ಕೇಚಣ್ಣನ ಬದರೀಯಾತ್ರೆ

ಕೇಚಣ್ಣನ  ಬದರೀಯಾತ್ರೆ

 

ಉತ್ತರಾಖಂಡದ
ಬದರೀ ಕೇದಾರಕ್ಕೆ
ಹೋಗಿತ್ತಿದ್ದೆ ಆನು ಕಳುದ ವಾರ |
ಗಂಗೋತ್ರಿ ಯಮುನೋತ್ರಿ
ರುದ್ರ ಪ್ರಯಾಗ ವ
ನೋಡೆಕ್ಕು ಹೇಳಿತ್ತು, ಎಂತ ಗ್ರಾಚಾರ ! |೧|

ಎಂತಾತೊ ಫಕ್ಕನೆ
ಕವಿದತ್ತು ಮಳೆಮೋಡ
ಸೊಯಿಪ್ಪಿತ್ತು ರಪರಪನೆ ಅಬ್ಬಬ್ಬ! ಶಿವನೆ |
ಕರಿಮುಗಿಲೊ!ಉರಿಕಡಲೊ !
ನೀರೊ!ನೀರೇ ನೀರು
ಹನಿಕಡಿಯ ಹೊಯಿದತ್ತು , ಒಂದೇಸಮನೆ |೨|

ಬೆಟ್ಟ ಗುಡ್ದೆಲಿ ಎಲ್ಲು
ಗಂಗೆ ಯಮುನೆಯರೆಲ್ಲ
ತುಂಬುನದಿ ಸಕಲವನು ನುಂಗಿ ಹಾಕಿ |
ಎಷ್ಟೋ ಗುಡ್ಡೆಗೊ ಜೆರುದು
ಪಾತಾಳ ಕಂಡತ್ತು
ಬದರೀ ನಾಥನ ಗುಡಿಯು ಮಾಂತ್ರ ಬಾಕಿ |೩|

ಅಂಗಡಿ ಮುಂಗಟ್ಟು
ಆತೆಲ್ಲ ಸಮತಟ್ಟು
ಗುಡ್ಡೆ ಕರೆಯ ಮಾರ್ಗ ಜೆರುದು ಹೋತು।
ಎಷ್ಟೊ ಮಾನವ ಜೀವ
ಹುಚ್ಚು ಹೊಳೆ ನೀರಿಲ್ಲಿ
ಕೊಚ್ಚಿ ಹೋತು ದೇವ ಪಾದ ಸೇರಿತ್ತು |೪|

ಅಂತು ಗೊಂತಿಲ್ಲದ್ದ
ಊರಲ್ಲೆಲ್ಲೋ ನಾವು
ಸಿಕ್ಕಿ ಬಿದ್ದತ್ತನ್ನೇ ಹೇಳಿ ಕಂಡತ್ತು।
ನಿಂಬಲೂ ಕೂಪಲೂ
ಎಡಿಯದ್ದ ಹಾಂಗಾತು
ಬದುಕ್ಕಿ ಒಳಿವ ಆಶೆ ಕಡುದೇ ಹೋತು |೫|

ಅದ! ಅಲ್ಲಿ ಬಾನಲ್ಲಿ
ಬಂತು’ ಲೋಹದ ಹಕ್ಕಿ’
ನಮ್ಮ’ ಸೈನ್ಯದ ಮಕ್ಕೊ’ಇದ್ದವದರಲ್ಲಿ |
ಇನ್ನೆಂತ ಹೆದರಿಕೆ ?
ಬದುಕಿದೆಯೊ ಬಡಜೀವ
ಹತ್ತುಸಿದವೆನ್ನನ್ನು ನೆಗ್ಗಿ ಅದರಲ್ಲಿ |೬|

ಹಾರಿಂಡು ಬಪ್ಪಾಗ
ಎಂತಾತೊ?ಹೇಂಗಾತೊ?
ದಡುಬುಡುನೆ ಬಿದ್ದಾಂಗೆ ಶಬ್ದ ಕೇಳಿತ್ತು |
ಎಲ್ಲಿ ಬದರಿನಾಥ !
ಮಂಚಂದ ಬಿದ್ದದು
ಕಣ್ಬಿಟ್ಟು ನೋಡಿದೆ  ಎಚ್ಚರಾತು!  |೭|

(ಭೀಕರವಾದ ದುರಂತ ಮನಸ್ಸಿಡಿ ತುಂಬಿ0ಡಿತ್ತು . ನಮ್ಮ ಸೈನ್ಯದ ಜವ್ವನಿಗರ ಸಾಹಸ ,ಧೈರ್ಯಕ್ಕೆ ಕೈ ಮುಗುದು ಈ ಶುದ್ದಿ ಹೇಳಿದ್ದೆ.)

 ~~~~***~~~

ಬಾಲಣ್ಣ (ಬಾಲಮಧುರಕಾನನ)

   

You may also like...

5 Responses

 1. SANDESH says:

  Wah.. Wah..

 2. ತೆಕ್ಕುಂಜ ಕುಮಾರ ಮಾವ° says:

  ಈ ಕನಸು ಕನಸಾಗಿಯೇ ಒಳಿಯೆಕ್ಕಾತು, ಅಲ್ಲದೋ ಬಾಲಣ್ಣ.
  ಲಾಯಿಕ್ಕಾಯಿದು, ಅಭಿನಂದನೆಗೊ.

 3. ಸರಳ ಪದಪ್ರಯೋಗದ ಮೂಲಕ ಈ ಬಾಲಣ್ಣ ಅದೇಂಗೆ ಇಷ್ಟು ಲಾಯಕಕ್ಕೆ ಪದ್ಯ ಬರತ್ತ ಇದ್ದವು ಹೇದು ಎರಡು ಮೂರು ಸರ್ತಿ ಪದ್ಯವ ನೋಡಿಗೊಂಡೇ ಬಾಕಿ ಆನು ಈ ಸರ್ತಿ. ಉಹುಮ್ಮ್ಮ್ಮ್… , ಕೆಲವೇ ಜೆನರಿಂಗೆ ಒಲಿವದು ಹೀಂಗಿರ್ಸೆಲ್ಲ ಖಂಡಿತ.

  ಬಾಲಣ್ಣನ ಪ್ರತಿಪದ್ಯಂಗಳೂ ವಿಶೇಷ ಗಮನ ಸೆಳಕ್ಕೊಂಡಿದ್ದು ಹೇದು ಹೇಳಿತ್ತು – ‘ಚೆನ್ನೈವಾಣಿ’

 4. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಲಾಯ್ಕಾಯಿದು.ಅಭಿನಂದನೆಗೊ

 5. ಇಂದಿರತ್ತೆ says:

  ಯಾವ ಆಡಂಬರವೂ ಇಲ್ಲದ್ದೆ ಇಷ್ಟೂ ಸರಳವಾದ ಪದಪ್ರಯೋಗಲ್ಲಿ , ಆದರೆ ಪ್ರೌಢವಾದ ಕವನಂಗಳ ನಿಂಗೊ ಹೇಂಗೆ ಬರೆತ್ತಿ ಬಾಲಣ್ಣ ! ಆಹಾ! ಮನಸ್ಸಿಂಗಾದ ಕೊಶಿಯ ವಿವರುಸುಲೆ ಅರಡಿತ್ತಿಲ್ಲೆ- ನಿಂಗಳ ಸಾಮರ್ಥ್ಯಕ್ಕೆ ಅಡ್ಡಬಿದ್ದೆ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *