ಕೆಪ್ಪನೂ ಕೆಪ್ಪಿಯೂ ಮನೆಯ ಕಟ್ಟಿದ ಕತೆ

ಕೆಪ್ಪನೂ ಕೆಪ್ಪಿಯೂ ಊರಿಲಿದ್ದ ಜಾಗೆಯ ಮಾರಿಕ್ಕಿ ಪೇಟೆಲಿ ಬಂದು ಕೂಪದು ಹೇಳಿ ತೀರ್ಮಾನ ಮಾಡಿದವು. ಕೆಪ್ಪಿಗೆ ಮನೆ ದೊಡ್ಡದಾಗಿ ಇರೆಕ್ಕು; ನೆಲಕ್ಕಕ್ಕೆ ಗ್ರಾನೈಟು, ವಿಟ್ಟಿರಿಫೈ ಹಾಕೆಕ್ಕು ಹೇಳಿಗೊಂಡು. ಕೆಪ್ಪ° ಬಿಡುಗೋ? ಬಜೆಟ್ಟೇ ಕಮ್ಮಿ ಇಪ್ಪದಿಲ್ಲಿ, ಅದೂ ಅಲ್ಲದ್ದೆ ಕಾಲುಜಾರುತ್ತು ಆ ಹಂಚುಗಳ ಇಪ್ಪಲ್ಲೆಲ್ಲ ಹಾಸಿರೆ ಹೇಳಿ ಕೆಪ್ಪನದ್ದಾತು. ಕೆಪ್ಪಿಗೆ ಕೋಪಬಂದು ಎರಡು ದಿನ ಮಾತಾಡಿದ್ದಿಲ್ಲೇಡ…
ಮಕ್ಕೊ ಎರಡೋ ಮೂರೋ ಆಗಲಿ ಹೇಳಿದ ಕೆಪ್ಪ°. ನಿಂಗೊಗೆ ಎಂತ ಗೊಂತಕ್ಕು, ಎನಗಲ್ಲದೋ ಬಙ್ಙ, ಹೇಳಿತ್ತು ಕೆಪ್ಪಿ. ಕಡೆಂಗೆ ಕೆಪ್ಪನೂ ಒಪ್ಪಿದ. ಹಾಂಗೆ ಒಂದೊಂದು ವಿಷಯಲ್ಲಿ ರಾಜಿಯಾಗಿಯೊಂಡು ಕೆಪ್ಪನೂ ಕೆಪ್ಪಿಯೂ ಚೆಂದಲ್ಲಿ ಒಟ್ಟಿಂಗೆ ಬದುಕ್ಕಿದವು ಹೇಳಿಗೊಂಡು ಕೆಪ್ಪನೂ ಕೆಪ್ಪಿಯೂ ಮನೆಯ ಕಟ್ಟಿದ ಕತೆ.
~ಬೊಳುಂಬು ಕೃಷ್ಣಭಾವ°

[ಕೆಪ್ಪ°]ಚಿನ್ನದ ತುಂಡಿಂದ ಕಟ್ಟಲೇ ಬೇಕೋ |

ಮನೆಯೊಂದಿದ್ದರಾಗದೋ |ಹೇಳೀಗ|

ಸೂರೊಂದಿದ್ದರಾಗದೋ |

[ಕೆಪ್ಪಿ]ಚಿನ್ನದ ಮನಸ್ಸಿಂದ ಕಟ್ಟಲೇ ಬೇಕು |

ಮನೆಯೊಂದಿದ್ದರೆ ಸಾಲ |ಮೇಗೆ|

ಸೂರೊಂದಿದ್ದರೆ ಸಾಲ |

[ಕೆಪ್ಪನೂ ಕೆಪ್ಪಿಯೂ] ಚಿನ್ನದ ತುಂಡಿಂದ ಕಟ್ಟಿರೆ ಸಾಲ | ಒಳ್ಳೇ ಶ್ರದ್ಧೆಯಲೇ ಕಟ್ಟೆಕ್ಕು ||

[ಕೆಪ್ಪಿ] ಗ್ರಾನೈಟ್ ಹಾಸಿದ ಚಾವಡಿಯೂ | ವಿಟ್ಟಿರಿಫೈ ಹಾಸಿದ ಒಳಮನೆಯೂ |
[ಕೆಪ್ಪ°] ಕರ್ಗಲ್ಲಿನ ನೆಲಕ್ಕವೋ ನವಗೆಂತಕೆ |

ಆ ಜಾರಟೆ ಹಂಚಿನ ಪೊದ್ರ ಎಂತಕೆ |

ಭಾರೀ ವಿಸ್ತರವಾದೊಂದು ಮಾಳಿಗೆಯೋ |

ಬಲು ಎತ್ತರವಾದೊಂದು ನೆಡುಮನೆಯೋ |
ನವಗೆಂತಕೆ ಬಾನ್ಚುಂಬಿಗೊ | ನಮ್ಮದಿನ್ನೂ ಹೆಚ್ಚಿನದ್ದಲ್ಲದೋ |

[ಕೆಪ್ಪನೂ ಕೆಪ್ಪಿಯೂ] ಚಿನ್ನದ ತುಂಡಿಂದ ಕಟ್ಟಿರೆ ಸಾಲ | ಒಳ್ಳೇ ಶ್ರದ್ಧೆಯಲೇ ಕಟ್ಟೆಕ್ಕು ||

[ಕೆಪ್ಪಿ]ಎರಡೋ ಮೂರೋ ಕಟ್ಟುವನೋ | ಕೆಂಗಲ್ಲಿನ ಚೆಂದದುಪ್ಪರಿಗೆಗಳ |
[ಕೆಪ್ಪ°]ಎರಡೋ ಮೂರೋ ಕಟ್ಟೆಕ್ಕೋ? | ನೆಲಮಹಡಿಯಲ್ಲದ್ದೆ ಇನ್ನೊಂದು ಬೇಕೋ? |
[ಕೆಪ್ಪ°]ಎರಡೋ ಮೂರೋ ಹೊತ್ಸುವನೋ | ಜೀವಿತ ಬೆಳಗುವ ಹಣತೆಗಳ |
[ಕೆಪ್ಪಿ] ನಾವೊಂದಾಗಿಪ್ಪಗ ಎರಡೆಂತಕೆ? | ಒಂದುದೇ ಬೆಳಗದೋ ಜೀವಿತವ? |

[ಕೆಪ್ಪನೂ ಕೆಪ್ಪಿಯೂ] ಚಿನ್ನದ ತುಂಡಿಂದ ಕಟ್ಟಿರೆ ಸಾಲ | ಒಳ್ಳೇ ಶ್ರದ್ಧೆಯಲೇ ಕಟ್ಟೆಕ್ಕು ||

[ಕೆಪ್ಪನೂ ಕೆಪ್ಪಿಯೂ] ಚಿನ್ನದ ಮನಸ್ಸಿಂದ ಕಟ್ಟಲೇ ಬೇಕು |ಮನೆಯೊಂದಿದ್ದರೆ ಸಾಲ |
ಮೇಗೆ – ಸೂರೊಂದಿದ್ದರೆ ಸಾಲ |

ಬೊಳುಂಬು ಕೃಷ್ಣಭಾವ°

   

You may also like...

17 Responses

 1. Gopalakrishna BHAT S.K. says:

  ಚೊಕ್ಕ ಪದ್ಯ.ಧಾಟಿ ಹೇಂಗೆ?

  • ಬೊಳುಂಬು ಕೃಷ್ಣಭಾವ° says:

   ಧನ್ಯವಾದಂಗೊ ಗೋಪಾಲಣ್ಣಾ.
   ಪದ್ಯದ ಧಾಟಿ ಮಲೆಯಾಳದ “ನಲ್ಲ ಮಾಂಬು ಪಾಡಂ” ಹೇಳ್ತ ಒಂದು ಪದ್ಯದ್ದು. ಇಲ್ಲಿ ಧಾಟಿಯ ಹೊರತು ಒಳುದ್ದು ಎಲ್ಲವುದೇ ಸ್ವತಂತ್ರ ಕಲ್ಪನೆ.
   ರಾಗದ ಹೆಸರು ಗೊಂತಿಲ್ಲೆ, ತಾಳ ಆದಿತಾಳ (ಎರಡು ಕಳೆ).

  • ಬೊಳುಂಬು ಕೃಷ್ಣಭಾವ° says:

   ಧನ್ಯವಾದಂಗೊ ಗೋಪಾಲಣ್ಣಾ.
   ಪದ್ಯದ ಧಾಟಿ ಮಲೆಯಾಳದ “ನಲ್ಲ ಮಾಂಬು ಪಾಡಂ” ಹೇಳ್ತ ಒಂದು ಪದ್ಯದ್ದು. ಇಲ್ಲಿ ಧಾಟಿಯ ಹೊರತು ಒಳುದ್ದು ಎಲ್ಲವುದೇ ಸ್ವತಂತ್ರ ಕಲ್ಪನೆ.
   ರಾಗದ ಹೆಸರು ಗೊಂತಿಲ್ಲೆ, ತಾಳ ಆದಿತಾಳ (ಎರಡು ಕಳೆ).

 2. ಪದ್ಯ ಪಸ್ಟ್ಟಾಯಿದು ಬಾವಾ…ಇದರ ಹಾಡುದು ಹೇಂಗೆ..?

  • ಬೊಳುಂಬು ಕೃಷ್ಣಭಾವ° says:

   ಧನ್ಯವಾದಂಗೊ ಅಡ್ಕತ್ತಿಮಾರು ಮಾವಾ..

 3. ರಘು ಮುಳಿಯ says:

  ಹೊ೦ದಾಣಿಕೆಯ ಸಹಬಾಳ್ವೆ ನೆಮ್ಮದಿಯ ಗುಟ್ಟು ಹೇಳೊದರ ಉದಾಹರಣೆಯೊಟ್ಟಿ೦ಗೆ ಚೆ೦ದಕ್ಕೆ ಬರದ್ದಿ,ಬೊಳು೦ಬು ಭಾವಾ.
  ಜನಪದ ಗೀತೆಯ ಶೈಲಿ ಆಗಿರೆಕ್ಕು,ಅಲ್ಲದೋ?

  • ಬೊಳುಂಬು ಕೃಷ್ಣಭಾವ° says:

   ಮುಳಿಯದ ಭಾವಂಗೆ ಧನ್ಯವಾದಂಗೊ.

 4. ಬೊಳುಂಬು ಮಾವ says:

  ಕೆಪ್ಪನೂ, ಕೆಪ್ಪಿಯು ಒಮ್ಮತಕ್ಕೆ ಬಂದು ಮನೆ ಕಟ್ಟಿದವನ್ನೆ. ಅದು ಬೇಕಾದ್ದದು. ನಮ್ಮ ಕೆಪ್ಪಣ್ಣಂಗುದೆ ಈ ಪದ್ಯಕ್ಕುದೆ ಏವ ಸಂಬಂಧವುದೆ ಇಲ್ಲೆ ಹೇಳಿ ಎನ್ನ ಅಂದಾಜು. ರಘು ಭಾವ ಹೇಳಿದ ಹಾಂಗೆ ಪದ್ಯಕ್ಕೆ ಜಾನಪದ ಶೈಲಿ ಹೊಂದುಗು. ಪದ್ಯ ಲಾಯಕಾಯಿದು. ಇನ್ನೊಂದು ರಜಾ ಉದ್ದ ಎಳವಲಾವ್ತಿತು. ಮನೆಯೊಂದಿದ್ದರೆ ಸಾಲ | ಮೇಗೆ – ಸೂರೊಂದಿದ್ದರೆ ಸಾಲ | ಪೈಸೆ ಸಾಲದ್ದೆ, ಸಾಲ ಎಂತಾರು ಬೇಕಾರೆ ಎಂಗೊ ರೆಡಿ.

  • ಬೊಳುಂಬು ಕೃಷ್ಣಭಾವ° says:

   ಗೋಪಾಲ ಮಾವಂಗೆ ಧನ್ಯವಾದಂಗೊ.
   ಕಂಡಿತ ಇಲ್ಲೆ 🙂 ಇವ° ಬೇರೆ ಕೆಪ್ಪ°.
   ಕೆಪ್ಪ° ಸಾಲದ ವಿಷಯ ಮಾತಾಡಿರೆ ನಿಂಗಳಲ್ಲಿಗೆ ಕೋರ್ಪಿ ಬೇಂಕಿಂಗೆ ಕಳುಸುತ್ತೆ.

 5. ಪ್ರೇಮಲತಾ, ಗಾಯಕಿ. says:

  ಪದ್ಯ’ದ ಲಯ ಚೆಂದ ಇದ್ದು. ಹಾಡಲಕ್ಕು!

  ‘ಜೀವಿತ ಬೆಳಗುವ ಹಣತೆ’ ಹೇಳಿದ್ದು ಇಷ್ಟ ಆತು.

  ಹೇಳಿದಾಂಗೆ ಈ ಕೆಪ್ಪನೂ ಕೆಪ್ಪಿಯೂ ಕೆಮಿ ಕೇಳದ್ದವಾ?? 🙂 🙂

  • ಬೊಳುಂಬು ಕೃಷ್ಣಭಾವ° says:

   ಧನ್ಯವಾದಂಗೊ ಅಕ್ಕಾ.
   ಅಲ್ಲ 🙂 ಇವಕ್ಕೆ ಇಬ್ರಿಂಗುದೇ ಸರಿಗಟ್ಟು ಕೆಮಿ ಕೇಳ್ತು, ಆದರೆ ಎಲ್ಲೋರಷ್ಟು ಚುರುಕಿನವಲ್ಲ ಇವು.

 6. ಶರ್ಮಪ್ಪಚ್ಚಿ says:

  ಒಳ್ಳೆ ಆಶಯದ ಕವನ. ದಂಪತಿಗಳ ಹೊಂದಾಣಿಕೆ ಕೊಶಿ ಆತು
  ಮನೆ ಕಟ್ಟುವಲ್ಲಿಂದ ಸುರು ಮಾಡಿ “ಜೀವಿತ ಬೆಳಗುವ ಹಣತೆ” ಹೇಳಿ ಮಕ್ಕಳ ಅಪೇಕ್ಷೆ ಬರದ್ದು ಲಾಯಿಕ ಆಯಿದು.
  ಆದರೆ ಎರಡು ಬೇಕು ಹೇಳ್ತಲ್ಲಿಂದ ಒಂದಕ್ಕೆ ಇಳುಶಿದ್ದು ಸರಿ ಕಂಡತ್ತಿಲ್ಲೆ

  • ಬೊಳುಂಬು ಕೃಷ್ಣಭಾವ° says:

   ಅವು ಎನ್ನತ್ರೆ ಹೇಳಿದ್ದದು ಎಲ್ಲ ಆದಮತ್ತೆಯೇ. 🙂
   ನಿಜವಾಗಿ ನೋಡಿರೆ ಮಾಳಿಗೆ ಮನೆ ಕಟ್ಸೆಕ್ಕು ಹೇಳಿದ ಕೆಪ್ಪಿಗುದೇ ಎರಡೋ ಮೂರೋ ಹಣತೆಗಳ ಹೊತ್ಸೆಕ್ಕು ಹೇಳಿದ ಕೆಪ್ಪಂಗುದೇ ಎನ್ನ ಸಹಮತ ಇದ್ದು.

   ಸಂವಾದಕ್ಕೆ ಆಸ್ಪದವ ಮಾಡಿಕೊಟ್ಟ ಶರ್ಮಪ್ಪಚ್ಚಿಗೆ ಧನ್ಯವಾದಂಗೊ. 😉

 7. ಬೊಳುಂಬು ಕೃಷ್ಣಭಾವ° says:

  ಧನ್ಯವಾದ ಪ್ರದೀಪ!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *