹಿಭೂಷಣನೇ ತ್ರಿಶೂಲಧರನೇ
ಡಮರುಗ ಹಿಡಿದಾ ನೃತ್ಯಪ್ರಿಯನೇ॥ ಕೈಲಾಸಪತಿ॥

ಹಣೆಲದ ಜ್ವಾಲೆ,ಜೊಟ್ಟಿಲಿ ಗಂಗೆ
ಕೊರಳಿಲಿ ಹಾವು ,ಎದೆಲಮೃತವೂ॥ಕೈಲಾಸ॥

ವಿಷವನೇ ಕುಡಿದೆ,ಲೋಕ ಉಳಿಸಿದೆ
ನೀ ಲಯಕರ್ತೃ ಅಪ್ಪದು ನಿಜವೋ॥ಕೈಲಾಸಪತಿ॥

ರುಂಡದ ಮಾಲೆ,ಮಸಣದ ಬೂದಿ
ಮೆತ್ತಿರೂ ನೀನೇ ಸುಂದರ ಅಲ್ಲೋ॥ಕೈಲಾಸಪತಿ॥

ಗಣಪತಿ ಪಾರ್ವತಿ ಸುಬ್ರಹ್ಮಣ್ಯ
ಸೇರಿದ ನಿನ್ನಾ ಸಭೆಯೇ ಗಣ್ಯ॥ಕೈಲಾಸಪತಿ॥

ರಸವೂ ವಿರಸವು, ರೂಪ ವಿರೂಪ
ಎಲ್ಲವೂ ನಿನಗೆ ಒಂದೇ , ಪಾಪ!॥ಕೈಲಾಸಪತಿ॥

ಕರುಣಾ ಮೂರ್ತಿಯೆ, ಸರಳನು ನೀನು
ನಮ್ಮೆಲ್ಲರ ನೀನನುದಿನ ಸಲಹೋ॥ಕೈಲಾಸಪತಿ॥

~*~*~

9 thoughts on “ಕೈಲಾಸಪತಿಯೇ ಸಲಹೋ

  1. dear sir i like this website .i am community radio mangalore annuncer . shorty one new program “Engala mane” will be started

  2. ಪದ್ಯ ಬರದ್ದು ಪಷ್ಟಾಯಿದು ಗೋಪಾಲಣ್ಣ. ಆ ‘ಜಾಕೇ ಮಥುರಾ..’ ಪದ್ಯ ಇದ್ದೋ ನಿಂಗಳತ್ರೆ?

    1. ಇಲ್ಲೆ. ಆನು ಸಣ್ಣಾಗಿಪ್ಪಾಗ ಕೇಳಿದ್ದು ಮಾತ್ರ.

  3. ಶಿವರಾತ್ರಿ ಸಮೆಲಿ ಬೈಲಿಂಗೆ ಬಂದ ಗೋಪಾಲಣ್ಣನ ಹವ್ಯಕ ಪದ್ಯ ಲಾಯಕಾತು. ವಿಷವನೇ ಕುಡಿದೆ,ಲೋಕ ಉಳಿಸಿದೆ
    ನೀ ಲಯಕರ್ತೃ ಅಪ್ಪದು ನಿಜವೋ — ಸಂಶಯ ಬಪ್ಪದು ಸಹಜವೇ. ಒಳ್ಳೆ ಕಲ್ಪನೆ.

  4. ಒಪ್ಪ ಒಪ್ಪ ಒಪ್ಪೊಪ್ಪ ಲಾಯಕ ಆಯ್ದು ಇದು ಗೋಪಾಲಣ್ಣ. ಒಳ್ಳೆ ಧಾಟಿಲಿ ಹಾಡ್ಳೆ ಆವ್ತುದೆ (ಆದರೆ ಆನು ಹಾಡಿರೆ ಆರೂ ಕೇಳ್ಳೆ ತಯಾರಿಲ್ಲೆ!).

  5. ಗೋಪಾಲಣ್ಣನ ಪದ್ಯಕ್ಕೆ ಒಪ್ಪ ಪದ್ಯಕ್ಕೆ ನಮ್ಮ ಒಪ್ಪಂಗೊ….

  6. ಗೋಪಾಲಣ್ಣ ಪದ್ಯವೂ ಲಾಯಕಲ್ಲಿ ಬರೆತ್ತಿ ಹೇಳಿ ಗೊಂತಿತ್ತಿಲ್ಲೇ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×