ಕೇಚಣ್ಣನ ಗಡಿಬಿಡಿ

ಕೇಚಣ್ಣನ ಗಡಿಬಿಡಿ

ಆಚಮನೆ ಕೇಚಣ್ಣ
ಭಾರಿ ಗಡಿಬಿಡಿಯೋನು
ನೆಂಟ್ರು ಬಂದವು ಅಂದು ಅವನ ಮನಗೆ/
” ಎಂತದು ಭಾವಯ್ಯ
ಸೌಕ್ಯವೇ ಅಲ್ಲದೋ
ಕೈಕಾಲು ತೊಳಕ್ಕೊಂಡು ಬನ್ನಿ ಒಳಾಂಗೆ” /೧/ಕೇಚಣ್ಣನ ಗಡಿಬಿಡಿ

“ಮಜ್ಜಿಗೆ ನೀರಕ್ಕೊ
ಬೆಲ್ಲ ನೀರೇ ಬೇಕೋ
ಕಾಪಿ ಚಾಯವೋ ?”ಮತ್ತೆ ಕುಡುದರಾತು ‘ /
” ಅಮ್ಸರಏನಿಲ್ಲೆ
ಸಮಾಧಾನಕ್ಕೆ ಸಾಕು ”
ನೆಂಟ್ರಿಂಗೆ ಎಲ್ಲಬಗೆ ಉಪಚಾರಾತು /೨/

ಅಟ್ಟುಂಬೊಳದ ಒಳ
ಪಟ್ಟಾಂಗ ರೈಸಿತ್ತು
ಬೆಶಿ ಬೆಶಿ ಶುದ್ದಿಗೊ ಬಾಯಿ ತುಂಬಾ /
” ಊಟಕ್ಕಾತು ಏಳಿ
ಬೈರಾಸು ಮಡಗಿದ್ದೆ”
” ಬನ್ನಿ ಭಾವ ನಾವು ಒಟ್ಟಿಂಗುಂಬ” /೩/

” ಆಗಳೇ ಬೈಂದೆನಗೆ
ಎಂತದೋ ಪರಿಮ್ಮಳ
ಹಸರ ಪಾಚವೋ! ಎರಡು ಕೈಲು ಬಡುಸು “/
ಊಟ ಗಡದ್ದಾತನ್ನೆ
“ಯೇ ಮಾಣಿ ಮಾವಂಗೆ
ತೆಂಕ ಚಾವುಡಿಲಿ ಹಾಸಿಗೆಯಬಿಡುಸು /೪/

ಉದಿಯಾತು ಎರಡು ದಿನ
ಹೀಂಗೆಯೇ ಕಳುದತ್ತು
ತೋಟಗದ್ದೆಯೋ ಎಲ್ಲ ಸುತ್ತಿ ಆತು /
“ನಾಳೆ ಉದಿಯಪ್ಪಾಗ
ಹೆರಡುತ್ಸು ಭಾವಯ್ಯಾ ”
ಬಟ್ಟೆ ಬರೆ ಬ್ಯಾಗಿಲ್ಲಿ ತುಂಬಿಆತು /೫/

“ಬಸ್ಸು ಮಾರ್ಗಕ್ಕಿಲ್ಲಿ
ಹತ್ತುಮಿನಿಟಿನ ದಾರಿ
ಪೈಸೆ ಖರ್ಚೆಂತಕೆ ಹೋಪ ನೆಡದೆ ” /
ಹೇಳಿಂಡು ಹೆರಟದು
ಕೇಚಣ್ಣ ಮುಂದಂದ
ಎಲ್ಲೋರ ಬ್ಯಾಗನ್ನು ಕೈಲಿ ಹಿಡುದೆ /೬/

ಆ ಶುದ್ದಿ ಈ ಶುದ್ದಿ
ಮಾತಾಡಿಂಡಿಪ್ಪಾಗ
ಬಸ್ಸು ಬಂದದು ಕೂಡ ಗೊಂತಾತಿಲ್ಲೆ /
ಗಡಿಬಿಡಿಲೆ ಕೇಚಣ್ಣ
ಬಸ್ಸತ್ತಿ ಹೆರಟೋದ
ಬಂದ ನೆಂಟ್ರೋ !ಬಾಕಿ ಬಸ್ಟೇಂಡಿಲೇ !/೭/

~~~***~~~

 

 

ಬಾಲಣ್ಣ (ಬಾಲಮಧುರಕಾನನ)

   

You may also like...

22 Responses

 1. ಶ್ಯಾಮಣ್ಣ says:

  ತೊಂದರೆ ಇಲ್ಲೆ ಬಾಲಣ್ಣ … ಬಸ್ಸು ವಾಪಾಸು ಬಪ್ಪಗ ಅವನೂ ವಾಪಾಸು ಬಕ್ಕು.

  • ಬಾಲಣ್ಣ (ಬಾಲಮಧುರಕಾನನ) says:

   ಶಾಮಣ್ಣಾ ,ಚಿತ್ರದ ರೂಪಲ್ಲಿ ಪ್ರತಿಕ್ರಿಯೆ ಬಂದರೆ ಇನ್ನುದೆ ಲಾಯಕಿತ್ತು, ಅಲ್ಲದೋ ?

   • ಶ್ಯಾಮಣ್ಣ says:

    ಹೇಂ… ನಿಂಗಳುದೆ ಚಿತ್ರ ಬಿಡುಸುಲೆ ಅಕ್ಕಲ್ಲದೋ? ಎನ್ನ ಚಿತ್ರಕ್ಕೆ ಎಂತಕೆ ಕೊಡಿ ಬಿಡುದು?

    • ಶ್ಯಾಮಣ್ಣ says:

     *ಕೊದಿ*

    • ಬಾಲಣ್ಣ (ಬಾಲಮಧುರಕಾನನ) says:

     ಪೀಂಕುದು ಎಂತಕೆ ಶಾಮಣ್ಣಾ ….

    • ಶ್ಯಾಮಣ್ಣ says:

     ಪೀಂಕುಸುವೋರ ಕೈಲಿ ಸಿಕ್ಕಿ ಹಾಕಿಕೊಂಬ ಬದಲು ಪೀಂಕುದೇ ಒಳ್ಳೆದಲ್ಲದೋ ಬಾಲಣ್ಣಾ?

   • ತೆಕ್ಕುಂಜ ಕುಮಾರ ಮಾವ° says:

    ಎಂಗೊಗೆ ಇಬ್ರುದೇ ಚಿತ್ರ ಬರದು ಹಾಕಿರೂ ಆಗ ಹೇಳಿ ಇಲ್ಲೆ – ಬಾಲಣ್ಣ, ಶ್ಯಾಮಣ್ಣ

    • ಶ್ಯಾಮಣ್ಣ says:

     ಇದಾ ಕುಮಾರ ಬಾವಾ, ಇಬ್ಬರ ಜಗಳಲ್ಲಿ ಮೂರನೆಯವ ಲಾಬ ಮಾಡಲೇ ಅಂದಾಜಿ ಮಾಡುದು ಬೇಡ. ಕೋಣವೆರಡುಂ ಹೋರೆ ಗಿಡುವಿಂಗೆ ಕುತ್ತಾಯ್ತು ಗೊಂತಿದ್ದಲ್ಲದೋ? 😉

    • ಬಾಲಣ್ಣ (ಬಾಲಮಧುರಕಾನನ) says:

     ಇದು ” ಕಲಾ ” -ಪ್ರೇಮ ಕಲಹ (ಜಗಳ! ) ಅಲ್ಲದೋ ?

 2. ಲಕ್ಷ್ಮಿ ಜಿ.ಪ್ರಸಾದ says:

  ಬಂದ ನೆಂಟ್ರೋ !ಬಾಕಿ ಬಸ್ಟೇಂಡಿಲೇ…ಲಾಯಕ ಆಯಿದು ಶ್ಯಾಮಣ್ಣ

  • ಲಕ್ಷ್ಮಿ ಜಿ.ಪ್ರಸಾದ says:

   ಕ್ಷಮಿಸಿ ತಪ್ಪಿ ಶ್ಯಾಮಣ್ಣ ಹೇಳಿ ಬರದೆ ಬಂದ ನೆಂಟ್ರೋ !ಬಾಕಿ ಬಸ್ಟೇಂಡಿಲೇ…ಲಾಯಕ ಆಯಿದು ಬಾಲಣ್ಣ ಹೇಳಿ ಆಯಕ್ಕು

   • ಶ್ಯಾಮಣ್ಣ says:

    ಛೆ… ಆನು ದರ್ಮಕ್ಕೆ ಎನ್ನ ಖಾತೆಗೆ ಒಂದು ಒಪ್ಪ ಬಿದ್ದತ್ತು ಹೇಳಿ ಗ್ರೇಷಿದೆ…. ವಾಪಾಸು ಹೋತನ್ನೇ … 🙁

 3. GOPALANNA says:

  ಅಂತೂ ಬ್ಯಾಗ್ ಮುಟ್ಟಿತ್ತು; ನೆಂಟರು ಬಾಕಿ! ಚೊಕ್ಕ ಆಯಿದು.ವಿಮಾನಲ್ಲಿ ಹೋಪಾಗ ಕೆಲವೊಮ್ಮೆ ಆವುತ್ತ ಹಾಂಗೆ !

 4. ಶೈಲಜಾ ಕೇಕಣಾಜೆ says:

  ಬಾಲಣ್ಣಾ… ಓದಿ ಬಾಕಿಯೆ ಎಂಗೊ ನೆಗೆ ಮಾಡಿಯೇ…

 5. ಬೊಳುಂಬು ಗೋಪಾಲ says:

  ಕೇಚಣ್ಣನ ಅವಸರ ಲಾಯಕಾಯಿದು. ಚೆ. ಊರಿಂಗೆ ಅದೊಂದು ಬಸ್ಸು ಮಾಂತ್ರ ಇಪ್ಪದು. ದಿನಕ್ಕೊಂದು ಟ್ರಿಪ್ಪು ಮಾಂತ್ರ ಆಡ. ಚೆ. ಸೋತತ್ತಾನೆ. ಕೇಚಣ್ಣ ಕತ್ಲೆ ಅಪ್ಪಗ ಬಕ್ಕಾಯ್ಕು. ಅವನ ಕೈಲಿ ಪೈಸೆಯುದೆ ಇಲ್ಲೇನೆ. ಬಾಲಣ್ಣ ಸೂಪರ್ ಆಯಿದು.

 6. ಛೆ !ಕೇಚಣ್ಣ ಎಂಥಾ ಮರೆಗುಳಿ!!ಲಾಯಿಕಾಯಿದು ಬಾಲಣ್ಣ

 7. raghu muliya says:

  ಗಡಿಬಿಡಿಯ ಕೇಚಣ್ಣ
  ಗಾಡಿ ಹತ್ತಿದ ಕತೆಯ
  ಕೊಡಿಕೊಡಿಯೆ ಓದಿದ್ದು ಮನ್ನೆ ಆನು
  ತಡವಲೆಡಿಗೋ ನೆಗೆಯ
  ಬಿಡು ಬಿಡುಸಿ ಓದಿದರೆ
  ಮಡುಸಿ ಮಡಗಲೆ ಮನಸು ಬಾರ ಮಾವ

  • ಬಾಲಣ್ಣ (ಬಾಲಮಧುರಕಾನನ) says:

   ಆಹಾ ,ದ್ವಿತೀಯಾಕ್ಷರ ಪ್ರಾಸ ಕೊಟ್ಟು ಒಪ್ಪ ಕೊಟ್ಟದು ಲಾಯಕಾಯಿದು ಮುಳಿಯದಣ್ಣಾ

   * ಮುಳಿಯದಣ್ಣನ ಒಪ್ಪ
   ಒಳಿಯ , ಬಾರದ್ದಿಕ್ಕೋ !
   ಕಳಿಯ ಬಾರದ್ದವು, ಬೈಲಿನವಕ್ಕೆ /
   ಮಳೆ ಹನುದ ಭೂಮಿಲಿ
   ಬೆಳೆ ಬೆಳದು ಬಪ್ಪಾಂಗೆ
   ಒಳ ಇಪ್ಪ ಕವಿ ಶಕ್ತಿ ಹೆರವೆ ಬಕ್ಕು /

 8. raghu muliya says:

  ಹೊ .. ಬಾಲಣ್ಣ ಮಾವನ ಚಿತ್ರವೂ ಫಷ್ಟಾಯಿದು .

 9. ಶ್ಯಾಮಣ್ಣ says:

  ಹೋ ಈಗ ಗೊಂತಾತು ಕೇಚಣ್ಣ ಎಂತಕೆ ಗಡಿಬಿಡಿಲಿ ಬಸ್ಸತ್ತಿ ಹೋದ್ದು ಹೇಳಿ… ಅವಂದೊಂದು ಪಟ ತಪ್ಪಲೆ ಇತ್ತಡ… ಅದರ ತಪ್ಪಲೆ ಹೋದ್ದಡ… ಹಾಂಗೆ ತಂದ ಪಟವ ಈಗ ಅಲ್ಲೇ ಮೇಲೆ ಹಾಕಿದ್ದವು. ನೋಡಿದ್ದಿರಾ?

 10. ಕೇಚಣ್ಣ ಅಲ್ಲಿಗೆತ್ತಿಕ್ಕಿ ನಿಂಗೊ ಎಲ್ಲಿದ್ದಿ ಹೇದು ಫೋನು ಮಾಡಿಕ್ಕೋ!!

  • ಬಾಲಣ್ಣ (ಬಾಲಮಧುರಕಾನನ) says:

   ಮತ್ತೆ! ಮಾಡದ್ದಿಕ್ಕೊ ? “ಪರಿದಿಕ್ಕ್ ಪೊರತ್ತಾಣ್ “ಹೇದು ಹೇಳಿದವಾಡ , .ವಾಪಾಸು ಮಾಡಿಯಪ್ಪಗ “ನಿಂಗಲ್ ವಿಳಿಚ್ಚ್ಚ ಆಳ್ ತೆರಕ್ಕಿಲಾಣ್ ‘ ಹೇದವಾಡ ,ಮತ್ತೂ ಒಂದರಿ ಮಾಡಿಯಪ್ಪಗ “ಬೆಶಿ ” ಹೇಳಿ ಬಂತಾಡ , ಅಷ್ಟಪ್ಪಾಗ ಕೇಚಣ್ಣಂಗುದೆ ಬೆಶಿಯಾತು – ಎಂಬಲ್ಲಿಗೆ …..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *