ಮಳೆಗಾಲದ ತೆರಕ್ಕು -ಭಾಮಿನಿಲಿ

June 28, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವೈಶಾಖ ಕಳುತ್ತು, ಮಳೆಯ ಅಟ್ಟಣೆ ಆತು.
ಬೈಲಿಲಿ ಹೊಸ ಸ೦ಚಲನ ಶುರು ಆಗದ್ದೆ ಇಕ್ಕೊ?

ಮಳೆಗಾಲದ ತೆರಕ್ಕು (ಭಾಮಿನೀ ಷಟ್ಪದಿ)

ರಚನೆ: ಮುಳಿಯ ಭಾವ
ಗಾಯನ: ಹೊಸಬೆಟ್ಟು ಶ್ರೀಶಣ್ಣ


ಹೋರಿ ದನಕ೦ಜಿಗಳ ಬೆನ್ನಿಲಿ
ಹಾರಿ ಕೂರುವ ಹಕ್ಕಿಗಳ ಬಾ
ಯಾರಿ ದೊ೦ಡೆಲಿ ಸೊರವೆ ಹೆರಡದ್ದಿಪ್ಪ ಸಮಯಲ್ಲಿ|
ಆರು ತಿ೦ಗಳ ಬೆಶಿಲ ಬೇಗೆಗೆ
ಆರಿ ಹೋಯಿದು ತೋಟಕೆರೆ ಕಾ
ವೇರಿ ಅಡಕೆಯ ಕೊಬೆಗೊ ಕೆ೦ಪಾತನ್ನೆ ಭಾವಯ್ಯ||

ಬೊಡುದು ಆಕಾಶವನೆ ನೋಡಿರೆ
ಪಡುಹೊಡೆಲಿ ಕರಿಮುಗಿಲು ಎದ್ದಿದು
ಗುಡುಗು ಸೆಡಿಲಿನ ಆಟ ರ೦ಗಸ್ಥಳಕೆ ಹೆರಟತ್ತು|
ನೆಡವ ನೆಲ ತ೦ಪಾಗಿ ತೆ೦ಗಿನ
ಮಡಲು ಗಾಳಿಗೆ ಬೀಸಿ ಮನಸಿನ
ಜಡತೆ ದೂರಕೆ ಹೋಪ ಲಕ್ಷಣವಿದ್ದು ಭಾವಯ್ಯ||

ತೆರಕ್ಕಿಲಿ ಮಾಡಿದ ಅಟ್ಟಣೆ

ಜಾಲಿಲಡಕೆಯು ಒಣಗಿ ಕೈಲಿಯೆ
ಚೋಲಿ ಸೊಲಿವಾ೦ಗಾತು ಹೆಡಗೆಯ
ಮೇಲೆ ಕೈಪುಳುಯೆಳದು ಪತ್ತಾಯಕ್ಕೆ ತು೦ಬುಸುವ°|
ಕಾಲು ಹಾಕೊಗ ಜಾರಿಬಿದ್ದರೆ
ಸೋಲುಗಿದ ಜಾಗ್ರತೆಗೆ ಈ ಮಳೆ
ಗಾಲ ಸೋಗೆಲಿ ನೆಲವ ಮುಚ್ಚೆಕ್ಕಷ್ಟೆ ಭಾವಯ್ಯ||

ಮೂಡ ಉಗ್ರಾಣಲ್ಲಿ ಮೂಲೆಯ
ಓಡು ಒಡದಿತ್ತನ್ನೆ ಬಾ ಸರಿ
ಮಾಡಿ ಬಿಟ್ಟರೆ ನೀರು ಸೋರುವ ತಲೆಬೆಶಿಯೆ ಇಲ್ಲೆ|
ತೋಡಕಣಿ ಕೆರಸಿದರೆ ಮಳೆ ನೀ
ರೋಡಿ ಹೊಳೆ ಸೇರುಗದ ಎತ್ತಿನ
ಗಾಡಿ ಹೋಪಗ ಹುಗಿಯ ಮಾರ್ಗವು ಕೇಳು ಭಾವಯ್ಯ||

ಗೆದ್ದೆ ಹೂಡುವವಕ್ಕೆ ಚಾ ಮಡು
ಗದ್ದರಿನ್ನವು ಬಕ್ಕೊ? ಊಟ
ಕ್ಕಿದ್ದವಾಳುಗೊ ಎ೦ಟು ಜೆನ ಸೊಳೆಬೆ೦ದಿ ಸಾಕಕ್ಕೊ?|
ಬಿದ್ದ ತೆ೦ಗಿನಕಾಯಿಗಳ ಹೆ
ರ್ಕಿದ್ದು ಜಡಿಮಳೆ ಬಪ್ಪ ಮದಲೇ
ಮದ್ದು ಬಿಡುಲಾರಿದ್ದವೋ ನೋಡೆಕ್ಕು ಭಾವಯ್ಯ||

~*~*~

( ಮಳೆಗಾಲಲ್ಲಿ  ಕೆಲಸ ಇನ್ನೂ ಸುಮಾರು ಇದ್ದು ಭಾವ,ಹೇಳ್ತೆ ಬೇಗಲ್ಲಿ..)

ಗಾಯನ: ಶ್ರೀಶ ಹೊಸಬೆಟ್ಟು

Malegala Varnane (Bhamini): Shreesha Hosabettu

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. ಪುಟ್ಟಬಾವ°
  ಪುಟ್ಟಭಾವ ಹಾಲುಮಜಲು

  ಪಷ್ಟಾಯ್ದು ಭಾವಯ್ಯ..ಕೊನೆಯ ಸಾಲುಗ ಓದುವಗ ಎನ್ನ ಅಮ್ಮ, ಆಳುಗ ಇಪ್ಪಗ ಸೊಳೆಬೆ೦ದಿ ಸಾಕಕ್ಕೊ ಹೇಳಿ ಹೇಳಿದ್ದು ನೆಂಪಾತು..

  [Reply]

  VA:F [1.9.22_1171]
  Rating: 0 (from 0 votes)
 2. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಮುಳಿಯ ಬಾವನ ಭಾಮಿನಿಯ ಕೋ-

  ಗಿಲೆಯೆ ಹಾಡಿದ ಹಾಂಗೆ ಆಯಿದು

  ತಳಿಯದ್ದೆ ಕೇಳಿದೆವೆಲ್ಲ ಒಟ್ಟಿಂಗೆ ಕೂದು ಕೆಮಿಗೊಟ್ಟು

  ಮಳೆ ಬಪ್ಪ ಹೊತ್ತಿಂಗೆ ಎಲ್ಲೊರು

  ಸೊಳೆ ಬಿಡುಸಿ ಉಪ್ಪಿಲಿ ಹಾಕಿ ಮಡು

  ಗಲೆ ತುಂಬ ಕೊಶಿ ಮಳೆಗಾಲದಟ್ಟಣೆ ಹಾಡ ಕೇಳಿಂಡು

  (ತುಂಬಾ ತಡವಾತು ಒಪ್ಪ ಕೊಡಲೆ ಬೇಜಾರಿಲ್ಲೆನ್ನೆ?)

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆಎರುಂಬು ಅಪ್ಪಚ್ಚಿನೆಗೆಗಾರ°ಶರ್ಮಪ್ಪಚ್ಚಿಬೊಳುಂಬು ಮಾವ°ಶುದ್ದಿಕ್ಕಾರ°ಪವನಜಮಾವಜಯಗೌರಿ ಅಕ್ಕ°ಗಣೇಶ ಮಾವ°ತೆಕ್ಕುಂಜ ಕುಮಾರ ಮಾವ°ಪುಣಚ ಡಾಕ್ಟ್ರುಅಡ್ಕತ್ತಿಮಾರುಮಾವ°ಡಾಗುಟ್ರಕ್ಕ°ಪಟಿಕಲ್ಲಪ್ಪಚ್ಚಿಪುತ್ತೂರುಬಾವದೊಡ್ಡಭಾವಹಳೆಮನೆ ಅಣ್ಣವಿನಯ ಶಂಕರ, ಚೆಕ್ಕೆಮನೆಕೆದೂರು ಡಾಕ್ಟ್ರುಬಾವ°ಬೋಸ ಬಾವಅನಿತಾ ನರೇಶ್, ಮಂಚಿವೇಣೂರಣ್ಣಶ್ರೀಅಕ್ಕ°ಅಜ್ಜಕಾನ ಭಾವಒಪ್ಪಕ್ಕಡಾಮಹೇಶಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ