ಕಳ್ಳ ಪುಚ್ಚೆಯ ಒಳ್ಳೆ ನಾಯಿ ಮಾಡೆಕ್ಕು

May 24, 2012 ರ 9:30 amಗೆ ನಮ್ಮ ಬರದ್ದು, ಇದುವರೆಗೆ 23 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕರ್ನಾಟಕ ಬೇಂಕಿಲಿ ವೃತ್ತಿಲಿ ಇದ್ದು, ಈಗ ಸುರತ್ಕಲ್ಲಿಲಿ ನಿವೃತ್ತ ಜೀವನ ನೆಡೆಶಿಂಡಿಪ್ಪ ಶ್ರೀಯುತ “ಸೊಡಂಕೂರು ಭಾಸ್ಕರ ಭಟ್, ನಮ್ಮ ಬೈಲಿಂಗೆ “ಸೊಡಂಕೂರು ಮಾವ°” ಆಗಿ ಬಯಿಂದವು.
(ಸೊಡಂಕೂರು ಮಾವನ ಮೋರೆಪುಟ)
ಬೈಲಿನೋರಿಂಗೆ ನೀತಿ ತಿಳಿಶುವ ಕತೆ, ಕವನ, ಬರಹಂಗಳ ಹೇಳುಗು. ನಾವೆಲ್ಲರೂ ಸೊಡಂಕೂರು ಮಾವಂಗೆ ಸ್ವಾಗತಮ್ ಹೇಳುವನೋ?!
ಅವು ಬರದ ಒಂದು ಕತೆಪದ್ಯ ಇಲ್ಲಿದ್ದು. ಓದಿ, ಆಸ್ವಾದುಸಿ..!

ಇದು ಕಥೆ:

ಧನಿಗಳ ಮನೆಲಿ
ನಾಯಿಗಳುದೆ ಪುಚ್ಚಗಳುದೆ
ಕೆಲಸಕ್ಕೆ ಇತ್ತಿದ್ದವಡೊ

ಸೊಡಂಕೂರು ಮಾವ° ನೆಗೆ ಮಾಡಿಂಡು ಕತೆ ಹೇಳುದು

ನಾಯಿಗೊಕ್ಕೆ ತೋಟ ಕಾವ ಕೆಲಸ
ಪುಚ್ಚಗೊಕ್ಕೆ ಎಲಿ ಹಿಡಿವ  ಕೆಲಸ ಹೇಳಿ
ಧನಿಗಳ ಅಪ್ಪಣೆ ಆಗಿತ್ತಡೊ

ಪುಚ್ಚಗೊ ಸೇಲೆ ಮಾಡಿ
ಮನೆಯೋರ ಒಪ್ಪ ಕುಂಞಿಗೊ ಆದವಡೊ
ಅಂಬಗ ಅವಕ್ಕೆ ಬೇಕಾದ್ದೆಲ್ಲ ಸಿಕ್ಕಿತ್ತಡೊ

ಹೊಟ್ಟೆ ತುಂಬಿದ ಮತ್ತೆ ಎಂತ ಅಗತ್ಯ ಹೇಳಿ
ಎಲಿಗೊ ಎದುರೇ ತಿರುಗಿಗೊಂಡಿದ್ದರೂ
ಸುಮ್ಮನೆ ಇತ್ತಿದ್ದವಡೊ

ಮನೆಂದ ಹೆರ ಇರುಳಿಡೀ ಪುಚ್ಚಗಳೊಳ
ಕಲ್ಯಾಣಪ್ಪನ ಕಾಟುಕಾಯಿಯ
ದಂಡ ಯಾತ್ರಗೊ, ಲಡಾಯಿಗಳಲ್ಲೇ ಇತ್ತಿದವಡೊ

ನಾಯಿಗೊ ಇರುಳೆಲ್ಲ ತೋಟ ಕಾದು
ಬಚ್ಚಿಗೊಂಡು ಉದಿಯಪ್ಪಗ ಮನಗೆ ಬಂದರೆ
ಅವಕ್ಕೆ ತಣ್ಣನೆವುದೆ ಹಳಸಿದ ಕೊದಿಲುದೆ ಸಿಕ್ಕಿತ್ತಡೊ

ಪುಚ್ಚಗೊ ಗೆನಾ ಆಯಿಕೊಂಡಿಪ್ಪದು
ನಾಯಿಗೊ ಬಚ್ಚಿಗೊಂಡಿಪ್ಪದು
ಎಂತಗೆ ಹೇಳಿ ದನಿಗೊ ವಿಮರ್ಶೆ ಮಾಡಿದವಡೊ

ಪುಚ್ಚಗಳ ಚದಿವುದೆ
ನಾಯಿಗಳ ಒಪ್ಪ ಬುದ್ಧಿವುದೆ
ದನಿಗೊಕ್ಕೆ ಗೊಂತಾತಡೊ

ಪುಚ್ಚಗೊಕ್ಕೆ ನಾಯಿಗಳ ಹಾಂಗೆ
ಕಷ್ಟ ಪಟ್ಟು ಕೆಲಸ ಮಾಡುದರ ಕಲಿಶಿ
ಹೇಳಿ ದನಿಗೊ ಅಪ್ಪಣೆ ಮಾಡಿದವಡೊ

ಎಷ್ಟು ಹೇಳಿದರೂ ಎಂತ ಮಾಡಿದರೂ
ಪುಚ್ಚಗೊ ಕೇಳಿದ್ದವೇ ಇಲ್ಲೆಡೊ
ಅವುಗಳ ಚದಿ ಹಾಂಗೆ ಇತ್ತಡೊ

ದನಿಗೊಕ್ಕೆ ಎಕ್ಕ ಸಕ್ಕ ಕೋಪ ಬಂದು
ಪುಚ್ಚಗೊಕ್ಕೆ ಉಪವಾಸ ನಾಯಿಗೊಕ್ಕೆ ಹೊಟ್ಟೆ ತುಂಬ ಹೇಳಿ
ಅಪ್ಪಣೆ ಕೊಡುಸಿದವಡೊ

ಪುಚ್ಚಗೊಕ್ಕೆ ಹಶು ಆಗಿ ಏನೂ ಎಡಿಯ
ಎಂತಕೆ ಹೇಳಿದರೆ ಮನೆಲಿ ಏನೂ ಸಿಕ್ಕ
ಎಲಿಯ ತಿನ್ನದ್ದೆ ಬೇರೆ ನಿರ್ವಾಹವೇ ಇಲ್ಲದ್ದ ಹಾಂಗಾತಡೊ

ಎಲಿಗಳ ಹುಡುಕಿ ಕೊಂದವ
ಕೊಂದು ತಿಂದವದ
ಆ ಚೆಂದವ ನೋಡಿಯೇ ಹೊಟ್ಟೆ ತುಂಬಿತ್ತಡೊ

ನಾಯಿಗೊ ಹೊಟ್ಟೆ ತುಂಬ ಹಾಕಿದ್ದಕ್ಕೆ
ದನಿಗಳ ಹತ್ರೆ ಪ್ರೀತಿಲಿ ಬೀಲ ಆಡುಸಿದವಡೊ
ಕಳ್ಳರ ಹುಡುಕ್ಕಿ ಹುಡುಕ್ಕಿ ಅಟ್ಟಿಸಿದವಡೊ

ದನಿಗೊಕ್ಕೆ ನಾಯಿಗಳ ಹತ್ತರೆ
ತುಂಬಾ ಕೊಶಿ ಆಗಿ
ಇದ್ದರೆ ನಾಯಿಗಳ ಹಾಂಗೆ ಇರೆಕ್ಕು ಹೇಳಿ ಹೇಳಿದವಡೊ..

ಇದು ನಮ್ಮ ನಮ್ಮೊಳ

ನಾವೆಲ್ಲ ಹುಟ್ಟಿಂದ ಪುಚ್ಚಗೊ
ದೇವರು ನವಗೆ ಒಪ್ಪಿಸಿದ ಕೆಲಸ ಮಾಡದ್ದೆ
ಸೇಲಿಲಿಯೇ ದೇವರ ಮರುಳು ಮಾಡೆಕ್ಕೂ ಹೇಳಿ ಬಯಸುವೋರು

ದೇವರು ನಮ್ಮಂದ ಬಯಸೋದೆಂತಾ ಹೇಳಿದರೆ
ದೇವರೆಂಬ ದನಿಗಳ ಮನೆಲಿ
ನಾವು ನಾಯಿಗೊ ಆಯೆಕ್ಕು, ದೇವರ ವಿಶ್ವಾಸ ಗಳಿಸೆಕ್ಕು

ಇರುಳು ಕಳ್ಳ ಬಪ್ಪಗ ಭೌ ಭೌ ಹೇಳುಲೆ ಎಡಿಯದ್ದರೆ
ಜೋರಾಗಿ ಮೇಯೋಂ ಹೇಳಿಯಾದರೂ
ನಮ್ಮ ತೆಗಲೆಯ ಒಳ ಇಪ್ಪ ದನಿಯ ಏಳುಸೆಕ್ಕು

ಇಲ್ಲದ್ದರೆ ನಾವು ಪುಚ್ಚಗೊ ಆಗಿ ದಂಡ
ಆ ಮೇಲಿ ನಮ್ಮ ಜಾಗೆಲಿ ನಮ್ಮ ಕೊಣಿಶುಲೆ
ದನಿಗೊ ಬೇರೆ ಪುಚ್ಚಗಳ ಮಡಿಕ್ಕೊಂಗು

ಆ ಪುಚ್ಚಗೊ ಅವು ಹೇಳಿದ ಹಾಂಗೆ
ನಮ್ಮ ಕೊಣಿಶಿ
ದೇವರಿಂದ ದೂರ ಮಾಡುಗು

ಹೇಳೊದು ಹೇಳಿದ್ದೆ
ಆ ಮೇಲೆ ಅವಕ್ಕವಕ್ಕೆ ಬಿಟ್ಟದು
ದೇವರ ನಾಯಿಗೊ ಅಪ್ಪದೋ
ಅಲ್ಲ ಕಳ್ಳ ಪುಚ್ಚಗೊ ಅಪ್ಪದೋಹೇಳಿ
ನಿಂಗಳೇ ಹೇಳಿ

~

ಸೊಡಂಕೂರು ಭಾಸ್ಕರ ಭಟ್

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 23 ಒಪ್ಪಂಗೊ

 1. ಸುವರ್ಣಿನೀ ಕೊಣಲೆ
  Suvarnini Konale

  ಕಥೆಯ ಶೈಲಿ, ಅದರ ಒಳಾರ್ಥ, ಒಳಾರ್ಥವ ವಿವರ್ಸಿದ ರೀತಿ ತುಂಬ ಲಾಯ್ಕಾತು..
  ನಿಂಗಳ ಉತ್ತಮ ಮಾರ್ಗದರ್ಶನ ನಮ್ಮ ಬೈಲಿಂಗೆ ಸಿಕ್ಕುತ್ತಾ ಇರಲಿ.

  [Reply]

  VA:F [1.9.22_1171]
  Rating: -1 (from 1 vote)
 2. ಸೊಡಂಕೂರು ಮಾವ°

  ಸುವರ್ನಿನಿಗೆ ಹೃತ್ಪೂರ್ವಕ ಧನ್ಯವಾದಂಗೊ. ಖಂಡಿತ ಬರೆತ್ತಾ ಇರುತ್ತೆ.

  [Reply]

  VA:F [1.9.22_1171]
  Rating: 0 (from 0 votes)
 3. ರಾಮಕ್ರಷ್ಣ ಹೊಸಬೆಟ್ಟು

  ನಿಮ್ ಭಾಷೆ ತುಂಬಾ ಬೆರಕೆ ಮಲಯಾಳ , ತುಳು , —- ಖುಷಿಯಾಯಿತು ನಿಮ್ಮ ಕವನ ಓದಿ .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆಚೆನ್ನಬೆಟ್ಟಣ್ಣಪುತ್ತೂರಿನ ಪುಟ್ಟಕ್ಕಚೆನ್ನೈ ಬಾವ°ಮಾಷ್ಟ್ರುಮಾವ°ದೇವಸ್ಯ ಮಾಣಿಕೊಳಚ್ಚಿಪ್ಪು ಬಾವವೇಣಿಯಕ್ಕ°ವೇಣೂರಣ್ಣಉಡುಪುಮೂಲೆ ಅಪ್ಪಚ್ಚಿಚುಬ್ಬಣ್ಣಎರುಂಬು ಅಪ್ಪಚ್ಚಿಮಂಗ್ಳೂರ ಮಾಣಿಯೇನಂಕೂಡ್ಳು ಅಣ್ಣದೊಡ್ಡಮಾವ°ಗಣೇಶ ಮಾವ°ಒಪ್ಪಕ್ಕಡಾಮಹೇಶಣ್ಣವಸಂತರಾಜ್ ಹಳೆಮನೆಗೋಪಾಲಣ್ಣಕೇಜಿಮಾವ°ಅನುಶ್ರೀ ಬಂಡಾಡಿದೊಡ್ಮನೆ ಭಾವಡೈಮಂಡು ಭಾವಹಳೆಮನೆ ಅಣ್ಣಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ