Oppanna.com

ಮಳೆಗಾಲದ ತೆರಕ್ಕು -ಭಾಮಿನಿಲಿ

ಬರದೋರು :   ಮುಳಿಯ ಭಾವ    on   28/06/2012    18 ಒಪ್ಪಂಗೊ

ವೈಶಾಖ ಕಳುತ್ತು, ಮಳೆಯ ಅಟ್ಟಣೆ ಆತು.
ಬೈಲಿಲಿ ಹೊಸ ಸ೦ಚಲನ ಶುರು ಆಗದ್ದೆ ಇಕ್ಕೊ?

ಮಳೆಗಾಲದ ತೆರಕ್ಕು (ಭಾಮಿನೀ ಷಟ್ಪದಿ)

ರಚನೆ: ಮುಳಿಯ ಭಾವ
ಗಾಯನ: ಹೊಸಬೆಟ್ಟು ಶ್ರೀಶಣ್ಣ


ಹೋರಿ ದನಕ೦ಜಿಗಳ ಬೆನ್ನಿಲಿ
ಹಾರಿ ಕೂರುವ ಹಕ್ಕಿಗಳ ಬಾ
ಯಾರಿ ದೊ೦ಡೆಲಿ ಸೊರವೆ ಹೆರಡದ್ದಿಪ್ಪ ಸಮಯಲ್ಲಿ|
ಆರು ತಿ೦ಗಳ ಬೆಶಿಲ ಬೇಗೆಗೆ
ಆರಿ ಹೋಯಿದು ತೋಟಕೆರೆ ಕಾ
ವೇರಿ ಅಡಕೆಯ ಕೊಬೆಗೊ ಕೆ೦ಪಾತನ್ನೆ ಭಾವಯ್ಯ||

ಬೊಡುದು ಆಕಾಶವನೆ ನೋಡಿರೆ
ಪಡುಹೊಡೆಲಿ ಕರಿಮುಗಿಲು ಎದ್ದಿದು
ಗುಡುಗು ಸೆಡಿಲಿನ ಆಟ ರ೦ಗಸ್ಥಳಕೆ ಹೆರಟತ್ತು|
ನೆಡವ ನೆಲ ತ೦ಪಾಗಿ ತೆ೦ಗಿನ
ಮಡಲು ಗಾಳಿಗೆ ಬೀಸಿ ಮನಸಿನ
ಜಡತೆ ದೂರಕೆ ಹೋಪ ಲಕ್ಷಣವಿದ್ದು ಭಾವಯ್ಯ||

ತೆರಕ್ಕಿಲಿ ಮಾಡಿದ ಅಟ್ಟಣೆ

ಜಾಲಿಲಡಕೆಯು ಒಣಗಿ ಕೈಲಿಯೆ
ಚೋಲಿ ಸೊಲಿವಾ೦ಗಾತು ಹೆಡಗೆಯ
ಮೇಲೆ ಕೈಪುಳುಯೆಳದು ಪತ್ತಾಯಕ್ಕೆ ತು೦ಬುಸುವ°|
ಕಾಲು ಹಾಕೊಗ ಜಾರಿಬಿದ್ದರೆ
ಸೋಲುಗಿದ ಜಾಗ್ರತೆಗೆ ಈ ಮಳೆ
ಗಾಲ ಸೋಗೆಲಿ ನೆಲವ ಮುಚ್ಚೆಕ್ಕಷ್ಟೆ ಭಾವಯ್ಯ||

ಮೂಡ ಉಗ್ರಾಣಲ್ಲಿ ಮೂಲೆಯ
ಓಡು ಒಡದಿತ್ತನ್ನೆ ಬಾ ಸರಿ
ಮಾಡಿ ಬಿಟ್ಟರೆ ನೀರು ಸೋರುವ ತಲೆಬೆಶಿಯೆ ಇಲ್ಲೆ|
ತೋಡಕಣಿ ಕೆರಸಿದರೆ ಮಳೆ ನೀ
ರೋಡಿ ಹೊಳೆ ಸೇರುಗದ ಎತ್ತಿನ
ಗಾಡಿ ಹೋಪಗ ಹುಗಿಯ ಮಾರ್ಗವು ಕೇಳು ಭಾವಯ್ಯ||

ಗೆದ್ದೆ ಹೂಡುವವಕ್ಕೆ ಚಾ ಮಡು
ಗದ್ದರಿನ್ನವು ಬಕ್ಕೊ? ಊಟ
ಕ್ಕಿದ್ದವಾಳುಗೊ ಎ೦ಟು ಜೆನ ಸೊಳೆಬೆ೦ದಿ ಸಾಕಕ್ಕೊ?|
ಬಿದ್ದ ತೆ೦ಗಿನಕಾಯಿಗಳ ಹೆ
ರ್ಕಿದ್ದು ಜಡಿಮಳೆ ಬಪ್ಪ ಮದಲೇ
ಮದ್ದು ಬಿಡುಲಾರಿದ್ದವೋ ನೋಡೆಕ್ಕು ಭಾವಯ್ಯ||

~*~*~

( ಮಳೆಗಾಲಲ್ಲಿ  ಕೆಲಸ ಇನ್ನೂ ಸುಮಾರು ಇದ್ದು ಭಾವ,ಹೇಳ್ತೆ ಬೇಗಲ್ಲಿ..)

ಗಾಯನ: ಶ್ರೀಶ ಹೊಸಬೆಟ್ಟು

Malegala Varnane (Bhamini): Shreesha Hosabettu

ಮುಳಿಯ ಭಾವ

18 thoughts on “ಮಳೆಗಾಲದ ತೆರಕ್ಕು -ಭಾಮಿನಿಲಿ

  1. ಮುಳಿಯ ಬಾವನ ಭಾಮಿನಿಯ ಕೋ-

    ಗಿಲೆಯೆ ಹಾಡಿದ ಹಾಂಗೆ ಆಯಿದು

    ತಳಿಯದ್ದೆ ಕೇಳಿದೆವೆಲ್ಲ ಒಟ್ಟಿಂಗೆ ಕೂದು ಕೆಮಿಗೊಟ್ಟು

    ಮಳೆ ಬಪ್ಪ ಹೊತ್ತಿಂಗೆ ಎಲ್ಲೊರು

    ಸೊಳೆ ಬಿಡುಸಿ ಉಪ್ಪಿಲಿ ಹಾಕಿ ಮಡು

    ಗಲೆ ತುಂಬ ಕೊಶಿ ಮಳೆಗಾಲದಟ್ಟಣೆ ಹಾಡ ಕೇಳಿಂಡು

    (ತುಂಬಾ ತಡವಾತು ಒಪ್ಪ ಕೊಡಲೆ ಬೇಜಾರಿಲ್ಲೆನ್ನೆ?)

  2. ಪಷ್ಟಾಯ್ದು ಭಾವಯ್ಯ..ಕೊನೆಯ ಸಾಲುಗ ಓದುವಗ ಎನ್ನ ಅಮ್ಮ, ಆಳುಗ ಇಪ್ಪಗ ಸೊಳೆಬೆ೦ದಿ ಸಾಕಕ್ಕೊ ಹೇಳಿ ಹೇಳಿದ್ದು ನೆಂಪಾತು..

  3. ಓದಿ ಆತಷ್ಟೇ..
    ಭಾರೀ ಅಪ್ಪ ಆಯಿದು. ಇನ್ನು ಮನೆಗೆ ಹೋಗಿ ಕೇಳ್ತೆ.. 🙂

      1. ಶ್ರೀಶಣ್ಣ ಸೂಪರ್… 🙂
        ರಚನೆ – ಗಾಯನ.. ಎರಡೂ A1 🙂

  4. ಬರದ್ದು,ಹಾಡಿದ್ದು ಎರಡೂ ತು೦ಬಾ ಲಾಯ್ಕಾಯಿದು..

  5. ಚೆಂದ ಆಯಿದು ಬರದ್ದು ಭಾವ.

  6. ಪುನಃ ಪುನಃ ಕೇಳುವಾಂಗೆ ಲಾಯಿಕಿದ್ದು..ರಚನೆ, ಸೊರ ಎರಡುದೇ

    1. ಮಹೇಶಾ,
      ರನ್ನ ಕೂದಲ ಮುಳಿಯಭಾವನ
      ಚಿನ್ನದಕ್ಷರ ಭಾಮಿನಿಗೆ ಶ್ರೀ
      ಶಣ್ಣ ಕ೦ಚಿನ ಕ೦ಠ ಸೇರ್ಸಿರೆ ಹಾಲು ಜೇನಕ್ಕೊ?

  7. ಐದು ಸರ್ತಿ ಕೇಳಿ ಆತು ಭಾವ. ರಚನೆಯೂ, ಗಾಯನವೂ ಭಾರೀ ಲಾಯಕ ಆಯ್ದು, ಮತ್ತೂ ಮತ್ತೂ ಅಸ್ವಾದಿಸುವ ಹಾಂಗೆ ಬಯಿಂದು ಹೇಳಿ ಇನ್ನೊಂದರಿ – ‘ಚೆನ್ನೈವಾಣಿ’

  8. ಮಳೆಗಾಲದ ನಿರೀಕ್ಷೆ, ಮುಗಿಲು ಕಂಡಪ್ಪಗ ಜಾಲಿಂದ ಅಡಕ್ಕೆ ಒಳ ಹಾಕುತ್ತ ಗೌಜಿ, ಮೂಲೆ ಓಡು ಸರಿ ಮಾಡುವ ಆತುರ, ಇದೆಲ್ಲವೂ ಒಂದು ಹವ್ಯಕ ಮನೆಯ ವಾತಾವರಣವ ಚೆಂದಕೆ ಪ್ರತಿಬಿಂಬಿಸಿದ್ದು.

  9. ಮಳೆಕಾಲಕ್ಕಿಪ್ಪ ತಯಾರಿ ಭಾಮಿನಿಲಿ ಚೆಂದಕೆ ಬಯಿಂದು. ಮುಳಿಯ ಭಾವನ ಸಾಹಿತ್ಯವ ಸೊಗಸಾಗಿ ಎನ್ನಷ್ಟಕ್ಕೇ ಮನಸ್ಸಿಲ್ಲೇ ಓದಿದೆ. ಶ್ರೀಶಣ್ಣನ ಸ್ವರಲ್ಲಿ ಮನಗೆ ಹೋಗಿ ಕೇಳೆಕಷ್ಡ್ಟೆ. ಖಂಡಿತಾ ಚೆಂದಕೆ ಬಂದಿಕ್ಕು.
    ಪಡು ಹೊಡೆಲಿ ಕರಿಮುಗಿಲು ಎದ್ದದು ಕಾಂಬಗ ಗಡಿಬಿಡಿಲಿ ನೆಲ್ಲಿಕ್ಕೋರಿ, ಮಣೆ ಹಿಡುದು ಜಾಲಿಲ್ಲಿಪ್ಪ ಅಡಕ್ಕೆಯ ಬಾಚಿದ್ದು ನೆಂಪಾತು. ಏವತ್ರಾಣ ಹಾಂಗೆ ಒನ್ನಾಂ ಗ್ರೇಡು. ಧನ್ಯವಾದಂಗೊ. ಶ್ರೀಶಣ್ಣನ ಸಂಗೀತವ ಮನಗೆ ಹೋಗಿ ದೊಡ್ಡಕೆ ಕೇಳೆಕು . . . ಅಂಬಗಳೇ ಅದರ ರುಚಿ, ಎಂತ ಹೇಳ್ತಿ ?

    1. ಶ್ರೀಶಣ್ಣನ ಪದ ಹೇ೦ಗಾಯಿದು ಭಾವ?

      1. ಓ, ಸೂಪರ್. ಅದರಲ್ಲಿ ಎರಡು ಮಾತಿಲ್ಲೆ. ಅದೇ ದಿನ ಕೇಳಿದ್ದೆ, ಪುನಃ ಒಪ್ಪ ಕೊಡ್ಳೆ ಬಾಕಿ ಆತು. ಅಂದು ಶ್ರೀಶಣ್ಣ ಹಾಡಿದ ಸೋಬಾನೆ ಇನ್ನುದೆ ಕೆಮಿಲಿ ತಿರುಗುತ್ತಾ ಇದ್ದು. ಇದರ ಗಮಕ ಶೈಲಿಲಿಯುದೆ ಪ್ರಯತ್ನ ಮಾಡ್ಳಕ್ಕು. ನಿಂಗಳಿಬ್ಬರ ಜೋಡಿ ಬೈಲಿನ ರಂಜಿಸುತ್ತಾ ಇರಳಿ.

  10. ವಾಹ್ ವಾಹ್… ಮುಳಿಯಭಾವನ ಭಾಮಿನಿ ಷಟ್ಪದಿ – ಶ್ರೀಶಣ್ಣನ ಜಂಟಿ ಒಳ್ಳೆ ಚೇರ್ಚೆ ಆಯ್ದು. ಸೊಗಸಾಗಿ ಮೂಡಿಬೈಂದು. ಅಭಿನಂದನೆಗೊ ಇಬ್ರಿಂಗು.

    (ಮಳೆಗಾಲಲ್ಲಿ ಕೆಲಸ ಇನ್ನೂ ಸುಮಾರು ಇದ್ದು ಭಾವ,ಹೇಳ್ತೆ ಬೇಗಲ್ಲಿ..) – ಇದು ಕೊಶಿ ಆತು ಹೇಳಿ – ‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×