ದಾಯವಾದ್ರು : ಕವನ – ಕಲ್ಪನಾ ಅರುಣ

ಬೈಲಿಂಗೆ ಇಳಿಯಲೆ ಸೌಕರ್ಯ ಇಲ್ಲದ್ದರೂ, ಬೈಲಿನ ಬಗ್ಗೆ ಅತೀವ ಪ್ರೀತಿ ಹೊಂದಿಂಡ ಅನೇಕ ನೆಂಟ್ರುಗೊ ನಮ್ಮ ಸುತ್ತಮುತ್ತ ಇದ್ದವು.
ಅಂತವರಲ್ಲಿ ಒಬ್ಬರು ಈ ಕಲ್ಪನಾ ಅಕ್ಕ. ಹೊನ್ನಾವರದ ಪ್ರೌಢಶಾಲೆ ಒಂದರಲ್ಲಿ ಅಧ್ಯಾಪಿಕೆ ಆಗಿಂಡು, ಹವ್ಯಾಸಲ್ಲಿ ಅನೇಕ ಸಾಹಿತ್ಯಕೃತಿಯ ಪ್ರಕಟಿಸಿಗೊಂಡು ಸರಸ್ವತಿ ಸೇವೆ ಮಾಡಿಗೊಂಡು ಇದ್ದವು.
ಹೊಸ್ತಿಲು, ಮಕ್ಕಳಹಾಡು, ವಸಂತ ಲಾಸ್ಯ, ಇತ್ಯಾದಿ ಕವನ ಸಂಕಲನ; ಸಸ್ಯಾಹಾರಿ ಅಡುಗೆಗಳ ಪುಸ್ತಕ, ಗೃಹಸಂಜೀವಿನಿ – ಮನೆ ಮದ್ದಿನ ಸಂಗ್ರಹ – ಇತ್ಯಾದಿ ಸುಮಾರು ಪುಸ್ತಕಂಗೊ ಪ್ರಕಟ ಆಯಿದು.
ಕಲ್ಪನಾ ಅರುಣ” ನಮ್ಮ ಬೈಲಿಂಗೆ ಕವನವೊಂದರ ಕಳುಸಿಕೊಟ್ಟಿದವು. ನಾವೆಲ್ಲರೂ ಓದಿ, ಒಪ್ಪ ಕೊಡುವೊ.
ನಮಸ್ಕಾರ.

ದಾಯವಾದ್ರು:

ಲೇಖಕಿ: ಕಲ್ಪನಾ ಅರುಣ್

ರಚನೆ: ಕಲ್ಪನಾ ಅರುಣ್

ದಾಯವಾದ್ರು ಅಂದ್ರೆ ಎಲ್ರ ಮನೆಲೂ ಹೊಡೆತೊ ಕತೆ
ಜಗಳ ಪುಕಾರು ದೂರು ಬರೀ ಚಾಡಿ ಮತ
ನೋಡ್ವೋರ ಕಣ್ಗೆ ಭಾರೀ ಪ್ರೀತಿ ಒಳಗೆ ನಡೇತೂ ಕಶ್ ಬಿಶಿ
ಆಸ್ತಿ ಪಾಸ್ತಿ ತಂಟೆ ತಕರಾರು ಗುಂಟೆಗೆ  ||

ಅಣ್ಣ ತಮ್ಮ ಸಣ್ಣಕ್ಕಿದ್ದಾಗ ಪ್ರೀತಿಂದಿದ್ದೊ
ಈಗ ನೋಡ್ದ್ರೆ ಮಾತಿಗ್ ಮಾತ ಬೆಳೆಸ್ತೊ
ಕೈಸಾರ್ ಮೈ ಸಾರ್ ಹೋದ್ರೂ ಹೆಚ್ಚೇನೂ ಇಲ್ಲೆ
ಕಟ್ಕಂಡ್ ಹೆಣ್ತಿರೂ ಎಲ್ಲದಕ್ಕೂ ಮುಂದೆ ಆಗ್ತೊ ||

ಕಂಜೂಸ್ ತನ ಲಾಯಕ್ಕಾಗ್ತು ಮುಂದೆ ಇರ್ತೊ
ಪಾಲು ಪೊಗಟೆ ಬರುವಂತದ್ರಲ್ಲಿ ಕಣ್ಣ ಕಣ್ಣ ಬಿಡ್ತೊ
ಹೆಚ್ಕಮ್ಮಿ ಆಗ್ದಗಿದ್ದಾಂಗ್ ಲೆಕ್ಕ ಹಾಕ್ತೊ
ಯಜಮಾನ್ ತನ್ಕೆ ಮಾಡೂಲೇ ಹಾತಬರೇತಿರ್ತೊ ||

ಯಾರಿಗೂ ಹೊತ್ಕಂಬ್ದು ಬೇಡ ಜವಾಬ್ದಾರಿ
ಮನೆತನಕ್ಕ ಬೇಕಾದ ಉಸಾಬರಿ
ಎಲ್ರಿಗೂ ಬೇಕು ದೊಡ್ಡಸ್ತಿಕೆ ಆಡಂಬ್ರ
ಅದ್ಕಾಗಿ ನಡೇತೀರ್ತು ಷಡ್ಯಂತ್ರ ||

ಆರಾಮಿಗೆ ಐಷಾರಾಮಿಗೆ ಬಪ್ಪುಲಾಗ ಗಂಡಾಂತ್ರ
ಸ್ವಾರ್ಥಕ್ ಬಿಟ್ಟು ಬೇರೆದಕ್ಕಿಲ್ಲೆ ಮತಾಂತ್ರ
ದಾಯವಾದಿತನವೇ ಈಗಿನ ಆಚಾರ ವಿಚಾರದಲ್ಲೂ ವಾ
ದುಡ್ಡಿನಾಸೆ ಸಾಯುತನ್ಕ ದೊಡ್ಡೊರಾದ್ರೂವಾ||

~*~*~

ಸೂ:

  • ದಾಯವಾದ್ರು = ದಾಯಾದಿ
  • ಲೇಖಕಿಯ ವಿಳಾಸ:
    ಶ್ರೀಮತಿ ಕಲ್ಪನಾ ಅರುಣ
    ಪತಿ: ಅರುಣ ಹೆಗಡೆ,
    57, “ಚೈತನ್ಯ”,
    5 ನೇ ಮುಖ್ಯ ರಸ್ತೆ,
    ಶ್ರೀ ಲಕ್ಷ್ಮೀನಾರಾಯಣ ಬಡಾವಣೆ
    ಮುನ್ನೆಕೊಳಾಲು, ಮಾರತಹಳ್ಳಿ
    ಬೆಂಗಳೂರು – 560037

ಶ್ರೀಮತಿ ಕಲ್ಪನಾ ಅರುಣ

You may also like...

7 Responses

  1. ಚೆನ್ನೈ ಭಾವ° says:

    ಕಲ್ಪನಾಕ್ಕಂಗೆ ಬೈಲಿಂಗೆ ಸ್ವಾಗತ.

    ಕವನ ಲಾಯಕ ಆಯ್ದು. ಒಪ್ಪ. ಬತ್ತಾ ಇರಲಿ.

  2. ಹವ್ಯಕ ಭಾಷೆಲಿ ಎಷ್ಟು ವೈವಿದ್ಯ ಇದ್ದು ಅಲ್ಲದಾ…
    ಕೊಶಿ ಆತು, ಕಲ್ಪನ ಅಕ್ಕನ ಕವನ ಓದಿ.

  3. ಬೆಟ್ಟುಕಜೆ ಮಾಣಿ says:

    ಸ್ವಾಗತ..ಕವನ ಚೆಂದ ಇದ್ದು..ಹವ್ಯಕ ಭಾಷಾ ವೈವಿಧ್ಯತೆ ಕಾಣ್ತು..ಪ್ರತಿಭೆಗೆ ಸರಿಯಾದ ಅವಕಾಶ ಸಿಕ್ಕಿ ಸಮಾಜಲ್ಲಿ ಗುರುತುಸುವಹಾಂಗೆ ಆಗಲಿ..

  4. ಶರ್ಮಪ್ಪಚ್ಹಿ says:

    ಸುಸ್ವಾಗತ ಬೈಲಿಂಗೆ.
    ಹವ್ಯಕ ಭಾಷೆಯ ವೈವಿಧ್ಯತೆ ಬೈಲಿಲ್ಲಿ ಬತ್ತಾ ಇಪಪ್ದು ಸಂತೋಷದ ಸಂಗತಿ

  5. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

    ಸಂತೋಷ ಆತು. ಸ್ವಾಗತ.

  6. “ಸ್ವಾರ್ಥಕ್ ಬಿಟ್ಟು ಬೇರೆದಕ್ಕಿಲ್ಲೆ ಮತಾಂತ್ರ” ದೇಶ- ರಾಜ್ಯ ಗಳ ರಾಜಕೀಯಕ್ಕೂ ಹಲವು ಮನೆಗಳಲ್ಲಿಪ್ಪ ಪರಿಸ್ಥಿತಿಗೂ ಎಷ್ಟು ಸಾಮ್ಯ ! ಉ.ಕ.ದ ಹವ್ಯಕ ಶೈಲಿಯ ಪದ್ಯ ಲಾಯಕ್ ಇಜ್ಜು.

  7. “ಸ್ವಾರ್ಥಕ್ ಬಿಟ್ಟು ಬೇರೆದಕ್ಕಿಲ್ಲೆ ಮತಾಂತ್ರ” ದೇಶ- ರಾಜ್ಯ ಗಳ ರಾಜಕೀಯಕ್ಕೂ ಹಲವು ಮನೆಗಳಲ್ಲಿಪ್ಪ ಪರಿಸ್ಥಿತಿಗೂ ಎಷ್ಟು ಸಾಮ್ಯ ! ಉ.ಕ.ದ ಹವ್ಯಕ ಶೈಲಿಯ ಪದ್ಯ ಲಾಯಕ್ ಇದ್ದೊ/ಇಜ್ಜು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *