ಕುಂಬಳ ಬಳ್ಳಿ -ಹಪ್ಪಳ ಹೆಡಗೆ

June 3, 2013 ರ 9:31 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕುಂಬಳ ಬಳ್ಳಿ -ಹಪ್ಪಳ ಹೆಡಗೆ 

ಕಿಟ್ಟಣ್ಣನಾ  ಮಗಳು
ಒಪ್ಪಕ್ಕ ಗೊಂತಿದ್ದೊ
ಇಪ್ಪತ್ತು ಕಳುದತ್ತು ಕೂಸು ಕೊಡ್ಲಾತು |
ಓ ಮೊನ್ನೆ  ಕಿಟ್ಟಣ್ಣ
ಬಂದು ಹೇಳಿಕೆ ಕೊಟ್ಟ
ಚೆಂದಕ್ಕೆ ಗೌಜೀಲಿ ಮದುವೆ ಕಳುದತ್ತು |೧|

 ಅಳಿಯ ಮಗಳು ಬಂದು
ಸಮ್ಮಾನ ಆಗೆಡದೋ
ಅಡಿಗೆಗೆ ಸತ್ಯಣ್ಣ ಖುದ್ದು ಬೈಂದ|
ಕಾಯಿ ಹೋಳಿಗೆ ತುಪ್ಪ
ಹಸರ ಪಾಯಸ ಇತ್ತು
ಖಾರಕ್ಕೆ ಮಿಕ್ಸ್ಚರು ಮಾಡಿ ತೈಂದ |೨|

 ಕಳಿಯ ಬಾರದ್ದೆಲ್ಲ
ನೆಂಟ್ರುಗೊ  ಬೈಂದವು
ಸತ್ಯನಾರಾಯಣ  ಪೂಜೆ ಇತ್ತಾಡ |
ಪ್ರಸಾದ ಕೊಟ್ಟತ್ತು
ಗಂಟೆ ಒಂದಾತಾಡ
ಹಂತೀಲಿ ಕೊಡಿಬಾಳೆ ಮಡುಗಿತ್ತಾಡ |೩|

 ಅಲಸಂಡೆ ಪಲ್ಯಾಡ
ಅವಿಲು ಉಪ್ಪಿನ ಕಾಯಿ
ಟೈಗರಕ್ಕಿಯ  ಅನ್ನ ಬಡುಸಿ  ಆತು |
ಘಮ ಘಮ ತುಪ್ಪವುದೆ
ಬೆಶಿ ಸಾರು ಬಂತಾಡ
ಹಪ್ಪಳ ಬಡುಸಲೆ ಮರದು ಹೋತು |೪|

 ಹಪ್ಪಳ ಹೇಳೀರೆ
ಭಾರಿ ಕೊಶಿ ಅಳಿಯಂಗೆ
ಕೇಳೂದು ಹೇಂಗದರ  ಮಾವನತ್ರೆ ?|
ಹೇಳಿದ ‘ಮಾವಯ್ಯಾ  ..
ಎಂಗಳ ಮನೆಲೊಂದು
ಕುಂಬಳ ಬಳ್ಳಿಯೋ.. ಹಟ್ಟಿ ಹತ್ರೆ -|೫|

 ಹಬ್ಬಿತ್ತು ಉದ್ದಾಕೆ
ಎಷ್ಟುದ್ದ ಕೇಳ್ತೀರೊ
ಓ!.. ಅಲ್ಲಿ ಕಾಣ್ತಾದ ಹಪ್ಪಳದ ಹೆಡಗೆ |
ಅಷ್ಟುದ್ದ  ಬಳ್ಳಿಲಿ
ಒಂದೇ ಕುಂಬಳ ಕಾಯಿ’ …
“ಗೊಂತಾತು, ಅಳಿಯ ,ಮರದತ್ತು ಗಡಿಬಿಡಿಗೆ” |೬|

 ತೆಗೆಯಿ ಹಪ್ಪಳ ಹೆಡಗೆ
ಎಂತ ಮರವೋ ಕರ್ಮ
ಸುದರಿಕೆಗು ಸತ್ಯಣ್ಣನೇ ನಿಲ್ಲೇಕೋ ?|
ಶಾಕ ಪಾಕಂಗಳ
ಬಡುಸಿ ಕ್ರಮ ತಪ್ಪದ್ದೆ
ಕೂದೋರು ದೆನಿಗೇದು ಅದ ಹೇಳೇಕೋ ? |೭|

~~**~~

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಇಂದಿರತ್ತೆ
  ಇಂದಿರತ್ತೆ

  ಒಂದು ಕಡೆಲಿ,ಒಬ್ಬರ ಮನೆಗೆ ನಿತ್ಯಕ್ಕೆ ಆರೋ ನೆಂಟ್ರುಗೊ ಬಂದವಡ. ಮನೆಹೆಮ್ಮಕ್ಕೊ ಭಾರೀ ಕೊಶಿಲಿ ಅದೂಇದೂ ಹೇಳಿ ನಮುನೆವಾರು ಅಡಿಗೆ ಮಾಡಿತ್ತಿದ್ದಡ. ಹಶುವಪ್ಪಲೆ ಸುರುವಾತು- ಇನ್ನು ಉಂಬಲೆ ಕೂಪ°ಹೇಳಿ ಬಟ್ಲು ಮಡುಗಿ ಒಂದೊಂದೇ ಐಟಂ ತಂದು ಮಡುಗಿದವು. ಅಶನ ಎಲ್ಲಿದ್ದತ್ತಿಗೆ ಹೇಳಿ ಕೇಳಿಯಪ್ಪಗ ಮನೆಹೆಮ್ಮಕ್ಕೊ ತಲೆಗೆ ಕೈಕೊಟ್ಟು ಕೂದತ್ತು. ಕುಕ್ಕರಿಲಿಯನ್ನೆ , ಅಶನ ಅಕೇರಿಗೆ ಮಾಡುವ°- ಬೆಶಿಬೆಶಿಯಾಗಿರ್ತು ಹೇಳಿ ಗ್ರೇಶಿದ್ದದು ನೆಂಟ್ರು ಬಂದ ಗೌಜಿಲಿ ಕುಕ್ಕರು ಕೂಗುಸುಲೆ ಮರದೇ ಹೋತು.
  ಇಂಥಾ ಮರೆಗುಳಿತನವೇ ನೈಜವಾಗಿ ಕವನವಾಗಿ ಬಂದದು ಲಾಯ್ಕ ಆಯ್ದು ಬಾಲಣ್ಣ.

  [Reply]

  VA:F [1.9.22_1171]
  Rating: 0 (from 0 votes)
 2. parvathimbhat
  parvathi m bhat

  ಪದ್ಯ ತು೦ಬಾ ಲಾಯಿಕ ಆಯಿದು ಬಾಲಣ್ಣ. ಪದ್ಯದ ಕಲ್ಪನೆಯೂ ರಚಿಸಿದ ರೀತಿಯೂ ಸೂಪೆರ್ ಆಗಿ ಬಯಿ೦ದು .
  ಅಭಿನ೦ದನೆ.

  [Reply]

  VA:F [1.9.22_1171]
  Rating: 0 (from 0 votes)
 3. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಒಳ್ಲೆ ಅಭಿಪ್ರಾಯ ಬರತ್ತಾ ಇಪ್ಪ ಎಲ್ಲೋರಿಂಗುದೆ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೋಸ ಬಾವಚೂರಿಬೈಲು ದೀಪಕ್ಕಪೆರ್ಲದಣ್ಣನೀರ್ಕಜೆ ಮಹೇಶಜಯಗೌರಿ ಅಕ್ಕ°ಶರ್ಮಪ್ಪಚ್ಚಿಪುತ್ತೂರಿನ ಪುಟ್ಟಕ್ಕಮುಳಿಯ ಭಾವಸುಭಗದೊಡ್ಡಮಾವ°ಶುದ್ದಿಕ್ಕಾರ°ಅಕ್ಷರ°ಕೊಳಚ್ಚಿಪ್ಪು ಬಾವಪುತ್ತೂರುಬಾವವಿದ್ವಾನಣ್ಣದೊಡ್ಡಭಾವದೊಡ್ಮನೆ ಭಾವಅಡ್ಕತ್ತಿಮಾರುಮಾವ°ಶಾಂತತ್ತೆಅನಿತಾ ನರೇಶ್, ಮಂಚಿಮಂಗ್ಳೂರ ಮಾಣಿರಾಜಣ್ಣಡಾಮಹೇಶಣ್ಣವಸಂತರಾಜ್ ಹಳೆಮನೆಗಣೇಶ ಮಾವ°ನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ