ಮಮತೆಯ ಹನಿ

May 16, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಮತೆಯ ಹನಿ ಹೇಳಿರೆ ಮಾತೆಯ ಮಮತೆಯ ಹನಿ. ಅಮ್ಮನ ಜೋಗುಳವ ನೆಂಪು ಮಾಡುಸುವ ಪದ್ಯ. ನೀರಿನ ಮೇಗೆ ಮನುಗಿದ ಚಂದ್ರನ (ನೆರಳಿನ) ಏಳುಸೆಡಿ ಹೇಳ್ತ ಭಾವ.
ಹೆಚ್ಚಾಗಿ ಮಾತಿಲಿ ಉಪಯೋಗುಸದ್ದೆ ಶಬ್ದಂಗಳ ಉಪಯೋಗುಸಿ ಬರದ ಕಾರಣ ಈ ಸರ್ತಿ ಕನ್ನಡಲ್ಲಿಯೇ ಇದ್ದು.

ಮಮತೆಯ ಹನಿ:

ಮಲಗಿರುವನು ಬಿಳಿಯ ಚಂದಿರ | ಎಳೆಯಲೆಗಳೇ ಬಳಿಗೆ ಬರದಿರಿ |
ಎಲೆಯಿಂದ ಹನಿಯುವ ಹನಿಗಳ ನಲುಗಲು | ಕೊಡದಿರಿ |
ಎದೆಯಿಂದ ಜಿನುಗುವ ಒರತೆಯ ಒಣಗಲು | ಬಿಡದಿರಿ ||

ಒಡಲಿನೊಳ್ ಒರೆವ ಒರತೆಯ | ಮನದ ಮಮತೆಯ ಮುಡಿಪಿನ |
ಜೇನುಲಿಗಳ ಉಲಿವ ಉಲಿಕೆಯ | ಅಮೃತವ ಸುರಿವ ತೊದಲ್ಗಳ |
ಬಿಡದಂತೆ ಕಾಡುವ ಮೋಹದ ಒಸರನ್ನು | ಕಾಯ್ವೆನು |
ಎಡೆಬಿಡದೆ ಉರಿಯುವ ಸೊಡರನ್ನು ಆರಲು | ಈಯೆನು ||

ಮಲಗಿರುವನು ಎಳೆಯ ಚಂದಿರ | ಎಳೆಯಲೆಗಳೇ ಬಳಿಗೆ ಬರದಿರಿ |
ಎಲೆಯಿಂದ ಹನಿಯುವ ಹನಿಗಳ ನಲುಗಲು | ಈಯೆನು |
ಎದೆಯಿಂದ ಜಿನುಗುವ ಒರತೆಯ ಒಣಗದೋಲ್ | ಕಾಯ್ವೆನು ||

ಮೆಲ್ಲನೊಡೆಯುವ ಕಂಗಳ | ಮೆತ್ತನೆಯ ಹಾಲ್ಗಲ್ಲದ |
ಮುದದಿಂದ ನಗೆಯನ್ನು ಬೀರುವ | ಕುಣಿದಾಡಿ ತೊನೆವ ಹಸುಕಂದನ |
ಬಿಡದಂತೆ ಕಾಡುವ ಮೋಹದ ಒಸರನ್ನು | ಕಾಯ್ವೆನು |
ಎಡೆಬಿಡದೆ ಉರಿಯುವ ಸೊಡರನ್ನು ಆಱಲು | ಈಯೆನು ||

ಮಲಗಿರುವನು ಎಳೆಯ ಚಂದಿರ | ಬೀಸಲೆಗಳೇ ಬಳಿಗೆ ಬರದಿರಿ |
ಎದೆಯಿಂದ ಹನಿಯುವ ಹನಿಗಳ ನಲುಗಲು | ಈಯೆನು |
ಎದೆಯಿಂದ ಜಿನುಗುವ ಒರತೆಯ ಒಣಗದೋಲ್ | ಕಾಯ್ವೆನು ||

– ಬೊಳುಂಬು ಕೃಷ್ಣಭಾವ°

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಇದು ಸೂಪರ್ ಆಯ್ದು.

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  Gopalakrishna BHAT S.K.

  ನವಿರಾದ ಪದಪ್ರಯೋಗ.ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಕವನ ಓದಿ ಖುಶಿ ಆತು. ನಮ್ಮ ಬೈಲಿನ ಒಬ್ಬ ಕೆ.ಎಸ್.ನ.- ಕೃಷ್ಣ ಹೇಳಿ ಎನ್ನ ಒಪ್ಪ.

  [Reply]

  VN:F [1.9.22_1171]
  Rating: 0 (from 0 votes)
 4. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಚೆನ್ನೈಭಾವಂಗುದೇ ಮಂಗ್ಳೂರ ಮಾಣಿಗುದೇ ನಿಂಗಳ ಒಪ್ಪಕ್ಕಾಗಿ ಧನ್ಯವಾದಂಗೊ.

  ಗೋಪಾಲಣ್ಣಾ,
  ನಿಂಗಳ ಒಪ್ಪಕ್ಕಾಗಿ ಧನ್ಯವಾದಂಗೊ. ಅಚ್ಚಗನ್ನಡಲ್ಲಿಪ್ಪ ಪದ್ಯ ಆದರುದೇ ಬೇಜಾರ ಮಾಡದ್ದೆ ಇದ್ದದಕ್ಕಾಗಿ ಪ್ರತ್ಯೇಕ ಒಪ್ಪ.

  ಕುಮಾರಣ್ಣಂಗೆ ಧನ್ಯವಾದಂಗೊ. ಎತ್ತರಕ್ಕೆ ಏರುಸಿದಿರೋ.. :) ಆ ಎತ್ತರವ ಏರುಲೆ ಎಡಿವದು ಸಂಶಯವೇ. ಆದರೆ ಎನ್ನಂದ ಎಡಿವ ಪ್ರಯತ್ನಂಗಳ ಮಾಡಿಯೊಂಡಿರ್ತೆ. ನಿಂಗಳ ಪ್ರೋತ್ಸಾಹ ಏವತ್ತೂ ಇರೆಕ್ಕು.

  [Reply]

  ಮುಳಿಯ ಭಾವ

  ಮುಳಿಯ ಭಾವ Reply:

  ಬೊಳು೦ಬು ಭಾವಾ,
  ಮನಸ್ಸು ತು೦ಬಿ ಬಪ್ಪ ಹಾ೦ಗಿದ್ದು.
  ನಮ್ಮ ಭಾಷೆಲಿ ಈ ಮಟ್ಟದ ಕವಿತೆ ಬರವ ಸಾಮರ್ಥ್ಯ ಇಪ್ಪ ನಿ೦ಗೊ ಪ್ರಯತ್ನ ಮಾಡುವಿ ಹೇಳಿ ನ೦ಬಿಕೆ ಇದ್ದೆನಗೆ.ಬರಳಿ ಬೇಗ..

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣಅನು ಉಡುಪುಮೂಲೆಪುಟ್ಟಬಾವ°ದೇವಸ್ಯ ಮಾಣಿವೇಣೂರಣ್ಣವಾಣಿ ಚಿಕ್ಕಮ್ಮಸುವರ್ಣಿನೀ ಕೊಣಲೆಸುಭಗಅಕ್ಷರದಣ್ಣಉಡುಪುಮೂಲೆ ಅಪ್ಪಚ್ಚಿಅನುಶ್ರೀ ಬಂಡಾಡಿನೀರ್ಕಜೆ ಮಹೇಶಮಾಲಕ್ಕ°ಪವನಜಮಾವಡೈಮಂಡು ಭಾವಕಜೆವಸಂತ°ಪ್ರಕಾಶಪ್ಪಚ್ಚಿಪುತ್ತೂರಿನ ಪುಟ್ಟಕ್ಕಕೇಜಿಮಾವ°ಪೆರ್ಲದಣ್ಣಶೇಡಿಗುಮ್ಮೆ ಪುಳ್ಳಿಶೀಲಾಲಕ್ಷ್ಮೀ ಕಾಸರಗೋಡುvreddhiಶ್ಯಾಮಣ್ಣದೊಡ್ಡಮಾವ°ಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ