Oppanna.com

ಕಳ್ಳ ಪುಚ್ಚೆಯ ಒಳ್ಳೆ ನಾಯಿ ಮಾಡೆಕ್ಕು

ಬರದೋರು :   ಸೊಡಂಕೂರು ಮಾವ°    on   24/05/2012    23 ಒಪ್ಪಂಗೊ

ಕರ್ನಾಟಕ ಬೇಂಕಿಲಿ ವೃತ್ತಿಲಿ ಇದ್ದು, ಈಗ ಸುರತ್ಕಲ್ಲಿಲಿ ನಿವೃತ್ತ ಜೀವನ ನೆಡೆಶಿಂಡಿಪ್ಪ ಶ್ರೀಯುತ “ಸೊಡಂಕೂರು ಭಾಸ್ಕರ ಭಟ್, ನಮ್ಮ ಬೈಲಿಂಗೆ “ಸೊಡಂಕೂರು ಮಾವ°” ಆಗಿ ಬಯಿಂದವು.
(ಸೊಡಂಕೂರು ಮಾವನ ಮೋರೆಪುಟ)
ಬೈಲಿನೋರಿಂಗೆ ನೀತಿ ತಿಳಿಶುವ ಕತೆ, ಕವನ, ಬರಹಂಗಳ ಹೇಳುಗು. ನಾವೆಲ್ಲರೂ ಸೊಡಂಕೂರು ಮಾವಂಗೆ ಸ್ವಾಗತಮ್ ಹೇಳುವನೋ?!
ಅವು ಬರದ ಒಂದು ಕತೆಪದ್ಯ ಇಲ್ಲಿದ್ದು. ಓದಿ, ಆಸ್ವಾದುಸಿ..!

ಇದು ಕಥೆ:

ಧನಿಗಳ ಮನೆಲಿ
ನಾಯಿಗಳುದೆ ಪುಚ್ಚಗಳುದೆ
ಕೆಲಸಕ್ಕೆ ಇತ್ತಿದ್ದವಡೊ

ಸೊಡಂಕೂರು ಮಾವ° ನೆಗೆ ಮಾಡಿಂಡು ಕತೆ ಹೇಳುದು

ನಾಯಿಗೊಕ್ಕೆ ತೋಟ ಕಾವ ಕೆಲಸ
ಪುಚ್ಚಗೊಕ್ಕೆ ಎಲಿ ಹಿಡಿವ  ಕೆಲಸ ಹೇಳಿ
ಧನಿಗಳ ಅಪ್ಪಣೆ ಆಗಿತ್ತಡೊ

ಪುಚ್ಚಗೊ ಸೇಲೆ ಮಾಡಿ
ಮನೆಯೋರ ಒಪ್ಪ ಕುಂಞಿಗೊ ಆದವಡೊ
ಅಂಬಗ ಅವಕ್ಕೆ ಬೇಕಾದ್ದೆಲ್ಲ ಸಿಕ್ಕಿತ್ತಡೊ

ಹೊಟ್ಟೆ ತುಂಬಿದ ಮತ್ತೆ ಎಂತ ಅಗತ್ಯ ಹೇಳಿ
ಎಲಿಗೊ ಎದುರೇ ತಿರುಗಿಗೊಂಡಿದ್ದರೂ
ಸುಮ್ಮನೆ ಇತ್ತಿದ್ದವಡೊ

ಮನೆಂದ ಹೆರ ಇರುಳಿಡೀ ಪುಚ್ಚಗಳೊಳ
ಕಲ್ಯಾಣಪ್ಪನ ಕಾಟುಕಾಯಿಯ
ದಂಡ ಯಾತ್ರಗೊ, ಲಡಾಯಿಗಳಲ್ಲೇ ಇತ್ತಿದವಡೊ

ನಾಯಿಗೊ ಇರುಳೆಲ್ಲ ತೋಟ ಕಾದು
ಬಚ್ಚಿಗೊಂಡು ಉದಿಯಪ್ಪಗ ಮನಗೆ ಬಂದರೆ
ಅವಕ್ಕೆ ತಣ್ಣನೆವುದೆ ಹಳಸಿದ ಕೊದಿಲುದೆ ಸಿಕ್ಕಿತ್ತಡೊ

ಪುಚ್ಚಗೊ ಗೆನಾ ಆಯಿಕೊಂಡಿಪ್ಪದು
ನಾಯಿಗೊ ಬಚ್ಚಿಗೊಂಡಿಪ್ಪದು
ಎಂತಗೆ ಹೇಳಿ ದನಿಗೊ ವಿಮರ್ಶೆ ಮಾಡಿದವಡೊ

ಪುಚ್ಚಗಳ ಚದಿವುದೆ
ನಾಯಿಗಳ ಒಪ್ಪ ಬುದ್ಧಿವುದೆ
ದನಿಗೊಕ್ಕೆ ಗೊಂತಾತಡೊ

ಪುಚ್ಚಗೊಕ್ಕೆ ನಾಯಿಗಳ ಹಾಂಗೆ
ಕಷ್ಟ ಪಟ್ಟು ಕೆಲಸ ಮಾಡುದರ ಕಲಿಶಿ
ಹೇಳಿ ದನಿಗೊ ಅಪ್ಪಣೆ ಮಾಡಿದವಡೊ

ಎಷ್ಟು ಹೇಳಿದರೂ ಎಂತ ಮಾಡಿದರೂ
ಪುಚ್ಚಗೊ ಕೇಳಿದ್ದವೇ ಇಲ್ಲೆಡೊ
ಅವುಗಳ ಚದಿ ಹಾಂಗೆ ಇತ್ತಡೊ

ದನಿಗೊಕ್ಕೆ ಎಕ್ಕ ಸಕ್ಕ ಕೋಪ ಬಂದು
ಪುಚ್ಚಗೊಕ್ಕೆ ಉಪವಾಸ ನಾಯಿಗೊಕ್ಕೆ ಹೊಟ್ಟೆ ತುಂಬ ಹೇಳಿ
ಅಪ್ಪಣೆ ಕೊಡುಸಿದವಡೊ

ಪುಚ್ಚಗೊಕ್ಕೆ ಹಶು ಆಗಿ ಏನೂ ಎಡಿಯ
ಎಂತಕೆ ಹೇಳಿದರೆ ಮನೆಲಿ ಏನೂ ಸಿಕ್ಕ
ಎಲಿಯ ತಿನ್ನದ್ದೆ ಬೇರೆ ನಿರ್ವಾಹವೇ ಇಲ್ಲದ್ದ ಹಾಂಗಾತಡೊ

ಎಲಿಗಳ ಹುಡುಕಿ ಕೊಂದವ
ಕೊಂದು ತಿಂದವದ
ಆ ಚೆಂದವ ನೋಡಿಯೇ ಹೊಟ್ಟೆ ತುಂಬಿತ್ತಡೊ

ನಾಯಿಗೊ ಹೊಟ್ಟೆ ತುಂಬ ಹಾಕಿದ್ದಕ್ಕೆ
ದನಿಗಳ ಹತ್ರೆ ಪ್ರೀತಿಲಿ ಬೀಲ ಆಡುಸಿದವಡೊ
ಕಳ್ಳರ ಹುಡುಕ್ಕಿ ಹುಡುಕ್ಕಿ ಅಟ್ಟಿಸಿದವಡೊ

ದನಿಗೊಕ್ಕೆ ನಾಯಿಗಳ ಹತ್ತರೆ
ತುಂಬಾ ಕೊಶಿ ಆಗಿ
ಇದ್ದರೆ ನಾಯಿಗಳ ಹಾಂಗೆ ಇರೆಕ್ಕು ಹೇಳಿ ಹೇಳಿದವಡೊ..

ಇದು ನಮ್ಮ ನಮ್ಮೊಳ

ನಾವೆಲ್ಲ ಹುಟ್ಟಿಂದ ಪುಚ್ಚಗೊ
ದೇವರು ನವಗೆ ಒಪ್ಪಿಸಿದ ಕೆಲಸ ಮಾಡದ್ದೆ
ಸೇಲಿಲಿಯೇ ದೇವರ ಮರುಳು ಮಾಡೆಕ್ಕೂ ಹೇಳಿ ಬಯಸುವೋರು

ದೇವರು ನಮ್ಮಂದ ಬಯಸೋದೆಂತಾ ಹೇಳಿದರೆ
ದೇವರೆಂಬ ದನಿಗಳ ಮನೆಲಿ
ನಾವು ನಾಯಿಗೊ ಆಯೆಕ್ಕು, ದೇವರ ವಿಶ್ವಾಸ ಗಳಿಸೆಕ್ಕು

ಇರುಳು ಕಳ್ಳ ಬಪ್ಪಗ ಭೌ ಭೌ ಹೇಳುಲೆ ಎಡಿಯದ್ದರೆ
ಜೋರಾಗಿ ಮೇಯೋಂ ಹೇಳಿಯಾದರೂ
ನಮ್ಮ ತೆಗಲೆಯ ಒಳ ಇಪ್ಪ ದನಿಯ ಏಳುಸೆಕ್ಕು

ಇಲ್ಲದ್ದರೆ ನಾವು ಪುಚ್ಚಗೊ ಆಗಿ ದಂಡ
ಆ ಮೇಲಿ ನಮ್ಮ ಜಾಗೆಲಿ ನಮ್ಮ ಕೊಣಿಶುಲೆ
ದನಿಗೊ ಬೇರೆ ಪುಚ್ಚಗಳ ಮಡಿಕ್ಕೊಂಗು

ಆ ಪುಚ್ಚಗೊ ಅವು ಹೇಳಿದ ಹಾಂಗೆ
ನಮ್ಮ ಕೊಣಿಶಿ
ದೇವರಿಂದ ದೂರ ಮಾಡುಗು

ಹೇಳೊದು ಹೇಳಿದ್ದೆ
ಆ ಮೇಲೆ ಅವಕ್ಕವಕ್ಕೆ ಬಿಟ್ಟದು
ದೇವರ ನಾಯಿಗೊ ಅಪ್ಪದೋ
ಅಲ್ಲ ಕಳ್ಳ ಪುಚ್ಚಗೊ ಅಪ್ಪದೋಹೇಳಿ
ನಿಂಗಳೇ ಹೇಳಿ

~

ಸೊಡಂಕೂರು ಭಾಸ್ಕರ ಭಟ್

23 thoughts on “ಕಳ್ಳ ಪುಚ್ಚೆಯ ಒಳ್ಳೆ ನಾಯಿ ಮಾಡೆಕ್ಕು

  1. ನಿಮ್ ಭಾಷೆ ತುಂಬಾ ಬೆರಕೆ ಮಲಯಾಳ , ತುಳು , —- ಖುಷಿಯಾಯಿತು ನಿಮ್ಮ ಕವನ ಓದಿ .

  2. ಕಥೆಯ ಶೈಲಿ, ಅದರ ಒಳಾರ್ಥ, ಒಳಾರ್ಥವ ವಿವರ್ಸಿದ ರೀತಿ ತುಂಬ ಲಾಯ್ಕಾತು..
    ನಿಂಗಳ ಉತ್ತಮ ಮಾರ್ಗದರ್ಶನ ನಮ್ಮ ಬೈಲಿಂಗೆ ಸಿಕ್ಕುತ್ತಾ ಇರಲಿ.

  3. ಒಪ್ಪಣ್ಣ ಬೈಲಿನ ಬಂಧುಗಳೆಲ್ಲೋರ ಮೆಚ್ಚುಗೆಯ ಪ್ರತಿಕ್ರಿಯೆಗೊಕ್ಕೆ ಆನಂದ ಬಾಷ್ಪಂಗಳ ಮೂಲಕ ಹೃತ್ಪೂರ್ವಕ ಧನ್ಯವಾದಂಗೊ

  4. ಸೊಡಂಕೂರು ಮಾವಂಗೆ ಬೈಲಿಂಗೆ ಸ್ವಾಗತ..
    ನೀತಿ ಇಪ್ಪಂತಹ ಸುಂದರ, ಮಾದರಿ ಕವನ ಕಥನಕ್ಕೆ ಅಭಿನಂದನೆಗೋ
    ಹೀಂಗ ಬರಕ್ಕೊಂಡಿರಿ…

  5. ಸೊಡಂಕೂರು ಮಾವಂಗೆ ಸ್ವಾಗತ.ಕವನ ಲಾಯ್ಕ ಆಯಿದು.ನಿಂಗಳ ಬಾಯಿಂದಲೇ ಇದರ ಮೊನ್ನೆ ಕೇಳಿದ್ದು ಕುಶಿ ಆತು.

    1. ಗೋಪಾಲಣ್ಣಂಗೆ ಹೃತ್ಪೂರ್ವಕ ಧನ್ಯವಾದಂಗೊ

  6. ನೀತಿ ತುಂಬಾ ಒಳ್ಳೆದಿದ್ದು ಮಾವ… ಇಂದು ಕಳ್ಳ ಪುಚ್ಚ್ಹೆಗಳ ಹಾವಳಿ ಅದೆಷ್ಟು ಜಾಸ್ತಿ ಆಯಿದು ಹೇಳಿದರೆ ಒಳ್ಳೆ ನಾಯಿಗಳ ಬೊಗಳುಲೆ ಕೂಡಾ ಬಿಡುತ್ತವಿಲ್ಲೆ… ನಾವೆಲ್ಲ “ನಮ್ಮ ತೆಗಲೆಯ ಒಳ ಇಪ್ಪ ದನಿಯ ಏಳುಸೆಕ್ಕು”…ಏಳುಸಲೇಬೇಕು…

    1. ರಘು ಅಣ್ಣಂಗೆ, ಗಣೇಶಣ್ಣಂಗೆ ಮತ್ತು ಜಯಶ್ರೀಗೆ ಹೃತ್ಪೂರ್ವಕ ಧನ್ಯವಾದಂಗೊ.

  7. ಸೊಡಂಕೂರು ಮಾವಂಗೆ ಬೈಲಿಂಗೆ ಸ್ವಾಗತ.

  8. ಸೊಡ೦ಕೂರು ಮಾವ೦ಗೆ ಸ್ವಾಗತ.
    ಸರಳ ಸು೦ದರ ನೀತಿ.

    1. ರಘು ಅಣ್ಣಂಗೆ, ಬೊಳುಂಬು ಗೋಪಾಲಣ್ಣಂಗೆ ಹೃತ್ಪೂರ್ವಕ ಧನ್ಯವಾದಂಗೊ.

  9. ಭಾಸ್ಕರಣ್ಣಂಗೆ ಸುಸ್ವಾಗತ.
    ಒಂದು ನೀತಿಯ ತಿಳುಶಿದ ಕವನ ಲಾಯಿಕ ಆಯಿದು.
    ಬೈಲಿಂಗೆ ಬತ್ತಾ ಇರಿ, ಬರೆತ್ತಾ ಇರಿ

    1. ಕೃಷ್ಣಣ್ಣಂಗೆ ಹೃತ್ಪೂರ್ವಕ ಧನ್ಯವಾದಂಗೊ.

  10. ಸೊಡಂಕೂರು ಮಾವಂಗೆ ಸ್ವಾಗತ. ಉತ್ತಮ ಸಂದೇಶ ಕೊಟ್ಟತ್ತು ಕಥೆ-ಕವನ. ನಮ್ಮ ಕೆಲಸವ ಶ್ರದ್ಧೆಲಿ ಮಾಡುವೊ, ಎಂತ ಹೇಳ್ತಿ ? ಕತೆಪದ್ಯವ ಓದುವಗ ದಕ್ಷಿಣ ಕನ್ನಡದ ಪಾಡ್ದನ ನೆಂಪಾತು.

    1. ಬೊಳುಂಬು ಗೋಪಾಲಣ್ಣಂಗೆ ಹೃತ್ಪೂರ್ವಕ ಧನ್ಯವಾದಂಗೊ.

  11. ಸೊಡಂಕೂರು ಮಾವನ ‘ಕಥನ ಕವನ’ ದ ನೀತಿ ಪಾಠ ಲಾಯಿಕಿದ್ದು.
    ಬೈಲಿಂಗೆ ಸ್ವಾಗತ.

    1. ತೆಕ್ಕುಂಜ ಭಾವಂಗೆ ಹೃತ್ಪೂರ್ವಕ ಧನ್ಯವಾದಂಗೊ.

  12. ಸೊಡಂಕೂರು ಮಾವಂಗೆ ಬೈಲಿಂಗೆ ಸ್ವಾಗತ.

    ಮಾವನ ನೀತಿ ಕತೆ ಪದ್ಯ ಬರವ ಶೈಲಿಯೇ ಸೊಗಸಾಗಿದ್ದು. ಒಳ್ಳೆದ ಲಾಯಕವೂ ಇದ್ದು. ಕವನದ ಪ್ರತಿಯೊಂದು ಸಾಲೂ ಮನೋಹರವಾಗಿದ್ದು ಮಾರ್ಮಿಕವೂ ಆಗಿದ್ದು. ಅಕೇರಿಗೆ ಮುಕ್ತಾಯ ಶೈಲಿಯೂ ಚಂದ.

    “ನಿರಂತರ ಬೈಲಿಂಗೆ ಬಂದುಗೊಂಡಿರಿ, ಬರಕ್ಕೊಂಡಿರಿ” ಹೇಳ್ವದೀಗ – ‘ಚೆನ್ನೈವಾಣಿ’

    1. ಚನ್ನೈ ಭಾವಂಗೆ ಹೃತ್ಪೂರ್ವಕ ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×